Saturday, June 14, 2025
Saturday, June 14, 2025

ಉತ್ತರ ಕನ್ನಡ ಭಾಗದ ಎರಡು ಮನಮೋಹಕ ಜಲಪಾತಗಳು!

ಉತ್ತರ ಕನ್ನಡ ಭಾಗದಲ್ಲಿ ಹತ್ತಾರು ಮನಮೋಹಕ ಜಲಪಾತಗಳಿವೆ. ವರ್ಷದ ಅಷ್ಟೂ ದಿನವು ಹಾಲ್ನೊರೆಯಂತೆ ಹರಿಯುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಜಲಪಾತಗಳ ಕೆಳಗೆ ನಿಂತರೆ ಕುಂಭದ್ರೋಣ!

ಜಲಪಾತವೆಂದರೆ ಅಲ್ಲಿ ಜೀವಕಳೆ ಇರುತ್ತದೆ. ಪ್ರತಿ ಜಲಪಾತವೂ ಮೈದುಂಬಿ ಹರಿಯುತ್ತದೆ. ಅದರ ಬಿಂಕ,ಬಿನ್ನಾಣ ಮತ್ತು ವೈಯ್ಯಾರಕ್ಕೆ ಪ್ರವಾಸಿಗರು ಹುಚ್ಚೆದ್ದು ಕುಣಿಯುತ್ತಾರೆ. ಅದರ ಸುಮಧುರವಾದ ನಾದಕ್ಕೆ ಮನ ಸೋಲುತ್ತಾರೆ. ಎತ್ತರದಿಂದ ಧುಮ್ಮಿಕ್ಕುವ ಜಲಪಾತವನ್ನು ನೋಡುತ್ತಿದ್ದಂತೆ ಮನದ ದುಗುಡಗಳೆಲ್ಲವೂ ಮಂಗ ಮಾಯವಾಗುತ್ತವೆ. ಅಲ್ಲಿನ ಪ್ರಶಾಂತತೆಗೆ ಮೈಯೊಡ್ಡಿ ನಿಂತರೆ ಮನಸ್ಸು ಹಗುರ.
ಕರ್ನಾಟಕ ಜಲಪಾತಗಳ ತವರು. ಅದರಲ್ಲೂ ಉತ್ತರ ಕನ್ನಡ ಭಾಗದಲ್ಲಿ ಹತ್ತಾರು ಮನಮೋಹಕ ಜಲಪಾತಗಳಿವೆ. ವರ್ಷದ ಅಷ್ಟೂ ದಿನವು ಹಾಲ್ನೊರೆಯಂತೆ ಹರಿಯುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಜಲಪಾತಗಳ ಕೆಳಗೆ ನಿಂತರೆ ಕುಂಭದ್ರೋಣ!
ಉತ್ತರ ಕನ್ನಡ ಭಾಗದ ಪ್ರಸಿದ್ಧ ಜಲಪಾತಗಳಾದ ಉಂಚಳ್ಳಿ ಮತ್ತು ಮಾಗೋಡು ಪ್ರವಾಸಿ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿದೆ. ಆ ಎರಡೂ ಜಲಪಾತಗಳು ಅವ್ಯಕ್ತ ಆನಂದವನ್ನು ಕೊಡುತ್ತದೆ.


ಉಂಚಳ್ಳಿ
ಉತ್ತರ ಕನ್ನಡದಲ್ಲಿರುವ ಪ್ರಖ್ಯಾತ ಜಲಪಾತಗಳಲ್ಲಿ ಒಂದು ಉಂಚಳ್ಳಿ(Unchalli) ಜಲಪಾತ. ಉತ್ತರ ಕನ್ನಡ(Uttara Kannada) ಜಿಲ್ಲೆಯ ಸಿದ್ದಾಪುರದ(Siddapura) ಬಳಿ ಉಂಚಳ್ಳಿ ಜಲಪಾತವಿದೆ. ಲುಶಿಂಗ್ಟನ್ ಎಂಬ ಹೆಸರಿನಿಂದಲೂ ಈ ಜಲಪಾತವನ್ನು ಕರೆಯಲಾಗುತ್ತದೆ. ಈ ಜಲಪಾತವನ್ನು ಮೊದಲು ಗುರುತಿಸಿದ್ದು ಬ್ರಿಟಿಷ್ ಸರ್ಕಾರದ ಅಧಿಕಾರಿಯಾಗಿದ್ದ ಜೆ.ಡಿ.ಲುಶಿಂಗ್ಟನ್ ಎಂಬ ಮಾಹಿತಿಯಿದೆ. 1845ರಲ್ಲಿ ಜೆ.ಡಿ.ಲುಶಿಂಗ್ಟನ್ ಈ ಜಲಪಾತವನ್ನು ಗುರುತಿಸಿದ್ದಾನೆ ಎಂದು ಹೇಳಲಾಗಿದೆ. ಇದೇ ಕಾರಣದಿಂದ ಲುಶಿಂಗ್ಟನ್ ಹೆಸರನ್ನೇ ಈ ಜಲಪಾತಕ್ಕೂ ಇಡಲಾಗಿದೆ. ಇಲ್ಲಿನ ಸುಂದರ ವಾತಾವರಣ ಮನಮೋಹಕವಾಗಿದೆ. ದಟ್ಟ ಅರಣ್ಯದ ನಡುವೆ ಹರಿಯುವ ಜಲಪಾತ ಶೃತಿ ಬದ್ಧವಾಗಿ ಶಬ್ಧ ಮಾಡುತ್ತಾ ನಿರಂತರವಾಗಿ ಹರಿಯುತ್ತದೆ. ಇದು ಅಘನಾಶಿನಿ ನದಿಯ ಒಂದು ಭಾಗ. 116 ಮೀಟರ್, 381 ಅಡಿ ಎತ್ತರದಿಂದ ಇಲ್ಲಿ ನೀರು ಬೀಳುತ್ತದೆ. ಚಾರಣ ಪ್ರೇಮಿಗಳಿಗೆ, ನಿಸರ್ಗ ಪ್ರಿಯರಿಗೆ ತೀರಾ ಇಷ್ಟವಾಗುವಂತಹ ಜಲಪಾತವಿದು. ಉಂಚಳ್ಳಿ ಜಲಪಾತ ಸಿದ್ದಾಪುರದಿಂದ ಸರಿ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ.

Unchalli


ಮಾಗೋಡು
ಉತ್ತರ ಕನ್ನಡದ ಮನಸೆಳೆಯುವ ಮತ್ತೊಂದು ಜಲಪಾತವೆಂದರೆ ಅದು ಮಾಗೋಡು. ಇದು ಯಲ್ಲಾಪುರ ಪಟ್ಟಣಕ್ಕೆ ಅತ್ಯಂತ ಸಮೀಪದಲ್ಲಿದೆ. ಯಲ್ಲಾಪುರದಿಂದ ಮಾಗೋಡು ಜಲಪಾತಕ್ಕೆ 17 ಕಿಲೋಮೀಟರ್ ಇದೆ. ಬೇಡ್ತಿ ನದಿಯು ಇಲ್ಲಿ ಸುಮಾರು 200 ಮೀಟರ್ ಎಂದರೆ 660 ಅಡಿ ಎತ್ತರದಿಂದ ಎರಡು ಹಂತಗಳಲ್ಲಿ ಬೀಳುತ್ತದೆ. ವರ್ಷದ ಸದಾ ಕಾಲ ಈ ಜಲಪಾತವನ್ನು ವೀಕ್ಷಿಸಬಹುದು. ಆದರೆ ಮಳೆಗಾಲದಲ್ಲಿ ಈ ಜಲಪಾತ ಅಕ್ಷರಶಃ ಸ್ವರ್ಗಸೀಮೆ. ಮೈದುಂಬಿ ಜೀವ ಕಳೆಯೊಂದಿಗೆ ಈ ಜಲಪಾತ ಧುಮ್ಮಿಕ್ಕುತ್ತದೆ. ಇಲ್ಲಿಗೆ ರಸ್ತೆ ಸಂಪರ್ಕವೂ ಉತ್ತಮವಾಗಿದೆ. ಮಾಗೋಡು ಜಲಪಾತ ಸದಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಲ್ಲಿನ ಹಚ್ಚ ಹಸಿರಿನ ಶಾಂತ ವಾತಾವರಣದಿಂದ ಪ್ರವಾಸಿಗರು ಸಂತಸಪಡುತ್ತಾರೆ.

ಮಾಗೋಡು

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ವ್ಹಾವ್..ವ್ಹಾವ್..ಗೋವಾ!

Read Next

ವ್ಹಾವ್..ವ್ಹಾವ್..ಗೋವಾ!