ಕಿರುತೆರೆ ಮೂಲಕ ಫೇಮಸ್ ಆದವರು ನಟಿ ನಮ್ರತಾ ಗೌಡ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಸಿ ಗ್ರ್ಯಾಂಡ್ ಫಿನಾಲೆಗೂ ಹಿಂದಿನವಾರ ಅವರು ದೊಡ್ಮನೆಯಿಂದ ಹೊರಬಿದ್ದಿದ್ದರು. ಅವರು ‘ಪ್ರವಾಸಿ ಪ್ರಪಂಚ’ದ ಜೊತೆ ತಮ್ಮಿಷ್ಟದ ಸ್ಥಳ, ಡ್ರೀಮ್ ಡೆಸ್ಟಿನೇಷನ್ ಯಾವುದು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ಡ್ರೀಮ್ ಡೆಸ್ಟಿನೇಷನ್ಗಳ ಪಟ್ಟಿ ಬಹಳ ದೊಡ್ಡದಿದೆ. ಆ ಬಗ್ಗೆ ಇಲ್ಲಿದೆ ವಿವರ.

ಬೋರಾ ಬೋರಾ ಐಲ್ಯಾಂಡ್

ಎಲ್ಲರಿಗೂ ಒಂದು ಡ್ರೀಮ್ ಡೆಸ್ಟಿನೇಷನ್ ಅನ್ನೋದು ಇರುತ್ತದೆ. ನನ್ನ ಡ್ರೀಮ್ ಡೆಸ್ಟಿನೇಷನ್ ಬೋರಾ ಬೋರಾ ಐಲ್ಯಾಂಡ್. ಇದಕ್ಕೆ ಹೋಗೋಕೆ ಆಗದೇ ಇದ್ದವರು ಮಾಲ್ಡೀವ್ಸ್ಗೆ ತೆರಳುತ್ತಾರೆ. ಬೋರಾ ಬೋರಾಗೆ ಹೋಗೋಕೆ ತುಂಬ ಸಮಯ ಬೇಕು. ಇಲ್ಲಿನ ಪ್ರಯಾಣ ತುಂಬಾನೇ ದುಬಾರಿ. ಫೊಟೋಗಳಲ್ಲಿ ನೋಡಿಯೇ ನಾನು ಕಳೆದು ಹೋಗಿದ್ದೇನೆ. ಇಲ್ಲಿ ಪ್ರೈವೇಟ್ ಐಲ್ಯಾಂಡ್ಗಳು ಇರುತ್ತವೆ. ಆದರೆ ಇಲ್ಲಿ ಫ್ಯಾನ್ಸಿ ಬಿಲ್ಡಿಂಗ್ ಗಳು ಇರೋದಿಲ್ಲ. ನೀವು ನೀರಿನಿಂದ ಸುತ್ತುವರೆದಿರುತ್ತೀರಿ. ಮುಂದೊಂದು ದಿನ ಈ ಸ್ಥಳಕ್ಕೆ ಭೇಟಿ ನಿಡಿಯೇ ನೀಡುತ್ತೇನೆ ಎನ್ನುವ ಭರವಸೆಯಲ್ಲಿದ್ದಾರೆ.

namrutha gowda 3 (1)

ಪ್ಯಾರಿಸ್ ಪ್ಯಾರ್

ಸಣ್ಣ ವಯಸ್ಸಿನಲ್ಲೇ ಪ್ಯಾರಿಸ್ಗೆ ತೆರಳೋ ಅವಕಾಶ ದೊರೆತಿತ್ತು. ಪ್ಯಾರಿಸ್ ಎಲ್ಲರಿಗೂ ಇಷ್ಟ ಆಗುತ್ತದೆ. ಇದರ ಜೊತೆ ಬಾಲಿ ಕೂಡ ಬೆಸ್ಟ್. ಥೈಲ್ಯಾಂಡ್ ಬಗ್ಗೆ ನಂಗೆ ಅಷ್ಟೊಂದು ಕ್ರೇಜ್ ಇಲ್ಲ. ಇದು ತುಂಬಾನೇ ಓವರ್ ರೇಟೆಡ್ ಜಾಗ ಎಂಬುದು ನನ್ನ ಅಭಿಪ್ರಾಯ.

ಕಾಶ್ಮೀರ ನಮ್ದು

ನನಗೆ ಮನಾಲಿ ಹಾಗೂ ಕಾಶ್ಮೀರ ಎರಡೂ ಇಷ್ಟ. ಕಾಶ್ಮೀರವನ್ನು ಭೂಲೋಕದ ಸ್ವರ್ಗ ಅಂತ ಸುಮ್ಮನೆ ಕರೆಯೋದಿಲ್ಲ ಅಲ್ವಾ? ನಾನು ಕಾಶ್ಮೀರಕ್ಕೆ ಹೋಗಿ ಸೇಫ್ ಆಗಿ ಹೋಗಿ ಬಂದಿದ್ದೆ ಅನ್ನೋದು ಖುಷಿಯ ವಿಚಾರ. ಆದರೆ ಇತ್ತೀಚಿನ ಪಹಲ್ಗಾಮ್ ದುರ್ಘಟನೆ ನನ್ನನ್ನು ವಿಚಲಿತ ಮಾಡಿತ್ತು.

ಕರ್ನಾಟಕವೇ ಫೇವರಿಟ್

ಕರ್ನಾಟಕದಲ್ಲಿ ಎಲ್ಲ ಜಾಗಗಳು ಸಖತ್ ಇಷ್ಟ. ಅದರಲ್ಲೂ ಮಂಗಳೂರು ಹಾಗೂ ಕೊಡಗು ನನ್ನ ಅತಿ ಅತಿ ಫೇವರಿಟ್. ಮಂಗಳೂರಿನಲ್ಲಿ ಬೀಚ್ ಇದೆ. ದೇವಸ್ಥಾನಗಳು ಇವೆ. ಹೀಗಾಗಿ, ಈ ಸ್ಥಳವನ್ನು ನಾನು ಯಾವಾಗಲೂ ಇಷ್ಟಪಡುತ್ತೇನೆ. ಕೊಡಗು ಇಷ್ಟ ಆಗೋಕೆ ಅಲ್ಲಿನ ಪ್ರಕೃತಿ ಸೌಂದರ್ಯವೇ ಕಾರಣ. ಇನ್ನು ಮೈಸೂರು ನನಗೆ ಎರಡನೇ ಮನೆ ಥರ. ಬ್ರೇಕ್ ಸಿಕ್ಕಾಗಲೆಲ್ಲ ಅಲ್ಲಿಗೆ ಹೋಗುತ್ತೇನೆ.

namrutha gowda 3

ಸ್ಮಾರ್ಟ್ ವಾಚ್-ಸ್ಟಾರ್ಟ್ ವಾಕ್

ನಾನು ಟ್ರಿಪ್ ಗಳಿಗೆ ಹೋದಾಗ ವರ್ಕೌಟ್ ಮಾಡುವ ಬದಲು ವಾಕ್ ಮಾಡುತ್ತೇನೆ. ದಿನಕ್ಕೆ ಇಷ್ಟು ಸ್ಟೆಪ್ಸ್ ನಡೆಯಬೇಕು ಎಂಬ ಟಾರ್ಗೆಟ್ನ ನಮ್ಮ ಟ್ರೇನರ್ಗಳು ನೀಡುತ್ತಾರೆ. ಅದನ್ನು ರೀಚ್ ಮಾಡುತ್ತೇನೆ. ಜಾಗ ನೋಡುವಾಗ ಹೇಗೂ ಸುತ್ತಾಟ ಮಾಡಲೇಬೇಕಾಗುತ್ತದೆ ಅಲ್ವಾ?

ನಮ್ಮ ಫುಡ್ಡೇ ಗುಡ್ಡು!

ನಂಗೆ ದಕ್ಷಿಣ ಭಾರತದ ಅಡುಗೆಗಳು ಅಂದ್ರೆ ತುಂಬ ಇಷ್ಟ. ನಾನು ಫುಡ್ ವಿಚಾರದಲ್ಲಿ ಸಖತ್ ಚೂಸಿ. ಹೀಗಾಗಿ, ಆಯಾ ಸ್ಥಳದಲ್ಲಿ ಫೇಮಸ್ ಇರೋ ಪದಾರ್ಥಗಳನ್ನು ಜಸ್ಟ್ ಟೇಸ್ಟ್ ಮಾಡ್ತೀನಿ.

namrutha gowda 1

ನಾನು ಪ್ರವಾಸಿ ಪ್ರಪಂಚದ ರಿಪೋರ್ಟರ್ ಆದ್ರೆ..

ಪ್ರವಾಸಿ ಪ್ರಪಂಚದ ರಿಪೋರ್ಟರ್ ಆದರೆ ನಾನು ಬರೆಯೋ ಮೊದಲ ಲೇಖನ ಹಂಪಿಯ ಬಗ್ಗೆ. ನನಗೆ ಇತಿಹಾಸದ ಬಗ್ಗೆ ತುಂಬ ತುಂಬ ಆಸಕ್ತಿ. ಹೀಗಾಗಿ, ಹಂಪಿಯ ಇತಿಹಾಸದ ಬಗ್ಗೆ ಬರೆಯೋ ಉದ್ದೇಶ ಇದೆ. ನಾನು ಎರಡು ಬಾರಿ ಹಂಪಿ ಉತ್ಸವದಲ್ಲಿ ಪರ್ಫಾರ್ಮ್ ಮಾಡಿದ್ದೆ. ಹಂಪಿ ಎಷ್ಟು ನೋಡಿದರೂ ಮುಗಿಯೋದಿಲ್ಲ. ದಿನಗಳು ಸಾಲುವುದಿಲ್ಲ. ಮುಂದೊಮ್ಮೆ ಹಂಪಿಗೆ ಭೇಟಿ ಕೊಟ್ಟು ಈ ಪಾರಂಪರಿಕ ಜಾಗವನ್ನು ಇಂಚಿಂಚೂ ನೋಡಬೇಕು.