ಹೊರಗೆ ರಣ ಬಿಸಿಲಿದೆ. ಯಾವೂದಕ್ಕೂ ಮನಸ್ಸಿಲ್ಲ. ದೇಹ ವಿಶ್ರಾಂತಿ ಬೇಡುತ್ತಿದೆ. ದೇಹ ಮತ್ತು ಮನಸ್ಸು ಎರಡಕ್ಕೂ ಈಗ ತಂಪು ಬೇಕು. ಎಲ್ಲರಲ್ಲೂ ಬೇಸಿಗೆ ಎಂದರೆ ಉಸ್ಸಪ್ಪಾ ಎಂಬ ಭಾವ. ಆದರೆ ಬೇಸಿಗೆ ಎಂದರೆ ಮಕ್ಕಳ ಪಾಲಿಗೆ ಹಬ್ಬ. ಸಿಗುವ ಎರಡು ತಿಂಗಳ ರಜೆಯನ್ನು ಸಂತೋಷದಿಂದ ಕಳೆಯಲು ಬಯಸುತ್ತಾರೆ. ಊರೂರು ಸುತ್ತುವ ಕನಸುಗಳನ್ನು ಕಾಣುತ್ತಾರೆ. ಈ ಹಾಳು ಬೇಸಿಗೆಯಲ್ಲಿ ಎಲ್ಲಿಗೂ ಹೋಗುವುದು ಬೇಡ ಎಂದು ಮಕ್ಕಳ ಪೋಷಕರು ಘೋಷಿಸಿಬಿಡುತ್ತಾರೆ. ಬಿಸಿಲಿಗೆ ಹೆದರಿ ಮನೆಯಲ್ಲಿ ಮುದುರಿಕೊಂಡು ಕೂರಲಿಕ್ಕೆ ಆಗುತ್ತಾ? ಸುಮ್ಮನೆ ಎದ್ದು ಹೊರ ನಡೆಯಬೇಕು. ಬೇಸಿಗೆಯಲ್ಲೂ ಎಂಜಾಯ್‌ ಮಾಡಬಹುದಾದ ಜಾಗಗಳಿವೆ. ಮುನಿದಿರುವ ಮನಸ್ಸಿಗೆ ರಿಲ್ಯಾಕ್ಸೇಷನ್‌ ಸಿಗುತ್ತದೆ. ಹಾಗಿದ್ದರೆ ಒಂದು ವಾರ ಮನೆಯ ಬಾಗಿಲಿಗೆ ಬೀಗ ಜಡಿದು ಜಾಲಿ ಟ್ರಿಪ್‌ ಮಾಡಿಕೊಂಡು ಬನ್ನಿ!

ಶಿಮ್ಲಾ

ಶಿಮ್ಲಾ(Shimla) ಪ್ರವಾಸಿಗರ ಮೋಸ್ಟ್‌ ಫೇವರಿಟ್‌ ಜಾಗ. ಶಿಮ್ಲಾದಲ್ಲಿ ದಿ ರಿಡ್ಜ್, ಜಖು ದೇವಸ್ಥಾನ, ಗ್ರೀನ್ ವ್ಯಾಲಿ, ಕುಫ್ರಿ, ಕ್ರೈಸ್ಟ್ ಚರ್ಚ್, ತಾರಾ ದೇವಿ ದೇವಸ್ಥಾನ ಸೇರಿದಂತೆ ಇನ್ನು ಹತ್ತಾರು ಆಕರ್ಷಣೀಯ‌ ತಾಣಗಳಿವೆ. ವರ್ಷದ ಯಾವುದೇ ಸಮಯದಲ್ಲಿಯಾದರು ಅಲ್ಲಿಗೆ ಭೇಟಿ ನೀಡಬಹುದು. ಆದರೆ ಬೇಸಿಗೆ ಕಾಲದಲ್ಲಿ ಹೆಚ್ಚಿನ ಪ್ರವಾಸಿಗರು ಶಿಮ್ಲಾಗೆ ಭೇಟಿ ನೀಡುತ್ತಾರೆ. ಶಿಮ್ಲಾ ಹಿಮಾಚಲ ಪ್ರದೇಶದ ರಾಜಧಾನಿಯಾಗಿದ್ದು, ಭಾರತದ ಜನಪ್ರಿಯ ಗಿರಿಧಾಮವಾಗಿದೆ. ಇದು ಸುಮಾರು 2200 ಮೀಟರ್ ಎತ್ತರದಲ್ಲಿದ್ದು, ಬ್ರಿಟಿಷ್ ಕಾಲದಲ್ಲಿ ಅವರ ಬೇಸಿಗೆ ರಾಜಧಾನಿಯಾಗಿ ಖ್ಯಾತಿ ಪಡೆದಿತ್ತು.

Shimla 1

ಡಾರ್ಜಿಲಿಂಗ್

ಡಾರ್ಜಿಲಿಂಗ್‌(Darjeeling) ಟೈಗರ್ ಹಿಲ್‌ ಪಶ್ಚಿಮ ಬಂಗಾಳದಲ್ಲಿದೆ. ಹಿಮಾಲಯನ್‌ ರೈಲ್ವೆ, ಡಾರ್ಜಿಲಿಂಗ್‌ ರೂಪ್‌ ವೇ, ನೈಟಿಂಗಲ್‌ ಪಾರ್ಕ್‌, ಡಾರ್ಜಲಿಂಗ್‌ ರಾಕ್‌ ಗಾರ್ಡನ್‌ ಸೇರಿದಂತೆ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತದೆ. ಈ ಅದ್ಭುತ ಗಿರಿಧಾಮವು ದಿ ಬೆಸ್ಟ್ ಹನಿಮೂನ್‌ ತಾಣವೂ ಆಗಿದೆ. ಎಕರೆಗಟ್ಟಲೆ ಚಹಾ ತೋಟಗಳು ಅಲ್ಲಿ ಬೀಸುವ ತಂಪಾದ ಗಾಳಿ ಹಿತಾನುಭವವನ್ನು ನೀಡುತ್ತದೆ. ಡಾರ್ಜಿಲಿಂಗ್ ಸಮುದ್ರ ಮಟ್ಟದಿಂದ 2,050 ಮೀಟರ್ ಎತ್ತರದಲ್ಲಿದೆ. ವರ್ಷಪೂರ್ತಿ ಹಿತವಾದ ವಾತಾವರಣವನ್ನು ಹೊಂದಿರುತ್ತದೆ. ಗಿರಿಧಾಮ ಪ್ರೇಮಿಗಳು ಹೆಚ್ಚಾಗಿ ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

Darjeeling

ಮುನ್ನಾರ್

ಕೇರಳ ರಾಜ್ಯದ ಆಕರ್ಷಕ ತಾಣವಾದ ಮುನ್ನಾರ್‌(Munnar) ಸಮೃದ್ಧವಾಗಿ ಬೆಳೆದ ಚಹಾದ ತೋಟಗಳಿಗೆ, ಎಕೋ ಪಾಯಿಂಟ್, ಟ್ರೀ ಹೌಸ್‌ಗಳಿಗೆ, ಜೀಪ್‌ ಸಫಾರಿ, ಜಲಪಾತಗಳಿಗೆ ಹೆಸರುವಾಸಿಯಾಗಿದೆ.ಮುನ್ನಾರ್ ಇಡುಕ್ಕಿ ಜಿಲ್ಲೆಯಲ್ಲಿರುವ ಕೇರಳದ ಗಿರಿಧಾಮವಾಗಿದ್ದು, ಮಧುಚಂದ್ರಕ್ಕೂ ಬೆಸ್ಟ್ ಹನಿಮೂನ್‌ ತಾಣವಾಗಿದೆ. ಇದು 1600 ಮೀಟರ್‌ಗಳಷ್ಟು ಎತ್ತರದಲ್ಲಿದೆ. ವರ್ಷವಿಡೀ ಆಹ್ಲಾದಕರವಾದ ವಾತಾವರಣವನ್ನು ಹೊಂದಿರುತ್ತದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಈ ಜಾಗ ಪ್ರವಾಸಿಗರಿಂದ ಕಿಕ್ಕಿರಿದಿರುತ್ತದೆ.

Munnar

ಕೂರ್ಗ್

ಕರ್ನಾಟಕದ ಕೂರ್ಗ್‌(Coorg) ಅತ್ಯದ್ಭುತವಾದ ಗಿರಿಧಾಮವಾಗಿದೆ. ಕುಟುಂಬದ ಜೊತೆ ಬೇಸಿಗೆ ರಜೆಯಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿ ತಲಕಾವೇರಿ, ಜಲಪಾತ, ಮಡಿಕೇರಿಯ ಪ್ರೇಕ್ಷಣೀಯ ಸ್ಥಳಗಳಿವೆ. ಅನೇಕ ಬೆರಗುಗೊಳಿಸುವ ತಾಣಗಳೂ ಇಲ್ಲಿವೆ.

Coorg


ಮನಾಲಿ

ಬೇಸಿಗೆಕಾಲ ಮನಾಲಿಗೆ(Manali) ಭೇಟಿ ನೀಡಲು ಬೆಸ್ಟ್‌ ಸೀಸನ್.‌ ಇಲ್ಲಿ ಹಳೆಯ ಮನಾಲಿ. ಕಣಿವೆಗಳು, ಜೋಗಿನಿ ಜಲಪಾತವಿದೆ. ಅಡ್ವೆಂಚರ್‌ಗೂ ಅವಕಾಶವಿದೆ. ಮನಾಲಿಯು ಪೀರ್ ಪಂಜಾಲ್ ಮತ್ತು ಧೌಲಾಧರ್ ಶ್ರೇಣಿಗಳು ದಿವ್ಯಾನುಭವವನ್ನು ನೀಡುತ್ತದೆ. ಓಕ್, ದೇವದಾರು ಮತ್ತು ಪೈನ್‌ಗಳ ಸೊಂಪಾದ ಕಾಡುಗಳು ಅನನ್ಯವಾದ ಸೊಬಗನ್ನು ಹೊಂದಿದೆ.

Manali