ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ (assam CM) ಹಿಮಂತ ಬಿಸ್ವ ಶರ್ಮ (Himanta biswa sarma) ಅವರು ಸೋಮವಾರ ಮಾಡಿದ ಮಹತ್ವದ ಘೋಷಣೆಯಂತೆ, ಗುಹಾಟಿಯಲ್ಲಿ 11 ಫೈವ್ ಸ್ಟಾರ್ ಹೋಟೆಲ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಈ ನಿರ್ಧಾರದಿಂದ ನಗರದ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೆ ಹೊಸ ವೇಗ ಸಿಗಲಿದೆ. ಈ ಘೋಷಣೆಯು ಲೋಕ್‌ಪ್ರಿಯ ಗೋಪೀನಾಥ್ ಬೋರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಎರಡು ಮ್ಯಾರಿಯಟ್ ಹೋಟೆಲ್‌ಗಳ ಭೂಮಿಪೂಜೆ ವೇಳೆ ಹೇಳಿದ್ದಾರೆ.

"ಎರಡು ಮ್ಯಾರಿಯಟ್‌ಗಳು (Marriotts) ವಿಮಾನ ನಿಲ್ದಾಣದ ಬಳಿ, ಎರಡು ತಾಜ್ (Taj) ಹೋಟೆಲ್‌ಗಳು ಏರೋಸಿಟಿಯಲ್ಲಿ, ಲೆಮನ್ ಟ್ರೀ ಹೋಟೆಲ್ ನ್ಯಾಷನಲ್ ಹೈವೇ ಬಳಿ ಹಾಗೂ ರಾಡಿಸನ್ ಬ್ಲೂ ಹೋಟೆಲ್ 100 ಕೊಠಡಿಗಳನ್ನು ಹೆಚ್ಚಿಸಲು ಯೋಜಿಸಿದೆ. ಖಾನಾಪಾರಾದ ತಾಜ್ ವಿವಾಂತಾ ಹೊಸ ತಾಜ್ ಹೋಟೆಲ್‌ನಿಂದ ಬದಲಾಗಲಿದೆ. ಅಲ್ಲದೆ ನಾಲ್ಕು ಇನ್ನಷ್ಟು ಮ್ಯಾರಿಯಟ್‌ಗಳನ್ನು ಅಭಿವೃದ್ಧಿಪಡಿಸಲು ಯೋಜನೆ ಮಾಡಲಾಗಿದೆ,” ಎಂದು ಮುಖ್ಯಮಂತ್ರಿ ಬಿಸ್ವ ಹೇಳಿದ್ದಾರೆ.

ಮುಖ್ಯಮಂತ್ರಿ ಶರ್ಮಾ ಅವರು ಹೋಟೆಲ್‌ಗಳ ಮಹತ್ವವನ್ನು ಉಲ್ಲೇಖಿಸಿ, “ಇವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಸಹಾಯಕವಾಗಲಿವೆ. ಡೆಸ್ಟಿನೇಶನ್ ವೆಡ್ಡಿಂಗ್‌ಗಳು ಈಗ ಹೊಸ ಟ್ರೆಂಡ್ ಆಗಿವೆ. ಈ ಹೊಸ ಹೋಟೆಲ್‌ಗಳು ಶೀಘ್ರವೇ ಜನಪ್ರಿಯವಾಗುತ್ತವೆ ಎಂಬ ವಿಶ್ವಾಸವಿದೆ,” ಎಂದರು.

ಈ ಯೋಜನೆಯು ಪ್ರವಾಸೋದ್ಯಮ ಹಾಗೂ ಹೂಡಿಕೆಯ ಮೂಲಕ ಆರ್ಥಿಕ ಬೆಳವಣಿಗೆಗೆ ಸರಕಾರ ಕೈಗೊಂಡಿರುವ ಪ್ರಯತ್ನದ ಭಾಗವಾಗಿದೆ. ಇತ್ತೀಚೆಗೆ ಉದ್ಯಮಿ ಮುಕೇಶ್ ಅಂಬಾನಿ ಅವರು ಗುವಾಹಟಿಯಲ್ಲಿ ಒಬೆರಾಯ್ ಹೋಟೆಲ್ ಸ್ಥಾಪಿಸುವುದಾಗಿ ಘೋಷಿಸಿದ್ದರು, ಇದು ನಗರವನ್ನು ಐಷಾರಾಮಿ ಪ್ರವಾಸೋದ್ಯಮ ಮತ್ತು ವ್ಯವಹಾರ ಕೇಂದ್ರವಾಗಿ ರೂಪಿಸಲಿದೆ.

ಈ ಎಲ್ಲಾ ಹೋಟೆಲ್‌ಗಳ ಸ್ಥಾಪನೆಯು ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಅಸ್ಸಾಂನ ಆರ್ಥಿಕತೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.