Thursday, November 6, 2025
Thursday, November 6, 2025

ಕನಸುಗಾರನೊಬ್ಬ ನಿರ್ಮಿಸಿದ ಡಿಸ್ನಿಲ್ಯಾಂಡ್‌ನಲ್ಲಿ ನಿಂತು…

1901 ರಲ್ಲಿ ಚಿಕಾಗೋದಲ್ಲಿ ಜನಿಸಿದ ವಾಲ್ಟ್ ಡಿಸ್ನಿ ಗೆ ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ. ರೆಡ್ ಕ್ರಾಸ್ ಸಂಸ್ಥೆ ಸೇರಿ ಫ್ರಾನ್ಸ್ ನಲ್ಲಿ ಕೆಲವು ಕಾಲ ಇದ್ದು ಮರಳಿದ ನಂತರ ಮೊದಲು ‌ಆರಂಭಿಸಿದ ಸಂಸ್ಥೆ' ಲಾಫ್ ಓ ಗ್ರಾಮ್ಸ್' ದಿವಾಳಿಯಾದರೂ ಎದೆಗುಂದದೆ ಹಾಲಿವುಡ್ ಗೆ ಬಂದು ' ಅಲೈಸ್ ಕಾಮಿಡೀಸ್' ನಿರ್ಮಿಸಿ ಯಶಸ್ವಿಯಾದರು.

- ಹು ವಾ ಶ್ರೀಪ್ರಕಾಶ

ಲಾಸ್ ಏಂಜಲೀಸ್ ಗೆ ಸಮೀಪದಲ್ಲಿರುವ ಅನಾಹಿಮ್ (Anaheim) ಎಂಬಲ್ಲಿ ಡಿಸ್ನಿಲ್ಯಾಂಡ್ ಪಾರ್ಕ್ ಇದೆ. ಜಗತ್ ಪ್ರಸಿದ್ಧವಾದ ಈ ಡಿಸ್ನಿಲ್ಯಾಂಡ್ ಪಾರ್ಕ್ ಅನೇಕ ಪ್ರವಾಸಿಗರನ್ನು ಸೆಳೆಯುತ್ತಿದ್ದು The happiest place on earth ಎನಿಸಿಕೊಂಡಿದೆ. ಅಲ್ಲಿರುವಷ್ಟು ಹೊತ್ತು ಕಿರಿಯರಿಗೆ ಮಾತ್ರವಲ್ಲದೆ ಹಿರಿಯರಿಗೂ ಇದು ಒಂದು ಮೈಮನ ಮರೆಸುವ ಅದ್ಭುತ ಕನಸಿನ ಲೋಕ!

ಒಳಹೋದವರೆಲ್ಲ ಇಲ್ಲಿ ಮಕ್ಕಳಾಗಿ ಆನಂದಿಸುತ್ತಾರೆ. ಇಲ್ಲಿ ಟಿವಿಯಲ್ಲಿ‌ನೋಡಿ ಚಿರಪರಿಚಿತವಾದ ಅನಿಮೇಶನ್ ಚಿತ್ರಗಳ ಮಿಕ್ಕಿ ಮೌಸ್ ಮಿಲ್ಲಿ ಮಿನ್ನಿ , ಗೂಫಿ ,ಡೊನಾಲ್ಟ್ ಎಲ್ಲ ನಮ್ಮ ಸುತ್ತಮುತ್ತ ಓಡಾಡುವುದನ್ನು‌ ಕಾಣಬಹುದು ಮಕ್ಕಳ ಕಥೆಗಳಲ್ಲಿ ಬರುವ ಪ್ರಖ್ಯಾತ ಪಾತ್ರಗಳನ್ನು ಕಣ್ಮುಂದೆ ನೋಡಬಹುದು. ಇವೆಲ್ಲ ಮಕ್ಕಳಿಗಂತೂ ಹರ್ಷೋಲ್ಲಾಸ ತರುತ್ತದೆ.

Untitled design

ಈ ಥೀಮ್ ಪಾರ್ಕ್ ನ ತುಂಬಾ ಅನೇಕ ರೈಡ್ ಗಳು , ಮನರಂಜನೆಯ ಸಾಹಸಮಯ ಆಟಗಳು, ವಿವಿಧ ಶಾಪಿಂಗ್ ಮಾಲ್ ಗಳು, ಫುಡ್ ಕೋರ್ಟ್ ಗಳು ಎಲ್ಲವೂ ಇದ್ದು ಒಂದು ದಿನದಲ್ಲಿ ನೀವು ಮ್ಯಾಪ್ ಹಿಡಿದು ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ನೋಡಬಹುದು . ಇಲ್ಲಿ‌ಮುಖ್ಯವಾಗಿ ಎರಡು ಭಾಗಗಳಿದ್ದು ಒಂದು ಭಾಗವನ್ನು ಕೂಡಾ ಒಂದು ದಿನದಲ್ಲಿ ನೋಡಿ, ಆಡಿ ಮುಗಿಯುವುದಿಲ್ಲ.

ಅಷ್ಟೊಂದು ಕಥಾ ಪ್ರಪಂಚ,ನೃತ್ಯ ಪ್ರಪಂಚ, ಸಾಹಸ ಮಯ ಆಟಗಳು ಮೋಜಿನ‌ ತಾಣಗಳು ಒಂದೇ ಎರಡೇ..! ವಾಲ್ಟ್ ಡಿಸ್ನಿ ಕಂಪನಿ 160 ಎಕರೆ ಪ್ರದೇಶದಲ್ಲಿ 1953ರಲ್ಲಿ ಇದನ್ನು ಆರಂಭಿಸಿತು. 1901 ರಲ್ಲಿ ಚಿಕಾಗೋದಲ್ಲಿ ಜನಿಸಿದ ವಾಲ್ಟ್ ಡಿಸ್ನಿ ಗೆ ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ. ರೆಡ್ ಕ್ರಾಸ್ ಸಂಸ್ಥೆ ಸೇರಿ ಫ್ರಾನ್ಸ್ ನಲ್ಲಿ ಕೆಲವು ಕಾಲ ಇದ್ದು ಮರಳಿದ ನಂತರ ಮೊದಲು ‌ಆರಂಭಿಸಿದ ಸಂಸ್ಥೆ' ಲಾಫ್ ಓ ಗ್ರಾಮ್ಸ್' ದಿವಾಳಿಯಾದರೂ ಎದೆಗುಂದದೆ ಹಾಲಿವುಡ್ ಗೆ ಬಂದು ' ಅಲೈಸ್ ಕಾಮಿಡೀಸ್' ನಿರ್ಮಿಸಿ ಯಶಸ್ವಿಯಾದರು. 1937 ರಲ್ಲಿ ನಿರ್ಮಿಸಿದ ' ಸ್ನೋ ವೈಟ್ ಅಂಡ್ ಸೆವೆನ್ ಡ್ರಾಫ್ಟ್ಸ್' ಎಂಬ ಸಂಗೀತಮಯ ಅನಿಮೇಶನ್ ಚಿತ್ರ ಮಹತ್ವದ ಚಿತ್ರವಾಗಿ ಖ್ಯಾತಿ ಪಡೆದಿದೆ.1950ರ ದಶಕದಲ್ಲಿ‌ ಮಿಕ್ಕಿ‌ಮೌಸ್ ಕ್ಲಬ್ ಅತ್ಯಂತ ಜನಪ್ರಿಯತೆ ಪಡೆಯಿತು. ಇಂದಿಗೂ ಅದರ ಖ್ಯಾತಿಗೆ ಚ್ಯುತಿ ಬಾರದಂತೆ ಉಳಿಸಿಕೊಂಡಿದೆ. ಆತನ ನಿರ್ದೇಶನದಲ್ಲಿಯೇ ಅವನ ಕನಸಾದ ಈ ಬೃಹತ್ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣವಾಯಿತು. ಅಮೆರಿಕದ ನಗರ ಜೀವನವನ್ನು ಉತ್ತಮ ಪಡಿಸುವ ಬಗ್ಗೆ ಹಲವು ಯೋಜನೆ ಕೈಗೊಂಡಿದ್ದ ಇವರು 1966 ರಲ್ಲಿ ನಿಧನರಾದರು.

Untitled design (1)

ಡಿಸ್ನಿ ಲ್ಯಾಂಡ್ ಈಗ ರಮಣೀಯ ಲೋಕವಾಗಿ ವಾಲ್ಟ್ ಡಿಸ್ನಿ ಯವರನ್ನು ಅಮರಗೊಳಿಸಿದೆ. ನಂತರದ ವರ್ಷ ಗಳಲ್ಲಿ ಇಲ್ಲಿ ಅನೇಕ ವೈಶಿಷ್ಟ್ಯಗಳನ್ನು ಕಾಲಕಾಲಕ್ಕೆ ಸೇರಿಸಲಾಗಿದೆ .ವಾಲ್ಟ್ ಡಿಸ್ನಿ ರೆಸಾರ್ಟ್ ಅನ್ನು ಕೂಡ ನಿರ್ಮಿಸಿದ್ದಾರೆ .ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಇದು ಒಂದಾಗಿ ಮೆರೆಯುತ್ತಿದೆ. ಕಾಲ್ಪನಿಕ ಕತೆಗಳ ಪಾತ್ರಗಳನ್ನು ಇಲ್ಲಿ ಭೇಟಿಯಾಗಿ ಮಾತಾಡಬಹುದು.

ನನ್ನ ಮೊಮ್ಮಗಳು ಈ ಸ್ಥಳವನ್ನು ಬಹುವಾಗಿ ಆನಂದಿಸಿದಳು. ನಾವು ಕೂಡ! ಅವಳು ಫೇರಿ ಟೇಲ್ (ಕಾಲ್ಪನಿಕ‌ಕಥೆ)ಗಳಲ್ಲಿ ಓದುವ ಕೆಲವು ರಾಜಕುಮಾರಿಯನ್ನು ಕಂಡು ಮಾತಾಡಿಸಿದಳು. ಆ ಪಾತ್ರಗಳಂತೆಯೇ ವೇಷ ತೊಟ್ಟು ಸುಂದರ ಉಡುಪಿನಲ್ಲಿ ನಿಂತು ಮಾತಾಡುತ್ತಾರೆ . ಇಲ್ಲಿ ಪ್ರತಿಯೊಂದು ಹಂತದಲ್ಲೂ ಏನೋ ಒಂದು ವಿಶೇಷ ಕಾಣಿಸುತ್ತದೆ .ಇಲ್ಲಿ ಇರುವಷ್ಟು ಹೊತ್ತು ನಿಮಗೆ ಸಮಯದ ಪರಿವೆಯೇ ಇರುವುದಿಲ್ಲ . ಡಿಸ್ನಿ ಲ್ಯಾಂಡ್ ಪಾರ್ಕ್ ನ ಬೀದಿಗಳಲ್ಲಿ ಸದ್ದು‌ಮಾಡುತ್ತಾ ಚಿಕ್ಕ ಪುಟ್ಟ ಮೆರವಣಿಗೆ ಹೋಗುತ್ತಿರುತ್ತದೆ. ಅದನ್ನು ನೋಡುವುದಕ್ಕೆ ಚೆಂದ.

ಬಹಳ ಸುದೀರ್ಘವಾದ ಸಂಗೀತ ನೃತ್ಯಮಯ ಮೆರವಣಿಗೆ ಮಧ್ಯಾಹ್ನ ನಂತರ ಇರುತ್ತದೆ. ಆ ಸಮಯಕ್ಕೆ ಸರಿಯಾಗಿ ಎಲ್ಲರೂ ಮೆರವಣಿಗೆ ಹೋಗುವ ರಸ್ತೆ ಬದಿಯಲ್ಲಿ ಬಂದು ಸೇರುತ್ತಾರೆ .ಮೆರವಣಿಗೆಯನ್ನು ನೋಡುವುದೇ ಒಂದು ಸೊಬಗು.ಅವಿಸ್ಮರಣೀಯ ಆನಂದ. ಸುದೀರ್ಘವಾದ ಈ ಮೆರವಣಿಗೆಯ ವೈವಿಧ್ಯಮಯ ವೇಷ,ಕುಣಿತಗಳು ಬೇರೆಯೇ ಲೋಕಕ್ಕೆ ಒಯ್ಯುತ್ತವೆ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...