Sunday, April 5, 2026
Sunday, April 5, 2026

ಆರ್ಥಿಕ ಬಲ ತುಂಬುವ MSIL ಚಿಟ್‌ ಫಂಡ್

MSIL ಅತ್ಯಂತ ವಿಶ್ವಾಸಾರ್ಹ ಸಂಸ್ಥೆ. ಸರಕಾರದ ಪ್ರತಿಷ್ಠಿತ ಉದ್ದಿಮೆಯಾಗಿ ಕರ್ನಾಟಕದಾದ್ಯಂತ ಹೆಸರುವಾಸಿಯಾಗಿದೆ. ಲಕ್ಷಾಂತರ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡಿದೆ. ಸುದೀರ್ಘ ಐವತ್ತು ವರ್ಷಗಳ ಹಿನ್ನೆಲೆಯಿರುವ ಎಂಎಸ್‌ಐಎಲ್‌ ವ್ಯಾವಹಾರಿಕ ಸಂಸ್ಥೆ ಮಾತ್ರವಲ್ಲದೆ, ಜನ ಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸುವ ಮತ್ತು ಅವರನ್ನು ಆರ್ಥಿಕವಾಗಿ ಬಲಪಡಿಸುವ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಮಾಡುತ್ತಿದೆ. ಆ ಪೈಕಿ ಎಂಎಸ್‌ಐಲ್‌ ಟೂರ್ಸ್‌ & ಟ್ರಾವೆಲ್ಸ್‌ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

ಮನುಷ್ಯನಿಗೆ ಹುಟ್ಟಿನಿಂದಲೇ ಪ್ರವಾಸದ ಮತ್ತು ಹುಡುಕಾಟದ ಹಂಬಲವಿರುತ್ತದೆ. ಹೊಸ ಜಾಗಗಳನ್ನು ನೋಡುವುದು, ಭಿನ್ನ ಸಂಸ್ಕೃತಿಗಳನ್ನು ಅರಿಯುವುದು, ಪ್ರಕೃತಿಯ ಮಡಿಲಲ್ಲಿ ಒಂದಷ್ಟು ಕಾಲ ಕಳೆಯುವುದು ಪ್ರತಿಯೊಬ್ಬರ ಆಸೆ. ಬಿಡುವಿಲ್ಲದ ಜಂಜಾಟದ ಬದುಕಿನಲ್ಲಿ, ಒತ್ತಡಗಳಿಂದ ದೂರವಾಗಿ ಮನಸಿಗೆ ಮುದನೀಡುವ ಸಂಜೀವಿನಿಯೇ 'ಪ್ರವಾಸ'. ಆದರೆ, ಪ್ರವಾಸವೆಂದರೆ ಕೇವಲ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಡುವುದಲ್ಲ. ಅದಕ್ಕೂ ಮುನ್ನ ಮಾಡಬೇಕಾದ ಸಿದ್ಧತೆಗಳು, ಟಿಕೆಟ್ ಬುಕಿಂಗ್, ವಸತಿ ವ್ಯವಸ್ಥೆ, ವೀಸಾ ಪ್ರಕ್ರಿಯೆ—ಇವೆಲ್ಲವೂ ಅನೇಕರಿಗೆ ತಲೆನೋವಿನ ವಿಷಯವಾಗಿ ಪರಿಣಮಿಸುತ್ತದೆ. ಇಂಥ ಎಲ್ಲ ಪ್ರವಾಸದ ಗೊಂದಲಗಳಿಗೆ ತೆರೆ ಎಳೆದು, ನಿಮ್ಮ ಪ್ರಯಾಣವನ್ನು ಸುಗಮ, ಸುರಕ್ಷಿತ ಹಾಗೂ ಆನಂದದಾಯಕವಾಗಿಸಲು ಸದಾ ಸಿದ್ಧವಿರುವ ಕರ್ನಾಟಕ ಸರಕಾರದ ಹೆಮ್ಮೆಯ ಸಂಸ್ಥೆಯೇ ಎಂಎಸ್‌ಐಎಲ್ ಟೂರ್ಸ್ ಅಂಡ್ ಟ್ರಾವೆಲ್ಸ್

ಇದನ್ನೂ ಓದಿ: ವಿದೇಶದ ಹಿಮಾಲಯದಲ್ಲಿ ಜನಗಣಮನ ಕೇಳುವ ಖುಷಿ!

ವಿಶ್ವಾಸವೇ ಅಸ್ತ್ರ-ನಂಬಿಕೆಯೇ ಆಸ್ತಿ

ಇಂದಿನ ದಿನಗಳಲ್ಲಿ ಗೂಗಲ್‌ನಲ್ಲಿ ತಡಕಾಡಿದರೆ ಸಾಕು ನೂರಾರು ಟ್ರಾವೆಲ್ ಏಜೆನ್ಸಿಗಳು, ಆ್ಯಪ್‌ಗಳು ಲಭ್ಯವಿವೆ. ಆಕರ್ಷಕ ಜಾಹೀರಾತುಗಳನ್ನು ನೀಡಿ ಗ್ರಾಹಕರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆದರೆ, ಈ ಆನ್‌ಲೈನ್ ಜಗತ್ತಿನಲ್ಲಿ ಯಾವುದು ಸತ್ಯ, ಯಾವುದು ಮೋಸ ಎಂದು ತಿಳಿಯುವುದು ಕಷ್ಟ. ಕಡಿಮೆ ಬೆಲೆಯ ಆಮಿಷವೊಡ್ಡಿ, ಕೊನೆಗೆ ಹಿಡನ್ ಚಾರ್ಜ್ ಹೆಸರಿನಲ್ಲಿ ಸುಲಿಗೆ ಮಾಡುವ, ಸರಿಯಾದ ಮಾರ್ಗದರ್ಶನ ನೀಡದೆ ಪ್ರವಾಸಿಗರನ್ನು ಅತಂತ್ರರನ್ನಾಗಿಸುವ ಘಟನೆಗಳು ಪ್ರತಿದಿನ ವರದಿಯಾಗುತ್ತಿವೆ. ವಿಶೇಷವಾಗಿ ಕುಟುಂಬದೊಂದಿಗೆ ಅಥವಾ ಹಿರಿಯ ನಾಗರಿಕರೊಂದಿಗೆ ಪ್ರಯಾಣಿಸುವಾಗ ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ಅತ್ಯಂತ ಮುಖ್ಯವಾಗುತ್ತದೆ. ಇಂಥ ಸಂದರ್ಭದಲ್ಲಿ ನಮಗೆ ನೆನಪಾಗುವುದು ನಂಬಿಕೆಗೆ ಅರ್ಹವಾದ, ಪಾರದರ್ಶಕವಾದ ಹಾಗೂ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವ ಸಂಸ್ಥೆ. ಆ ನಂಬಿಕೆಯ ಕಿರೀಟವೇ ಎಂಎಸ್‌ಐಎಲ್ (ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್).

ವಿಶ್ವಾಸಾರ್ಹತೆಯ ಪ್ರತೀಕ: ಎಂಎಸ್‌ಐಎಲ್ ಟೂರ್ಸ್ ಅಂಡ್ ಟ್ರಾವೆಲ್ಸ್

ಕರ್ನಾಟಕ ಸರಕಾರದ ಪ್ರತಿಷ್ಠಿತ ಉದ್ದಿಮೆಯಾದ ಎಂಎಸ್‌ಐಎಲ್, ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡಿಗರ ವಿಶ್ವಾಸವನ್ನು ಉಳಿಸಿಕೊಂಡು ಬಂದಿದೆ. ಕೇವಲ ವ್ಯಾಪಾರ-ವಹಿವಾಟಿಗೆ ಮಾತ್ರ ಸೀಮಿತವಾಗದೆ, ಜನಸಾಮಾನ್ಯರಿಗೆ ಅತ್ಯುತ್ತಮ ಸೇವೆ ಒದಗಿಸುವ ಉದ್ದೇಶದಿಂದ ಎಂಎಸ್‌ಐಎಲ್ ತನ್ನ 'ಟೂರ್ಸ್ ಅಂಡ್ ಟ್ರಾವೆಲ್ಸ್' ವಿಭಾಗವನ್ನು ಆರಂಭಿಸಿತು. ಲಾಭ ಗಳಿಸುವುದಕ್ಕಿಂತ ಹೆಚ್ಚಾಗಿ, ಪ್ರವಾಸಿಗರಿಗೆ ಗುಣಮಟ್ಟದ, ಸುರಕ್ಷಿತ ಹಾಗೂ ಮೌಲ್ಯಾಧಾರಿತ ಸೇವೆಗಳನ್ನು ಒದಗಿಸುವುದು ಈ ವಿಭಾಗದ ಪ್ರಮುಖ ಗುರಿಯಾಗಿದೆ. ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ, ಇಲ್ಲಿ ಮೋಸ, ಸುಲಿಗೆ ಅಥವಾ ಯಾವುದೇ ರೀತಿಯ ಗುಪ್ತ ಶುಲ್ಕಗಳಿಗೆ ಆಸ್ಪದವಿಲ್ಲ. ನೀವು ನೀಡುವ ಪ್ರತಿಯೊಂದು ರುಪಾಯಿಗೂ ತಕ್ಕ ಮೌಲ್ಯ ಹಾಗೂ ನೆಮ್ಮದಿಯನ್ನು ಎಂಎಸ್‌ಐಎಲ್ ಖಾತರಿಪಡಿಸುತ್ತದೆ.

Untitled design (50)

ಸೂರೊಂದು ಸೇವೆ ಹಲವು

ಎಂಎಸ್‌ಐಎಲ್ ಟೂರ್ಸ್ ಅಂಡ್ ಟ್ರಾವೆಲ್ಸ್ ಕೇವಲ ಟೂರ್ ಪ್ಯಾಕೇಜ್‌ಗಳಿಗೆ ಸೀಮಿತವಾಗಿಲ್ಲ. ಪ್ರವಾಸಕ್ಕೆ ಸಂಬಂಧಿಸಿದ ಎ ಟು ಝಡ್ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ಗ್ರಾಹಕರ ಅಮೂಲ್ಯ ಸಮಯವನ್ನು ಉಳಿಸುತ್ತದೆ.

ವಿಮಾನ, ರೈಲು ಮತ್ತು ಬಸ್ ಟಿಕೆಟ್ ಕಾಯ್ದಿರಿಸುವಿಕೆ

ದೇಶೀಯ ಅಥವಾ ಅಂತಾರಾಷ್ಟ್ರೀಯ ವಿಮಾನಯಾನವಿರಲಿ, ಐಆರ್‌ಸಿಟಿಸಿ ಮೂಲಕ ರೈಲು ಪ್ರಯಾಣವಿರಲಿ ಅಥವಾ ಐಷಾರಾಮಿ ಬಸ್ ಪ್ರಯಾಣವಿರಲಿ—ನಿಮ್ಮ ಅಗತ್ಯಕ್ಕೆ ತಕ್ಕಂತೆ, ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಟಿಕೆಟ್ ಬುಕಿಂಗ್ ಮಾಡಿಕೊಡಲಾಗುತ್ತದೆ. ನಿಮ್ಮ ಬಜೆಟ್ ಮತ್ತು ಸಮಯಕ್ಕೆ ಅನುಗುಣವಾಗಿ ಉತ್ತಮ ವಿಮಾನಯಾನ ಸಂಸ್ಥೆಗಳನ್ನು ಆಯ್ಕೆ ಮಾಡಲು ಇಲ್ಲಿನ ಪರಿಣಿತ ಸಿಬ್ಬಂದಿ ನೆರವಾಗುತ್ತಾರೆ.

ವೀಸಾ ಮತ್ತು ಪಾಸ್‌ಪೋರ್ಟ್ ನೆರವು

ವಿದೇಶ ಪ್ರವಾಸ ಕೈಗೊಳ್ಳುವವರಿಗೆ ವೀಸಾ ಪ್ರಕ್ರಿಯೆ ಒಂದು ದೊಡ್ಡ ತಲೆನೋವು. ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ಕಟ್ಟುನಿಟ್ಟಾದ ನಿಯಮಗಳಿರುತ್ತವೆ. ಎಂಎಸ್‌ಐಎಲ್‌ನ ಅನುಭವಿ ತಂಡವು, ವೀಸಾ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡುವುದರಿಂದ ಹಿಡಿದು, ಅಗತ್ಯ ದಾಖಲೆಗಳನ್ನು ಒದಗಿಸುವವರೆಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ. ಹಾಗೆಯೇ, ಹೊಸ ಪಾಸ್‌ಪೋರ್ಟ್ ಪಡೆಯಲು ಅಥವಾ ನವೀಕರಿಸಲು ಬೇಕಾದ ನೆರವನ್ನೂ ಒದಗಿಸುತ್ತದೆ.

ವಿದೇಶಿ ವಿನಿಮಯ

ವಿದೇಶಕ್ಕೆ ಹೋದಾಗ ಹಣಕಾಸಿನ ವಹಿವಾಟು ಅತ್ಯಂತ ಪ್ರಮುಖ. ಅಧಿಕೃತ ಮತ್ತು ಸುರಕ್ಷಿತ ವಿದೇಶಿ ವಿನಿಮಯ (Forex) ಸೇವೆಯನ್ನು ಎಂಎಸ್‌ಐಎಲ್ ಒದಗಿಸುತ್ತದೆ. ಪ್ರಯಾಣಿಕರ ಚೆಕ್‌ಗಳು, ಫಾರೆಕ್ಸ್ ಕಾರ್ಡ್‌ಗಳು ಮತ್ತು ನಗದು ವಿನಿಮಯವನ್ನು ಯಾವುದೇ ಅಡೆತಡೆಯಿಲ್ಲದೆ, ಆರ್.ಬಿ.ಐ ನಿಯಮಾವಳಿಗಳ ಪ್ರಕಾರ ಉತ್ತಮ ವಿನಿಮಯ ದರದಲ್ಲಿ ಪಡೆಯಬಹುದು.

ಹೊಟೇಲ್ ಬುಕಿಂಗ್ ಮತ್ತು ವಸತಿ ವ್ಯವಸ್ಥೆ

ನಿಮ್ಮ ಬಜೆಟ್‌ಗೆ ತಕ್ಕಂತೆ ಸ್ಟಾರ್ ಹೊಟೇಲ್ ಗಳು, ರೆಸಾರ್ಟ್‌ಗಳು, ಹೋಮ್‌ಸ್ಟೇಗಳು ಅಥವಾ ಬಜೆಟ್ ಹೊಟೇಲ್‌ಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಾದರೂ ಕಾಯ್ದಿರಿಸುವ ಸೌಲಭ್ಯ ಇಲ್ಲಿದೆ. ಕುಟುಂಬ, ಒಂಟಿ ಪ್ರಯಾಣಿಕರು ಅಥವಾ ಕಾರ್ಪೊರೇಟ್ ಗುಂಪುಗಳಿಗೆ ಹೊಂದುವಂಥ ಅತ್ಯುತ್ತಮ ವಸತಿ ವ್ಯವಸ್ಥೆಯನ್ನು ಖಾತ್ರಿಪಡಿಸಲಾಗುತ್ತದೆ.

ಪ್ರವಾಸಿ ವಿಮೆ

ಪ್ರಯಾಣದ ಸಮಯದಲ್ಲಿ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು, ಬ್ಯಾಗೇಜ್ ಕಳೆದುಹೋಗುವುದು ಅಥವಾ ವಿಮಾನ ರದ್ದಾಗುವಂಥ ತುರ್ತು ಸಂದರ್ಭಗಳನ್ನು ಎದುರಿಸಲು ಪ್ರವಾಸಿ ವಿಮೆ ಅತ್ಯಗತ್ಯ. ಎಂಎಸ್‌ಐಎಲ್ ಅತ್ಯುತ್ತಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುವ ಮೂಲಕ ನಿಮ್ಮ ಪ್ರಯಾಣವನ್ನು ಚಿಂತಾರಹಿತವಾಗಿಸುತ್ತದೆ.

ಆಕರ್ಷಕ ಮತ್ತು ವೈವಿಧ್ಯಮಯ ಪ್ರವಾಸಿ ಪ್ಯಾಕೇಜ್‌ಗಳು

ಗ್ರಾಹಕರ ಅಭಿರುಚಿ ಮತ್ತು ಬಜೆಟ್‌ಗೆ ಅನುಗುಣವಾಗಿ ಎಂಎಸ್‌ಐಎಲ್ ಟೂರ್ಸ್ ಅಂಡ್ ಟ್ರಾವೆಲ್ಸ್ ನೂರಾರು ಆಕರ್ಷಕ ಪ್ಯಾಕೇಜ್‌ಗಳನ್ನು ವಿನ್ಯಾಸಗೊಳಿಸಿದೆ.

ದೇಶೀಯ ಪ್ರವಾಸಗಳು

ಧಾರ್ಮಿಕ ಪ್ರವಾಸ

ಕಾಶಿ-ಪ್ರಯಾಗರಾಜ್-ಗಯಾ, ಚಾರ್‌ಧಾಮ್ ಯಾತ್ರೆ, ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ, ತಿರುಪತಿ ಬಾಲಾಜಿ, ಮಧುರೈ-ರಾಮೇಶ್ವರಂ-ಕನ್ಯಾಕುಮಾರಿ ಮುಂತಾದ ಪುಣ್ಯಕ್ಷೇತ್ರಗಳ ದರ್ಶನವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಯೋಜಿಸಲಾಗುತ್ತದೆ. ಹಿರಿಯ ನಾಗರಿಕರಿಗೆ ವಿಶೇಷ ಗಮನ ಮತ್ತು ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಪ್ರಕೃತಿ ಸೌಂದರ್ಯದ ತಾಣಗಳು

ದೇವರ ನಾಡು ಕೇರಳದ ಬ್ಯಾಕ್ ವಾಟರ್ ಮತ್ತು ಮುನ್ನಾರ್, ಗೋವಾದ ಕಡಲತೀರಗಳು, ಹಿಮಾಚಲ ಪ್ರದೇಶದ ಶಿಮ್ಲಾ-ಕುಲು-ಮನಾಲಿ, ಸಿಕ್ಕಿಂ-ಡಾರ್ಜಿಲಿಂಗ್‌ನ ಹಿಮಚ್ಛಾದಿತ ಪರ್ವತಗಳು, ಅಂಡಮಾನ್ ನಿಕೋಬಾರ್ ದ್ವೀಪಗಳ ಅಚ್ಚರಿಯ ಪ್ರವಾಸ—ಹೀಗೆ ಪ್ರಕೃತಿ ಪ್ರಿಯರಿಗಾಗಿ ವಿಶೇಷ ಪ್ಯಾಕೇಜ್‌ಗಳಿವೆ.

ಪಾರಂಪರಿಕ ತಾಣಗಳು

ರಾಜಸ್ಥಾನದ ಕೋಟೆ-ಕೊತ್ತಲಗಳು, ದೆಹಲಿ-ಆಗ್ರಾ-ಜೈಪುರ (ಗೋಲ್ಡನ್ ಟ್ರಯಾಂಗಲ್), ಅಜಂತಾ-ಎಲ್ಲೋರಾ ಗುಹೆಗಳು ಮುಂತಾದ ಐತಿಹಾಸಿಕ ತಾಣಗಳ ಪರಿಚಯಿಸುವ ಪ್ರವಾಸಗಳು ಲಭ್ಯವಿದೆ.

ಅಂತಾರಾಷ್ಟ್ರೀಯ ಪ್ರವಾಸಗಳು

ಏಷ್ಯಾ ಪ್ರವಾಸ

ಸಿಂಗಾಪುರ, ಮಲೇಷಿಯಾ, ಥೈಲ್ಯಾಂಡ್, ಶ್ರೀಲಂಕಾ, ಮಾಲ್ಡೀವ್ಸ್, ವಿಯೆಟ್ನಾಂ-ಕಾಂಬೋಡಿಯಾ ಮುಂತಾದ ಕಡಿಮೆ ಬಜೆಟ್‌ನ ಆದರೆ ಅತ್ಯದ್ಭುತ ಅನುಭವ ನೀಡುವ ವಿದೇಶಿ ಪ್ರವಾಸಗಳು ಯುವಜನತೆ ಮತ್ತು ಹನಿಮೂನ್ ಜೋಡಿಗಳ ನೆಚ್ಚಿನ ಆಯ್ಕೆಯಾಗಿವೆ.

ಮಧ್ಯಪ್ರಾಚ್ಯ

ದುಬೈ ಶಾಪಿಂಗ್ ಫೆಸ್ಟಿವಲ್, ಅಬುಧಾಬಿ, ಮಸ್ಕತ್ ಪ್ರವಾಸಗಳು ಎಂಎಸ್ ಐ ಎಲ್ ಮೂಲಕ ಮಾಡಿದರೆ ಅದರ ಅನುಭವವೇ ವಿಶೇಷ. ನೀವು ಖಂಡಿತ ಇನ್ನೂ ಹತ್ತು ಮಂದಿಗೆ ರೆಕಮೆಂಡ್ ಮಾಡುವಿರಿ.

ಯುರೋಪ್ ಮತ್ತು ಅಮೆರಿಕ

ಲಂಡನ್, ಪ್ಯಾರಿಸ್, ಸ್ವಿಟ್ಜರ್ ಲ್ಯಾಂಡ್‌ನ ಸುಂದರ ತಾಣಗಳು, ಇಟಲಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಅಮೆರಿಕದ ದೀರ್ಘಾವಧಿ ಪ್ರವಾಸಗಳನ್ನು ಅತ್ಯಂತ ಅಚ್ಚುಕಟ್ಟಾಗಿ, ಯಾವುದೇ ಗೊಂದಲವಿಲ್ಲದಂತೆ ಎಂಎಸ್ ಐಎಲ್ ಆಯೋಜಿಸಿ ಕೊಡುತ್ತದೆ.

ಕಸ್ಟಮೈಸ್ಡ್ ಪ್ರವಾಸಗಳು

ಗುಂಪಿನಲ್ಲಿ ಪ್ರಯಾಣಿಸಲು ಇಷ್ಟಪಡದವರಿಗೆ, ಕೇವಲ ತಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಮಾತ್ರ ಪ್ರವಾಸ ಮಾಡಬಯಸುವವರಿಗೆ ಎಂಎಸ್‌ಐಎಲ್ 'ಕಸ್ಟಮೈಸ್ಡ್ ಪ್ಯಾಕೇಜ್'ಗಳನ್ನು ಒದಗಿಸುತ್ತದೆ. ನೀವು ಬಯಸುವ ದಿನಾಂಕ, ನೀವು ಇಚ್ಛಿಸುವ ಹೊಟೇಲ್ ಮತ್ತು ನೀವು ನೋಡಬಯಸುವ ಸ್ಥಳಗಳನ್ನು ಸೇರಿಸಿ ವಿಶೇಷ ಪ್ರವಾಸವನ್ನು ವಿನ್ಯಾಸಗೊಳಿಸಿಕೊಡುವುದು ಇವರ ಹೆಗ್ಗಳಿಕೆ.

ಸರ್ಕಾರಿ ನೌಕರರಿಗೆ ಮತ್ತು ಕಾರ್ಪೊರೇಟ್ ವಲಯಕ್ಕೆ ವಿಶೇಷ ಸೇವೆಗಳು

ಎಲ್‌ಟಿಸಿ (LTC / HTC) ಸೌಲಭ್ಯ

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಉದ್ಯಮಗಳ ನೌಕರರು ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ತಮ್ಮ ರಜೆ ಪ್ರಯಾಣ ರಿಯಾಯಿತಿ (LTC) ಸೌಲಭ್ಯವನ್ನು ಬಳಸಿಕೊಳ್ಳಲು ಎಂಎಸ್‌ಐಎಲ್ ಟೂರ್ಸ್ ಅಂಡ್ ಟ್ರಾವೆಲ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಸರ್ಕಾರಿ ನಿಯಮಾವಳಿಗಳ ಪ್ರಕಾರವೇ ಅಧಿಕೃತ ಬಿಲ್‌ಗಳು ಮತ್ತು ಪ್ರಮಾಣಪತ್ರಗಳನ್ನು ಒದಗಿಸುವುದರಿಂದ, ಆಡಿಟ್ ಅಥವಾ ಕ್ಲೈಮ್ ಪ್ರಕ್ರಿಯೆಯಲ್ಲಿ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ. ಅನೇಕ ಸರಕಾರಿ ಇಲಾಖೆಗಳು ತಮ್ಮ ನೌಕರರ ಪ್ರವಾಸಕ್ಕಾಗಿ ಅಧಿಕೃತವಾಗಿ ಎಂಎಸ್‌ಐಎಲ್ ಅನ್ನು ಆಯ್ಕೆ ಮಾಡಿಕೊಂಡಿರುವುದು ಇದರ ವಿಶ್ವಾಸಾರ್ಹತೆಗೆ ಸಾಕ್ಷಿ.

ಕಾರ್ಪೊರೇಟ್ ಟ್ರಾವೆಲ್ ಮ್ಯಾನೇಜ್ ಮೆಂಟ್

ಖಾಸಗಿ ಕಂಪೆನಿಗಳ ಉದ್ಯೋಗಿಗಳ ಅಧಿಕೃತ ಪ್ರಯಾಣ, ಕಾನ್ಫರೆನ್ಸ್ (MICE - Meetings, Incentives, Conferences, and Exhibitions), ಕಾರ್ಪೊರೇಟ್ ಟೀಮ್ ಬಿಲ್ಡಿಂಗ್ ಪ್ರವಾಸಗಳನ್ನು ನಿರ್ವಹಿಸುವಲ್ಲಿಯೂ ಎಂಎಸ್‌ಐಎಲ್ ಪರಿಣತಿ ಹೊಂದಿದೆ.

Untitled design (51)

ಪ್ರಪಂಚ ಒಂದು ಪುಸ್ತಕವಿದ್ದಂತೆ, ಪ್ರವಾಸ ಮಾಡದವರು ಕೇವಲ ಪುಸ್ತಕದ ಒಂದು ಪುಟವನ್ನು ಮಾತ್ರ ಓದಿದಂತೆ ಎಂಬ ಮಾತಿದೆ. ಬದುಕಿನ ಅತ್ಯಮೂಲ್ಯ ಕ್ಷಣಗಳನ್ನು ಕಟ್ಟಿಕೊಡುವ ಪ್ರವಾಸವು ಎಂದಿಗೂ ಮಧುರವಾದ ನೆನಪಾಗಿ ಉಳಿಯಬೇಕು. ಆ ನೆನಪುಗಳಿಗೆ ಯಾವುದೇ ಕಹಿ ಘಟನೆಗಳು ಅಡ್ಡಿಯಾಗಬಾರದು. ಅದಕ್ಕಾಗಿಯೇ ನಿಮ್ಮ ಮುಂದಿನ ಯಾವುದೇ ಪ್ರವಾಸದ ಯೋಜನೆಯಿದ್ದರೂ, ಅದು ದೇಶದೊಳಗಿರಲಿ ಅಥವಾ ಸಾಗರದಾಚೆಗಿರಲಿ, ಒಮ್ಮೆ ಎಂಎಸ್‌ಐಎಲ್ ಟೂರ್ಸ್ ಅಂಡ್ ಟ್ರಾವೆಲ್ಸ್ ಎಂಬ ಆಪ್ತಮಿತ್ರನನ್ನು ನೆನಪಿಸಿಕೊಳ್ಳಿ. ನಿಮ್ಮ ಪ್ರವಾಸದ ಕನಸುಗಳಿಗೆ ಬಣ್ಣ ತುಂಬಲು, ನಿಮ್ಮ ಪ್ರಯಾಣದ ಪ್ರತಿಯೊಂದು ಹೆಜ್ಜೆಯಲ್ಲೂ ವಿಶ್ವಾಸದ ನಗುವಿನೊಂದಿಗೆ ಎಂಎಸ್‌ಐಎಲ್ ನಿಮ್ಮೊಂದಿಗಿರುತ್ತದೆ.

ಇದನ್ನೂ ಓದಿ: ಸಾವಿರಾರು ಕುಟುಂಬಗಳಿಗೆ ಸರಿ ದಾರಿ ತೋರಿದ ಧರ್ಮಸ್ಥಳ ʼಸಿರಿʼ ಗ್ರಾಮೋದ್ಯೋಗ ಸಂಸ್ಥೆ

ಎಂಎಸ್ ಐ ಎಲ್ ನಿಮ್ಮ ಆಯ್ಕೆ ಯಾಕಾಗಬೇಕು?

ಇದು ಕರ್ನಾಟಕ ಸರಕಾರದ ಅಧಿಕೃತ ಉದ್ಯಮ. ನಿಮ್ಮ ಹಣ ಮತ್ತು ಪ್ರವಾಸ ಎರಡೂ ಇಲ್ಲಿ ಸಂಪೂರ್ಣ ಸುರಕ್ಷಿತ. ಹೇಳುವ ದರವೇ ಅಂತಿಮ. ಪ್ರವಾಸದ ಮಧ್ಯದಲ್ಲಿ ಏಕಾಏಕಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುವಂಥ ಯಾವ ಪದ್ಧತಿಯೂ ಇಲ್ಲಿಲ್ಲ. ಎಲ್ಲವೂ ಸ್ಪಷ್ಟ ಮತ್ತು ಪಾರದರ್ಶಕ. ಪ್ರವಾಸೋದ್ಯಮದಲ್ಲಿ ದಶಕಗಳ ಅನುಭವವಿರುವ, ಭಾಷೆ ಮತ್ತು ಸ್ಥಳಗಳ ಬಗ್ಗೆ ಆಳವಾದ ಜ್ಞಾನವಿರುವ ವೃತ್ತಿಪರರ ತಂಡವಿದೆ. ಅತ್ಯುತ್ತಮ ಹೊಟೇಲ್‌ಗಳು ಹಾಗೂ ಆರಾಮದಾಯಕ ವಾಹನಗಳ ಖಾತರಿ. ಪ್ರವಾಸದ ಪ್ರತಿ ಹಂತದಲ್ಲೂ ನಿರಂತರ ಮಾರ್ಗದರ್ಶನ ಮತ್ತು ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ವ್ಯವಸ್ಥೆ. LTC/HTC ಕ್ಲೈಮ್‌ಗಳಿಗಾಗಿ ನಿಯಮಾನುಸಾರ ಅಧಿಕೃತ ಬಿಲ್ಲಿಂಗ್ ಸೌಲಭ್ಯ

MSIL ಚಿಟ್‌ ಫಂಡ್: ಆರ್ಥಿಕ ಚೈತನ್ಯ

ವಿಶ್ವಾಸಾರ್ಹ ಸರಕಾರಿ ಸಂಸ್ಥೆ, ಪಾರದರ್ಶಕ ಕಾರ್ಯಾಚರಣೆ, ಸುಲಭ ಹಣದ ಲಭ್ಯತೆ, ಆಕರ್ಷಕ ಗಳಿಕೆಯ ಅವಕಾಶ ,ತೊಡಗಿಸಿದ ಹಣಕ್ಕೆ ಭದ್ರತೆ ಈ ಧ್ಯೇಯಗಳನ್ನು ಕೇಳುತ್ತಿದ್ದಂತೆ ನಾಡಿನ ಪ್ರತಿಯೊಬ್ಬರಿಗೂ ನೆನಪಾಗುವುದು MSIL ಚಿಟ್‌ ಫಂಡ್. ಇದು ‌ ಕರ್ನಾಟಕದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕವಾಗಿ ಚೈತನ್ಯ ತುಂಬಿ ಅವರಿಗೆ ನೆರವು ನೀಡಿದೆ. MSIL ಚಿಟ್‌ ಫಂಡ್‌ ನಂಬಿಕೆ ಮತ್ತು ವಿಶ್ವಾಸಕ್ಕೆ ಹೆಸರುವಾಸಿ. ಪ್ರತಿಷ್ಠಿತ ಸ್ಕೋಚ್‌ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಚಿಟ್‌ ಫಂಡ್‌ ಮೂಲಕ ಗ್ರಾಹಕರು ಸುರಕ್ಷಿತವಾಗಿ ಹೂಡಿಕೆ ಮಾಡಿ ಸಾಲ ಪಡೆಯಬಹುದು. MSIL ಹೂಡಿಕೆ ಮತ್ತು ಸಾಲ ಎರಡಕ್ಕೂ ವಿಶಿಷ್ಟ ಅವಕಾಶವನ್ನು ಗ್ರಾಹಕರಿಗೆ ಒದಗಿಸಿಕೊಡುತ್ತದೆ. ಜನರು ಸಣ್ಣ ಉಳಿತಾಯದ ಮೂಲಕ ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಸಮಾಜದ ಎಲ್ಲಾ ವರ್ಗಗಳಿಗೆ, ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ಜನರಿಗೆ ಸುಲಭವಾಗಿ ಆರ್ಥಿಕವಾಗಿ ನೆರವು ನೀಡುತ್ತಿದೆ. ಜನರು ಮಾಸಿಕ 2,500 ರುಪಾಯಿಯಿಂದ ಒಂದು ಲಕ್ಷದವರೆಗೂ ಹೂಡಿಕೆ ಮಾಡಬಹುದು. ಒಂದು ಲಕ್ಷದಿಂದ ಐವತ್ತು ಲಕ್ಷದವರೆಗೂ ಉಳಿತಾಯ ಮಾಡಿ ಹಣ ವಾಪಸ್‌ ಪಡೆಯಬಹುದು. ಕರ್ನಾಟಕದಾದ್ಯಂತ MSIL ಚಿಟ್‌ ಫಂಡ್‌ನ ನೂರಾರು ಶಾಖೆಗಳಿವೆ. ಚಿಟ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡಿದ ಲಕ್ಷಾಂತರ ಕುಟುಂಬಗಳು ಇಂದು ಆರ್ಥಿಕವಾಗಿ ಸಬಲಗೊಂಡಿವೆ.

Untitled design (48)

ಪ್ರವಾಸಿ ತಾಣಗಳ ಪ್ರವೇಶಕ್ಕೆ ಒಂದೇ ವೇದಿಕೆಯಲ್ಲಿ ಟಿಕೆಟ್

ಸರಕಾರಿ ಸ್ವಾಮ್ಯದ ಉದ್ಯಮಗಳು ಜನರ ಸೇವೆ ಮತ್ತು ಲಾಭ ಎರಡರ ನಡುವೆ ಸಮತೋಲನ ಕಾಯ್ದುಕೊಂಡು ಹೋಗಬೇಕು ಎನ್ನುವುದು ನಮ್ಮ ತತ್ತ್ವ. ಇಂತಹ ಉದ್ಯಮಗಳ ಮೂಲ ಉದ್ದೇಶವನ್ನು ಬಿಟ್ಟುಕೊಡದೆ, ಹೊಸಹೊಸ ಚಟುವಟಿಕೆಗಳನ್ನು ಸೇರಿಸಿಕೊಂಡು, ಎಂಎಸ್ಐಎಲ್ ಅನ್ನು ಮತ್ತಷ್ಟು ವಿಸ್ತರಿಸಬೇಕು ಎನ್ನುವುದು ನಮ್ಮ ಸರಕಾರದ ಸಂಕಲ್ಪವಾಗಿದೆ. ಇಲ್ಲಿ ವಿಶ್ವಾಸಾರ್ಹತೆಯೇ ನಮ್ಮ ಶಕ್ತಿ. ಎಂಎಸ್ಐಎಲ್ ರಾಜ್ಯದ ಮೂಲೆಮೂಲೆಯನ್ನು ತಲುಪುವ ಒಂದು ಬ್ರ್ಯಾಂಡ್ ಆಗಬೇಕು ಎಂಬುದು ನಮ್ಮ ದೂರದೃಷ್ಟಿಯಾಗಿದೆ. ಇದಕ್ಕೆ ತಕ್ಕಂತೆ ಸಂಸ್ಥೆಯು ಲಾಭದ ಹಾದಿಯಲ್ಲಿದೆ. ಮುಂಬರುವ ದಿನಗಳಲ್ಲಿ ಇದಕ್ಕೆ ಮತ್ತಷ್ಟು ಕಸುವು ತುಂಬಲಾಗುವುದು.
ಪ್ರವಾಸಿಗರಿಗೆ ಅನುಕೂಲ ಮಾಡುವ ಉದ್ದೇಶದಿಂದ ಹಲವು ಉಪಕ್ರಮಗಳನ್ನು ಎಂಎಸ್ ಐ ಎಲ್ ಮಾಡುತ್ತಿದೆ. ರಾಜ್ಯ ಮತ್ತು ದೇಶದ ಎಲ್ಲ ಪ್ರವಾಸಿ ತಾಣಗಳ ಪ್ರವೇಶ ಟಿಕೆಟ್ ಗಳನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗಿಸುವ ಉದ್ದೇಶದಿಂದ ವಿನೂತನ ಆ್ಯಪ್ ಅಭಿವೃದ್ಧಿಪಡಿಸುತ್ತಿದೆ. ಸದ್ಯದಲ್ಲೇ ಅದಕ್ಕೆ ಚಾಲನೆ ನೀಡಲಾಗುವುದು. ಉದಾಹರಣೆಗೆ ಮೈಸೂರಿಗೆ ಹೋದ ವ್ಯಕ್ತಿ, ಮೃಗಾಲಯ, ಅರಮನೆ, ಕೆಆರ್ ಎಸ್ ಇತ್ಯಾದಿ ಹೋದ ಕಡೆಯಲ್ಲಾ ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಎಲ್ಲದಕ್ಕೂ ನಮ್ಮ ಆ್ಯಪ್ ಮೂಲಕವೇ ಬುಕ್ ಮಾಡಿಕೊಂಡು ಹೋಗಬಹುದು. ಇದರಿಂದ ಸಮಯ ಕೂಡ ಉಳಿತಾಯ ಆಗುತ್ತದೆ. ಈ ರೀತಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
-ಎಂ ಬಿ ಪಾಟೀಲ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು

ಸಾಮಾನ್ಎಂಯ ಜನರಿಗೆ ಆರ್ಥಿಕ ಭದ್ರತೆ ಒದಗಿಸಿದ್ದೇನೆ
ಎಸ್ ಐ ಎಲ್ ಸರಕಾರಿ ಉದ್ಯಮ ಸಂಸ್ಥೆ. ಕಳೆದ ಐದು ದಶಕಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿ ಲಕ್ಷಾಂತರ ಜನರ ನಂಬಿಕೆಯನ್ನು ಉಳಿಸಿಕೊಂಡಿದೆ. ಸಾಮಾನ್ಯ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತಾ ನೆರವಾಗಿದೆ. ಎಂ ಎಸ್ ಐ ಎಲ್ ನ ಟೂರ್ಸ್ & ಟ್ರಾವೆಲ್ಸ್ ಮೂಲಕ ಈವರೆಗೆ ಸಾವಿರಾರು ಗ್ರಾಹಕರಿಗೆ ದೇಶ-ವಿದೇಶ ತೋರಿಸಿದ್ದೇವೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದ್ದೇವೆ. ನಮ್ಮಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಶೇಷ ಪ್ಯಾಕೇಜ್ ಗಳಿವೆ. ಪ್ರವಾಸೋದ್ಯಮದ ಬಗ್ಗೆ ಜ್ಞಾನವಿರುವ ನುರಿತರ ತಂಡವೂ ನಮ್ಮೊಂದಿಗೆ ಇದೆ. ನಂಬಿಕೆ ಮತ್ತು ವಿಶ್ವಾಸವೇ ನಮ್ಮ ಸಂಸ್ಥೆಯ ಪ್ರಮುಖ ಧ್ಯೇಯ ವಾಕ್ಯ. ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ ಹಾದಿಯಲ್ಲಿ ನಡೆಯುತ್ತಿದ್ದೇವೆ.
- ಸಿ.ಪುಟ್ಟರಂಗ ಶೆಟ್ಟಿ, ಅಧ್ಯಕ್ಷರು, ಎಂಎಸ್‌ಐಎಲ್‌

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಎಂಎಸ್‌ಐಎಲ್ ಟೂರ್ಸ್ ಅಂಡ್ ಟ್ರಾವೆಲ್ಸ್

ಎಂಎಸ್‌ಐಎಲ್ ಭವನ, ಕನ್ನಿಂಗ್‌ಹ್ಯಾಮ್ ರಸ್ತೆ,

ಬೆಂಗಳೂರು - 560052

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat