ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯು ಪ್ರವಾಸಿ ತಾಣವಾಗಿ ಸಾಕಷ್ಟು ಪ್ರಸಿದ್ದಿ ಪಡೆದಿದೆ. ಅಲ್ಲಿನ ಪುರಾತನ ದೇವಾಲಯಗಳು,ಕೋಟೆ ಮತ್ತು ಕೊಳಗಳಿಗೆ ಐತಿಹಾಸಿಕ ಕಥೆಯಿದೆ. ಸಾವಿರಾರು ಪ್ರವಾಸಿಗರು ಪ್ರತಿ ದಿನವೂ ಮೇಲುಕೋಟೆಗೆ ಭೇಟಿ ನೀಡುತ್ತಾರೆ.

ರಾಜಧಾನಿ ಬೆಂಗಳೂರಿನಿಂದ ಮೇಲುಕೋಟೆ ಸರಿ ಸುಮಾರು 152 ಕಿ.ಮೀ ದೂರದಲ್ಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಭಾಗಗಳಿಂದ ಜನರು ತಮ್ಮ ವೀಕೆಂಡ್‌ ರಜೆಯಲ್ಲಿ ಮೇಲುಕೋಟೆಗೆ ಪ್ರವಾಸ ಬೆಳೆಸುತ್ತಾರೆ. ಸ್ವಂತ ವಾಹನದಲ್ಲಿ ಮೇಲುಕೋಟೆಗೆ ಪ್ರಯಾಣ ಪ್ರಾರಂಭಿಸಿದರೆ, ಸಾಕಷ್ಟು ಅದ್ಭುತ ತಾಣಗಳನ್ನು ನೋಡಬಹುದು.

ಯೋಗ ನರಸಿಂಹ ಸ್ವಾಮಿ ದೇವಾಲಯ
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿರುವ ಯೋಗ ನರಸಿಂಹ ಸ್ವಾಮಿ ದೇವಾಲಯವು ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಈ ಭವ್ಯವಾದ ಆಲಯವು ಸಮುದ್ರಮಟ್ಟದಿಂದ ಸುಮಾರು 1777 ಮೀಟರ್ ಎತ್ತರದ ಬೆಟ್ಟದ ಮೇಲೆ ನೆಲೆಸಿದೆ ಎಂಬ ಮಾಹಿತಿಯಿದೆ. ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ನರಸಿಂಹನ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ.

ಈ ದೇವಾಲಯವು ನರಸಿಂಹನ ಆರಾಧನೆಗೆ ಮೀಸಲಾದ ಏಳು ಪವಿತ್ರ ಕೇಂದ್ರಗಳಲ್ಲಿ ಒಂದು ಎನ್ನಲಾಗಿದೆ. ಹಿರಣ್ಯಕಶಪುವಿನ ಮಗನಾದ ಪ್ರಹ್ಲಾದನು ಇಲ್ಲಿನ ವಿಗ್ರಹವನ್ನು ಸ್ಥಾಪಿಸಿದನು ಎನ್ನುತ್ತದೆ ಸ್ಥಳ ಪುರಾಣ.

ಯೋಗ ನರಸಿಂಹಸ್ವಾಮಿ ದೇವಾಲಯ


ಚೆಲುವನಾರಾಯಣ ಸ್ವಾಮಿ ದೇವಾಲಯ
ಬೆಂಗಳೂನಿಂದ ಸುಮಾರು 133 ಕಿ.ಮೀ ದೂರದಲ್ಲಿರುವ ಈ ಚೆಲುವನಾರಾಯಣ ಸ್ವಾಮಿ ದೇವಾಲಯವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಇದು ಸಾಂಸ್ಕೃತಿಕ ಮೈಸೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿದೆ. ಇದು ವೈಷ್ಣವರ ಪ್ರಮುಖ ಕೇಂದ್ರವಾಗಿದ್ದು, ರಾಮಾನುಜಾಚಾರ್ಯರು 14 ವರ್ಷಗಳ ಕಾಲ ಇಲ್ಲಿಯೇ ವಾಸವಿದ್ದರು ಎಂದು ನಂಬಲಾಗಿದೆ. ಇತಿಹಾಸದ ಪ್ರಕಾರ, ರಾಮಾನುಜಾಚಾರ್ಯರು ಇಲ್ಲಿಗೆ ಭೇಟಿ ನೀಡುವ ಮುಂಚೆಯೇ ದೇವಾಲಯವು ಇತ್ತು ಎನ್ನುತ್ತದೆ. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ತಪ್ಪದೇ ಈ ದೇವಾಲಯಕ್ಕೆ ಭೇಟಿ ನೀಡಬೇಕು.

ಚಲುವ ನಾರಾಯಣಸ್ವಾಮಿ

ರಾಯಗೋಪುರ

ಮೇಲುಕೋಟೆಯ ಪ್ರಮುಖ ಆಕರ್ಷಣೆಗಳಲ್ಲಿ ರಾಯ ಗೋಪುರವೂ ಒಂದು. ಈ ಗೋಪುರದ ಬಳಿ ಹತ್ತಾರು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಈ ಸುಂದರವಾದ ಬೃಹತ್‌ ಗೋಪುರವು ಇತಿಹಾಸ ಪ್ರಿಯರಿಗೆ ಇಷ್ಟವಾಗುತ್ತದೆ. ರಾಯ ಗೋಪುರ ವಿಜಯನಗರ ಆಳ್ವಿಕೆಯ ಸಮಯದ ಅಪೂರ್ಣ ರಚನೆಯಾಗಿದೆ. ಇತಿಹಾಸದ ಪ್ರಕಾರ, ರಾತ್ರೋರಾತ್ರಿ ಈ ರಾಯ ಗೋಪುರವನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಈ ಸ್ಥಳವು ಮನಮೋಹಕವಾಗಿದೆ.

ರಾಯಗೋಪುರ
  • ಪ್ರಮುಖ ತಾಣಗಳು

    ಅಕ್ಕ ತಂಗಿ ಕೊಳ
    ಧನುಷ್ಕೋಟೆ