Wednesday, April 15, 2026
Wednesday, April 15, 2026

69ನೆಯ ಹುಟ್ಟುಹಬ್ಬ ಆಚರಿಸಿಕೊಂಡ ಫಟೌ

ಫಟೌ ಬರ್ಲಿನ್‌ನ ಈ ಮೃಗಾಲಯಕ್ಕೆ ಸೇರ್ಪಡೆಯಾಗಿದ್ದು 1959ರಲ್ಲಿ. ಅಂದಿನಿಂದ ಇಂದಿಗೆ ಒಟ್ಟು 67 ವರ್ಷಗಳು ಫಟೌ ಮೃಗಾಲಯದ ಕಳೆದಿದೆ. ದಶಕಗಳ ಕಾಲ ಮನುಷ್ಯರ ಆರೈಕೆಯಲ್ಲಿದ್ದು, ವಿಶ್ವದಲ್ಲೇ ಮಾನವ ಆರೈಕೆಯಲ್ಲಿ ಇರುವ ಅತಿ ಹಿರಿಯ ಗೋರಿಲ್ಲಾ ಎಂಬ ಅಗ್ಗಳಿಕೆಗೆ ಫಟೌ ಪಾತ್ರವಾಗಿದೆ.

ಬರ್ಲಿನ್‌ನ ಮೃಗಾಲಯದಲ್ಲಿ ವಿಶ್ವದ ಅತ್ಯಂತ ಹಿರಿಯ ಗೊರಿಲ್ಲಾ ಎನ್ನಲಾದ ʻಫಟೌʼ ತನ್ನ 69ನೆಯ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಗೊರಿಲ್ಲಾದ ಹುಟ್ಟುಹಬ್ಬದ ಪ್ರಯುಕ್ತ ಮೃಗಾಲಯ ಅದಕ್ಕೆ ಚೆರ್ರಿ ಟೊಮ್ಯಾಟೋ, ಬೀಟ್‌ರೂಟ್‌ ಮತ್ತಿತರ ತರಕಾರಿ, ಹಣ್ಣುಗಳ ಭರ್ಜರಿ ಭಕ್ಷ್ಯವನ್ನು ನೀಡಿದ್ದು ವಿಶೇಷವಾಗಿತ್ತು.

ಮಾನವರ ಆರೈಕೆಯಲ್ಲಿರುವ ಅತಿ ಹಿರಿಯ ಗೊರಿಲ್ಲಾ

ಫಟೌ ಬರ್ಲಿನ್‌ನ ಈ ಮೃಗಾಲಯಕ್ಕೆ ಸೇರ್ಪಡೆಯಾಗಿದ್ದು 1959ರಲ್ಲಿ. ಅಂದಿನಿಂದ ಇಂದಿಗೆ ಒಟ್ಟು 67 ವರ್ಷಗಳು ಫಟೌ ಮೃಗಾಲಯದ ಕಳೆದಿದೆ. ದಶಕಗಳ ಕಾಲ ಮನುಷ್ಯರ ಆರೈಕೆಯಲ್ಲಿದ್ದು, ವಿಶ್ವದಲ್ಲೇ ಮಾನವ ಆರೈಕೆಯಲ್ಲಿ ಇರುವ ಅತಿ ಹಿರಿಯ ಗೋರಿಲ್ಲಾ ಎಂಬ ಹೆಗ್ಗಳಿಕೆಗೆ ಫಟೌ ಪಾತ್ರವಾಗಿದೆ.

ರವಾಂಡದ ಚಹರೆ ಬದಲಿಸಿ, ಅಭಿವೃದ್ಧಿಗೆ ಕಾರಣವಾದ ಗೊರಿಲ್ಲಾ ಪ್ರವಾಸೋದ್ಯಮ

ಫಟೌ ಮಾನವರ ಹಾರೈಕೆಯಲ್ಲಿ ಇರುವ ಅತಿ ಹಿರಿಯ ಗೊರಿಲ್ಲಾವಾಗಿದ್ದು, ಮೃಗಾಲಯದ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಇದು ಕಾಡುಗಳಲ್ಲಿ ಅಳಿವಿನಂಚಿನಲ್ಲಿ ಇರುವ ತನ್ನ ಪ್ರಭೇದವನ್ನು ಪ್ರತಿನಿಧಿಸುತ್ತಿದೆ. ಇಂದಿಗೂ ಇದು ಮೃಗಾಲಯದ ಆಕರ್ಷಣೆಯಾಗಿ ಉಳಿದಿದೆ ಎಂದು ಮೃಗಾಲಯದ ವಕ್ತಾರ ಫಿಲಿನ್‌ ಹ್ಯಾಚ್‌ಮೈಸ್ಟರ್‌ ಹೇಳಿಕೊಂಡಿದ್ದಾರೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...