ಗೋಕರ್ಣದಲ್ಲಿ ಆತ್ಮಲಿಂಗ ದರ್ಶನ
ಕೆಎಸ್‌ಟಿಡಿಸಿ ನಮ್ಮ ನಾಡಿನ ಪ್ರವಾಸೋದ್ಯಮಕ್ಕೆ ದೊಡ್ಡಣ್ಣ. ಎಲ್ಲೆಡೆಯ ವಿಶೇಷತೆಗಳನ್ನು ಚೆನ್ನಾಗಿ ಬಲ್ಲದು. ಒಂದೇ ಪ್ರವಾಸವಾದರೂ ಒಂದು ಪರಿಪೂರ್ಣ ಪ್ರವಾಸ ಮಾಡಿಸುತ್ತದೆ. ಬಜೆಟ್‌ಸ್ನೇಹಿ ಪ್ರವಾಸಗಳಲ್ಲೇ, ಅನುಭವಿ ಗೈಡ್‌ಗಳನ್ನು ನೀಡಿ, ಮಯೂರದಂಥ ಹೊಟೇಲ್‌ನಲ್ಲಿ ಆಪ್ತವೆನಿಸುವ ಆತಿಥ್ಯ ದೊರಕಿಸಿ ಒಟ್ಟು ಪ್ರವಾಸವನ್ನು ಒಪ್ಪವಾಗಿ ನೀಡುವ ಹಂಬಲದಲ್ಲಿ ಕೆಎಸ್‌ಟಿಡಿಸಿ ಇದೆ.
ಪ್ರವಾಸ, ಪ್ರವಾಸಿ ತಾಣವನ್ನು ನೋಡಲು ನೂರಾರು ಕಿಮೀ ದೂರದವರೆಗೆ ಹೋಗಿಬರುವುದು, ಎಂದು ಆಲೋಚಿಸುವ ಹಲವರಿದ್ದಾರೆ. ನೆನಪಿರಲಿ, ಸುತ್ತಾಟ ಮತ್ತು ಪ್ರವಾಸದ ನಡುವೆ ಅಜಗಜಾಂತರವಿದೆ. ಪ್ರವಾಸವೆಂದರೆ ಒಂದು ತಾಣವನ್ನು ಕಂಡುಬರುವುದು ಮಾತ್ರವಲ್ಲ. ಅಲ್ಲಿನ ಜನ-ಜೀವನ, ಸ್ಥಳೀಯತೆ, ಆಹಾರ-ಖಾದ್ಯಗಳು, ಉಡುಗೆ ತೊಡುಗೆಗಳು, ನಂಬಿಕೆ, ಉದ್ಯಮ, ಇತಿಹಾಸ, ವಾಸ್ತುಶಿಲ್ಪ, ಕಲೆ, ಪರಿಸರ ಎಲ್ಲವನ್ನೂ ಅರಿತು ನಿಮಗೆ ಬೇಕಾದ ವಿಷಯಗಳನ್ನು ಅದರಲ್ಲೂ ಹೊಸ ವಿಷಯಗಳನ್ನು ನಿಮ್ಮೊಳಗೆ ತಂದುಕೊಳ್ಳುವುದು.
ಈಗ ಹೇಳಿ ಈ ಥರದ ಪ್ರವಾಸಗಳನ್ನು ನೀವೆಷ್ಟು ಮಾಡಿದ್ದೀರಿ? ತುಂಬಾ ಕಮ್ಮಿ ಅಲ್ವಾ? ಸಾಕಷ್ಟು ಜನರಲ್ಲಿ ಈ ಉತ್ತರ ಸಹಜ. ಹೀಗೆ ನೀವು ಪ್ರವಾಸ ಮಾಡಲು ನಿಮಗಿಂತ ಮೊದಲು ಅಲ್ಲೆಲ್ಲ ಓಡಾಡಿ, ಅನ್ವೇಷಣೆ ಮಾಡಿ, ಅರಿತುಕೊಂಡ ಒಬ್ಬ ಅನುಭವಿ ನಿಮ್ಮೊಟ್ಟಿಗಿರಬೇಕು. ಆಗ ಪ್ರವಾಸ ನಿಜವಾಗಿಯೂ ಸಹಜವಾಗುತ್ತದೆ. ನಾನು ನಿಮಗೆ ಈ ಥರದ ಪ್ರವಾಸ ಮಾಡಿಸುತ್ತೇನೆ ಎಂದಾಗ ನಂಬಿ ಮೋಸಹೋಗುವ ಬದಲು ಕೆಎಸ್‌ಟಿಡಿಸಿ ಪ್ರವಾಸಕ್ಕೆ ಮಣೆಹಾಕಿ.
ಇದನ್ನೂ ಓದಿ: ಕೆಎಸ್‌ಟಿಡಿಸಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಶಿವಪ್ರಸಾದ್ ಪಿ.ಆರ್ ನೇಮಕ
ಕೆಎಸ್‌ಟಿಡಿಸಿ ನಮ್ಮ ನಾಡಿನ ಪ್ರವಾಸೋದ್ಯಮಕ್ಕೆ ದೊಡ್ಡಣ್ಣ. ಎಲ್ಲೆಡೆಯ ವಿಶೇಷತೆಗಳನ್ನು ಚೆನ್ನಾಗಿ ಬಲ್ಲದು. ಒಂದೇ ಪ್ರವಾಸವಾದರೂ ಒಂದು ಪರಿಪೂರ್ಣ ಪ್ರವಾಸ ಮಾಡಿಸುತ್ತದೆ. ಬಜೆಟ್‌ಸ್ನೇಹಿ ಪ್ರವಾಸಗಳಲ್ಲೇ, ಅನುಭವಿ ಗೈಡ್‌ಗಳನ್ನು ನೀಡಿ, ಮಯೂರದಂಥ ಹೊಟೇಲ್‌ನಲ್ಲಿ ಆಪ್ತವೆನಿಸುವ ಆತಿಥ್ಯ ದೊರಕಿಸಿ ಒಟ್ಟು ಪ್ರವಾಸವನ್ನು ಒಪ್ಪವಾಗಿ ನೀಡುವ ಹಂಬಲದಲ್ಲಿ ಕೆಎಸ್‌ಟಿಡಿಸಿ ಇದೆ. ಮತ್ತೆ ಹೇಳುತ್ತಿದ್ದೇವೆ ಓದು ಮತ್ತು ಓಡಾಟ ಎರಡೂ ನಿಮ್ಮ ಪಾಲಿಗಿರಲಿ.
ಹಾಗಾಗಿ ಹಲವು ಟೂರ್‌ಗಳನ್ನು ನಿತ್ಯವೂ ಈ ನಿಗಮ ಮಾಡುತ್ತಲೇ ಇರುತ್ತದೆ. ಈ ಬಾರಿ ಬೆಂಗಳೂರಿನಿಂದ ಹೊರನಾಡು, ಕುಕ್ಕೆ, ಕದ್ರಿ, ಕಟೀಲು, ಗೋಕರ್ಣಗಳಂಥ ಪ್ರಮುಖ ಪ್ರವಾಸಿ ತಾಣಗಳತ್ತ ಸಹ ಪಯಣಿಗನನ್ನು ಹೊತ್ತು ಸಾಗಲು ವಿಶೇಷ ಪ್ರವಾಸಿ ಪ್ಯಾಕೇಜ್ ಹೊರತಂದಿದೆ. ಒಟ್ಟು ಆರು ದಿನಗಳ ಪ್ರವಾಸವಿದು. ಮನುಷ್ಯ ಎಂದಿಗೂ ಶಾಶ್ವತವಲ್ಲ ನೆನಪುಗಳೇ ಶಾಶ್ವತ. ಹಾಗಾಗಿ ನಿಮ್ಮ ಆತ್ಮೀಯರ ಜತೆಗೆ ಆರು ದಿನಗಳ ಈ ಪ್ರವಾಸ ಹೋಗಿಬನ್ನಿ. ನಿಜಕ್ಕೂ ಈ ದಿನಗಳು ನೀವು ಎಂದಿಗೂ ಮರೆಯದ ಕ್ಷಣವಾಗಿ ಮಾರ್ಪಡಬಲ್ಲವು.

---
ಪ್ಯಾಕೇಜ್
ದಿನ : 1
ರಾತ್ರಿ 9:00 ಗಂಟೆಗೆ ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್ನಿಂದ ನಿರ್ಗಮನ.
ದಿನ : 2
ಬೆಳಗ್ಗೆ 5:00 - 8:00ರವರೆಗೆ ಫ್ರೆಶಪ್ ಮತ್ತು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ
ಬೆಳಗ್ಗೆ 9:00 - 9:45 ಕಲಶೇಶ್ವರ ದರ್ಶನ ಮತ್ತು ಉಪಾಹಾರ
ಬೆಳಗ್ಗೆ 11:45 – ಮಧ್ಯಾಹ್ನ 1:30 ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ
ಮಧ್ಯಾಹ್ನ 1:30 – ಸಂಜೆ 5:30ರವರೆಗೆ ಕೊಲ್ಲೂರು ಕಡೆಗೆ ಹೊರಡುವುದು
ಸಂಜೆ 5:30 – 8:30 ಮೂಕಾಂಬಿಕಾದೇವಿ ದರ್ಶನ ಮತ್ತು ರಾತ್ರಿ ಭೋಜನ
ರಾತ್ರಿ 9:00 ಗಂಟೆಗೆ ಬೈಂದೂರಿನಲ್ಲಿ ನಿಲುಗಡೆ
ದಿನ : 3
ಬೆಳಗ್ಗೆ 6:00 ಗಂಟೆಗೆ ಬೈಂದೂರಿನಿಂದ ಹೊರಡುವುದು
ಬೆಳಗ್ಗೆ 6:45 – 7:30ರವರೆಗೆ ಇಡಗುಂಜಿ ಗಣೇಶ ದರ್ಶನ
ಬೆಳಗ್ಗೆ 8:00 – 8:30ರವರೆಗೆ ಶಂಭುಲಿಂಗೇಶ್ವರ ದೇವಸ್ಥಾನ-ಗುಣವಂತೆ
ಬೆಳಗ್ಗೆ 9:00 – 9:45ರವರೆಗೆ ಉಪಾಹಾರ
ಬೆಳಗ್ಗೆ 9:45 – 10:30ರವರೆಗೆ ಗೋಕರ್ಣ ಕಡೆಗೆ ಪ್ರಯಾಣ
ಬೆಳಗ್ಗೆ 11:00 – ಸಂಜೆ 4:00ರವರೆಗೆ ಗೋಕರ್ಣ, ಮಹಾಬಲೇಶ್ವರ ದೇವಸ್ಥಾನ ಮತ್ತು ಓಂ ಬೀಚ್ ಭೇಟಿ
ಸಂಜೆ 5:00 - 06:00 ಧಾರೇಶ್ವರ ದೇವಸ್ಥಾನ
ಸಂಜೆ 6:30 ಹೊನ್ನಾವರ ತಲುಪುವುದು
ದಿನ : 4
ಬೆಳಗ್ಗೆ 6:00 ಗಂಟೆಗೆ ಹೊಟೇಲ್‌ನಿಂದ ನಿರ್ಗಮನ
ಬೆಳಗ್ಗೆ 7:00 - 9:30 ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ಮತ್ತು ಉಪಾಹಾರ
ಬೆಳಗ್ಗೆ 10:30 - 11:30 ಆನೆಗುಡ್ಡೆ ವಿನಾಯಕ ದೇವಸ್ಥಾನದ ದರ್ಶನ
ಬೆಳಗ್ಗೆ 12:00 – ಮಧ್ಯಾಹ್ನ 2:00ರವರೆಗೆ ಉಡುಪಿ ಶ್ರೀಕೃಷ್ಣನ ದರ್ಶನ ಮತ್ತು ಊಟ
ಮಧ್ಯಾಹ್ನ 3:00 – ಸಂಜೆ 6:30ರವೆಗೆ ಕದ್ರಿ ಮಂಜುನಾಥ ದೇವಸ್ಥಾನ ಮತ್ತು ಮಂಗಲಾದೇವಿ ದೇವಸ್ಥಾನ ಭೇಟಿ
ಸಂಜೆ 07:30 ಗಂಟೆಗೆ ಕಟೀಲು ದುರ್ಗಾಪರಮೇಶ್ವರಿ ದರ್ಶನ
ದಿನ : 5
ಬೆಳಗ್ಗೆ 6:00 ಗಂಟೆಗೆ ಹೊಟೇಲ್‌ನಿಂದ ಹೊರಡುವುದು
ಬೆಳಗ್ಗೆ 7:30 – ಮಧ್ಯಾಹ್ನ 1:30 ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಮತ್ತು ಉಪಾಹಾರ
ಮಧ್ಯಾಹ್ನ 2:30 - 3:30 ಊಟದ ನಂತರ ಸೌತಡ್ಕ ವಿನಾಯಕ ದೇವಸ್ಥಾನದ ದರ್ಶನ
ಸಂಜೆ 5:00 – ರಾತ್ರಿ 9:00 ಆದಿ ಸುಬ್ರಮಣ್ಯ ಮತ್ತು ಕುಕ್ಕೆ ಸುಬ್ರಮಣ್ಯ ದರ್ಶನ ನಂತರ ಊಟ
ರಾತ್ರಿ 9:30 ಗಂಟೆಗೆ ಕುಕ್ಕೆಯಿಂದ ನಿರ್ಗಮನ
ದಿನ : 6
ಬೆಳಗ್ಗೆ 5:30 ಗಂಟೆಗೆ ಬೆಂಗಳೂರಿನ ಕಡೆಗೆ
ಇಲ್ಲಿ ಗಮನಿಸಿ
ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.
ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೆ ಯೋಚನೆ ಮಾಡದಿರಿ. ಕೆಎಸ್‌ಟಿಡಿಸಿ ನಿಮ್ಮ ಪ್ರವಾಸದ ಉತ್ತಮ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ನಮ್ಮ ನಾಡಲ್ಲೇ ಕಾಣುವುದು ಸಾಕಷ್ಟಿದೆ.
ಪಿಲಿಕುಳದ ಮಯೂರ ಫಲ್ಗುಣಿ ರಿವರ್ ರೆಸಾರ್ಟ್ನಲ್ಲಿ ಆತಿಥ್ಯ
ಹೊಟೇಲ್ ಮಯೂರ ಹೆಸರಿಗೆ ತಕ್ಕಂತ ಸುಂದರ ಹೊಟೇಲ್. ದೇಶ-ವಿದೇಶಗಳಿಂದ ಕರ್ನಾಟಕ ಪ್ರವಾಸ ಬರುವ ಜನರಿಗೂ ಮಯೂರ ಎಂದರೆ ಅಚ್ಚುಮೆಚ್ಚು. ಊಟ, ವಾಸ್ತವ್ಯ, ಸಿಬ್ಬಂದಿ ಸೇವೆ, ಮತ್ತೆ ಮತ್ತೆ ನೆನಪಿಸುವ ಆತಿಥ್ಯವನ್ನು ನೀಡಿ ಮಯೂರ ಪ್ರವಾಸಿಗರನ್ನು ನೋಡಿಕೊಳ್ಳುತ್ತದೆ. ವಿಶೇಷವೆಂದರೆ, ಕರ್ನಾಟದ ಯುನೆಸ್ಕೋ ಪಾರಂಪರಿಕ ತಾಣ, ಮಲೆನಾಡು, ದುರ್ಗದ ಕೋಟೆ, ಬೆಟ್ಟದ ಮೇಲೆ, ಘಟ್ಟದ ಕೆಳಗೆ, ನದಿ ತೀರದಲ್ಲಿ ಹೀಗೆ ವೈವಿಧ್ಯಮಯ ತಾಣಗಳಲ್ಲಿ ನೆಲೆನಿಂತು ಮಯೂರ ಪ್ರವಾಸಿಗರಿಗೆ ಆತಿಥ್ಯ ನೀಡಿದೆ. ರಾಜ್ಯದ ಎಲ್ಲಾ ಭೌಗೋಳಿಕ ಪ್ರದೇಶಗಳಲ್ಲಿ ಮತ್ತು ಹವಾಮಾನದಲ್ಲೂ ಜನರಿಗೆ ಆತಿಥ್ಯ ನೀಡಿರುವ ಮಯೂರ ಅನುಭವಿ. ಯಾವ ಸ್ಥಳಗಳಲ್ಲಿ ಅತಿಥಿಗಳ, ಪ್ರವಾಸಿಗಳ ನೀರಿಕ್ಷೆ ಏನಿರುತ್ತದೆ ಎನ್ನುವುದನ್ನು ವರ್ಷಗಳಿಂದ ಕಂಡು, ಅವುಗಳನ್ನು ಪೂರೈಸಿಯೂ ಮಯೂರ ಅನುಭವ ಗಳಿಸಿದೆ. ಆದ್ದರಿಂದಲೇ ಪ್ರತಿ ಪ್ರವಾಸಿ ತಾಣದಲ್ಲೂ ಅನುಭವಿ ಪಯಣಿಗನ ವಾಸ್ತವ್ಯ ಹೊಟೇಲ್ ಮಯೂರದಲ್ಲೇ ಆಗಿರುತ್ತದೆ. ಕೆಎಸ್‌ಟಿಡಿಸಿ, ಪ್ರವಾಸದಲ್ಲಿ ನಿಮ್ಮ ಆಯ್ಕೆಯಾಗಿದ್ದರೆ, ನಿಮಗೂ ಈ ಆತಿಥ್ಯದ ಅನುಭವವಾಗುತ್ತದೆ.

ಈ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲರಿಗೂ ಹೊಟೇಲ್ ಮಯೂರ ಉತ್ತಮ ಆಯ್ಕೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮಯೂರ ಹೊಟೇಲ್‌ನ ಶಾಖೆಗಳಿವೆ. ಇದು ಮಯೂರ ಆತಿಥ್ಯದ ಹೆಗ್ಗುರುತು. ಶುಚಿ ಮತ್ತು ರುಚಿ ಎರಡಕ್ಕೂ ಮಯೂರ ದಿ ಬೆಸ್ಟ್. ಸಿಬ್ಬಂದಿಯೂ ಸ್ನೇಹಪರರಾಗಿರುತ್ತಾರೆ. ನಿಮ್ಮನ್ನು ನಗುಮೊಗದಿಂದಲೇ ಉಪಚರಿಸುತ್ತಾರೆ.
ಈಗ ನಾವು ನಿಮಗೆ ಪರಿಚಯಿಸುತ್ತಿರುವುದು ಪಿಲಿಕುಳದ ಬಳಿ ಇರುವ ಮಯೂರ ಫಲ್ಗುಣಿ ರಿವರ್ ರೆಸಾರ್ಟ್ ಕುರಿತು. ಇದು ಕರ್ನಾಟಕದ ಕರಾವಳಿ ಭಾಗದಲ್ಲಿ ನೆಲೆನಿಂತಿರುವ ಮೊದಲ ಮತ್ತು ಏಕೈಕ ಮಯೂರ ರೆಸಾರ್ಟ್. ಇಲ್ಲಿಂದ ನೀವು ಸುಂದರ ಅನುಭವ, ಅಚ್ಚಳಿಯದ ನೆನಪುಗಳ ಗಂಟನ್ನು ಉಡುಗೊರೆಯಾಗಿ ತಂದೇ ತರುತ್ತೀರಿ. ಪಿಲಿಕುಳ ದಿ ಬೆಸ್ಟ್ ಆಯ್ಕೆ. ಒಂದೇ ಪ್ಯಾಕೇಜ್‌ನಲ್ಲಿ ಪಣಂಬೂರು, ತಣ್ಣೀರುಬಾವಿ, ಸೂರತ್ಕಲ್, ಸೋಮೇಶ್ವರ, ಸುಲ್ತಾನ್ ಬತ್ತೇರಿ, ಸಸಿಹಿತ್ಲು ಕಡಲ ತೀರಗಳು. ಶಿವರಾಮ ಕಾರಂತರ ಪಿಲಿಕುಳ ಜೈವಿಕ ಉದ್ಯಾನವನ, ಮಾನಸ ವಾಟರ್ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್, ಗುತ್ತು ಮನೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಹತೋಭಾರ ಮಂಗಳಾದೇವಿ, ಸೂರ್ಯನಾರಾಯಣ, ಮರೋಳಿ, ಕಟೀಲು ದುರ್ಗಾಪಾಮೇಶ್ವರಿ, ಕುಡುಪ ಅನಂತಪದ್ಮನಾಭ ದೇವಸ್ಥಾನ, ಕಾರಿಂಜೇಶ್ವರ, ಕದ್ರಿ ಮಂಜುನಾಥ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಗಳು. ಅಲೋಶಿಯಸ್, ಮಿಲಾಗ್ರಿಸ್, ಶಿಶು ಯೇಸು ದೇಗುಲ ಕಾರ್ಮೆಲ್ ಬೆಟ್ಟ, ರೊಸಾರಿಯೋ ಕ್ಯಾಥೆಡ್ರಲ್ ಚರ್ಚ್‌ಗಳು. ಉಳ್ಳಾಲದ ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ನೋಡಲೂ ಅವಕಾಶ ಸಿಗುತ್ತದೆ. ಪಿಲಿಕುಳದ ಮಯೂರ ಫಲ್ಗುಣಿ ರಿವರ್ ರೆಸಾರ್ಟ್‌ನಲ್ಲಿ ಈ ಅವಕಾಶವಿದೆ. ಈ ರೆಸಾರ್ಟ್‌ನಲ್ಲಿ ನದಿಯ ರಮಣೀಯ ನೋಟ ನೀಡುವ, ಸೂಟ್, ಕಾಟೇಜ್‌ಗಳು, ಡಿಲಕ್ಸ್ ಎಸಿ ಮತ್ತು ಆಯುರ್ವೇದ ಚಿಕಿತ್ಸಾ ಕಾಟೇಜ್‌ಗಳಂಥ ವಿವಿಧ ರೀತಿಯ ಕೊಠಡಿಗಳ ಆಯ್ಕೆಗಳಿವೆ.
ಸಂಪರ್ಕ :
Yogesh. MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)
Corporate Office: 5th Floor | Indhana Bhavan|Race Cource Road | Opposite to Renaissance Hotel,
Bangalore- 560009 | Karnataka | India
Office: 080-43344334 | Fax: 080-43344376
Email: feedback@kstdc.co | info@kstdc.co | website: www.kstdc.co | www.goldenchariot.org