Tuesday, June 10, 2025
Tuesday, June 10, 2025

ಹಂಪಿಯ ಹಿಪ್ಪಿ ದ್ವೀಪದ ಬಗ್ಗೆ ನಿಮಗೆಷ್ಟು ಗೊತ್ತು?

ಹಿಪ್ಪಿ ದ್ವೀಪದಿಂದ ಪುರಂದರ ಮಂಟಪದ ಕಡೆಗೆ ಹೋಗಬಹುದು. ಇದು ಹಂಪಿಯಲ್ಲಿರುವ ಇತರ ಸ್ಥಳಗಳಂತೆ ಜನಪ್ರಿಯ ಆಕರ್ಷಣೆಯಾಗಿಲ್ಲ. ಆದರೆ ಪ್ರಶಾಂತ ವಾತಾವರಣದಿಂದ ಹಿತಾನುಭವ ಸಿಗುತ್ತದೆ.

ಹಂಪಿ(Hampi) ಕರ್ನಾಟಕದ ಶ್ರೀಮಂತ ಐತಿಹಾಸಿಕ ತಾಣ. ಯುನೆಸ್ಕೋ(UNESCO) ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿಯೂ ಹಂಪಿ ಸ್ಥಾನಪಡೆದಿದೆ. ಪ್ರವಾಸಿಗರು ಮತ್ತು ಇತಿಹಾಸದ ಬಗ್ಗೆ ಆಸಕ್ತಿ ಹೊಂದಿರುವವರಿಗಂತೂ ಹಂಪಿ ಅಚ್ಚುಮೆಚ್ಚಿನ ಸ್ಥಳ. ಹಂಪಿಯ ವೈಭವತೆ ಕಳೆಗುಂದಿದ್ದರೂ ಅಲ್ಲಿನ ಪ್ರತಿ ಕಲ್ಲು ಮತ್ತು ಗೋಪುರಗಳು ಈಗಲೂ ಒಂದೊಂದು ಕತೆಗಳನ್ನು ಹೇಳುತ್ತವೆ. ಹಂಪಿ ಪ್ರಯಾಣ ಮಾಡಲು ಬಯಸುವವರು ಸಾಮಾನ್ಯವಾಗಿ ವಿರೂಪಾಕ್ಷ ದೇವಾಲಯ, ಬಡವಲಿಂಗಿ, ಕಡಲೆಕಾಳು ಗಣೇಶ, ಸಾಸಿವೆಕಾಳು ಗಣೇಶ ಹೀಗೆ ಹತ್ತಾರು ತಾಣಗಳಿಗೆ ಭೇಟಿ ಕೊಡುತ್ತಾರೆ. ಆದರೆ ಬಹುತೇಕರಿಗೆ ಹಂಪಿಯಲ್ಲಿರುವ ಹಿಪ್ಪಿ(Hippie) ದ್ವೀಪದ(Island) ಬಗ್ಗೆ ಗೊತ್ತಿಲ್ಲ. ಅದು ಅಷ್ಟು ಆಕರ್ಷಣೀಯ ತಾಣವಲ್ಲವಾದ್ದರಿಂದ ಅಲ್ಲಿಗೆ ಹೋಗಲು ಹಲವರು ಹಿಂದೇಟು ಹಾಕುತ್ತಾರೆ. ಆದರೆ ಹಿಪ್ಪಿ ದ್ವೀಪದಲ್ಲಿನ ಪ್ರಶಾಂತ ವಾತಾವರಣ ಮನಸೂರೆಗೊಳಿಸುತ್ತದೆ. ಪ್ರವಾಸಿಗರಿಗೆ ಅದ್ಭುತ ಅನುಭವವನ್ನು ನೀಡುತ್ತದೆ. ಹಾಗಿದ್ದರೆ ಹಿಪ್ಪಿ ದ್ವೀಪದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ ಅಲ್ಲವೇ?

ಹಿಪ್ಪಿ ದ್ವೀಪವು ಹಂಪಿಯ ವಿಜಯ ವಿಠ್ಠಲ ದೇವಸ್ಥಾನಕ್ಕೆ ಸಮೀಪದಲ್ಲಿದೆ ಮತ್ತು ಇಲ್ಲಿಗೆ ಹೆಚ್ಚಿನ ಜನರು ಬರುವುದಿಲ್ಲ. ತುಂಗಭದ್ರಾದಲ್ಲಿ ಕೊರಾಕಲ್ ರೈಡ್ ನ ಮೂಲಕ ನೀವು ಹಿಪ್ಪಿ ದ್ವೀಪವನ್ನು ತಲುಪಬಹುದು. ಇದು ಹಂಪಿಯ ಉಳಿದ ಭಾಗಗಳಿಗಿಂತ ಭಿನ್ನವಾಗಿದೆ. ಅಷ್ಟಾಗಿ ಆಕರ್ಷಣೆಯಿಂದ ಕೂಡಿರದ ಈ ತಾಣವನ್ನು ಪ್ರವಾಸಿಗರು ಜನರು ಕೈಬಿಡುತ್ತಾರೆ. ಆದರೆ ಈ ಸ್ಥಳವು ಅತ್ಯಂತ ಸೊಗಸಾಗಿದೆ. ನೆಮ್ಮದಿ ಮತ್ತು ಶಾಂತವಾದ ಪರಿಸರವನ್ನು ಬಯಸುವವರು ಇಲ್ಲಿಗೆ ಭೇಟಿ ನೀಡಬಹುದು. ನಮ್ಮ ರಾಜ್ಯದ ಪ್ರವಾಸಿಗರಿಗಿಂತ ವಿದೇಶಿ ಪ್ರವಾಸಿಗರು ಈ ಸ್ಥಳದ ಬಗ್ಗೆ ಹೆಚ್ಚಿನ ಒಲವನ್ನು ತೋರುತ್ತಾರೆ.
ಹಂಪಿಯ ಇತರ ಪ್ರೇಕ್ಷಣೀಯ ಸ್ಥಳಗಳು

  • ವಿರೂಪಾಕ್ಷ ದೇವಾಲಯ
  • ವಿಠ್ಠಲ ದೇವಾಲಯ
  • ಲೋಟಸ್ ಪ್ಯಾಲೇಸ್
  • ಹಂಪಿ ಬಜಾರ್
  • ಮಾತಂಗ ಹಿಲ್ಸ್‌
  • ದೊಡ್ಡ ಶಿವಲಿಂಗ
  • ಲಕ್ಷ್ಮೀ ನರಸಿಂಹ ದೇವಾಲಯ
  • ಬಡಲಿಂಗಿ ದೇವಾಲಯ
  • ಸಾಸಿವೆ ಕಾಳು ದೇವಾಲಯ
  • ಕಡಲೆಕಾಳು ದೇವಾಲಯ
Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ವ್ಹಾವ್..ವ್ಹಾವ್..ಗೋವಾ!

Read Next

ವ್ಹಾವ್..ವ್ಹಾವ್..ಗೋವಾ!