ಬೇಸಿಗೆ ರಜೆ (Summer Vacation)ಯಲ್ಲಿ ಮಕ್ಕಳ ಜೊತೆ ಎಲ್ಲಿಗಾದರೂ ಹೋಗುವ ಬಗ್ಗೆ ಯೋಚಿಸಿದ್ದಿರಾ? ರಾಜ್ಯ ಹಾಗೂ ಹೊರರಾಜ್ಯಗಳ ಪ್ರವಾಸ (Travel)ಕ್ಕೆ ಸಿದ್ಧರಾಗುತ್ತಿದ್ದೀರಾ? ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಈ ಬೇಸಿಗೆಯಲ್ಲಿ ದಕ್ಷಿಣ ಭಾರತದ ವಿವಿಧ ತಾಣಗಳಿಗೆ ಏಳು ಹೊಸ ಪ್ರವಾಸ ಪ್ಯಾಕೇಜ್‌ (Travel Package)ಗಳನ್ನು ಪ್ರಾರಂಭಿಸಿದೆ.

ಪ್ರವಾಸ ಪ್ಯಾಕೇಜ್‌ಗಳು

ಕೊಡಗಿಗೆ ಎರಡು ದಿನಗಳ ಪ್ಯಾಕೇಜ್‌ನೊಂದಿಗೆ, ಈಗ ಶುರು ಮಾಡಿರುವ ಹೊಸ ಪ್ರವಾಸ ಪ್ಯಾಕೇಜ್‌ಗಳಲ್ಲಿ ಪುದುಚೇರಿಗೆ ನಾಲ್ಕು ದಿನಗಳ ಪ್ಯಾಕೇಜ್ ಮತ್ತು ಮೈಸೂರು-ಊಟಿ-ಕೊಡೈಕೆನಾಲ್, ಗೋವಾ-ಗೋಕರ್ಣ, ಮುನ್ನಾರ್-ತೆಕ್ಕಡಿ, ಊಟಿ-ಕೂನೂರು-ವಯನಾಡ್ ಮತ್ತು ಕೊಡೈಕೆನಾಲ್-ಮುನ್ನಾರ್‌ಗಳಿಗೆ ಐದು ದಿನಗಳ ಪ್ಯಾಕೇಜ್‌ ಗಳಿವೆ.

ಕೊಡಗಿಗೆ 4,900 ರು.ಗಳಿಂದ ಮೈಸೂರು-ಊಟಿ-ಕೊಡೈಕೆನಾಲ್‌ಗೆ 10,820 ರು.ಗಳವರೆಗೆ ಈ ಪ್ಯಾಕೇಜ್ ಗಳು ಇರುತ್ತದೆ. ಕರ್ನಾಟಕ, ವಿಶೇಷವಾಗಿ ಬೆಂಗಳೂರಿನ ಪ್ರವಾಸಿಗರ ಬೇಡಿಕೆಯನ್ನು ಆಧರಿಸಿ ಹೊಸ ಪ್ಯಾಕೇಜ್‌ಗಳನ್ನು ಪರಿಚಯಿಸಲಾಗಿದೆ ಎಂದು ಕೆಎಸ್‌ಟಿಡಿಸಿಯ ಜನರಲ್ ಮ್ಯಾನೇಜರ್ ಶ್ರೀನಾಥ್ ಕೆ.ಎಸ್. ತಿಳಿದರು.

ಹೊಸದಾಗಿ ಪರಿಚಯಿಸಲಾದ ಪ್ಯಾಕೇಜ್‌ಗಳ ಜೊತೆಗೆ ಮಧುರೈ-ರಾಮೇಶ್ವರಂ- ಕನ್ಯಾಕುಮಾರಿ ಪ್ಯಾಕೇಜ್ ಸಹ ಇದೆ. ಈ ಪ್ಯಾಕೇಜ್‌ಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ.ಈ ಬಾರಿ ಪುದುಚೇರಿ ಮತ್ತು ಮುನ್ನಾರ್‌ ಪ್ರವಾಸಕ್ಕೆ ಹೋಗುವರಿಗಾಗಿಯೇ ಈ ಪ್ಯಾಕೇಜ್ ಗಳನ್ನು ಶುರು ಮಾಡಿದೆ ಎಂದು ಅವರು ಹೇಳಿದರು.

ಶಾಲಾ ರಜಾದಿನಗಳ ಕಾರಣ ಬೇಸಿಗೆಯಲ್ಲಿ ಸಾಮಾನ್ಯವಾಗಿ ಈ ಬೇಡಿಕೆ ಹೆಚ್ಚಾಗಿರುತ್ತದೆ. ಹೆಚ್ಚುತ್ತಿರುವ ಬಿಸಿಲಿನ ಶಾಖವು ಪ್ರವಾಸಿ ಚಟುವಟಿಕೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅವರು ಹೇಳಿದರು.

ಕೆಎಸ್‌ಟಿಡಿಸಿ ವತಿಯಿಂದ ಬೆಂಗಳೂರಿನಿಂದ ವಯನಾಡು, ತಲಕಾವೇರಿ ಮತ್ತು ಮಡಿಕೇರಿ ಪ್ರವಾಸಗಳಿಗೆ ಮಹಿಳೆಯರ ವಿಶೇಷ ಪ್ಯಾಕೇಜ್, ದಕ್ಷಿಣ ಕರ್ನಾಟಕದ ದೇವಾಲಯ ಪ್ರವಾಸ ಮತ್ತು ಬೆಂಗಳೂರಿನಿಂದ ಬೇಲೂರು ಮತ್ತು ಹಳೇಬೀಡಿಗೆ ಒಂದು ದಿನದ ಪಾರಂಪರಿಕ ಪ್ರವಾಸವನ್ನು ಸಹ ಹೊಂದಿದೆ. ಕೆಎಸ್‌ಟಿಡಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕಿಂಗ್‌ಗಳು ಲಭ್ಯವಿದೆ.

ಹೊಸ ಪ್ರವಾಸೋದ್ಯಮ ಪ್ಯಾಕೇಜ್‌ಗಳು

ಕೊಡಗು ಪ್ರವಾಸ: ರು. 4,900 (ಎರಡು ದಿನಗಳು)

ಪಾಂಡಿಚೇರಿ ಪ್ರವಾಸ: ರು. 5,670 (ನಾಲ್ಕು ದಿನಗಳು)

ಐದು ದಿನಗಳ ಪ್ಯಾಕೇಜ್‌ಗಳು

ಮೈಸೂರು-ಊಟಿ-ಕೊಡೈಕೆನಾಲ್: 10,820 ರು.

ಗೋವಾ-ಗೋಕರ್ಣ: 9,690 ರು.

ಮುನ್ನಾರ್-ತೆಕ್ಕಡಿ: 9,690 ರು.

ಊಟಿ-ಕುನ್ನೂರು-ವಯನಾಡು: 10,650 ರು.

ಕೊಡೈಕೆನಾಲ್-ಮುನ್ನಾರ್: 8,970 ರು.