ದಾವಣಗೆರೆಯನ್ನು ಬೆಣ್ಣೆ ನಗರಿ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲ. ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್‌ ನಗರಿಯೂ ಹೌದು. ತನ್ನ ಶ್ರೀಮಂತವಾದ ಪರಂಪರೆಯಿಂದ ಆ ಜಿಲ್ಲೆ ಹೆಚ್ಚು ಹೆಸರುವಾಸಿಯಾಗಿದೆ. ದಾವಣಗೆರೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳೂ ಇವೆ. ಆದರೆ ಪ್ರವಾಸಿಗರು ದಾವಣಗೆರೆಯನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುವುದಿಲ್ಲ. ಅಲ್ಲಿ ಆಕರ್ಷಕ ಪ್ರವಾಸಿ ತಾಣಗಳಿಲ್ಲ ಎಂದು ಭಾವಿಸಿದ್ದಾರೆ. ದಾವಣಗೆರೆಯ ಪ್ರಸಿದ್ಧ ಜಾಗಗಳ ಕುರಿತಾದ ಮಾಹಿತಿ ಇಲ್ಲಿದೆ.

ಬಾತಿ ಗುಡ್ಡ
ಬಾತಿ ಗುಡ್ಡವು ದಾವಣಗೆರೆಯ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಗುಡ್ಡವು ಜಿಲ್ಲಾ ಕೇಂದ್ರದಿಂದ ಹತ್ತು ಕಿ.ಮೀ ದೂರದಲ್ಲಿದ್ದು, ಹರಿಹರ ರಸ್ತೆಯಲ್ಲಿ ಸಿಗುತ್ತದೆ. ಆ ತಾಣವು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಅಲ್ಲಿನ ವಿಸ್ಮಯ ಸೌಂದರ್ಯವು ಎಂಥವರನ್ನೂ ಆಕರ್ಷಿಸುತ್ತದೆ. ಶಾಂತವಾದ ವಾತಾವರಣದಲ್ಲಿ ಕಾಲ ಕಳೆಯಲು ಬಯಸುವ ಜನರು ಬಾತಿ ಗುಡ್ಡಕ್ಕೆ ಬಾತಿ ಗುಡ್ಡಕ್ಕೆ ಭೇಟಿ ನೀಡಬಹುದು. ಬಾತಿ ಗುಡ್ಡದಲ್ಲಿ ವಿಶೇಷವಾದ ಸಸ್ಯಗಳಿವೆ. ಪಕ್ಷಿಗಳ ಕಲರವ ಮನಸ್ಸಿಗೆ ಮುದ ನೀಡುತ್ತದೆ. ವೀಕೆಂಡ್‌ನಲ್ಲಿ ಈ ಜಾಗಕ್ಕೆ ಟ್ರೆಕ್ಕಿಂಗ್‌ ಹೋದರೆ ಹೆಚ್ಚು ಸೂಕ್ತ.

Baathi Gudda


ಕುಂದುವಾಡ ಕೆರೆ
ದಾವಣಗೆರೆಯ ಮತ್ತೊಂದು ಪ್ರವಾಸಿ ಆಕರ್ಷಣೆ ಎಂದರೆ ಅದು ಕುಂದುವಾಡ ಕೆರೆಯಾಗಿದೆ. ಕೆರೆಯು ಪಿಕ್ನಿಕ್‌ ಸ್ಥಳಕ್ಕೆ ಹೆಚ್ಚು ಪ್ರಸಿದ್ಧಿಯಾಗಿದೆ. ದಾವಣಗೆರೆಯ ಜಿಲ್ಲಾ ಕೇಂದ್ರದಿಂದ ಈ ಕೆರೆಯು ಸರಿ ಸುಮಾರು 12 ಕಿ.ಮಿ ದೂರದಲ್ಲಿದೆ. ಸಮೀಪದಲ್ಲಿರುವ ಗ್ರಾಮಸ್ಥರಿಗೆ ಕೆರೆಯು ಕುಡಿಯುವ ನೀರಿಗೆ ಮೂಲವಾಗಿದೆ. ಈ ಸ್ಥಳದಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ವೀಕ್ಷಿಸಲೆಂದೇ ಪ್ರವಾಸಿಗರು ಬರುತ್ತಾರೆ. ಕೆರೆಯ ಸಮೀಪ ನಿಂತು ಸುಂದರವಾದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಈ ಕೆರೆಗೆ ಭೇಟಿ ನೀಡಬಹುದು.

Kunduvada Lake


ಅನಮಲೈ ವನ್ಯಜೀವಿ ಅಭಯಾರಣ್ಯ
ಅನಮಲೈ ವನ್ಯಜೀವಿ ಅಭಯಾರಣ್ಯವು ದಾವಣಗೆರೆಯ ಪ್ರವಾಸಿ ಆಕರ್ಷಣೆಗಳಲ್ಲಿ ಪ್ರಮುಖವಾದದ್ದು. ವೀಕೆಂಡ್‌ನಲ್ಲಿ ಗೆಳೆಯರು ಮತ್ತು ಮನೆಯ ಮಕ್ಕಳೊಂದಿಗೆ ಇಲ್ಲಿಗೆ ಭೇಟಿ ನೀಡಬಹುದು. ಈ ಅಭಯಾರಣ್ಯದಲ್ಲಿ ಪ್ರವಾಸಿಗರು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳನ್ನು ನೋಡಬಹುದು. ಇದರ ಜೊತೆಗೆ ಅಲ್ಲಿ ಗೌರ್, ಕಾಡುಹಂದಿ, ಆನೆಗಳು, ಚಿಟಾಲ್, ಮುಂಟ್ಜಾಕ್, ದೈತ್ಯಾಕಾರದ ಅಳಿಲುಗಳು ಹಾಗೂ ಮತ್ತಷ್ಟು ವಿಚಿತ್ರ ಪ್ರಾಣಿ ಪಕ್ಷಿಗಳನ್ನು ನೋಡಬಹುದು.

Aanamalai


ಬಗಲಿ ಕಲ್ಲೇಶ್ವರ ದೇವಸ್ಥಾನ
ದಾವಣಗೆರೆಯಲ್ಲಿ ಹತ್ತಾರು ಪುರಾಣ ಪ್ರಸಿದ್ಧ ಪುರಾತನ ದೇವಾಲಯಗಳಿವೆ. ಅವುಗಳಲ್ಲಿ ಬಗಲಿ ಕಲ್ಲೇಶ್ವರ ದೇವಾಲಯವು ಒಂದಾಗಿದೆ. ಇದು ದಾವಣಗೆರೆಯ ಬಗಲಿ ಪಟ್ಟಣದಲ್ಲಿದ್ದು, ಜಿಲ್ಲಾ ಕೇಂದ್ರದಿಂದ ಸರಿ ಸುಮಾರು ಐವತ್ತು ಕಿ.ಮೀ ದೂರದಲ್ಲಿದೆ. ಬಗಲಿ ಕಲ್ಲೇಶ್ವರ ದೇವಸ್ಥಾನವನ್ನು ದಾವಣಗೆರೆ ಜಿಲ್ಲೆಯ ಅತ್ಯಂತ ಪ್ರಸಿದ್ಧ ದೇವಾಲಯ ಎನ್ನಲಾಗುತ್ತದೆ. ಆಲಯದ ಪ್ರತಿ ಸ್ತಂಭಗಳು ಸಂಕೀರ್ಣವಾದ ಕೆತ್ತನೆಗಳಿಂದ ವಿಭಿನ್ನ ಮತ್ತು ವಿಶೇಷವಾಗಿ ಕಾಣುತ್ತದೆ. ದಾವಣಗೆರೆಗೆ ಹೋಗುವವರು ಕಣ್ಮನ ಸೆಳೆಯುವ ವಾಸ್ತುಶಿಲ್ಪ ಶೈಲಿ ಹೊಂದಿರುವ ಈ ದೇವಾಲಯಕ್ಕೆ ತಪ್ಪದೇ ಭೇಟಿ ನೀಡಬೇಕು.

Bagali Kalleshwara temple


ಶಾಂತಿಸಾಗರ ಕೆರೆ
ಕೆರೆಯ ನೋಟವೇ ಪ್ರವಾಸಿಗರನ್ನು ಅರೆ ಕ್ಷಣದಲ್ಲಿಯೇ ಗಕ್ಕಂತ ಸೆಳೆಯುತ್ತದೆ ನಗರದ ಜಂಜಾಟದಿಂದ ಪಾರಾಗಲು ಹಾಗು ಮನಸ್ಸಿಗೆ ಒಂದಿಷ್ಟು ಶಾಂತಿ ಪಡೆಯಲು ಬಯಸುವವರು ದಾವಣಗೆರೆಯ ಶಾಂತಿ ಸಾಗರ ಕೆರೆಗೆ ಭೇಟಿ ಒಮ್ಮೆ ತಪ್ಪದೇ ಭೇಟಿ ನೀಡಬಹುದು. ಶಾಂತಿ ಸಾಗರ ಕೆರೆಯು ದಾವಣಗೆರೆಯ ಹೃದಯಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ. ಈ ಕೆರೆಯು ಏಷ್ಯಾದ ಅತ್ಯಂತ ಹಳೆಯ ನೀರಾವರಿ ಟ್ಯಾಂಕ್ ಆಗಿದ್ದು, ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಕೆರೆಯು 50ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ. ಈ ಕೆರೆಯಲ್ಲಿ ಬೋಟಿಂಗ್‌ ಮಾಡಲು ಅವಕಾಶವಿದೆ.

Shanthi Sagara Lake