ಭಾರತ ಮತ್ತು ಪಾಕಿಸ್ತಾನ (India-Pakistan) ನಡುವಿನ ರಾಜಕೀಯ ಉದ್ವಿಗ್ನತೆ ಹೆಚ್ಚಾದಂತೆ, ಟರ್ಕಿ ಮತ್ತು ಅಜರ್ಬೈಜಾನ್‌ (Turkey, azerbaijan) ಪ್ರವಾಸವನ್ನು ಭಾರತೀಯರು ತಿರಸ್ಕರಿಸುತ್ತಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಪರ ನಿಂತಿರುವ ಟರ್ಕಿ ಮತ್ತು ಅಜರ್ಬೈಜಾನ್ ವಿರುದ್ಧ ಭಾರತೀಯರು ನಿಲ್ಲುತ್ತಿರುವುದರಿಂದ, ಪ್ರವಾಸಿ ಕ್ಷೇತ್ರದಲ್ಲಿಯೂ ಅದರ ಭಾರೀ ಪರಿಣಾಮಗಳು ಕಂಡು ಬರುತ್ತಿವೆ.

ಪ್ರಮುಖ ಪ್ರವಾಸ ಏಜೆನ್ಸಿಗಳ ವರದಿ ಪ್ರಕಾರ, ಇತ್ತೀಚೆಗೆ ಟರ್ಕಿ ಹಾಗೂ ಅಜರ್ಬೈಜಾನ್‌ಗೆ ಬುಕ್ಕಿಂಗ್‌ಗಳಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಭಾರತೀಯ ಪ್ರವಾಸಿಗರು ಈಗ ರಾಜಕೀಯವಾಗಿ ಸ್ಥಿರ ಮತ್ತು ವೀಸಾ ಸುಲಭವಾಗಿ ಲಭ್ಯವಿರುವ ದೇಶಗಳತ್ತ ಮುಖ ಮಾಡುತ್ತಿದ್ದಾರೆ.

ಭಾರತೀಯರು ಹೋಗಿಬರಬಹುದಾದ ಕೆಲವು ಪ್ರೇಕ್ಷಣೀಯ ಸ್ಥಳಗಳು

ಥೈಲ್ಯಾಂಡ್

ಬ್ಯಾಂಕಾಕ್, ಫುಕೆಟ್, ಕ್ರಾಬಿ ಮುಂತಾದ ಥೈಲ್ಯಾಂಡ್‌ನ ಪ್ರವಾಸ ಸ್ಥಳಗಳು ಭಾರತೀಯರಿಗೆ ಮೊದಲ ಆಯ್ಕೆ. 5–6 ದಿನದ ಪ್ರವಾಸವನ್ನು ₹1 ಲಕ್ಷ – ₹1.4 ಲಕ್ಷದೊಳಗೆ ಮಾಡಬಹುದಾಗಿದೆ. ವೀಸಾ-ಆನ್-ಅರೈವಲ್ ಮತ್ತು ಈ-ವೀಸಾ ವ್ಯವಸ್ಥೆಯು ಈ ದೇಶದ ಪ್ರವಾಸವನ್ನು ಸುಲಭಗೊಳಿಸಿದೆ.

ವಿಯೆಟ್ನಾಂ

ಹೋ ಚಿ ಮಿನ್ ಸಿಟಿ ಮತ್ತು ಹಲಾಂಗ್ ಬೇ ಬೆಳೆದು ಬರುತ್ತಿರುವ ಹೊಸ ಪ್ರವಾಸಿ ಹಾಟ್‌ಸ್ಪಾಟ್‌ಗಳು. ಸಾಂಸ್ಕೃತಿಕ ಸಮೃದ್ಧಿ ಮತ್ತು ಕಡಲ ತೀರದ ಸೊಬಗಿನಿಂದ ಗಮನ ಈ ದೇಶ ಗಮನಸೆಳೆಯುತ್ತಿದೆ. 6–7 ದಿನದ ಪ್ರವಾಸಕ್ಕೆ ₹1 ಲಕ್ಷ – ₹1.3 ಲಕ್ಷ ಹೊರೆಬರುತ್ತದೆ. ವೀಸಾ ಲಭ್ಯತೆ ಸುಲಭವಾಗಿದೆ.

ಇಂಡೋನೇಷ್ಯಾದ ಬಾಲಿ

ಬಾಲಿಯ ತಂಗಾಳಿಯ ಕಡಲ ತೀರ, ಪವಿತ್ರ ಮಂದಿರಗಳು, ಯೋಗಾ ರಿಟ್ರೀಟ್‌ಗಳು ಭಾರತೀಯರನ್ನು ಸೆಳೆಯುತ್ತಿದೆ. ₹1.1 ಲಕ್ಷ – ₹1.4 ಲಕ್ಷದಲ್ಲಿ 6–7 ದಿನದ ಪ್ರವಾಸ ಸಜ್ಜು ಮಾಡಬಹುದು. ವೀಸಾ-ಆನ್-ಅರೈವಲ್ ಸುಲಭವಾಗಿದೆ.

ಶ್ರೀಲಂಕಾ

ಭೌಗೋಳಿಕವಾಗಿ ಹತ್ತಿರವಿರುವ ಶ್ರೀಲಂಕಾ, ಕಡಲತೀರ ವಿಶ್ರಾಂತಿ ಮತ್ತು ಸಂಸ್ಕೃತಿಕ ಪ್ರವಾಸಗಳ ಸಮತೋಲನ ಒದಗಿಸುತ್ತದೆ. ₹1 ಲಕ್ಷ – ₹1.3 ಲಕ್ಷದೊಳಗೆ ಪ್ರವಾಸ ಪ್ಯಾಕೇಜುಗಳು ಲಭ್ಯ. ಈ-ವೀಸಾ ಪ್ರಕ್ರಿಯೆ ಸರಳವಾಗಿದೆ.

ದುಬೈ

ಮರುಭೂಮಿಯಲ್ಲಿ ಸಾಹಸ, ಶಾಪಿಂಗ್ ಹಬ್ಬಗಳು, ಗಗನಚುಂಬಿ ಕಟ್ಟಡಗಳು… ದುಬೈ ಭಾರತೀಯ ಪ್ರವಾಸಿಗರಿಗೆ ಸುಂದರ ನಗರ ಪಾರ್ಟಿ ಅನುಭವ ನೀಡುತ್ತದೆ. ₹1.2 ಲಕ್ಷ – ₹1.5 ಲಕ್ಷದೊಳಗೆ ಪ್ಯಾಕೇಜುಗಳು ಲಭ್ಯ. ಈ-ವೀಸಾ ಸುಲಭಗೊಳಿಸಿದೆ.

ನೇಪಾಳ ಮತ್ತು ಭೂತಾನ್

ವೀಸಾದ ನೆರವಿಲ್ಲದೆ ಈ ನೆರೆ ರಾಷ್ಟ್ರಗಳು ಪ್ರಕೃತಿ, ಶಾಂತಿ ಮತ್ತು ಸಾಂಸ್ಕೃತಿಕ ಸಂಪತ್ತಿನಲ್ಲಿ ಶ್ರೀಮಂತ. ₹80,000 – ₹1.2 ಲಕ್ಷದೊಳಗಿನ ಪ್ಯಾಕೇಜುಗಳು ಲಭ್ಯವಿವೆ.

ಮಲೇಷಿಯಾ-ಸಿಂಗಪೂರ್

ಇದೇ ಪ್ರವಾಸದಲ್ಲಿ ಎರಡು ದೇಶಗಳು! ಥೀಮ್ ಪಾರ್ಕ್‌ಗಳು, ಶಾಪಿಂಗ್ ಮಾಲ್‌ಗಳು, ಸಾಂಸ್ಕೃತಿಕ ಪ್ರವಾಸಗಳ ಮಿಶ್ರಣ. ₹1.2 ಲಕ್ಷ – ₹1.5 ಲಕ್ಷದೊಳಗಿನ 7 ದಿನದ ಪ್ಯಾಕೇಜುಗಳು ಜನಪ್ರಿಯವಾಗಿವೆ.