Thursday, April 23, 2026
Thursday, April 23, 2026

ಮಾಲ್‌ ಮಾಲ್‌ ಮಾಲ್‌..ಎಲ್ನೋಡಿ ಮಾಲ್‌

ಅಮೆರಿಕದ ಮಾಲ್‌ ಸಂಸ್ಕೃತಿ ಬೆಳೆದ ರೀತಿ ಭಾರತದ ಮೇಲೂ ಪರಿಣಾಮ ಬೀರಿದೆ. ಈ ಬೆಳವಣಿಗೆ ಸಣ್ಣ ಅಂಗಡಿಗಳಲ್ಲಿ ಸಿಗುವ ಮಜಾ ಕಳೆಯುತ್ತಾದರೂ ಹಲವು ವೈವಿಧ್ಯಮಯ ವಸ್ತುಗಳು ಒಂದೇ ಕಡ ಸಿಗುವುದರಿಂದ ಸುಲಭ ಕೂಡ ಮಾಡುತ್ತದೆ.

  • ಶಂಕರ್‌ ಅಜ್ಜಂಪುರ

ಕನ್ನಡದಲ್ಲಿ ಕೊಳ್ಳುಬಾಕ ಸಂಸ್ಕೃತಿಯೆಂಬ ಪದದ ಹುಟ್ಟಿಗೆ ಅಮೆರಿಕದ ಮಾಲ್ ಸಂಸ್ಕೃತಿಯೇ ಕಾರಣ. ಅವುಗಳಲ್ಲೂ ಎರಡು ವಿಧ. ಎಲ್ಲ ವಸ್ತುಗಳನ್ನೂ ತನ್ನೊಳಗೆ ತುಂಬಿಸಿಕೊಂಡು ಮೆರೆಯುವ ಮಾಲ್ ಒಂದು ಕಡೆಯಾದರೆ, ಒಂದೇ ವಿಧದ ಬ್ರಾಂಡ್‌ಗಳ ವಸ್ತುಗಳನ್ನು ಮಾರಾಟ ಮಾಡುವ ಮಾಲ್‌ಗಳ ಸಮೂಹವನ್ನು ಔಟ್ ಲೆಟ್ ಮಾಲ್‌ಗಳೆಂದು ಕರೆಯುತ್ತಾರೆ.

ಮರ, ಪ್ಲಾಸ್ಟಿಕ್, ಲೋಹ, ಬಟ್ಟೆಗಳಲ್ಲಿ ವಿಧವಾದ ವಸ್ತುಗಳನ್ನು ಹೇರಳವಾಗಿ ತಯಾರಿಸಿ ಮಾರುವುದಕ್ಕಿಂತ ಹೆಚ್ಚಾಗಿ ಚೀನಾ ದೇಶದಿಂದ ಕೊಂಡು ಉದ್ಯಮವನ್ನು ಕಟ್ಟಿ ಬೆಳೆಸಿರುವ ದೇಶವಿದು. ಅಡುಗೆ ಮನೆಯನ್ನು ಸಜ್ಜುಗೊಳಿಸಿದ ನಂತರ ಹೇಗಿರುತ್ತದೆ, ಮಲಗುವ ಕೋಣೆಯಲ್ಲಿ ಏನೆಲ್ಲ ಇರಬೇಕು, ಬಚ್ಚಲು ಮನೆಯ ಸಿಂಗಾರಗಳೇನು, ಅವು ಯಾವ ಬಣ್ಣಗಳಲ್ಲಿ ದೊರೆಯುತ್ತವೆ- ಹೀಗೆ ಪ್ರತಿಯೊಂದು ವಿಷಯಕ್ಕೂ ಹಲವು ಆಯ್ಕೆಗಳು ಕಾಣಿಸುತ್ತವೆ.

Untitled design - 2026-04-23T120055.810

ಭಾರತದ ದೊಡ್ಡ ನಗರಗಳಲ್ಲಿ ಮಾಲ್‌ಗಳು ಬಂದಿರುವುದರಿಂದ ಅವು ಭಾರತೀಯರಿಗೆ ಅಪರಿಚಿತವಾಗಿ ಉಳಿದಿಲ್ಲ. ಚಿಲ್ಲರೆ ಮಾರಾಟ ನಿಂತುಹೋದರೆ ಭಾರತದಲ್ಲಿ ಪರಿಸ್ಥಿತಿ ಹೇಗಿದ್ದೀತು ಎಂದು ಇಲ್ಲಿನ ಮಾಲ್ ಗಳನ್ನು ನೋಡಿ ಕಲ್ಪಿಸಿಕೊಳ್ಳಬಹುದು. ಮೋರ್, ಬಿಗ್ ಬಜಾರ್, ಗರುಡಾ ಮಾಲ್, ಮಂತ್ರಿ ಮಾಲ್‌ಗಳು, ಬೆಂಗಳೂರಿನ ಐಟಿ ಉದ್ಯಮದೊಂದಿಗೆ ಸಮಾನಾಂತರವಾಗಿ ಬೆಳೆದವು. ಅಮೆರಿಕವನ್ನು ಕಂಡು ಬಂದ ಎಚ್೧ ವೀಸಾ ಉದ್ಯೋಗಿಗಳಿಗೆ ಇಷ್ಟವಾಗುವ ಜನರಿಗೆ ಅವು ಇಲ್ಲಿನ ಮಾಲ್‌ಗಳ ಹಂತವನ್ನು ತಲುಪಲು ಸಾಧ್ಯವಾಗಲಾರದೆನ್ನಿಸುತ್ತದೆ. ಏಕೆಂದರೆ ಜೀವನದ ಕಲ್ಪನೆಗೆ ಬೇಕೆನಿಸುವ ವಸ್ತುಗಳೆಲ್ಲವನ್ನೂ ಪ್ರತ್ಯೇಕವಾಗಿ ಪ್ರದರ್ಶಿಸುವಂಥ ವ್ಯವಸ್ಥೆಗೆ ಭಾರತದಲ್ಲಿ ಸ್ಥಳಾವಕಾಶದ ಕೊರತೆ ಕಾಡುತ್ತದೆ. ಹಾಗಾಗಿಯೇ ಎಕರೆಗಟ್ಟಲೆ ಪ್ರದೇಶಗಳಲ್ಲಿ ಮಾಲ್ ಗಳನ್ನು ಸ್ಥಾಪಿಸಲಾಗದ ಕಾರಣಕ್ಕೆ ಭಾರತದಲ್ಲಿ ಮಹಡಿಯ ಮೇಲೆ ಮಹಡಿ ಕಟ್ಟಿ ಮಾರಲಾಗುತ್ತಿದೆ. ಈ ಅರ್ಥದಲ್ಲಿ ನಮ್ಮದು ವರ್ಟಿಕಲ್ ಬೆಳವಣಿಗೆಯೇ ಹೌದು.

ಇದನ್ನೂ ಓದಿ: ಮೊದಲ ವಿಮಾನಯಾನಕ್ಕೆ ಸರ್ಟಿಫಿಕೇಟ್‌ ಸಂಭ್ರಮ!

ಮಾಲ್ ಸಂಸ್ಕೃತಿಯನ್ನು ಒಪ್ಪಿಕೊಂಡವರಿಗೆ, ಅಪ್ಪಿಕೊಂಡವರಿಗೆ ಬಡತನ-ಸಿರಿತನದ ಪ್ರಶ್ನೆಯಾಗಲೀ, ಅಗತ್ಯ-ಅನಗತ್ಯಗಳ ಔಚಿತ್ಯವಾಗಲಿ ಕಾಣುವುದಿಲ್ಲ. ಏಕೆಂದರೆ ದುಡ್ಡಿರುವುದೇ ಕೊಳ್ಳುವುದಕ್ಕಾಗಿ. ಎಷ್ಟು ಕೊಳ್ಳಬಹುದು, ಕೊಂಡದ್ದನ್ನು ಸಂರಕ್ಷಿಸುವುದು ಹೇಗೆ ಎಂಬೆಲ್ಲ ಚಿಂತೆಗಿಂತ, "ಮಡದಿ ಬಾರಳು, ಮಂಚ ಬಾರದು, ಕಂಚು ಕನ್ನಡಿ ಬಾರದು" ಎಂದು ದಾಸರು ಹಾಡು ಭಾರತೀಯರಿಗೆ ಮಾತ್ರ ನೆನಪಾಗುತ್ತದೆ. ಕಾಕಾ ಅಂಗಡಿ, ಗೂಡಂಗಡಿ, ತರಕಾರಿ ಗಾಡಿಗಳಿಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದೂ ನಮಗೆ ಕಷ್ಟ!

ಲೇಖಕರು: ಹವ್ಯಾಸಿ ಬರಹಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...