ಈ ದೇಶಕ್ಕೆ ವಿಮಾನ ನಿಲ್ದಾಣವಿಲ್ಲ, ಸ್ವಂತ ಕರೆನ್ಸಿಯೂ ಇಲ್ಲ; ಆದರೂ, ಇಲ್ಲಿನ ಜನ ಆಗರ್ಭ ಶ್ರೀಮಂತರು!
ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಗುಪ್ತ ರತ್ನದಂತೆ ಅಡಗಿರುವ ಈ ದೇಶದಲ್ಲಿ ಸ್ವಂತ ವಿಮಾನ ನಿಲ್ದಾಣವಿಲ್ಲ, ಕರೆನ್ಸಿ ಇಲ್ಲ, ಅಷ್ಟೇ ಅಲ್ಲ ಸ್ವಂತ ಭಾಷೆ ಕೂಡ ಇಲ್ಲ. ಆದರೂ, ಇದು ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ಮತ್ತು ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ.
- ಪ್ರಿಯಾಂಕ ಪಿ.
ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಗುಪ್ತ ರತ್ನದಂತೆ ಅಡಗಿರುವ ಈ ದೇಶದಲ್ಲಿ ಸ್ವಂತ ವಿಮಾನ ನಿಲ್ದಾಣವಿಲ್ಲ, ಕರೆನ್ಸಿ ಇಲ್ಲ, ಅಷ್ಟೇ ಅಲ್ಲ ಸ್ವಂತ ಭಾಷೆ ಕೂಡ ಇಲ್ಲ. ಆದರೂ, ಇದು ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ಮತ್ತು ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ನೈಸರ್ಗಿಕ ಸೌಂದರ್ಯ, ಭವ್ಯವಾದ ಕೋಟೆಗಳು ಮತ್ತು ಕೇವಲ ಏಳು ಜನ ಅಪರಾಧಿಗಳು ಜೈಲಿನಲ್ಲಿದ್ದಾರೆ ಎಂಬಷ್ಟು ಕಡಿಮೆ ಅಪರಾಧ ಪ್ರಮಾಣವಿದೆ ಎಂದರೆ ನಂಬಲೇಬೇಕು.

ಲಿಚ್ಟೆನ್‌ಸ್ಟೈನ್‌ನ ಮಧ್ಯಕಾಲೀನ ಕೋಟೆಗಳು ಮತ್ತು ಹಿಮದಿಂದ ಆವೃತವಾದ ಆಲ್ಪ್ಸ್ ಪರ್ವತಗಳನ್ನು ಹೊಂದಿರುವ ಸುಮಾರು 30,000 ಜನಸಂಖ್ಯೆಯನ್ನು ಹೊಂದಿದೆ. ಲಿಚ್ಟೆನ್‌ಸ್ಟೈನ್ ಬಗ್ಗೆ ಎಂದಾದರೂ ಕೇಳಿದ್ದೀರಾ? ಬಹುಶಃ ಹೆಚ್ಚಿನ ಜನರು ಈ ದೇಶದ ಬಗ್ಗೆ ಕೇಳಿರಲಿಕ್ಕಿಲ್ಲ. ಆದರೆ, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ ಈ ಸಣ್ಣ ರಾಷ್ಟ್ರವು ಅಸಾಧಾರಣವಾಗಿ ವಿಶಿಷ್ಟವಾಗಿದೆ.
ಈ ದೇಶದಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ. ಯಾವುದೇ ಕರೆನ್ಸಿ ಇಲ್ಲ. ಇಲ್ಲಿಯವರು ಸ್ವಿಸ್ ಫ್ರಾಂಕ್ ಅನ್ನು ಬಳಸುತ್ತಾರೆ. ತಮ್ಮದೇ ಆದ ಅಧಿಕೃತ ಭಾಷೆಯನ್ನು ಸಹ ಹೊಂದಿಲ್ಲ. ಆದರೂ, ಇದು ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ಮತ್ತು ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಅಭಿವೃದ್ಧಿ ಹೊಂದಲು ಗಾತ್ರ ಅಥವಾ ನಿಮ್ಮ ಸ್ವಂತ ನಿಯಮಗಳು ಅಗತ್ಯವಿಲ್ಲ ಎಂಬುದನ್ನು ಲಿಚ್ಟೆನ್‌ಸ್ಟೈನ್ ಸಾಬೀತುಪಡಿಸುತ್ತದೆ.
No Airport, No Currency Of Its Own, Yet Locals Rich Enough To Not Work Entire Life. This Nation Is...
— TifaniesweTs (@TifaniesweTs) July 27, 2025
Liechtenstein
| Viral News - News18https://t.co/LE9fdPLbuC
ಯುರೋಪಿನ ಅತ್ಯಂತ ಶ್ರೀಮಂತ ದೇಶ
ಲಿಚ್ಟೆನ್‌ಸ್ಟೈನ್ ಅತ್ಯಂತ ಸಿರಿವಂತ ದೇಶ. ಬ್ರಿಟನ್ ರಾಜನಿಗಿಂತಲೂ ಶ್ರೀಮಂತ. ಇಲ್ಲಿನ ಸ್ಥಳೀಯರು ಯಾವುದೇ ಕೆಲಸ ಮಾಡದೆ ಜೀವನ ನಡೆಸಲು ಸಾಕಷ್ಟು ಹಣವನ್ನು ಹೊಂದಿದ್ದಾರೆ. ಇಲ್ಲಿ ಅಪರಾಧ ಪ್ರಕರಣ ಕಡಿಮೆಯಿದ್ದರೂ ಸುಮಾರು 100 ಪೊಲೀಸ್ ಅಧಿಕಾರಿಗಳಿದ್ದಾರೆ. ಜನರು ರಾತ್ರಿ ವೇಳೆಯಲ್ಲಿ ತಮ್ಮ ಮನೆಯ ಬಾಗಿಲುಗಳನ್ನು ಲಾಕ್ ಮಾಡಬೇಕು ಎಂಬ ಬಗ್ಗೆ ಚಿಂತಿಸುವುದಿಲ್ಲ.

ಲೀಚ್ಟೆನ್‌ಸ್ಟೈನ್‌ನ ಸೌಂದರ್ಯ ಮತ್ತು ವಿಶಿಷ್ಟ ಜೀವನಶೈಲಿಗೆ ನೆಟ್ಟಿಗರು ಪ್ರಭಾವಿತರಾಗಿದ್ದಾರೆ. ಇದು ಕನಸಿನಂತೆ ಕಾಣುತ್ತದೆ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಪ್ರಪಂಚದಾದ್ಯಂತ ಜೀವನ ಹೀಗಿದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಮಗದೊಬ್ಬ ಬಳಕೆದಾರ ಹೇಳಿದ್ದಾರೆ.
ತನ್ನ ನಿವೃತ್ತಿ ವೇಳೆ ಈ ದೇಶದಲ್ಲಿರಲು ಇಷ್ಟಪಡಬಹುದು ಎಂದು ತೋರುತ್ತದೆ ಎಂದು ವ್ಯಕ್ತಿಯೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಲೀಚ್ಟೆನ್‌ಸ್ಟೈನ್‌ಗೆ ಭೇಟಿ ನೀಡಿದ ಪ್ರಯಾಣಿಕನೊಬ್ಬ, ತಾನು ಕೆಲವು ವರ್ಷಗಳ ಹಿಂದೆ ಈ ಸ್ಥಳಕ್ಕೆ ಭೇಟಿ ನೀಡಿದ್ದೆ. ಜಿನೀವಾದಿಂದ ಇಲ್ಲಿಗೆ ಕಾರಿನಲ್ಲಿ ಪ್ರಯಾಣಿಸಿದೆವು. ಈ ಸ್ಥಳ ಬಹಳ ಸುಂದರವಾಗಿದೆ ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ.