Wednesday, February 4, 2026
Wednesday, February 4, 2026

ಮಾವನ ಮನೆಯಲ್ಲ ಮಾವಿನ ಮನೆ

ಕೆಲವು ಜಾಗಗಳು ನಮ್ಮ ಫೊಟೋ ಆಲ್ಬಮ್‌ನಲ್ಲಿ ಭದ್ರವಾಗಿ ಉಳಿಯುತ್ತವೆ. ಆದರೆ ಇನ್ನೂ ಹಲವು ನಮ್ಮ ಮನಸಿನೊಳಗೆ ಅಚ್ಚಳಿಯದೇ ನೆಲೆಸಿಬಿಡುತ್ತವೆ. ಅಂಥ ತಾಣಗಳ ಪೈಕಿ ಬೆಂಗಳೂರಿನಿಂದ ಒಂದು ಗಂಟೆಯ ಅಂತರದಲ್ಲಿರುವ ಕೈಲಾಂಚದ ಅವ್ವೇರಹಳ್ಳಿಯ ʻಕ್ಯೂ ಮ್ಯಾಂಗೋ ಫಾರೆಸ್ಟ್‌ ರೆಸಾರ್ಟ್‌ʼ ಎಲ್ಲರ ಗಮನಸೆಳೆದಿದೆ.

- ಯತೀಶ್‌ ಗೌಡ


ನಗರ ಜೀವನದ ನಿರಂತರ ಓಟ, ಕೆಲಸದ ಒತ್ತಡಗಳು ಮತ್ತು ಡಿಜಿಟಲ್ ಪರದೆಗಳ ನಡುವೆ ಬದುಕು ಯಾಂತ್ರಿಕವಾಗುತ್ತಿರುವ ಈ ಕಾಲದಲ್ಲಿ, ಪ್ರಕೃತಿಯ ಮಡಿಲಲ್ಲಿ ಕಳೆದುಹೋಗುವ ಒಂದು ದಿನವೇ ಜೀವನಕ್ಕೆ ಹೊಸ ಹುರುಪನ್ನು ನೀಡಬಲ್ಲದು. ಅಂಥ ಅನುಭವವನ್ನು ನನಗೆ ನೀಡಿದ್ದು ʻಕ್ಯೂ ಮ್ಯಾಂಗೋ ಫಾರೆಸ್ಟ್‌ ರೆಸಾರ್ಟ್‌ʼ.
ಇದನ್ನೂ ಓದಿ:ಕಲ್ಪತರು ನಾಡಿನಲ್ಲಿ ಕೆಕೆ ಜಂಗಲ್‌ ರೆಸಾರ್ಟ್‌

ಈ ರೆಸಾರ್ಟ್‌ಗೆ ಹೋಗುವ ದಾರಿಯೇ ಒಂದು ಸೊಬಗು. ಹಸಿರಿನ ನಡುವೆ ಸಾಗುವ ರಸ್ತೆ, ಗಾಳಿಗೆ ಮೈಯೊಡ್ಡೆ ನಡುಗುವಂತಿರುವ ಗಿಡ ಮರಗಳಲ್ಲಿನ ತರು ಲತೆಗಳು, ಹೊಸತನವನ್ನು ಸೂಸುವ ಸುಗಂಧಮಯ ವಾವರಣವಂತೂ ನಿಧಾನವಾಗಿ ನಗರ ಜೀವನದಿಂದ, ಶಬ್ದಗಳ ಅಬ್ಬರದಿಂದ ನಮ್ಮನ್ನು ದೂರವಾಗಿಸುತ್ತದೆ. ಮನಸ್ಸನ್ನು ಹಗುರಗೊಳಿಸುತ್ತವೆ. ರೆಸಾರ್ಟ್ ಪ್ರವೇಶಿಸಿದ ಕ್ಷಣದಿಂದಲೇ ಇಲ್ಲಿ ಸಮಯ ಬೇರೆ ರೀತಿಯಲ್ಲಿ ತಿರುಗುತ್ತದೆ ಎಂಬ ಭಾವನೆ ಮೂಡುತ್ತದೆ.

Untitled design (13)

ಮಾವಿನ ಮರಗಳಿಂದ ಆವರಿಸಲ್ಪಟ್ಟ ವಿಶಾಲ ಪ್ರದೇಶ, ತೆರೆದ ಆಕಾಶದಡಿ ವಿನ್ಯಾಸಗೊಳಿಸಿದ ವಿಭಿನ್ನ ಪರಿಕಲ್ಪನೆಯ ತಾಣ ಮತ್ತು ನೈಸರ್ಗಿಕ ಬೆಳಕು — ಇವೆಲ್ಲವೂ ಸೇರಿ ನಿಸರ್ಗವೇ ಅದ್ಧೂರಿಯ ಜೀವನವನ್ನು ಕಲ್ಪಿಸಿಕೊಟ್ಟಿದೆಯೇನೋ ಎಂಬಂತೆ ಮಾಡುತ್ತದೆ. ಸರಳತೆಯಲ್ಲಿರುವ ವಿಶೇಷ ಅನುಭವವನ್ನು ನಮ್ಮ ಮುಂದೆ ತೆರೆದಿರಿಸುತ್ತದೆ. ಪ್ರತಿಯೊಂದು ಮೂಲೆಯೂ ಕೂಡ ʼಇಲ್ಲಿ ಸ್ವಲ್ಪ ನಿಂತು ಉಸಿರಾಡಿʼ ಎಂದು ಹೇಳುವಂತಿದೆ.

ನಿಸರ್ಗದ ನಡುವೆ ಭೂರಿ ಭೋಜನ

ಇಲ್ಲಿ ಊಟ ಮಾಡುವ ಅನುಭವ ರೆಸಾರ್ಟ್ ಕಥೆಯಲ್ಲಿನ ಸೊಗಸಾದ ಅಧ್ಯಾಯ. ತಾಜಾ ಪದಾರ್ಥಗಳಿಂದ ತಯಾರಿಸಲಾದ ಆಹಾರ, ಸಮತೋಲನದ ರುಚಿ ಮತ್ತು ಪ್ರಕೃತಿಯ ನಡುವೆ ಕುಳಿತು ನೆಮ್ಮದಿಯಿಂದ ಊಟ ಮಾಡುವ ಸಂಭ್ರಮವೇ ಬೇರೆ. ಯಾವ ಫೈವ್ ಸ್ಟಾರ್‌ ಹೊಟೇಲ್‌ ಊಟಕ್ಕಿಂತಲೂ ಅದ್ಭುತವಾದ ರುಚಿ ನೀಡುವ ಇಲ್ಲಿನ ಸವಿಯೂಟವನ್ನು ವರ್ಣಿಸುವುದೇ ಕಷ್ಟ. ಊಟದ ಪ್ರತಿಕ್ಷಣವೂ ಮನಸಿಗೆ ಆಹ್ಲಾದದ ಅನುಭವವನ್ನು ನೀಡುತ್ತದೆ.

Untitled design (15)

ಜೀವನವನ್ನು ಇನ್ನಷ್ಟು ಸರಳವಾಗಿಸಿ

ʻಕ್ಯೂ ಮ್ಯಾಂಗೋ ಫಾರೆಸ್ಟ್‌ ರೆಸಾರ್ಟ್‌ʼ ನಿಜವಾದ ಶಕ್ತಿಯಿರುವುದು ಇಲ್ಲಿರುವ ಚಟುವಟಿಕೆಗಳಲ್ಲಿ. ಅಡ್ವೆಂಚರ್ ಗೇಮ್ಸ್ ದೇಹವನ್ನು ಚುರುಕುಗೊಳಿಸುವುದರ ಜತೆಗೆ, ನಮ್ಮೊಳಗಿನ ಹಿಂಜರಿಕೆಯನ್ನು ಮುರಿಯುತ್ತವೆ. ಸ್ನೇಹಿತರೊಂದಿಗೆ ತಂಡವಾಗಿ ಆಡಿದ ಕ್ಷಣಗಳು, ನಗು ಮತ್ತು ಸ್ಪರ್ಧೆಯ ನಡುವಿನ ಆನಂದ — ಇವು ಪ್ರವಾಸದ ಜೀವಾಳವಾಗುತ್ತವೆ. ಅದರಲ್ಲೂ ರೇನ್ ಡಿಸ್ಕೋ ಒಂದು ವಿಶಿಷ್ಟ ಅನುಭವ. ಸಂಗೀತದೊಂದಿಗೆ ಮಳೆ ಮತ್ತು ನಿರ್ಬಂಧವಿಲ್ಲದ ಕುಣಿತ — ಆ ಕ್ಷಣಗಳಲ್ಲಿ ಜೀವನ ಎಷ್ಟು ಸರಳವಾಗಿರಬಹುದು ಎಂಬುದನ್ನು ನೆನಪಿಸುತ್ತದೆ.

Untitled design (16)

ಸ್ವಿಮ್ಮಿಂಗ್ ಪೂಲ್ ದೇಹಕ್ಕೆ ಆರಾಮ ನೀಡಿದರೆ, ಮಡ್ ಗೇಮ್ಸ್ ಮನಸ್ಸಿನೊಳಗಿನ ಬಾಲ್ಯವನ್ನು ಹೊರತರುತ್ತವೆ. ಮಣ್ಣಿನಲ್ಲಿ ಆಡುತ್ತಾ ನಗುವಾಗ, ನಾವು ಮರೆತಿದ್ದ ನಿರಾಳತೆಯನ್ನು ಮತ್ತೆ ಕಂಡುಕೊಳ್ಳುತ್ತೇವೆ.

ʻಕ್ಯೂ ಮ್ಯಾಂಗೋ ಫಾರೆಸ್ಟ್‌ ರೆಸಾರ್ಟ್‌ʼ ಕೇವಲ ವೀಕೆಂಡ್ ಗೇಟ್‌ ವೇ ಅಲ್ಲ. ಅದು ನಮ್ಮೊಳಗಿನ ಗದ್ದಲವನ್ನು ಶಾಂತಗೊಳಿಸಿ, ಜೀವನವನ್ನು ಸ್ವಲ್ಪ ನಿಧಾನವಾಗಿ ನೋಡಲು ಕಲಿಸುವ ಸ್ಥಳ. ಇಲ್ಲಿ ಕಳೆದ ಒಂದು ದಿನ “ಮತ್ತೆ ಬರಬೇಕು” ಎಂಬ ಆಸೆಯನ್ನು ಮನಸ್ಸಿನಲ್ಲಿ ಬಿತ್ತುತ್ತದೆ.‌

ವಿಳಾಸ:

ʻಕ್ಯೂ ಮ್ಯಾಂಗೋ ಫಾರೆಸ್ಟ್‌ ರೆಸಾರ್ಟ್‌ʼ, ಅವ್ವೇರಹಳ್ಳಿ, ಕೈಲಾಂಚ, ರಾಮನಗರ, ಬೆಂಗಳೂರು- 562130

ಸಂಪರ್ಕ: 080505 29629

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ