Friday, October 10, 2025
Friday, October 10, 2025

ಸುರಿಮಳೆಯೇ ಬಂಡವಾಳ

ಮೇಘಾಲಯದ ಮೌಸಿನ್​ರಾಮ್​ನಲ್ಲಿ ಮಳೆಯ ಮ್ಯೂಸಿಯಂ ನಿರ್ಮಾಣ ಆಗಲಿದೆ. ಇದು ಪೂರ್ವ ಖಾಸಿ ಜಿಲ್ಲೆಯ ಒಂದು ಹಳ್ಳಿ. ಮೇಘಾಲಯದ ರಾಜಧಾನಿ ಶಿಲಾಂಗ್​ನಿಂದ ಈ ಭಾಗ 65 ಕಿಮೀ ದೂರದಲ್ಲಿ ಇದೆ. ಇಲ್ಲಿ ಸಾಕಷ್ಟು ಮಳೆ ಆಗುತ್ತದೆ. ಪ್ರತಿ ವರ್ಷ ಇಲ್ಲಿ ಸುಮಾರು 12 ಸಾವಿರ ಮಿಲಿ ಮೀಟರ್ ಮಳೆ ಸುರಿಯುತ್ತದೆ. ಈ ರೀತಿಯ ಲೆಕ್ಕ ಹೇಳಿದರೆ ಕೆಲವರಿಗೆ ಅಷ್ಟು ಸುಲಭದಲ್ಲಿ ಅರ್ಥ ಆಗೋದಿಲ್ಲ.

  • ಅಗಸ್ಟಿನ್ ಜೋಸ್

ಮೇಘಾಲಯವು ಅನೇಕ ಅಚ್ಚರಿಗಳ ತಾಣವಾಗಿದೆ. ಇಲ್ಲಿ ಜಲಪಾತ, ಗುಹೆಗಳು, ದಟ್ಟಾರಣ್ಯಗಳು ಇಲ್ಲಿ ಕಾಣಸಿಗುತ್ತವೆ. ಮಳೆಗಾಲದ ಸಂದರ್ಭದಲ್ಲಿ ಇಲ್ಲಿ ಸ್ವರ್ಗದ ವಾತಾವರಣವೇ ನಿರ್ಮಾಣ ಆಗಿ ಬಿಡುತ್ತದೆ. ಮಳೆಗಾಲದಲ್ಲಿ ಈ ಭಾಗದಲ್ಲಿ ಅನೇಕ ಜಲಪಾತಗಳು ಸೃಷ್ಟಿ ಆಗುತ್ತವೆ. ಮಂಜಿನ ಹನಿ ನೆಲದಿಂದ ಎದ್ದು ಬಂದಂತೆ ಕಾಣುತ್ತವೆ. ಮೇಘಾಲಯ ಇಲ್ಲಿನ ಸರಕಾರ ಒಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ. ಈ ಭಾಗದಲ್ಲಿ ‘ಮಳೆಯ ವಸ್ತು ಸಂಗ್ರಹಾಲಯ’ ನಿರ್ಮಾಣ ಮಾಡಲು ಸರಕಾರ ನಿರ್ಧರಿಸಿದೆ.

ವಿಶ್ವದ ಪ್ರಥಮ

ಮೇಘಾಲಯದ ಮೌಸಿನ್​ರಾಮ್​ನಲ್ಲಿ ಮಳೆಯ ಮ್ಯೂಸಿಯಂ ನಿರ್ಮಾಣ ಆಗಲಿದೆ. ಇದು ಪೂರ್ವ ಖಾಸಿ ಜಿಲ್ಲೆಯ ಒಂದು ಹಳ್ಳಿ. ಮೇಘಾಲಯದ ರಾಜಧಾನಿ ಶಿಲಾಂಗ್​ನಿಂದ ಈ ಭಾಗ 65 ಕಿಮೀ ದೂರದಲ್ಲಿ ಇದೆ. ಇಲ್ಲಿ ಸಾಕಷ್ಟು ಮಳೆ ಆಗುತ್ತದೆ. ಪ್ರತಿ ವರ್ಷ ಇಲ್ಲಿ ಸುಮಾರು 12 ಸಾವಿರ ಮಿಲಿ ಮೀಟರ್ ಮಳೆ ಸುರಿಯುತ್ತದೆ. ಈ ರೀತಿಯ ಲೆಕ್ಕ ಹೇಳಿದರೆ ಕೆಲವರಿಗೆ ಅಷ್ಟು ಸುಲಭದಲ್ಲಿ ಅರ್ಥ ಆಗೋದಿಲ್ಲ. ಚಿಕ್ಕಮಗಳೂರಿನಲ್ಲಿ ಅದೆಷ್ಟು ಮಳೆ ಆಗುತ್ತದೆ ಎಂಬ ಕಲ್ಪನೆ ಅನೇಕರಿಗೆ ಇದೆ. 2024ರಲ್ಲಿ ಒಂದರಲ್ಲೇ ಈ ಭಾಗದಲ್ಲಿ ಒಂದೂವರೆ ಸಾವಿರ ಮಿಲಿ ಮೀಟರ್ ಮಳೆ ಆಗಿತ್ತು. ಅದಕ್ಕಿಂತ ಎಂಟು ಪಟ್ಟು ಹೆಚ್ಚು ಮಳೆ ಈ ಭಾಗದಲ್ಲಿ ಆಗುತ್ತದೆ. ಅಂದರೆ ಅದೆಷ್ಟು ಮಳೆ ಆಗುತ್ತದೆ ಎಂಬುದನ್ನು ನೀವೇ ಊಹಿಸಿ. ಇದು ಭೂಮಿಯ ಅತ್ಯಂತ ತೇವ ಪ್ರದೇಶ ಎಂಬ ಖ್ಯಾತಿಗೂ ಪಾತ್ರವಾಗಿದೆ.

35 ಕೋಟಿ ರೂಪಾಯಿ ಬಜೆಟ್

ಮಳೆಯ ಮ್ಯೂಸಿಯಂ ನಿರ್ಮಾಣಕ್ಕೆ ಮೇಘಾಲಯದ ರಾಜ್ಯ ಸರಕಾರ ಬರೋಬ್ಬರಿ 35 ಕೋಟಿ ರುಪಾಯಿ ಹಣವನ್ನು ಮೀಸಲಿಡಲು ನಿರ್ಧರಿಸಿದೆ. ಮೇಘಾಲಯ ಪ್ರವಾಸಿ ಸಚಿವ ಪೌಲ್ ಅವರು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಇದಕ್ಕಾಗಿ ಸರಕಾರ ಟೆಂಡರ್ ಕೂಡ ಕರೆದಿದೆ. ಈ ಬಾರಿಯ ಮಾನ್ಸೂನ್ ಕಡಿಮೆ ಆದ ಬಳಿಕ ಇದರ ನಿರ್ಮಾಣ ಕೆಲಸ ಪ್ರಾರಂಭ ಆಗಲಿದೆ.

meghalaya 1

ಉದ್ದೇಶ ಏನು?

ಈ ಮ್ಯೂಸಿಯಂ ಸ್ಥಾಪನೆಯ ಹಿಂದೆ ಸರ್ಕಾರ ಒಂದು ದೊಡ್ಡ ಆಲೋಚನೆಯನ್ನು ಇಟ್ಟುಕೊಂಡಿದೆ. ಇಷ್ಟು ವರ್ಷಗಳ ಕಾಲ ಮೇಘಾಲಯ ಎಂಬುದು ಕೇವಲ ಪ್ರವಾಸಿ ತಾಣ ಆಗಿತ್ತು. ಆದರೆ, ಈ ಮ್ಯೂಸಿಯಂ ನಿರ್ಮಾಣದ ಬಳಿಕ ವಿಶ್ವದ ನಾನಾ ಕಡೆಗಳಿಂದ ಜನರು ಅಧ್ಯಯನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಈ ಮೂಲಕ ಮೌಸಿನ್​ರಾಮ್ ಭಾಗವನ್ನು ವಿಜ್ಞಾನ ಸಂಶೋಧನೆಯ ಜಾಗತಿಕ ತಾಣವನ್ನಾಗಿ ಬದಲಾಯಿಸುವ ಉದ್ದೇಶ ಇದೆ.

ಮೋಡದ ಬಗ್ಗೆ ಅಧ್ಯಯನ

ಈ ವಸ್ತು ಸಂಗ್ರಹಾಲಯದಲ್ಲಿ ಮೋಡಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕಲಿಯಬಹುದು. ಈ ಮ್ಯೂಸಿಯಂನಲ್ಲಿ ಅತ್ಯಾಧುನಿಕ ಸಾಧನಗಳು ಮತ್ತು ಮಳೆ ಮಾಪಕಗಳನ್ನು ಒಳಗೊಂಡಿರುವ ಹವಾಮಾನ ಸಂಶೋಧನಾ ಕೇಂದ್ರ ಇರುತ್ತದೆ. ಇದರ ಜೊತೆಗೆ IMD ಮತ್ತು ISRO ಸಂಸ್ಥೆಗಳ ಜೊತೆ ಸಹಯೋಗ ಮಾಡಿಕೊಳ್ಳಲು ಪ್ಲ್ಯಾನ್ ನಡೆದಿದೆ.

ಪ್ರವಾಸೋದ್ಯಮ ಹೆಚ್ಚಿಸೋ ಗುರಿ

ಎಲ್ಲರೂ ಪ್ರಾಣಿ ಹಾಗೂ ವಸ್ತುಗಳ ಮ್ಯೂಸಿಯಂ ಬಗ್ಗೆ ಕೇಳಿರುತ್ತಾರೆ. ಆದರೆ, ಮಳೆಯ ಮ್ಯೂಸಿಯಂ ಎಂದಾಗ ಕುತೂಹಲ ಮೂಡೋದು ಸಹಜ. ಹೀಗಾಗಿ, ಈ ಮ್ಯೂಸಿಯಂ ಪ್ರವಾಸೋದ್ಯಮ ಹೆಚ್ಚಿಸಲು ಸಹಕಾರಿ ಆಗಲಿದೆ. ಹೀಗಾಗಿ, ಈ ಭಾಗದಲ್ಲಿ ದೊಡ್ಡದಾದ ರಸ್ತೆ, ಹೋಂ ಸ್ಟೇ ನಿರ್ಮಾಣಗಳನ್ನು ಮಾಡಲು ಪ್ಲ್ಯಾನ್ ರೂಪಿಸಲಾಗಿದೆ. ಸ್ಥಳೀಯರಿಗೆ ಉದ್ಯೋಗಾವಕಾಶ ನಿರ್ಮಾಣ ಆಗುವ ಸಾಧ್ಯತೆ ಇದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ