Thursday, April 16, 2026
Thursday, April 16, 2026

ದೇವರ ನಾಡಿನಲ್ಲೊಂದು ಸ್ವರ್ಗದಂಥ ರೆಸಾರ್ಟ್‌

ದೇವರ ಸ್ವಂತ ನಾಡು ಎಂದೇ ಕರೆಸಿಕೊಂಡಿರುವ ಕೇರಳವನ್ನು ಸುತ್ತಾಡಿ ಬರಬೇಕೆಂಬುದು ಎಲ್ಲರ ಆಸೆ. ಆದರೆ ಬೆಂಗಳೂರಿಗರಂತೂ ಸುಮಾರು ಆರು ಗಂಟೆಗಳ ಪ್ರಯಾಣದಲ್ಲೇ ಸಿಗುವ ವಯನಾಡನ್ನು ನೋಡಿಬರುವುದೆಂದರೆ ಬಹಳ ಅಚ್ಚುಮೆಚ್ಚು. ಎಡಕಲ್ಲು ಗುಡ್ಡ, ಬಾನಾಸುರ ಸಾಗರ್‌ ಡ್ಯಾಮ್‌, ಚೆಂಬರಾ ಪೀಕ್‌, ಸೀಚಿಪಾರ ಫಾಲ್ಸ್‌, ವಯನಾಡು ವೈಲ್ಡ್‌ ಲೈಪ್‌ ಸ್ಯಾಂಚುರಿ ಹೀಗೆ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಸುತ್ತಾಡಿ ಬಂದು ಪ್ರಕೃತಿಯ ನಡುವೆ ನೆಮ್ಮದಿಯ ನಿದ್ರೆ ಬಯಸುವವರು ನೀವಾದರೆ ಸುಲ್ತಾನ್ ಬತ್ತೇರಿ ಸಮೀಪದಲ್ಲೇ ಇರುವ ʻಲೆ ವಿಸ್ತಾ ರೆಸಾರ್ಟ್‌ʼಗೆ ಒಮ್ಮೆ ಭೇಟಿ ಕೊಟ್ಟು ನೋಡಿ.

ಹೆಚ್ಚೇನೂ ಆಡಂಬರವಿಲ್ಲದೆ ಸರಳ, ಸುಂದರವಾದ ಪುಟ್ಟ ವಿಲ್ಲಾಗಳು..ಎಲ್ಲ ರೆಸಾರ್ಟ್‌ಗಳಂತೆ ಸದ್ದು ಗದ್ದಲವಿಲ್ಲದಿದ್ದರೂ ಹಸಿರಿನ ನಡುವೆ, ಹಕ್ಕಿಗಳ ಕಲರವವನ್ನು ಕೇಳುತ್ತಾ ಮೈಮರೆಯುವ ಖುಷಿಯೇ ಬೇರೆ. ಇಂಥದೊಂದು ಸುಂದರ ಪ್ರಪಂಚವನ್ನು ಎರಡು ವರ್ಷಗಳ ಹಿಂದಿಯೇ ಅತಿಥಿಗಳಿಗಾಗಿ ಕಟ್ಟಿಕೊಟ್ಟವರು ಉಮೇಶ್‌ ಹಾಗೂ ರಿಜಾ ದಂಪತಿ.

ಅನೇಕ ವರ್ಷಗಳಿಂದಲೂ ಅರಬ್‌ ದೇಶಗಳಲ್ಲಿ ವೃತ್ತಿ ಜೀವನ ನಡೆಸುತ್ತಿದ್ದ ಉಮೇಶ್‌, ನಗರ ಜೀವನದ ಸದ್ದುಗದ್ದಲದಿಂದ ಹೊರಬರಬೇಕೆಂಬ ಯೋಜನೆ ಹಾಕಿಕೊಂಡಿದ್ದರು. ವರ್ಷಗಳ ವಿದೇಶ ಜೀವನದಿಂದ ಬೇಸತ್ತು ತಮ್ಮೂರಿನಲ್ಲಿಯೇ ಸುಂದರ ಪ್ರಪಂಚವನ್ನು ಕಟ್ಟಿಕೊಳ್ಳುವ ತಯಾರಿಯನ್ನು ನಡೆಸಿಕೊಂಡಿದ್ದರು. ಇದರ ಭಾಗವಾಗಿಯೇ ಸುಲ್ತಾನ್‌ ಬತ್ತೇರಿಯಿಂದ ಸುಮಾರು 5ಕಿಮೀ ದೂರದಲ್ಲಿಯೇ 2ಎಕ್ರೆ ಜಾಗ ಖರೀದಿಸಿ, ರೂಪುರೇಷೆಯಂತೆಯೇ ʻಲೆ ವಿಸ್ತಾʼ ಎಂಬ ಸುಂದರವಾದ ರೆಸಾರ್ಟ್‌ ನಿರ್ಮಾಣಮಾಡಿದರು.

ಇದನ್ನೂ ಓದಿ: ರೆಸಾರ್ಟ್‌ಗಳಿಗೊಂದು ಬೆಂಚ್ ಮಾರ್ಕ್ ಬೆಂಚ್ಕಲ್ ರೆಸಾರ್ಟ್

ಅರಬ್‌ ದೇಶದ ಉದ್ಯೋಗಕ್ಕೆ ಗುಡ್‌ ಬೈ ಹೇಳಿ ತನ್ನೂರಿಗೆ ಬಂದು, ರೆಸಾರ್ಟ್‌ ಕಟ್ಟಿಸಿದ್ದ ಉಮೇಶ್‌ ಅದನ್ನೇ ಆದಾಯದ ಮಾರ್ಗವನ್ನಾಗಿಸಿಕೊಂಡಿದ್ದಾರೆ. ಸಿಂಪಲ್‌ ಆಗಿ ನಾಲ್ಕು ಕಾಟೇಜ್‌ಗಳನ್ನಷ್ಟೇ ಕಟ್ಟಿಸಿಕೊಂಡಿರುವ ಇವರು, ಅದ್ಧೂರಿಗೆ ಪ್ರಾಮುಖ್ಯತೆ ನೀಡಿಲ್ಲ. ಸುತ್ತಲಿನ ಹಚ್ಚಹಸಿರಿನ ಪರಿಸರವನ್ನು ಆಸ್ವಾದಿಸಬೇಕೆನ್ನುವವರಿಗಾಗಿ ಸುಂದರ ಪ್ರಪಂಚವನ್ನೇ ಕಟ್ಟಿಕೊಟ್ಟಿದ್ದಾರೆ.

New Project (9)

ಮನೆಯೂಟವನ್ನು ಮಿಸ್‌ ಮಾಡದಿರಿ

ರೆಸಾರ್ಟ್‌ಗಳೆಂದರೆ ಆಡಂಬರವನ್ನು ಬಯಸುವವರಿಗಿಂತಲೂ, ಪ್ರವಾಸದಿಂದಾಗಿ ದಣಿದು ವಿಶ್ರಾಂತಿಗೆ ಬರುವ ಗ್ರಾಹಕರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಮಧ್ಯಾಹ್ನ 2 ರಿಂದ ಚೆಕ್‌ ಮಾಡಿಕೊಳ್ಳಲು ಅವಕಾಶವಿದ್ದು, ಕಾಂಪ್ಲಿಮೆಂಟರಿಯಾಗಿ ಬೆಳಗ್ಗಿನ ಉಪಾಹಾರ ನೀಡಲಾಗುತ್ತದೆ. ವೆಜ್‌ ಹಾಗೂ ನಾನ್‌ ವೆಜ್‌ ಪ್ರಿಯರಿಗೂ ಇಲ್ಲಿ ಒಳ್ಳೆಯ ಆಯ್ಕೆಗಳಿದ್ದು,ಮುಂಚಿತವಾಗಿ ಮಾಹಿತಿ ನೀಡಿದರೆ ರಾತ್ರಿ ಊಟವನ್ನು ತಯಾರಿಸಿಕೊಡುತ್ತಾರೆ. ಹೋಮ್ಲಿ ಫುಡ್‌ ಇಲ್ಲಿನ ಪ್ರಮುಖ ಆಕರ್ಷಣೆ.

New Project (10)

ಹತ್ತಿರದ ಪ್ರವಾಸಿ ತಾಣಗಳು

ಮುತ್ಥಂಗ, ಪುರಾತನವಾದ ಜೈನರ ದೇವಾಲಯ, ವಯನಾಡು ವೈಲ್ಡ್‌ ಲೈಫ್‌ ಸ್ಯಾಂಚುರಿ, ಎಡಕಲ್ಲು ಗುಡ್ಡ, ಕಾರಪುಳ ಡ್ಯಾಮ್‌, ಮೀನ್ಮುಟ್ಟಿ ವಾಟರ್‌ ಫಾಲ್ಸ್‌ ಇಲ್ಲಿಗೆ ಸಮೀಪದಲ್ಲೇ ಇದ್ದು, ರೆಸಾರ್ಟ್‌ ಸಿಬ್ಬಂದಿ ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.

ಗ್ಯಾಡ್ಜೆಟ್ಸ್‌ ಯುಗದಲ್ಲಿ ಟಿವಿ, ಲ್ಯಾಪ್‌ಟಾಪ್‌, ಮೊಬೈಲ್‌ ಎಂದು ಸ್ಕ್ರೀನ್‌ ಟೈಮ್‌ ಬಯಸುವ ಮಕ್ಕಳನ್ನು ನಿಸರ್ಗದ ಜತೆ ಬೆರೆಯುವಂತೆ ಮಾಡುವ ಕಿಡ್ಸ್‌ ಫ್ರೆಂಡ್ಲಿ ರೆಸಾರ್ಟ್‌ ಇದು. ಮಕ್ಕಳಿಗಾಗಿ ವಿಶೇಷವಾದ ಕ್ರೀಡೆಗಳು, ಪ್ಲೇ ಏರಿಯಾ ಇಲ್ಲಿದ್ದು, ಇಂಡೋರ್‌ ಗೇಮ್ಸ್‌ ಮೆಚ್ಚಿಕೊಳ್ಳುವವರಿಗೂ ಇಲ್ಲಿ ಅನೇಕ ಆಯ್ಕೆಗಳಿವೆ. ಇಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ ನಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕಿಡ್ಸ್‌ ಏರಿಯಾ ಇದ್ದು ಸಮಯ ಹೋಗುವುದೇ ತಿಳಿಯುವುದಿಲ್ಲ.

ದುಬೈನಲ್ಲಿ ಕೆಲಸ ಆಡುತ್ತಿದ್ದ ವೇಳೆ ನನ್ನ ಊರಿನಲ್ಲೇ ಸ್ವಂತ ಬ್ಯುಸಿನೆಸ್‌ ಪ್ರಾರಂಭಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದೆ. ದುಡಿಮೆಯ ಮೊತ್ತವನ್ನೆಲ್ಲಾ ಕೂಡಿಟ್ಟು ಈ ರೆಸಾರ್ಟ್‌ ನಿರ್ಮಿಸಿ ಇಲ್ಲೇ ಬಂದು ಸೆಟಲ್‌ ಆಗಿದ್ದೇನೆ. ಲೆ ವಿಸ್ತಾ ಎಂಬ ಹೆಸರಿನ ಈ ರೆಸಾರ್ಟ್‌ ನನ್ನ ಕನಸಾಗಿತ್ತು. ಅದನ್ನು ನನಸು ಮಾಡಿಕೊಂಡಿದ್ದೇನೆ. ಇಲ್ಲಿ ಅದ್ಧೂರಿಯಿಲ್ಲ. ಬ್ಯುಸಿ ಲೈಫ್‌ ನಲ್ಲಿ ಕಳೆದುಹೋಗಿರುವ ಜನರನ್ನು ಪ್ರಕೃತಿಯೊಂದಿಗೆ ಬೆಸೆಯುವ ಪ್ರಯತ್ನ ಇಲ್ಲಿ ಮಾಡಲಾಗುತ್ತದೆ. ಬಜೆಟ್‌ ಫ್ರೆಂಡ್ಲಿಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ಆಗಮಿಸುತ್ತಾರೆ. ಸಾಕಷ್ಟು ವಿದೇಶಿಗರೂ ಇಲ್ಲಿಗೆ ಭೇಟಿ ನೀಡಿ, ನಮ್ಮ ಸರ್ವಿಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- ಉಮೇಶ್‌, ಮಾಲೀಕರು

ವಿಳಾಸ:

ಲೆ ವಿಸ್ತಾ ರೆಸಾರ್ಟ್,

ಒಟ್ಟತೆಕ್ಕು, ನಾಯ್ಕಟ್ಟಿ ಪಿ.ಓ,

ಸುಲ್ತಾನ್ ಬತ್ತೇರಿ,

673592

ಇ-ಮೇಲ್‌ levistaresort@gmail.com

ಮೊ: +918590755100

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ