Friday, May 8, 2026
Friday, May 8, 2026

ಒಬ್ಬ ಸತ್ತಿದ್ದಕ್ಕೆ ಸಾವಿನ ಕಣಿವೆಯಾಯ್ತು

ದಕ್ಷಿಣ ಕ್ಯಾಲಿಫೋರ್ನಿಯಾದ ನೆವಾಡಾ ಗಡಿ ಪ್ರದೇಶದ ಸಮೀಪದಲ್ಲಿ ‘ಡೆತ್ ವ್ಯಾಲಿ’ ಅಥವಾ ಸಾವಿನ ಕಣಿವೆ ಇದ್ದು, ಮೋಜಾವೆ ಮರುಭೂಮಿಯ ಭಾಗವಾಗಿದೆ. 1849ರಲ್ಲಿ ಇಲ್ಲಿಗೆ ಹತ್ತಿರದಲ್ಲಿನ ಪರ್ವತ ಪ್ರದೇಶಗಳಲ್ಲಿ ಬಂಗಾರದ ನಿಕ್ಷೇಪದ ಅನ್ವೇಷಣೆ ಮಾಡಲೆಂದು ಹೊರಟ ಗುಂಪೊಂದು ಈ ಕಣಿವೆಯನ್ನು ದಾಟಿ ಹೋಗುವಾಗ ಆಹಾರ ಹಾಗೂ ಬಾಯಾರಿಕೆಯಿಂದ ತೊಂದರೆಗೊಳಗಾದರು. ಅವರಲ್ಲಿ ಒಬ್ಬ ಸಾಯುವಾಗ ʻಗುಡ್ ಬೈ ಡೆತ್ ವ್ಯಾಲಿ’ ಎಂದು ಸಾವಿಗೆ ಈಡಾದ. ಇದೇ ಕಾರಣದಿಂದ ಈ ಪ್ರದೇಶಕ್ಕೆ ಡೆತ್ ವ್ಯಾಲಿ ಎಂದು ಹೆಸರು ಬಂದಿದೆ ಎನ್ನಲಾಗಿದೆ.

  • ಬಾಲಚಂದ್ರ ಹೆಗಡೆ

ಅಮೆರಿಕದಲ್ಲಿನ ಡೆತ್‌ ವ್ಯಾಲಿ ಒಂದು ವಿಶೇಷ ಪ್ರವಾಸಿ ತಾಣ. ಕಳೆದ ಬಾರಿ ಅಮೆರಿಕಕ್ಕೆ ಹೋದಾಗ ಮಗಳ ಕುಟುಂಬದೊಡನೆ ಈ ವಿಶೇಷ ಪ್ರವಾಸಿ ತಾಣಕ್ಕೆ ಹೋಗಿದ್ದೆವು. ಕಾರಿನಲ್ಲಿ ಪ್ರಯಾಣ ಆರಂಭಿಸಿದರೆ ಲಾಸ್ ವೇಗಸ್‌ನಿಂದ ಕೇವಲ ಎರಡು ತಾಸಿನಲ್ಲಿ ಡೆತ್‌ ವ್ಯಾಲಿ ತಲುಪಬಹುದು. ಇದೊಂದು ಪ್ರಪಂಚದ ಕುತೂಹಲಕಾರಿ ಹಾಗೂ ವಿಪರೀತ ಉಷ್ಣ ಹವಾಮಾನದ ಪ್ರದೇಶ.

ಇದನ್ನೂ ಓದಿ:

ನಾಮ ಕಾರಣ?

ದಕ್ಷಿಣ ಕ್ಯಾಲಿಫೋರ್ನಿಯಾದ ನೆವಾಡಾ ಗಡಿ ಪ್ರದೇಶದ ಸಮೀಪದಲ್ಲಿ ‘ಡೆತ್ ವ್ಯಾಲಿ’ ಅಥವಾ ಸಾವಿನ ಕಣಿವೆ ಇದ್ದು, ಮೋಜಾವೆ ಮರುಭೂಮಿಯ ಭಾಗವಾಗಿದೆ. 1849ರಲ್ಲಿ ಇಲ್ಲಿಗೆ ಹತ್ತಿರದಲ್ಲಿನ ಪರ್ವತ ಪ್ರದೇಶಗಳಲ್ಲಿ ಬಂಗಾರದ ನಿಕ್ಷೇಪದ ಅನ್ವೇಷಣೆ ಮಾಡಲೆಂದು ಹೊರಟ ಗುಂಪೊಂದು ಈ ಕಣಿವೆಯನ್ನು ದಾಟಿ ಹೋಗುವಾಗ ಆಹಾರ ಹಾಗೂ ಬಾಯಾರಿಕೆಯಿಂದ ತೊಂದರೆಗೊಳಗಾದರು. ಅವರಲ್ಲಿ ಒಬ್ಬ ಸಾಯುವಾಗ ʻಗುಡ್ ಬೈ ಡೆತ್ ವ್ಯಾಲಿ’ ಎಂದು ಸಾವಿಗೆ ಈಡಾದ. ಇದೇ ಕಾರಣದಿಂದ ಈ ಪ್ರದೇಶಕ್ಕೆ ಡೆತ್ ವ್ಯಾಲಿ ಎಂದು ಹೆಸರು ಬಂದಿದೆ ಎನ್ನಲಾಗಿದೆ.

Untitled design - 2026-05-08T183757.715

ಕಲ್ಲುಗಳು ತಾವಾಗಿ ತೆವಳುವ ತಾಣ

ಸಮುದ್ರ ಮಟ್ಟಕ್ಕಿಂತ ಸುಮಾರು 282 ಅಡಿ ಆಳದಲ್ಲಿ ಈ ಕಣಿವೆ ಇದೆ. ಇದು ಬರಡು ಪ್ರದೇಶ. ಮಳೆ ಇಲ್ಲವೇ ಇಲ್ಲ. ಹೆಚ್ಚೆಂದರೆ 5 ಸೆಂಟಿಮೀಟರ್ ಮಾತ್ರ ಮಳೆ ಆಗುತ್ತದೆ. ಇಲ್ಲಿನ ʻರೇಸ ಟ್ರಾಕ್ ಪ್ಲಾಯಾʼ ಎಂಬ ಪ್ರದೇಶದಲ್ಲಿ ಕಲ್ಲುಗಳು ತಾವಾಗಿಯೇ ಚಲಿಸುತ್ತವೆ. ಹಾಗಾಗಿ ಇವುಗಳಿಗೆ ಸೇಯ್ಲಿಂಗ್‌ ಸ್ಟೋನ್ಸ್‌ ಎಂದು ಹೆಸರು. ಯಾವುದೇ ಮನುಷ್ಯ ಅಥವಾ ಪ್ರಾಣಿಯ ಸಹಾಯವಿಲ್ಲದೆ ಕಲ್ಲುಗಳು ಮಣ್ಣಿನಮೇಲೆ ಉದ್ದನೆಯ ಗೆರೆಗಳನ್ನು ಎಳೆಯುತ್ತಾ ಸಾಗುವುದು ವಿಚಿತ್ರ ಸಂಗತಿ. ಹಲವು ವರ್ಷಗಳ ಕಾಲ ಇದು ವಿಜ್ಞಾನಿಗಳಿಗೂ ಅಚ್ಚರಿಯ ವಿಷಯವಾಗಿತ್ತು. ಪ್ರಯೋಗಕ್ಕಾಗಿ ಮುನ್ನೂರು ಕೆಜಿಗಿಂತಲೂ ಹೆಚ್ಚಿನ ತೂಕದ ಕಲ್ಲನ್ನು ಇಲ್ಲಿಟ್ಟು ಪರೀಕ್ಷಿಸಲಾಗಿತ್ತು. ಅದು ಒಂದು ತಿಂಗಳ ನಂತರ ಸುಮಾರು 1 ಕಿಮೀ ದೂರಕ್ಕೆ ಸಾಗಿತ್ತು ಎನ್ನಲಾಗಿದ್ದು, ನಂತರದ ಸಂಶೋಧನೆಯಿಂದ ಇದು ಅಲ್ಲಿನ ಮಂಜು ಮತ್ತು ಗಾಳಿಯ ಪ್ರಭಾವದಿಂದ ನಡೆಯುತ್ತಿರುವ ಕಾರ್ಯ ಎಂದು ತಿಳಿದು ಬಂದಿದೆ.

ಡೆತ್‌ ವ್ಯಾಲಿಯ ಬೆಟ್ಟಗಳಲ್ಲಿ

ಡೆತ್‌ ವ್ಯಾಲಿಯ ಬೆಟ್ಟ ಗುಡ್ಡಗಳು ಕೆಂಪು, ಗುಲಾಬಿ, ಹಸಿರು ಮತ್ತು ಹಳದಿ ಬಣ್ಣದ ಖನಿಜಗಳಿಂದ ಕೂಡಿದ್ದು, ಚಿತ್ರ ಕಲಾವಿದ ಚಿತ್ರ ಬರೆದ ಹಾಗೆ ಕಾಣಿಸುತ್ತವೆ. ಸ್ವಚ್ಛಂದ ಆಕಾಶ ನೋಡಲು ಡೆತ್ ವ್ಯಾಲಿ ಹೇಳಿಮಾಡಿಸಿದ ಪ್ರದೇಶ. ಇಲ್ಲಿನ ʻಲೋ ಪಾಯಿಂಟ್‌ʼಗೆ ʻಬ್ಯಾಡ ವಾಟರ್ ಬೇಸಿನ್ʼ ಎಂದು ಹೆಸರು. ಇಲ್ಲಿ ಮೂರ್ನಾಲ್ಕು ಕಿಮೀವರೆಗೆ ಉಪ್ಪು ನೀರು ಗಟ್ಟಿಯಾಗಿ ಬೆಳ್ಳಗೆ ಹರಡಿದಂತೆ ಇತ್ತು. ಬೆಳದಿಂಗಳಲ್ಲಿ ಅದು ಇನ್ನೂ ಬೆಳ್ಳಗೆ ಕಾಣುತಿತ್ತು. ಹೆಪ್ಪುಗಟ್ಟಿದ ಆ ಉಪ್ಪುನೀರಿನ ಬೇಸಿನ್ ಮೇಲೆಯೇ ನಡೆಯುತ್ತಾ ಪ್ರವಾಸಿಗಳು ಫೊಟೋ/ಸೇಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಇಷ್ಟು ಕಠಿಣ ಹವಾಮಾನವಿದ್ದರೂ ಇಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಸಸ್ಯಗಳಿವೆ. ಅಪರೂಪದ ಪಫರ್‌ ಫಿಶ್ ಇಲ್ಲಿನ ಉಪ್ಪು ನೀರಿನ ಬುಗ್ಗೆಗಳಲ್ಲಿ ಬದುಕುತ್ತವೆ. ಬಿಗಾರ್ನ್ ಕುರಿಗಳು, ಕೊಯೋಟೆ (ನರಿ ಮತ್ತು ತೋಳಗಳ ಕುಟುಂಬಕ್ಕೆ ಸೇರಿದ ಪ್ರಾಣಿ), ಮೊಲ, ಅಳಿಲು, ಇಲಿ ಮುಂತಾದ ಪ್ರಾಣಿಗಳೂ ಈ ಪ್ರದೇಶದಲ್ಲಿ ನೆಲೆಯಾಗಿವೆ.

Untitled design - 2026-05-08T183806.294

ಡೆತ್‌ ವ್ಯಾಲಿಯ ಹೆಚ್ಚಿನ ಪ್ರದೇಶ ಮರಳಿನಿಂದ ತುಂಬಿದೆ. ನಾವು ನವೆಂಬರ್‌ನಲ್ಲಿ ಅಲ್ಲಿಗೆ ಹೋಗಿದ್ದೆವು. ಆಗ ಅಷ್ಟೊಂದು ಉಷ್ಣತೆ ಇರಲಿಲ್ಲ. ಡೆತ್‌ ವ್ಯಾಲಿಯ ಸುಂದರ ಬೆಟ್ಟಗಳು ಹಳದಿ, ಕಪ್ಪು ಬಣ್ಣಗಳಲ್ಲಿ ಕಂಗೊಳಿಸಿ ಅನ್ಯ ಗ್ರಹಕ್ಕೆ ಬಂದಿರುವ ಅನುಭವ ನೀಡುತ್ತವೆ. ಈ ಪ್ರದೇಶ ಸ್ಥಳೀಯ ಅಮೆರಿಕದ ಟಿಂಬಿಶಾ ಬುಡಕಟ್ಟು ಜನಾಂಗಕ್ಕೆ ನೆಲೆಯಾಗಿದೆ. ಸಾಕಷ್ಟು ಹಾಲಿವುಡ್ ಸಿನಿಮಾಗಳೂ ಇಲ್ಲಿ ಚಿತ್ರೀಕರಣಗೊಂಡಿವೆ. ಇಷ್ಟು ವೈಶಿಷ್ಟ್ಯಗಳ ಈ ಸಾವಿನ ಕಣಿವೆ ಅಮೆರಿಕ ಪ್ರವಾಸ ಹೋದರೆ ನೋಡಲೇಬೇಕಾದ ಪ್ರವಾಸಿ ತಾಣ.

  • 1933ರಲ್ಲಿ ಅಮೆರಿಕ ಈ ಪ್ರದೇಶವನ್ನು ನ್ಯಾಷನಲ್ ಪಾರ್ಕ್ ಎಂದು ಘೋಷಣೆ ಮಾಡಿದೆ.
  • ಡೆತ್‌ ವ್ಯಾಲಿ ಸುಮಾರು 225 ಕಿಮೀ ಉದ್ದ ಹಾಗೂ 8-48 ಕಿಮೀ ಅಗಲವಿದೆ.
  • ಜಗತ್ತಿನಲ್ಲಿಯೇ ಅತಿ ಉಷ್ಣ ಪ್ರದೇಶ ಎಂದೂ ಡೆತ್‌ ವ್ಯಾಲಿ ಗುರುತಿಸಿಕೊಂಡಿದೆ.
  • ಬೇಸಗೆಯ ಸಮಯದಲ್ಲಿ ಇಲ್ಲಿ ಸರಿ ಸುಮಾರು 54 ಸೆಂಟಿಗ್ರೇಡ್‌ವರೆಗೂ ಉಷ್ಣತೆ ಇರುತ್ತದೆ.
  • 1913ರಲ್ಲಿ ಇಲ್ಲಿನ ಉಷ್ಣಾಂಶ 134 ಫ್ಯಾರನ್‌ ಹೀಟ್‌ ಆಗಿತ್ತು. ಅದು ಜಗತ್ತಿನಲ್ಲೇ ದಾಖಲಾದ ಅತಿಹೆಚ್ಚು ಉಷ್ಣಾಂಶ.
Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...