Wednesday, February 4, 2026
Wednesday, February 4, 2026

ಊಟ ಮರೆತರೂ ಡೋಂಟ್ ವರಿ! ವಂದೇ ಭಾರತ್ ಉಪವಾಸ ಕಳಿಸದು

ಪ್ರಯಾಣದ ಸಮಯದಲ್ಲಿ ನಮಗೆ ಊಟ ಅಗತ್ಯವಿಲ್ಲ ಎಂದು ಯೋಚಿಸಿ ನಾವು ಆ ಸಮಯದಲ್ಲಿ ಆಯ್ಕೆಯನ್ನು ಟಿಕ್ ಮಾಡಿರುವುದಿಲ್ಲ. ಆದರೆ ನಮಗೆ ಹಸಿವಾದಾಗ ಏನು ಮಾಡಬೇಕೆಂದು ತೋಚುವುದಿಲ್ಲ. ಅಂಥ ಸಂದಿಗ್ಧತೆಯಲ್ಲಿ ಏನು ಮಾಡಬೇಕು? ವಂದೇ ಭಾರತ್‌ನಲ್ಲಿ ಆಹಾರ ರಹಿತ ಟಿಕೆಟ್‌ಗಳನ್ನು ಬುಕ್ ಮಾಡಿದ ನಂತರ ನಾವು ಆಹಾರವನ್ನು ಖರೀದಿಸಬಹುದೇ ಅಥವಾ ಇಲ್ಲವೇ?

  • ಅಜಿತೇಶ್ ಹಳಿಯಾಳ

ನೀವು ವಂದೇ ಭಾರತ್ ರೈಲು ಟಿಕೆಟ್‌ಗಳನ್ನು ಬುಕ್ ಮಾಡುತ್ತೀರಿ ಅಂದುಕೊಳ್ಳಿ. ಟಿಕೆಟ್ ಬುಕ್ ಮಾಡಿದ್ರೆ ಆಯ್ತು ನಮ್ಮ ಕೆಲಸ ಮುಗಿಯಿತು ಅಂದುಕೊಂಡ್ರೆ ನಿಮ್ಮ ಎಣಿಕೆ ತಪ್ಪಾಗಬಹುದು. ಹೌದು. ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಾಮಾನ್ಯವಾಗಿ ಟಿಕೆಟ್ ಬುಕ್ ಮಾಡುವಾಗ ಹಲವು ಪ್ರಯಾಣಿಕರು ಊಟದ ಆಯ್ಕೆಯನ್ನು ಬಿಟ್ಟಿರುತ್ತಾರೆ. ಆದರೆ ರೈಲಿನಲ್ಲಿ ಚಲಿಸುವಾಗ ಹಸಿವಾಗುತ್ತದೆ. ಆಗ ಯಾರ ಸಹಾಯವನ್ನು ತೆಗೆದುಕೊಳ್ಳಬೇಕು ಮತ್ತು ಯಾರನ್ನು ಕೇಳಬೇಕು? ಬೇರೆ ಟ್ರೇನುಗಳಲ್ಲಿ ಅಲ್ಲಲ್ಲಿ ಆಗಾಗ ತಿಂಡಿತಿನಿಸುಗಳನ್ನು ಹೊತ್ತು ವ್ಯಾಪಾರಿಗಳು ಬರುತ್ತಾರೆ. ಆದರೆ ವಂದೇಭಾರತ್ ಆ ಮಾದರಿಯ ರೈಲು ಅಲ್ಲವಲ್ಲ.

ಪ್ರಯಾಣದ ಸಮಯದಲ್ಲಿ ನಮಗೆ ಊಟ ಅಗತ್ಯವಿಲ್ಲ ಎಂದು ಯೋಚಿಸಿ ನಾವು ಆ ಸಮಯದಲ್ಲಿ ಆಯ್ಕೆಯನ್ನು ಟಿಕ್ ಮಾಡಿರುವುದಿಲ್ಲ. ಆದರೆ ನಮಗೆ ಹಸಿವಾದಾಗ ಏನು ಮಾಡಬೇಕೆಂದು ತೋಚುವುದಿಲ್ಲ. ಅಂಥ ಸಂದಿಗ್ಧತೆಯಲ್ಲಿ ಏನು ಮಾಡಬೇಕು? ವಂದೇ ಭಾರತ್‌ನಲ್ಲಿ ಆಹಾರ ರಹಿತ ಟಿಕೆಟ್‌ಗಳನ್ನು ಬುಕ್ ಮಾಡಿದ ನಂತರ ನಾವು ಆಹಾರವನ್ನು ಖರೀದಿಸಬಹುದೇ ಅಥವಾ ಇಲ್ಲವೇ?

ಕೆಲವು ತಿಂಗಳುಗಳ ಹಿಂದಿನ ಮಾತು. ಆಗ ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕರು ಆಹಾರದ ಆಯ್ಕೆಯನ್ನು ಆರಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಅವರಿಗೆ ಆಹಾರವನ್ನು ನೀಡಲಾಗುತ್ತಿರಲಿಲ್ಲ. ಅನೇಕ ಪ್ರಯಾಣಿಕರು ರೈಲಿನಲ್ಲಿ ಆಹಾರವನ್ನು ಖರೀದಿಸಲು ಬಯಸಿದ್ದರೂ ಮನವಿಯನ್ನು ನಿರಾಕರಿಸಲಾಗುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ರೈಲ್ವೆ ಮಂಡಳಿಯು ಹೊಸ ನಿಯಮವನ್ನು ತಂದಿದೆ. ಇದರಿಂದ ಪ್ರತಿಯೊಬ್ಬ ಪ್ರಯಾಣಿಕರೂ ಆಹಾರವನ್ನು ಪಡೆಯಬಹುದು. ಆದರೆ ಅದಕ್ಕೆ ಕೊಂಚ ಹೆಚ್ಚುವರಿ ಹಣ ಪಾವತಿಸಬೇಕು.

New Project (38)

ಹೇಗೆ ಏನು ಎತ್ತ?

ಮೊದಲನೆಯದಾಗಿ, ರೈಲಿನಲ್ಲಿ ಆಹಾರದ ಆಯ್ಕೆಯನ್ನು ಆರಿಸಿಕೊಂಡ ನಂತರ, ನಿಮಗೆ ಯಾವಾಗ ಆಹಾರ ಸಿಗುತ್ತದೆಯೋ ಇಲ್ಲವೋ ಎಂದು ನೀವು ರೈಲ್ವೆ ಸಿಬ್ಬಂದಿಯನ್ನು ಕೇಳಬೇಕಾಗಿಲ್ಲ. ರೈಲ್ವೆ ಸಿಬ್ಬಂದಿಯಿಂದ ಎಲ್ಲಾ ಪ್ರಯಾಣಿಕರಿಗೆ ಆಹಾರವನ್ನು ಸ್ವಯಂಚಾಲಿತವಾಗಿ ಸಮಯಕ್ಕೆ ತಲುಪಿಸಲಾಗುತ್ತದೆ. ಆದರೆ ಆಹಾರವನ್ನು ಆಯ್ಕೆ ಮಾಡಿಕೊಳ್ಳದ ಮತ್ತು ಇನ್ನೂ ಆಹಾರವನ್ನು ಆರ್ಡರ್ ಮಾಡಲು ಬಯಸುವ ಪ್ರಯಾಣಿಕರು ರೈಲ್ವೆ ಸಿಬ್ಬಂದಿಯನ್ನು ಸಂಪರ್ಕಿಸಬೇಕಾಗುತ್ತದೆ. ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ನೀವು ಆಹಾರವನ್ನು ಆಯ್ಕೆ ಮಾಡಿಕೊಳ್ಳದಿದ್ದರೂ, ಹೆಚ್ಚುವರಿ ಹಣವನ್ನು ಪಾವತಿಸುವ ಮೂಲಕ ನೀವು ರೈಲಿನಿಂದಲೇ ಆಹಾರವನ್ನು ಆರ್ಡರ್ ಮಾಡಬಹುದು.

ವಂದೇ ಭಾರತ್ ರೈಲಿನಲ್ಲಿ ಪ್ರಯಾಣದ ಸಮಯದಲ್ಲಿ, ಪ್ರಯಾಣಿಕರಿಗೆ ಚಿಪ್ಸ್, ಕೇಕ್, ನಮ್ಕೀನ್ ಮತ್ತು ಚಹಾದಂಥ ಲಘು ತಿನಿಸುಗಳನ್ನು ನೀಡಲಾಗುತ್ತದೆ. ಇದನ್ನು ಮೊದಲೇ ಬುಕ್ ಮಾಡುವ ಅಗತ್ಯವಿಲ್ಲ. ರೈಲಿನಿಂದ ಇಳಿದು ತರುವ ಅಗತ್ಯವೂ ಇಲ್ಲ.
ಟಿಕೆಟ್ ಬುಕಿಂಗ್ ಸಮಯದಲ್ಲಿ ಪ್ರಯಾಣಿಕರಿಗೆ ಇಂಥ ವಸ್ತುಗಳಿಗೆ ಪ್ರತ್ಯೇಕ ಆಯ್ಕೆ ಇರುವುದಿಲ್ಲ. ಈ ಸೌಲಭ್ಯವನ್ನು ರೈಲಿನಲ್ಲಿಯೇ ಒದಗಿಸಲಾಗುತ್ತದೆ. ಪ್ರಯಾಣಿಕರು ರೈಲ್ವೆ ಸಿಬ್ಬಂದಿಯಿಂದ ತಮ್ಮ ಆಯ್ಕೆಯ ವಸ್ತುಗಳನ್ನು ತೆಗೆದುಕೊಳ್ಳಬಹುದು. UPI ಮತ್ತು ನಗದು ಆಯ್ಕೆಗಳು ಎರಡೂ ಪಾವತಿಗೆ ಲಭ್ಯವಿರುತ್ತದೆ.

New Project (37)

ನೆನಪಿಡಿ, ಅಧಿಕೃತ ರೈಲ್ವೆ ನೌಕರರು ಮಾತ್ರ ವಂದೇ ಭಾರತ್ ರೈಲಿನಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಹುದು. ಹೊರಗಿನ ಖರೀದಿದಾರರಿಗೆ ರೈಲಿನಲ್ಲಿ ಸರಕುಗಳನ್ನು ಮಾರಾಟ ಮಾಡುವ ಅವಕಾಶವಿಲ್ಲ. ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವುದರ ಇನ್ನೊಂದು ಪ್ರಯೋಜನವೆಂದರೆ ಅದು ದೀರ್ಘ ಪ್ರಯಾಣವೂ ಕಡಿಮೆ ಸಮಯದಲ್ಲಿ ಮುಗಿಯುತ್ತದೆ. ಹೀಗಾಗಿ ಬಹಳಷ್ಟು ಸಂದರ್ಭಗಳಲ್ಲಿ ತಿಂಡಿತಿನಿಸು ಆಹಾರಗಳ ಅಗತ್ಯವೇ ಬೀಳುವುದಿಲ್ಲ.

ದಯವಿಟ್ಟು ಗಮನಿಸಿ

ರಾತ್ರಿ 9 ಗಂಟೆಯ ನಂತರ ವಂದೇಭಾರತ್ ರೈಲಿನಲ್ಲಿ ಆಹಾರ ಲಭ್ಯವಿರುವುದಿಲ್ಲ. ಹೌದು ಕೆಲವು ಗೊಂದಲಗಳನ್ನು ತಪ್ಪಿಸಲು, IRCTC ಈಗ ನಿಗದಿತ ಸಮಯದಲ್ಲಿ ಮಾತ್ರ ಆಹಾರವನ್ನು ಮಾರಾಟ ಮಾಡುತ್ತದೆ. ಆ ಪ್ರಕಾರವಾಗಿ ರಾತ್ರಿ 9 ಗಂಟೆಯ ನಂತರ ಯಾವುದೇ ರೀತಿಯ ಆಹಾರ ಲಭ್ಯವಿರುವುದಿಲ್ಲ. ಪ್ರಯಾಣಿಕರಿಗೆ ನಿದ್ರೆಯಲ್ಲಿ ಯಾವುದೇ ತೊಂದರೆಯಾಗದಂತೆ ಮತ್ತು ಊಟದ ಸಮಯ ಸ್ಥಿರವಾಗಿರುವುದು ಇದರ ಉದ್ದೇಶವಾಗಿದೆ. ಪ್ರಯಾಣಿಕರು ಸ್ವಚ್ಛ ಮತ್ತು ಉತ್ತಮ ಆಹಾರವನ್ನು ಪಡೆಯಬೇಕೆಂದು ರೈಲ್ವೆ ಮಂಡಳಿಯೂ ಹೇಳಿದೆ. ಆದ್ದರಿಂದ 9 ಗಂಟೆಯ ಬಳಿಕ ಊಟ ಮಾಡೋಣ ಎಂಬ ಆಲೋಚನೆಯಿದ್ದರೆ ಅದು ಸಾಧ್ಯವಿಲ್ಲ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ