ಕುರುಬ ಸಫಾರಿ ಲಾಡ್ಜ್...ತೇಲುತ ತೇಲುತ ತಿನ್ನುವ ಬಾರಾ...
ಕಬಿನಿಯ ಸುಂದರ ವಾತಾವರಣದಲ್ಲಿ ಕುಟುಂಬ, ಸ್ನೇಹಿತರೊಂದಿಗೆ ಕ್ಷಣಗಳನ್ನು ಕಳೆಯಬೇಕು ಎಂದುಕೊಳ್ಳದವರಿಲ್ಲ. ಅದರಲ್ಲೂ ಬ್ಯಾಕ್ ವಾಟರ್, ಜಂಗಲ್ ಸಫಾರಿ, ಟೇಸ್ಟೀ ಆಂಡ್ ಹೆಲ್ದೀ ಫುಡ್ ಹೀಗೆ ಎಲ್ಲವನ್ನೂ ನೀಡುವ ಉತ್ತಮ ಗುಣಮಟ್ಟದ ಸ್ಟೇ ಹುಡುಕಾಟದಲ್ಲಿ ನೀವಿದ್ದರೆ ಇವಾಲ್ವ್ ಬ್ಯಾಕ್ ಕಬಿನಿಯ ಕುರುಬ ಸಫಾರಿ ಲಾಡ್ಜ್‌ಗೆ ವಿಸಿಟ್ ಮಾಡಲೇಬೇಕು.
ಕಬಿನಿಯಲ್ಲಿ ಬೆಸ್ಟ್ ಸ್ಟೇ ಯಾವುದಿದೆ? ಲೆಕ್ಕವಿಲ್ಲದಷ್ಟು ಜಂಗಲ್ ಲಾಡ್ಜ್‌ಗಳು, ಅತ್ಯದ್ಭುತವಾದ ರೆಸಾರ್ಟ್‌ಗಳು, ವಿಭಿನ್ನವಾದ ಹೋಮ್ ಸ್ಟೇ ಗಳಿರುವ ಕಬಿನಿಯಲ್ಲಿ ಆಲ್ ಇನ್ ಒನ್ ಅನ್ನುವಂಥ ಸ್ಟೇ ಯಾವುದು ಎಂದರೆ ಥಟ್ಟನೆ ನೆನಪಿಗೆ ಬರುವುದೇ ಫೈವ್ ಸ್ಟಾರ್ ರೆಸಾರ್ಟ್,ಇವಾಲ್ವ್ ಬ್ಯಾಕ್ ಕಬಿನಿ. ಬೆಂಗಳೂರಿನಿಂದ ಸುಮಾರು 4 ಗಂಟೆಗಳ ಪ್ರಯಾಣದಲ್ಲಿ ಸಿಗುವ ಬೆಸ್ಟ್ ರೆಸಾರ್ಟ್ಗಳಲ್ಲಿ ಒಂದು. ಪ್ರಕೃತಿಯ ನಡುವೆ, ಬುಡಕಟ್ಟು ಜನಾಂಗಗಳ ಆಚಾರ-ವಿಚಾರ, ಆಹಾರವನ್ನು ಕಂಡು-ಉಂಡು ಬರಬೇಕೆಂದುಕೊಂಡವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ವುಡ್ ಆಂಡ್ ವಂಡರ್
ಇಲ್ಲಿರುವ ವಿಭಿನ್ನ ಸ್ಟೇಗಳ ಬಗ್ಗೆ ತಿಳಿಯಲೇ ಬೇಕು. ರೂಮ್‌ಗಳೆಂದರೆ ಇಲ್ಲಿ ಕ್ರಾಫ್ಟೆಡ್ ಎಕ್ಸ್ಪೀರಿಯನ್ಸ್‌ನಂತೆ. ಬುಡಕಟ್ಟು ಹಳ್ಳಿಗಳಿಂದ ಸ್ಫೂರ್ತಿ ಪಡೆದ ಈ ಸುಂದರವಾದ ಐಷಾರಾಮಿ ರೆಸಾರ್ಟ್, ಸಾಂಪ್ರದಾಯಿಕ ಕರಕುಶಲ ವಸ್ತುಗಳು ಮತ್ತು ಆಧುನಿಕ ಐಷಾರಾಮಿಯ ಮಿಶ್ರಣವೂ ಹೌದು. ಸಫಾರಿ ಹಟ್, ಪೂಲ್ ಹಟ್, ಪೂಲ್ ರಿಸರ್ವ್ ಹೀಗೆ ಅನೇಕ ಬಗೆಯ ಸ್ಟೇಗಳಿರುವ ಈ ರೆಸ್ಟೋರೆಂಟ್ನ ಹೆಚ್ಚಿನ ಭಾಗವೂ ಮರದಿಂದಲೇ ನಿರ್ಮಾಣವಾಗಿದೆ. ಇಂಥ ವಿಶೇಷವಾಗಿರುವ ಇವಾಲ್ವ್ ಬ್ಯಾಕ್ ಕಬಿನಿ ಕುರುಬ ಸಫಾರಿ ಲಾಡ್ಜ್‌ನ ಅನುಭವವನ್ನು ಪಡೆಯಬೇಕೆಂದರೆ ತಿಂಗಳ ಮುಂಚಿತವಾಗಿಯಾದರೂ ಬುಕಿಂಗ್ ಮಾಡಿಕೊಳ್ಳಲೇಬೇಕು.
ಹಿನ್ನೀರಿನ ನಡುವೆ ಬೋಟ್ ಸವಾರಿಯ ಮೂಲಕವೂ ಈ ರೆಸಾರ್ಟ್‌ಗೆ ಬಂದಿಳಿಯುವ ಅವಕಾಶವಿದೆ. ರೆಸಾರ್ಟ್‌ಗೆ ಬರುತ್ತಲೇ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡು, ಪ್ರೀತಿಯಿಂದ ಆತಿಥ್ಯ ನೀಡುವ ಇಲ್ಲಿನ ಸಿಬ್ಬಂದಿ, ನಂತರ ತಿಲಕವಿಟ್ಟು ಸ್ವಾಗತ ಕೋರುತ್ತಾರೆ. ವೆಲ್‌ಕಮ್ ಡ್ರಿಂಕ್ಸ್ ಕೊಟ್ಟು, ಬುಕಿಂಗ್ ಮಾಡಿರುವ ರೂಮ್‌ಗೆ ಕರೆದೊಯ್ಯುವ ಸಿಬ್ಬಂದಿಯ ಪ್ರೀತಿಯನ್ನು ಮೆಚ್ಚಿಕೊಳ್ಳದವರೇ ಇಲ್ಲ.

ಆತಿಥ್ಯಕ್ಕೂ ಸೈ, ಆಹಾರಕ್ಕೂ ಸೈ
ಆಹಾರಪ್ರಿಯರಿಗಾಗಿ ಇಲ್ಲಿ ಹನೀ ಕೋಂಬ್ ಹಾಗೂ ಕುರುಬ ಗ್ರಿಲ್ ಎಂಬ ಎರಡು ವಿಶೇಷ ರೆಸ್ಟೋರೆಂಟ್‌ಗಳಿವೆ. ಅತಿಥಿಗಳಿಗಾಗಿ ಇಲ್ಲಿ ಸಿದ್ಧಪಡಿಸುವ ಎಲ್ಲ ಖಾದ್ಯಗಳೂ ಮಾಸ್ಟರ್ ಪೀಸ್ ಆಗಿದ್ದು, ಕೂರ್ಗ್‌ನ ಸ್ಥಳೀಯ ಆಹಾರದಿಂದ ತೊಡಗಿ ಅಂತಾರಾಷ್ಟ್ರೀಯ ರುಚಿಗಳನ್ನೂ ಇಲ್ಲಿ ಉಣಬಡಿಸಲಾಗುತ್ತದೆ. ಕಬಿನಿಯ ಸೌಂದರ್ಯವನ್ನು ನೋಡುತ್ತಾ ಲೈವ್ ಕೌಂಟರ್ಸ್, ಡಿವೈನ್ ಡೆಸರ್ಟ್‌ಗಳನ್ನು ಸವಿಯಲು ಹನೀ ಕೋಂಬ್ ಅವಕಾಶ ನೀಡಿದರೆ, ಕಬಾಬ್‌ಗಳು ಮತ್ತು ಗ್ರಿಲ್‌ಗಳಿಗೆ ಸಮರ್ಪಿತವಾದ ಕುರುಬ ಗ್ರಿಲ್ ರೆಸ್ಟೋರೆಂಟ್ ಎಲ್ಲರ ಹಾಟ್ ಫೇವರಿಟ್.
ಹಿತವಾಗಿದೆ ವೈದ್ಯ ಶಾಲಾ
ಸಾಮಾನ್ಯವಾಗಿ ಪ್ರಕೃತಿ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕು, ಆರೋಗ್ಯಕರವಾದ ಮಸಾಜ್‌ಗಳನ್ನು ಮಾಡಿಸಿಕೊಳ್ಳಬೇಕು ಎಂದುಕೊಳ್ಳವವರು ರಾಜ್ಯಗಳ ಗಡಿಯಾಚೆಯೇ ಹುಡುಕಾಡುತ್ತಾರೆ. ಆದರೆ ಈಗ ಆ ಅಗತ್ಯವೇ ಇಲ್ಲ. ಇವಾಲ್ವ್ ಬ್ಯಾಕ್ ಕಬಿನಿಯಲ್ಲಿ ಅತಿಥಿಗಳಿಗಾಗಿ ಸುಸಜ್ಜಿತವಾದ ವೈದ್ಯ ಶಾಲೆಯೇ ಇದ್ದು, ಪ್ರತ್ಯೇಕ ಸಿಬ್ಬಂದಿಯನ್ನು ಇದಕ್ಕೆ ನೇಮಿಸಿಕೊಳ್ಳಲಾಗಿದೆ.

ದಿ ಬೆಸ್ಟ್ ಹನಿಮೂನ್ ಪ್ಯಾಕೇಜ್
ನವ ಜೋಡಿಗಾಗಿಯೇ ಇಲ್ಲಿ ವಿಶೇಷ ಪ್ಯಾಕೇಜ್ ನೀಡಲಾಗಿದ್ದು, ಕ್ಯಾಂಡಲ್ ಲೈಟ್ ಕ್ರ್ಯೂಸ್ ಇದರ ಪ್ರಮುಖ ಆಕರ್ಷಣೆ. ಕಬಿನಿಯ ನಡುವೆ ಬೋಟ್‌ನಲ್ಲಿ ಸುತ್ತಾಡುತ್ತಾ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಲು ಬಯಸುವವರು ತಪ್ಪದೇ ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಒಟ್ಟಿನಲ್ಲಿ ಕಬಿನಿಯಲ್ಲಿ ದೋಣಿ ವಿಹಾರ, ಮಾರ್ಗದರ್ಶಿ ಪ್ರಕೃತಿ ನಡಿಗೆಗಳು, ಜಂಗಲ್ ಸಫಾರಿಗಳು, ಬುಡಕಟ್ಟು ಆಹಾರದ ಜತೆಗೆ ಸಂಜೆಯ ವೇಳೆ ಬುಡಕಟ್ಟು ಜನರ ಸಾಂಪ್ರದಾಯಿಕ ನೃತ್ಯವನ್ನೂ ಎಂಜಾಯ್ ಮಾಡಬಹುದು. ಜಂಗಲ್ ಟೇಲ್‌ಗಳನ್ನು ಇಷ್ಟಪಡುವವರು ನೀವಾದರೆ ಇಲ್ಲಿನ ಸಿಬ್ಬಂದಿ ಕಾಡಿನ ಅನೇಕ ಕತೆಗಳನ್ನು, ಅನುಭವಗಳನ್ನೂ ಸಹ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ನೀವು ಇವಾಲ್ವ್ ಬ್ಯಾಕ್ ಕಬಿನಿಯ ಕುರುಬ ಸಫಾರಿ ಲಾಡ್ಜ್‌ಗೆ ಭೇಟಿ ನೀಡಿದರೆ ಅನುಭವಗಳೊಂದಿಗೆ ಮರಳುವುದಂತೂ ಪಕ್ಕಾ.
ಯಾಕಾಗಿ ಇವಾಲ್ವ್ ಬ್ಯಾಕ್?
ಲಕ್ಸುರಿ ಡೈನಿಂಗ್‌ಬೆಸ್ಟ್ ಹಾಸ್ಪಿಟಾಲಿಟಿ ಆಂಡ್ ಸರ್ವಿಸ್‌ಫಿಶ್ ಫೀಡಿಂಗ್‌ಸೈಕ್ಲಿಂಗ್‌ಸ್ಪಾ ಟ್ರೀಟ್‌ಮೆಂಟ್‌ಟ್ರೈಬಲ್ ಡ್ಯಾನ್ಸ್ ಆಂಡ್ ಜಂಗಲ್ ಟೇಲ್ಸ್--

ಗೆಸ್ಟ್ ವಿಸಿಟ್
ಇವಾಲ್ವ್ ಬ್ಯಾಕ್ ಕಬಿನಿಯ ಕುರುಬ ಸಫಾರಿ ಲಾಡ್ಜ್‌ಗೆ ಮನಸೋಲದವರೇ ಇಲ್ಲ. ರಾಜ್ಯದವರಷ್ಟೇ ಅಲ್ಲದೆ ದೇಶ ವಿದೇಶದಿಂದಲೂ ಇಲ್ಲಿ ಬರುವ ಅತಿಥಿಗಳ ಸಂಖ್ಯೆಯೂ ಹೆಚ್ಚೇ ಇದೆ. ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಇತ್ತೀಚೆಗೆ ಕಬಿನಿ ಭೇಟಿಯ ವೇಳೆ ಕುರುಬ ಸಫಾರಿ ಲಾಡ್ಜ್‌ಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದರು. ನಟ ಧ್ರುವ ಸರ್ಜಾ ಪತ್ನಿ ಸಮೇತರಾಗಿ ಇಲ್ಲಿಗೆ ವಿಸಿಟ್ ಮಾಡಿದ್ದಷ್ಟೇ ಅಲ್ಲದೆ ಪ್ರಾಪರ್ಟಿಯಲ್ಲಿ ಗಿಡವನ್ನು ನೆಟ್ಟು ಪರಿಸರ ಕಾಳಜಿ ಮೆರೆದಿದ್ದರು. ಇನ್ನು ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್ ದೊಮ್ಮರಾಜು ಕುಟುಂಬ ಸಮೇತರಾಗಿ ಇವಾಲ್ವ್ ಬ್ಯಾಕ್ ಕಬಿನಿಗೆ ಬಂದು ತಮ್ಮ ವಿಶೇಷ ಅನುಭವಗಳನ್ನೂ ಹಂಚಿಕೊಂಡಿದ್ದರು.ಟ್ರಿಪ್ ಅಡ್ವೈಸರ್‌ನ ಟ್ರಾವೆಲರ್ಸ್ ಚಾಯ್ಸ್ ಅವಾರ್ಡ್ಸ್‌ನಲ್ಲಿ - ಬೆಸ್ಟ್ ಆಫ್ ದಿ ಬೆಸ್ಟ್‌ನಲ್ಲಿ ಇವಾಲ್ವ್ ಬ್ಯಾಕ್ ಕೂರ್ಗ್ ವಿಶ್ವದಲ್ಲಿ 3 ನೇ ಸ್ಥಾನ ಪಡೆದಿದೆ. ವರ್ಷಪೂರ್ತಿ ಅತ್ಯುತ್ತಮ ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ನಿರಂತರವಾಗಿ ಪಡೆಯುವ ರೆಸಾರ್ಟ್‌ಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ವಿಳಾಸ:
ಭೀರಂಬಳ್ಳಿ ಗ್ರಾಮ ಹಾಗೂ ಅಂಚೆ, ಕಬಿನಿ, ಹೆಚ್. ಡಿ ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ, ಕರ್ನಾಟಕ - 571 116Resort Tel: +91 (0) 8228 269 100 Resort Email: kabini@evolveback.com