ನೇತ್ರಾಣಿ ಆಕ್ವಾ ರೈಡ್
ಸ್ಫಟಿಕದಂಥ ಶುದ್ಧ ನೀರು, ವರ್ಣರಂಜಿತ ಹವಳದ ದಿಬ್ಬಗಳು ಮತ್ತು ವೈವಿಧ್ಯಮಯ ಕಡಲ ಜೀವಿಗಳು ಇವೆಲ್ಲವನ್ನು ಹೊಂದಿದ್ದ ನೇತ್ರಾಣಿ ದ್ವೀಪಕ್ಕೆ ಮೆರುಗು ತಂದುಕೊಟ್ಟಿದ್ದು ನೇತ್ರಾನಿ ಆಕ್ವಾ ರೈಡ್! ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್ ಸೇರಿದಂತೆ ಹಲವಾರು ಸಾಹಸ ಜಲಕ್ರೀಡೆಗಳನ್ನು ತರುವ ಮೂಲಕ ನೇತ್ರಾಣಿಯ ಹೆಸರನ್ನು ಜಗತ್ತಿನ ಪ್ರವಾಸಿ ತಾಣಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ ಆಕ್ವಾ ರೈಡ್.
ಕರ್ನಾಟಕದ ಕರಾವಳಿಯ ಅತ್ಯಂತ ರಮಣೀಯ ತಾಣಗಳು ಎಲ್ಲಿವೆ ಅಂದರೆ ಮರುಯೋಚನೆ ಮಾಡದೇ ಹೇಳಬಹುದು ಅವು ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿವೆ ಎಂದು. ಪ್ರಸ್ತುತಉತ್ತರಕನ್ನಡದ ಮುಕುಟಮಣಿಯಂತೆ ಕಂಗೊಳಿಸುತ್ತಿರುವ ಸ್ಥಳ ಮುರುಡೇಶ್ವರ. ಭೋರ್ಗರೆವ ಅರಬ್ಬೀ ಸಮುದ್ರ, ತಟದಲ್ಲೇ ಪುಣ್ಯಕ್ಷೇತ್ರವಾಗಿರುವ ಮುರುಡೇಶ್ವರ ದೇವಾಲಯ, ಅದರ ಪಕ್ಕದಲ್ಲೆ ಬಾನೆತ್ತರಕ್ಕೆ ಅವತಾರ ತಳೆದು ಕೂತಿರುವ ಬೃಹತ್ ಶಿವ ಪ್ರತಿಮೆ. ಕಡಲೊಳಗೆ ಅಂಟಿಕೊಂಡ ಹಡಗಿನಂಥ ರೆಸ್ಟೋರೆಂಟ್.. ಒಂದು ಪ್ರವಾಸಿ ತಾಣವಾಗಿ ಒಂದು ಯಾತ್ರಾಸ್ಥಳವಾಗಿ ಒಂದು ಚೆಂದದ ಬೀಚ್ ಆಗಿ ಆಕರ್ಷಿಸಲು ಇನ್ನೇನು ಬೇಕು?
ಯೆಸ್. ಇನ್ನೇನು ಬೇಕು ಎಂಬ ಪ್ರಶ್ನೆಗೆ ಉತ್ತರವಾಗಿ ಸೃಷ್ಟಿಯಾದದ್ದೇ ನೇತ್ರಾಣಿ ಆಕ್ವಾ ರೈಡ್!
ನೇತ್ರಾಣಿ ದ್ವೀಪ – ಸಮುದ್ರದ ಹೃದಯದಲ್ಲಿರುವ ಸ್ವರ್ಗ
ನಿಮಗೆ ನೇತ್ರಾಣಿ ದ್ವೀಪ ಅಥವಾ ನೇತ್ರಾಣಿ ಐಲ್ಯಾಂಡ್ ಬಗ್ಗೆ ಗೊತ್ತಾ? ಕರ್ನಾಟಕದ ಪ್ರವಾಸಿ ಪ್ರಿಯರು ಅದರಲ್ಲೂ ಸಾಹಸ ಪ್ರವಾಸ ಬಯಸುವವರು ಲಕ್ಷದ್ವೀಪ, ಅಂಡಮಾನ್, ಮಾಲ್ಡೀವ್ಸ್ ಅಂತ ದೂರದೂರದ ಸಮುದ್ರಗಳಿಗೆ ಹೋಗಬೇಕಿಲ್ಲ. ಸ್ಕೂಬಾ ಡೈವ್ ಮಾಡಲು, ಸ್ನಾರ್ಕಲಿಂಗ್ ಮಾಡಲು ವಿದೇಶಕ್ಕಾಗಲೀ ಪರರಾಜ್ಯಕ್ಕಾಗಲೀ ಹೋಗುವುದೇ ಬೇಡ. ಕರ್ನಾಟಕದಲ್ಲೇ ನೇತ್ರಾಣಿ ಐಲ್ಯಾಂಡ್ ಎಂಬ ಕರಾವಳಿ ರತ್ನವಿದೆ. ಶುದ್ಧ ಸ್ಪಟಿಕದಂತಿರುವ, ತಳದ ತನಕವೂ ಕನ್ನಡಿಯಂತೆ ಕಾಣುವ ನೀರು, ವಿಧವಿಧವಾದ ಬಣ್ಣದ ಮೀನುಗಳು, ಆಮೆಗಳು, ಶಾರ್ಕ್ ಗಳು, ಇನ್ನಿತರ ಜೀವವೈವಿಧ್ಯವನ್ನು ಒಡಲಲ್ಲಿ ಇಟ್ಟುಕೊಂಡಿರುವ ನೇತ್ರಾಣಿ, ತನ್ನತ್ತ ಸಾಹಸಿಗರನ್ನು ಕೂಗಿ ಕರೆಯುತ್ತಿದ್ದಳು. ಆ ಕರೆಗೆ ಓಗೊಟ್ಟಿದ್ದು ನೇತ್ರಾಣಿ ಆಕ್ವಾ ರೈಡ್ ಎಂಬ ಸಾಹಸ ಆಯೋಜನಾ ಸಂಸ್ಥೆ. ನಮ್ಮ ಕರ್ನಾಟಕ ಯಾವುದರಲ್ಲಿ ಕಮ್ಮಿ ಎಂದು ಸವಾಲೆಸೆದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ನೇತ್ರಾಣಿ ಆಕ್ವಾ ರೈಡ್!
ಅನುಮಾನವೇ ಬೇಡ ನೇತ್ರಾಣಿ ದ್ವೀಪದಲ್ಲಿ ನೇತ್ರಾಣಿ ಆಕ್ವಾ ರೈಡ್ ಎಲ್ಲರ ಫೇವರಿಟ್. ಸಮುದ್ರದ ರೋಮಾಂಚಕ ಸಾಹಸವನ್ನು ಅನುಭವಿಸಲು ಬಯಸುವವರಿಗೆ ಇದಕ್ಕಿಂತ ಅತ್ಯುತ್ತಮ ಆಯ್ಕೆ ಇಲ್ಲವೇ ಇಲ್ಲ.
ಕರ್ನಾಟಕದ ಹವಾಯ್
ಮುರುಡೇಶ್ವರದಿಂದ ಸುಮಾರು 19 ಕಿಮೀ. ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ನೆಲೆಗೊಂಡಿರುವ ಚಿಕ್ಕ ದ್ವೀಪವನ್ನು ಪಿಜನ್ ಐಲ್ಯಾಂಡ್ ಅಂತ ಕರೆಯುವುದೂ ಇದೆ. ಹೃದಯದ ಆಕಾರದಲ್ಲಿದೆ ಎಂದು ಹಾರ್ಡ್ ಶೇಪ್ಡ್ ಐಲ್ಯಾಂಡ್ ಎಂದೂ ಕರೆಲಾಗುತ್ತದೆ. ಕರ್ನಾಟಕದ ಹವಾಯ್ ಎಂದು ಕೂಡ ಇದೀಗ ಹೆಮ್ಮೆಯಿಂದ ಕರೆಸಿಕೊಳ್ಳುತ್ತಿದೆ. ಸ್ಫಟಿಕದಂಥ ಶುದ್ಧ ನೀರು, ವರ್ಣರಂಜಿತ ಹವಳದ ದಿಬ್ಬಗಳು ಮತ್ತು ವೈವಿಧ್ಯಮಯ ಕಡಲ ಜೀವಿಗಳು ಇವೆಲ್ಲವನ್ನು ಹೊಂದಿದ್ದ ನೇತ್ರಾಣಿ ದ್ವೀಪಕ್ಕೆ ಮೆರುಗು ತಂದುಕೊಟ್ಟಿದ್ದು ನೇತ್ರಾನಿ ಆಕ್ವಾ ರೈಡ್! ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್ ಸೇರಿದಂತೆ ಹಲವಾರು ಸಾಹಸ ಜಲಕ್ರೀಡೆಗಳನ್ನು ತರುವ ಮೂಲಕ ನೇತ್ರಾಣಿಯ ಹೆಸರನ್ನು ಜಗತ್ತಿನ ಪ್ರವಾಸಿ ತಾಣಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ ಆಕ್ವಾ ರೈಡ್. ಸಾಹಸಗಳ ಜತೆ ಜವಾಬ್ದಾರಿಯುತ ಟೂರಿಸಂ ನಿಂದಲೂ ಹೆಸರು ಮಾಡಿರುವ ಆಕ್ವಾ ರೈಡ್ ಈಗ ಪ್ರವಾಸಿಗರ ಹಾಟ್ ಸ್ಪಾಟ್.
ತನ್ನ ಅದ್ಭುತ ಸಮುದ್ರ ತೀರ, ವೈಭವಮಯ ಶಿವಮೂರ್ತಿ ಮತ್ತು ಶಾಂತ ನೈಸರ್ಗಿಕ ಸೌಂದರ್ಯಕ್ಕಾಗಿ ವಿಶ್ವಪ್ರಸಿದ್ಧವಾಗಿರುವ ಮುರುಡೇಶ್ವರವನ್ನು ಸಾಹಸ ಕ್ರೀಡೆಗಳ ಮೂಲಕ ಇನ್ನಷ್ಟು ಖ್ಯಾತಗೊಳಿಸಿರುವುದು ನೇತ್ರಾಣಿ ದ್ವೀಪದ ಆಕ್ವಾ ರೈಡ್.
ಆಕ್ವಾ ರೈಡ್ ನ ಕಣ್ಣಲ್ಲಿ ನೋಡಿದರೆ ಅರಬ್ಬೀ ಸಮುದ್ರದ ಮಧ್ಯದಲ್ಲಿ ಅಲಂಕರಿಸಿದ ರತ್ನದಂತಿರುವ ನೇತ್ರಾಣಿ ದ್ವೀಪ ತನ್ನ ಒಡಲನ್ನು ತೋರುವ ಮೂಲಕ ನೀರಿನಡಿ ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ.
ಜಲಕ್ರೀಡೆಗೆ ಆಕ್ವಾ ರೈಡ್
ನೇತ್ರಾಣಿ ಆಕ್ವಾ ರೈಡ್‌ನ ಮುಖ್ಯ ಆಕರ್ಷಣೆಯೆಂದರೆ ಇದರ ವೈವಿಧ್ಯಮಯ ಜಲಕ್ರೀಡೆಗಳು. ನೀರಿಗೆ ಹೊಸಬರು, ಈಜು ಗೊತ್ತಿರದವರು, ಎಕ್ಸ್ ಪರ್ಟ್ ಗಳು ಯಾರು ಬೇಕಾದರೂ ಇಲ್ಲಿ ಧೈರ್ಯವಾಗಿ ಆಟವಾಡಬಹುದು. ಸಾಹಸ ಚಟುವಟಿಕೆಯಲ್ಲಿ ಮಿಂದು ಸಂಭ್ರಮಿಸಬಹುದು.
- ಸ್ಕೂಬಾ ಡೈವಿಂಗ್
ನೇತ್ರಾಣಿ ಆಕ್ವಾ ರೈಡ್ ನ ನಂಬರ್ ಒನ್ ಮತ್ತು ಅತ್ಯಂತ ಡಿಮ್ಯಾಂಡ್ ಇರುವ ಸಾಹಸಕ್ರೀಡೆ ಅಂದರೆ ಅದು ಸ್ಕೂಬಾ ಡೈವಿಂಗ್. ದ್ವೀಪದ ಸುತ್ತ ಇರುವ ಸಮುದ್ರವು ಸುಮಾರು 10 ರಿಂದ 30 ಮೀಟರ್‌ಗಳವರೆಗಿನ ಆಳವನ್ನು ಹೊಂದಿದ್ದು, ಕೆಲವೆಡೇ ತೊಂಬತ್ತು ಅಡಿ ತನಕ ಆಳವನ್ನು ಅಂದಾಜಿಸಲಾಗಿದೆ. ಇದು ಡೈವಿಂಗ್‌ಗೆ ಹೇಳಿಮಾಡಿಸಿದ ಜಾಗ. ಒಮ್ಮೆ ಸ್ಕೂಬಾ ಡೈವ್ ಮಾಡಿದರೆ ಸಮುದ್ರದ ಗರ್ಭದಲ್ಲಿ ವರ್ಣರಂಜಿತ ಪ್ರದರ್ಶನ ಆರಂಭ. ಹವಳದ ದಿಬ್ಬಗಳು, ವಿವಿಧ ಮೀನುಗಳ ಗುಂಪುಗಳು, ಆಮೆಗಳು, ಶಾರ್ಕ್‌ಗಳು ಮತ್ತು ಚಿತ್ರ ವಿಚಿತ್ರ ಕಡಲ ಜೀವಿಗಳು ನಿಮಗೆ ಹಾಯ್ ಅನ್ನುತ್ತವೆ.

ಸ್ಕೂಬಾ ಡೈವಿಂಗ್ ಕೋರ್ಸ್
ಯಾವುದೇ ಪೂರ್ವ ತರಬೇತಿಯಿಲ್ಲದವರಿಗೆ ಕೂಡ ಬಿಗಿನರ್ ಪ್ರೋಗ್ರಾಮ್ ಗಳಿದ್ದು, ಇದರಲ್ಲಿ ಮೂಲಭೂತ ತರಬೇತಿಯೊಂದಿಗೆ ಒಬ್ಬ ವೃತ್ತಿಪರ ಡೈವರ್‌ನ ಮಾರ್ಗದರ್ಶನದಲ್ಲಿ ಡೈವಿಂಗ್ ಕಲಿಸಲಾಗುತ್ತದೆ.
ಅದೇ ರೀತಿ ವೃತ್ತಿಪರರಿಗೆ PADI (Professional Association of Diving Instructors) ಪ್ರಮಾಣೀಕೃತ ಕೋರ್ಸ್‌ಗಳು ಲಭ್ಯವಿದ್ದು, ಇದರಲ್ಲಿ ಓಪನ್ ವಾಟರ್ ಡೈವರ್, ಅಡ್ವಾನ್ಸ್‌ಡ್ ಓಪನ್ ವಾಟರ್ ಡೈವರ್ ಮತ್ತು ರೆಸ್ಕ್ಯೂ ಡೈವರ್ ಕೋರ್ಸ್‌ಗಳು ಸೇರಿವೆ.
ಸ್ನಾರ್ಕೆಲಿಂಗ್
ಸ್ಕೂಬಾ ಡೈವಿಂಗ್ ಅಂದ್ರೆ ಭಯ ಪಡುವವರು, ಕೊಂಚ ಸುಲಭವಾದ ಆಟ ಆಡಬೇಕು ಎಂದು ಬಯಸುವವರಿಗೆ ಸ್ನಾರ್ಕೆಲಿಂಗ್ ಇದೆ.. ಇದರಲ್ಲಿ ಯಾವುದೇ ತರಬೇತಿಯ ಅಗತ್ಯವಿಲ್ಲ, ಕೇವಲ ಒಂದು ಮಾಸ್ಕ್, ಸ್ನಾರ್ಕೆಲ್ ಮತ್ತು ಫಿನ್‌ಗಳನ್ನು ಬಳಸಿಕೊಂಡು ಸಮುದ್ರದ ಮೇಲ್ಮೈಯಿಂದ ಹವಳದ ದಿಬ್ಬಗಳನ್ನು ಮತ್ತು ಕಡಲ ಜೀವಿಗಳನ್ನು ವೀಕ್ಷಿಸಬಹುದು. ನೇತ್ರಾಣಿಯ ಸ್ಫಟಿಕದಂಥ ನೀರಿನಲ್ಲಿ ಸ್ನಾರ್ಕೆಲಿಂಗ್ ಮಾಡುವ ಅನುಭವ ವರ್ಣಿಸಲು ಅಸಾಧ್ಯ.
ಜೆಟ್ ಸ್ಕೀಯಿಂಗ್ ಮತ್ತು ಬನಾನಾ ಬೋಟ್ ರೈಡ್
ಇನ್ನು ವೇಗವನ್ನು ಇಷ್ಟಪಡುವವರಿಗೆ ಅಂತಲೇ ಕೆಲವು ಕ್ರೀಡೆಗಳನ್ನು ಇಟ್ಟಿದ್ದಾರೆ. ಅವುಗಳಲ್ಲಿ ಅತಿ ಪಾಪ್ಯುಲರ್ ಅಂದರೆ ಜೆಟ್ ಸ್ಕೀಯಿಂಗ್ ಮತ್ತು ಬನಾನಾ ಬೋಟ್ ರೈಡ್. ಜೆಟ್ ಸ್ಕೀಯಿಂಗ್‌ನಲ್ಲಿ, ನಿಮ್ಮೊಂದಿಗೆ ವೃತ್ತಿಪರ ಗೈಡ್ ಇರುತ್ತಾರೆ. ಅವರ ಜತೆ ಸಮುದ್ರದ ತೀರದಲ್ಲಿ ವೇಗವಾಗಿ ಸಂಚರಿಸಬಹುದು. ಬನಾನಾ ಬೋಟ್ ರೈಡ್‌ನಲ್ಲಿ ಗುಂಪುಗುಂಪಾಗಿ ಮಾಡುವ ಸವಾರಿ ಅದ್ಭುತ ರೋಮಾಂಚನವನ್ನು ನೀಡುತ್ತದೆ.
ಕಯಾಕಿಂಗ್ ಮತ್ತು ಪ್ಯಾಡಲ್ ಬೋರ್ಡಿಂಗ್
ಸಮುದ್ರದ ತಂಪಾದ ಅಲೆಗಳ ನಡುವೆ ನೀವೇ ನಾವಿಕನಾಗಿ ಹಾರಾಡುವ ವಿಶಿಷ್ಟ ಅನುಭವ ಇದು. ಆಕ್ವಾ ರೈಡ್ ನೀಡುವ ಹಲವು ಆಟಗಳಲ್ಲಿ ಇದು ಒಂದು ಕೂಲ್ ಗೇಮ್ ಅನ್ನಬಹುದು.
ಡಾಲ್ಫಿನ್ ವಾಚಿಂಗ್
ನೇತ್ರಾಣಿ ದ್ವೀಪದ ಸುತ್ತಲಿನ ಸಮುದ್ರವು ಡಾಲ್ಫಿನ್‌ಗಳಿಗೆ ಆವಾಸಸ್ಥಾನವಾಗಿದೆ. ಆಕ್ವಾ ರೈಡ್‌ನ ಭಾಗವಾಗಿ, ವಿಶೇಷ ದೋಣಿ ಪ್ರವಾಸವೂ ಇರುತ್ತದೆ. ಇದರಲ್ಲಿ ಡಾಲ್ಫಿನ್‌ಗಳು ಆಡುವುದನ್ನು ಮತ್ತು ಜಿಗಿಯುವುದನ್ನು ಕಾಣಬಹುದು. ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದವರಿಗೆ, ಅದರಲ್ಲೂ ಮಕ್ಕಳನ್ನು ಕರೆತಂದವರಿಗೆ ಇದು ಬಹುವಾಗಿ ಆಕರ್ಷಿಸುತ್ತದೆ.
ದ್ವೀಪದ ಸುತ್ತ ಸುತ್ತಾಟ
ನೇತ್ರಾಣಿ ದ್ವೀಪದ ಕೆಲವು ಭಾಗಗಳಲ್ಲಿ ಚಿಕ್ಕ ಟ್ರೆಕ್ಕಿಂಗ್ ಗೆ ಅವಕಾಶವಿದೆ. ಪಕ್ಷಿಗಳ ವೀಕ್ಷಣೆ ಮತ್ತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವವರು ಈ ಮಿನಿ ಚಾರಣ ನಡೆಸಬಹುದು. ಆದರೆ ಆಕ್ವಾ ರೈಡ್ ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿರುವುದರಿಂದ ಪ್ರವಾಸಿಗರಲ್ಲಿ ಸ್ವಚ್ಛತೆ ಮತ್ತು ಜವಾಬ್ದಾರಿಯನ್ನು ನಿರೀಕ್ಷಿಸುತ್ತದೆ.
ಸೇಫ್ಟಿ ಫಸ್ಟ್
ನೇತ್ರಾಣಿ ಆಕ್ವಾ ರೈಡ್ ವ್ಯವಸ್ಥಾಪಕರು ಪ್ರವಾಸಿಗರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ನೋಡಿಕೊಳ್ಳುತ್ತಾರೆ. ಪ್ರತಿ ಚಟುವಟಿಕೆಗೆ ಮುನ್ನ ಪ್ರೊಫೆಷನಲ್ ಟ್ರೈನರ್‌ಗಳಿಂದ ಮಾರ್ಗದರ್ಶನ, ಆಧುನಿಕ ಸಾಧನಗಳು, ಲೈಫ್ ಜಾಕೆಟ್, ಆಕ್ಸಿಜನ್ ಸಿಲಿಂಡರ್, ಅಂಡರ್‌ವಾಟರ್ ಫೋಟೋಗ್ರಫಿ ಎಲ್ಲವೂ ಲಭ್ಯ. ಪ್ರಾಥಮಿಕ ವೈದ್ಯಕೀಯ ನೆರವು, ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಸಹಾಯ ವ್ಯವಸ್ಥೆ ಕೂಡ ಸಿದ್ಧವಿರುತ್ತದೆ. ಸೇಫ್ಟಿ ಫಸ್ಟ್ ಎಂಬುದು ನೇತ್ರಾಣಿ ಆಕ್ವಾ ರೈಡ್‌ನ ಆಯೋಜಕರ ಮೂಲಮಂತ್ರ.
ವೃತ್ತಿಪರ ತರಬೇತುದಾರರು:
ಎಲ್ಲಾ ಜಲಕ್ರೀಡೆಗಳಿಗೆ PADI ಪ್ರಮಾಣೀಕೃತ ತರಬೇತುದಾರರ ಮಾರ್ಗದರ್ಶನವಿದೆ. ಆರಂಭಿಕರಿಗೆ ಸಂಕ್ಷಿಪ್ತ ತರಬೇತಿ ಸೆಷನ್‌ಗಳನ್ನು ಒದಗಿಸಲಾಗುತ್ತದೆ.
ಗುಣಮಟ್ಟದ ಉಪಕರಣಗಳು:
ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್ ಮತ್ತು ಇತರ ಚಟುವಟಿಕೆಗಳಿಗೆ ಬಳಸುವ ಎಲ್ಲಾ ಉಪಕರಣಗಳು ಉತ್ತಮ ಗುಣಮಟ್ಟದವಾಗಿದ್ದು, ನಿಯಮಿತವಾಗಿ ತಪಾಸಣೆಗೊಳಗಾಗುತ್ತವೆ.
ದೋಣಿ ಸೌಕರ್ಯ:
ಮುರ್ಡೇಶ್ವರದಿಂದ ದ್ವೀಪಕ್ಕೆ ಕರೆದೊಯ್ಯಲು ಆಧುನಿಕ ಮತ್ತು ಸುಸಜ್ಜಿತ ದೋಣಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಜೀವರಕ್ಷಕ ಉಪಕರಣಗಳು( ಲೈಫ್ ಜಾಕೆಟ್, ಕುಡಿಯುವ ನೀರು ಮತ್ತು ಇತರ ಮೂಲಭೂತ ಸೌಕರ ಇರುತ್ತವೆ.
ಸುರಕ್ಷತಾ ಮಾರ್ಗಸೂಚಿಗಳು:
ಪ್ರತಿ ಚಟುವಟಿಕೆಯ ಮೊದಲು ಸುರಕ್ಷತಾ ಸೂಚನೆಗಳನ್ನು ನೀಡಲಾಗುತ್ತದೆ. ತುರ್ತು ಸಂದರ್ಭಗಳಿಗೆ ಆಕ್ಸಿಜನ್ ಕಿಟ್‌ಗಳು ಮತ್ತು ವೈದ್ಯಕೀಯ ಸೌಕರ್ಯಗಳು ಲಭ್ಯವಿವೆ.
ಪರಿಸರ ಸಂರಕ್ಷಣೆ:
ಆಕ್ವಾ ರೈಡ್ ಆಯೋಜಕರು ದ್ವೀಪದ ಪರಿಸರವನ್ನು ಕಾಪಾಡಲು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸುತ್ತಾರೆ. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ಕಸ ಸಂಗ್ರಹಕ್ಕೆ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ.
ನೇತ್ರಾಣಿ ಆಕ್ವಾ ರೈಡ್ ಆಯ್ಕೆ ಏಕೆ?
ಏಕೆಂದರೆ ನೇತ್ರಾಣಿ ಆಕ್ವಾ ರೈಡ್ ಕೇವಲ ಒಂದು ಸಾಹಸಕ್ಕೆ ಸೀಮಿತವಾಗಿಲ್ಲ; ಇದು ಬೇರೆಯದ್ದೇ ಅನುಭವ ಕೊಡುವ ಸಾಹಸ ತಂಡ.
ವಿಶಿಷ್ಟ ಸ್ಥಳ:
ನೇತ್ರಾಣಿ ದ್ವೀಪವು ಭಾರತದ ಕರಾವಳಿಯಲ್ಲಿ ಅಪರೂಪದ ಸಾಹಸ ಕೇಂದ್ರವಾಗಿದೆ. ಇದರ ಸ್ಫಟಿಕದಂತಹ ನೀರು ಮತ್ತು ಜೀವವೈವಿಧ್ಯವು ಇದನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.
ಎಲ್ಲರಿಗೂ ಸೂಕ್ತ: ಆರಂಭಿಕರಿಂದ ಹಿಡಿದು ವೃತ್ತಿಪರರವರೆಗೆ, ಎಲ್ಲ ವಯಸ್ಸಿನವರಿಗೂ ಇಲ್ಲಿ ಚಟುವಟಿಕೆಗಳಿವೆ. ಕುಟುಂಬಗಳು, ಯುವ ಗುಂಪುಗಳು ಮತ್ತು ಏಕಾಂಗಿ ಪ್ರವಾಸಿಗರಿಗೂ ಇದು ಬೆಸ್ಟ್ ಆಯ್ಕೆ.
ಸುಲಭ ಪ್ರವೇಶ: ಮುರ್ಡೇಶ್ವರದಿಂದ ದೋಣಿಯ ಮೂಲಕ ದ್ವೀಪಕ್ಕೆ ತಲುಪಲು ಕೇವಲ ಒಂದು ಗಂಟೆಯ ಸಮಯ ಬೇಕಾಗುತ್ತದೆ. ಮಂಗಳೂರು, ಉಡುಪಿ ಮತ್ತು ಗೋವಾದಿಂದ ಸುಲಭವಾಗಿ ತಲುಪಬಹುದು.
ಅಂಡರ್ ವಾಟರ್ ಫೊಟೋಗ್ರಫಿ
ಈಗ ಪ್ರತಿ ಪ್ರವಾಸದ ಹಿಂದೆಯೂ ಕ್ಯಾಮೆರಾಗಳಿಗೆ ಹೆಚ್ಚು ಕೆಲಸ. ಸೋಷಿಯಲ್ ಮೀಡಿಯಾಗಾಗಿ ಪ್ರತಿ ಪ್ರವಾಸದ ಕ್ಷಣವನ್ನೂ ಸೆರೆಹಿಡಿಯಲು ಪ್ರವಾಸಿಗರು ಬಯಸುತ್ತಾರೆ. ಅವರಿಗಾಗಿಯೇ ಅಂಡರ್ ವಾಟರ್ ಫೊಟೋ ಮತ್ತು ವಿಡಿಯೋ ಸೇವೆ ಕೂಡ ಆಕ್ವಾ ರೈಡ್ ನೀಡುತ್ತದೆ.
ತಲುಪುವುದು ಹೇಗೆ?
ನೇತ್ರಾಣಿ ಆಕ್ವಾ ರೈಡ್‌ಗೆ ಮುರ್ಡೇಶ್ವರವೇ ಮುಖ್ಯ ಕೇಂದ್ರ. ನೇರವಲ್ಲದಿದ್ದರೂ ಮುರ್ಡೇಶ್ವರ ರೈಲು, ರಸ್ತೆ ಮತ್ತು ವಿಮಾನದ ಸಂಪರ್ಕ ಹೊಂದಿದೆ.
- ರೈಲಿನ ಮೂಲಕ: ಮುರ್ಡೇಶ್ವರ ರೈಲ್ವೆ ಸ್ಟೇಷನ್ ಕೊಂಕಣ ರೈಲ್ವೆ ಮಾರ್ಗದಲ್ಲಿದೆ, ಇದು ಮುಂಬೈ, ಗೋವಾ ಮತ್ತು ಮಂಗಳೂರಿನೊಂದಿಗೆ ಸಂಪರ್ಕ ಹೊಂದಿದೆ.
- ರಸ್ತೆಯ ಮೂಲಕ: NH-66 ಮಾರ್ಗವು ಮುರ್ಡೇಶ್ವರಕ್ಕೆ ಬೆಂಗಳೂರು, ಮಂಗಳೂರು ಮತ್ತು ಉಡುಪಿಯಿಂದ ಸ್ವಂತ ವಾಹನದಲ್ಲಿ ಬರುವವರಿಗೆ ಸುಲಭ ಮಾರ್ಗ.
- ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಸುಮಾರು 160 ಕಿಮೀ ದೂರದಲ್ಲಿದೆ.
ಮುರ್ಡೇಶ್ವರದಿಂದ ದ್ವೀಪಕ್ಕೆ ದೋಣಿಗಳು ಲಭ್ಯವಿವೆ, ಮತ್ತು ಆಕ್ವಾ ರೈಡ್ ಆಯೋಜಕರು ಅದರ ಸಂಪೂರ್ಣ ವ್ಯವಸ್ಥೆ ಒದಗಿಸುತ್ತಾರೆ.

ತಯಾರಿ ಹೇಗೆ?
ನೇತ್ರಾಣಿ ಆಕ್ವಾ ರೈಡ್‌ಗೆ ತೆರಳುವ ಮೊದಲು ಕೆಲವು ಸಲಹೆಗಳನ್ನು ಅನುಸರಿಸಿದರೆ ಒಳ್ಳೆಯದು.
- ಬುಕಿಂಗ್: ಮುಂಗಡವಾಗಿ ಬುಕ್ ಮಾಡಿಕೊಳ್ಳಿ, ವಿಶೇಷವಾಗಿ ಪೀಕ್ ಸೀಸನ್‌ನಲ್ಲಿ (ಅಕ್ಟೋಬರ್‌ನಿಂದ ಮಾರ್ಚ್). ಮುಂಗಡ ಬುಕ್ ಮಾಡಿದಲ್ಲಿ ಮತ್ತು ಹೆಚ್ಚು ಮಂದಿ ಬುಕ್ ಮಾಡಿದಲ್ಲಿ, ಆಫರ್ ಹಾಗೂ ಪ್ಯಾಕೇಜ್ ಗಳು ಆಕರ್ಷಕವಾಗಿರುತ್ತವೆ.
- ಆರೋಗ್ಯ: ಸ್ಕೂಬಾ ಡೈವಿಂಗ್‌ಗೆ ಆರೋಗ್ಯದ ಪರೀಕ್ಷೆಯ ಅಗತ್ಯವಿದೆ. ಗರ್ಭಿಣಿಯರು ಮತ್ತು ಗಂಭೀರ ಆರೋಗ್ಯ ಸಮಸ್ಯೆ ಇರುವವರು ಡೈವಿಂಗ್‌ನಿಂದ ದೂರವಿರಬೇಕು.
- ಪ್ಯಾಕಿಂಗ್: ಸನ್‌ಸ್ಕ್ರೀನ್, ಟೋಪಿ, ಸುಂಗ್ಲಾಸ್, ಸ್ವಿಮ್‌ವೇರ್ ಮತ್ತು ಒಂದು ಬದಲಿ ಉಡುಗೆಯನ್ನು ತೆಗೆದುಕೊಳ್ಳಿ.
- ಪರಿಸರ ಗೌರವ: ದ್ವೀಪದಲ್ಲಿ ಕಸ ಬಿಸಾಡದಿರಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ನಡೆದುಕೊಳ್ಳಿ.
ಆಕ್ವಾ ರೈಡ್ – ಸಾಮಾನ್ಯ ಪ್ರವಾಸಕ್ಕಿಂತ ವಿಭಿನ್ನ ಅನುಭವ
ನೇತ್ರಾಣಿ ಆಕ್ವಾ ರೈಡ್ ಎಂಬುದು ಹತ್ತರ ಜೊತೆ ಹನ್ನೊಂದು ಎಂಬ ಪ್ರವಾಸವಲ್ಲ. ಇದು ಅತಿ ವಿಶಿಷ್ಟ ಅನುಭವ. ಸಾಮಾನ್ಯವಾಗಿ ಪ್ರವಾಸಿಗರು ಸಮುದ್ರ ತೀರದಲ್ಲಿ ನಿಂತು ಅಲೆಗಳ ಆಟವನ್ನು ಆನಂದಿಸುತ್ತಾರೆ. ಆದರೆ ನೇತ್ರಾಣಿಯಲ್ಲಿ ಲಭ್ಯವಿರುವ ಆಕ್ವಾ ರೈಡ್ ಪ್ಯಾಕೇಜ್ ಪ್ರವಾಸಿಗರನ್ನು ಸಮುದ್ರದ ಒಳಗಿನ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.
ಸಮುದ್ರದ ಆಳಕ್ಕೆ ಹೋಗಿ ಸಾಹಸ ಕ್ರೀಡೆ ಆಡುವ, ಪ್ರಕೃತಿಯ ಸೌಂದರ್ಯದ ಜೊತೆಗಿನ ಸಂವಾದಿಸುವ, ಜೀವವೈವಿಧ್ಯದೊಂದಿಗೆ ಸಂವಹನ ನಡೆಸುವ ಅದ್ಭುತ ಕ್ಷಣಗಳು ಅವರ್ಣನೀಯ. ಒಂದು ದಿನದ ರೋಮಾಂಚಕ ಸಾಹಸವನ್ನು ಬಯಸುವವರಿಗೆ, ಕುಟುಂಬದೊಂದಿಗೆ ವಿಶ್ರಾಂತಿಯ ಸಮಯವನ್ನು ಕಳೆಯಲು ಇಚ್ಛಿಸುವವರಿಗೆ, ಕಡಲ ಜೀವಿಗಳೊಂದಿಗೆ ಹತ್ತಿರದಿಂದ ಸಂಪರ್ಕವನ್ನು ಬಯಸುವವರಿಗೆ, ನೇತ್ರಾಣಿ ಆಕ್ವಾ ರೈಡ್ ಗಿಂತ ಅತ್ಯುತ್ತಮ ಆಯ್ಕೆ ಇನ್ನೊಂದಿಲ್ಲ. ನಿಸ್ಸಂಶಯವಾಗಿ ಇದೊಂದು ಮಾಂತ್ರಿಕ ಪಯಣದ ಅನುಭವ.
ಏನೇನು ಸೌಕರ್ಯ?
- ಜಲಮಾರ್ಗದಲ್ಲೇ ಉಪಾಹಾರ ಹಾಗೂ ತಾಜಾ ಪಾನೀಯ ವ್ಯವಸ್ಥೆ
- ಅಂಡರ್‌ವಾಟರ್ ಫೋಟೋ ಮತ್ತು ವೀಡಿಯೋ ಶೂಟ್ ಸೇವೆ
- ಗ್ರೂಪ್ ಹಾಗೂ ಕಾರ್ಪೊರೇಟ್ ಪ್ಯಾಕೇಜ್‌ಗಳು
- ಮುರ್ಡೇಶ್ವರ ದೇವಾಲಯ ಹಾಗೂ ತೀರದ ಸುತ್ತಮುತ್ತಲಿನ ದರ್ಶನಕ್ಕೆ ಪ್ಯಾಕೇಜ್‌ಡ್ ಟೂರ್
- ಹತ್ತಿರದ ಬೀಚ್‌ಗಳಲ್ಲಿ ಸಾಯಂಕಾಲದ ಸೂರ್ಯಾಸ್ತ ವೀಕ್ಷಣೆ
ನೇತ್ರಾಣಿ ಏಕೆ ವಿಶೇಷ?
ಇಂಡಿಯಾದಲ್ಲಿ ಸ್ಕೂಬಾ ಡೈವಿಂಗ್‌ಗಾಗಿ ಅನೇಕ ತಾಣಗಳಿವೆ – ಆಂಡಮಾನ್, ಗೋವಾ, ಲಕ್ಷದ್ವೀಪ ಇತ್ಯಾದಿ. ಆದರೆ ನೇತ್ರಾಣಿಯ ಸೌಂದರ್ಯ ವಿಭಿನ್ನ. ಇದು ಒಂದು ಲೆಕ್ಕದಲ್ಲಿ ಹೇಳುವುದಾದರೆ ತನ್ನ ಪಾವಿತ್ರ್ಯತೆ ಕಾಪಾಡಿಕೊಂಡಿರುವ ಪ್ರವಾಸಿ ತಾಣ. ಇಲ್ಲಿ ಪ್ರವಾಸಿಗರ ಸಂಖ್ಯೆ ನಿಯಮಿತವಾಗಿರುವುದರಿಂದ ಪ್ರಕೃತಿಯ ಸೌಂದರ್ಯ ಹಾಳಾಗದೇ ಉಳಿದಿದೆ. ಸಮುದ್ರದ ಆಳದಲ್ಲಿರುವ ಹವಳದ ದಿಬ್ಬಗಳು ಕೂಡ ಅಷ್ಟೇನೂ ಹಾಳಾಗಿಲ್ಲ.
ಬೆಸ್ಟ್ ಟೈಮ್ ಯಾವುದು?
ಅಕ್ಟೋಬರ್‌ನಿಂದ ಮೇ ತಿಂಗಳವರೆಗೆ. ಮಳೆಗಾಲದಲ್ಲಿ ಸಮುದ್ರ ಅಲೆಗಳು ಹೆಚ್ಚಾಗುವ ಕಾರಣ ಸಾಹಸ ಚಟುವಟಿಕೆ ನಿಲ್ಲಿಸಲಾಗುತ್ತದೆ.
ನೇತ್ರಾಣಿ ದ್ವೀಪದ ವೈಶಿಷ್ಟ್ಯ
- ಮುರ್ಡೇಶ್ವರದಿಂದ 19 ಕಿಮೀ ದೂರ, ಹಡಗಿನಲ್ಲಿ 30-40 ನಿಮಿಷ ಪ್ರಯಾಣ
- ಪಾರದರ್ಶಕ ಸಮುದ್ರದ ನೀರು – 15–20 ಅಡಿ ಆಳದಲ್ಲೂ ಜೀವಜಗತ್ತು ಕಾಣಿಸಿಕೊಳ್ಳುತ್ತದೆ
- ಬಣ್ಣಬಣ್ಣದ ಮೀನುಗಳು, ಹವಳದ ದಿಬ್ಬಗಳು, ಆಮೆಗಳು, ಡಾಲ್ಫಿನ್‌ಗಳು, ಸಣ್ಣ ಶಾರ್ಕ್ ಗಳು ಕಾಣಿಸಿಕೊಳ್ಳುತ್ತವೆ.
- ಶಾಂತ, ಅತಿ ಹೆಚ್ಚು ಜನಸಂದಣಿ ಇಲ್ಲದ ಪ್ರಾಕೃತಿಕ ತಾಣ
ಸುರಕ್ಷತಾ ಸೌಲಭ್ಯಗಳು
- ಲೈಫ್ ಜಾಕೆಟ್, ಆಕ್ಸಿಜನ್ ಸಿಲಿಂಡರ್, ನವೀನ ಸಾಧನಗಳು
- ತಜ್ಞ ತರಬೇತುದಾರರ ಮಾರ್ಗದರ್ಶನ
- ಪ್ರಾಥಮಿಕ ವೈದ್ಯಕೀಯ ನೆರವು
- ತುರ್ತು ಪರಿಸ್ಥಿತಿಗೆ ಸಿದ್ಧವಿರುವ ಸಹಾಯಕ ತಂಡ
ಯಾರು ಭಾಗವಹಿಸಬಹುದು?
- ಮಕ್ಕಳು – ಸ್ನೋರ್ಕೆಲಿಂಗ್, ಬನಾನಾ ರೈಡ್
- ಯುವಕರು – ಸ್ಕೂಬಾ ಡೈವಿಂಗ್, ಕಯಾಕಿಂಗ್
- ಕುಟುಂಬ ಮತ್ತು ಕಾರ್ಪೊರೇಟ್ ಟೀಮ್‌ಗಳು – ಪ್ಯಾಕೇಜ್ ಚಟುವಟಿಕೆಗಳು
- ಈಜು ಕೌಶಲ್ಯ ಅವಶ್ಯಕವಿಲ್ಲ, ಧೈರ್ಯ ಮತ್ತು ಉತ್ಸಾಹ ಸಾಕು