Wednesday, February 4, 2026
Wednesday, February 4, 2026

ಕ್ರಿಪ್ಟೋ ಕರೆನ್ಸಿಯಲ್ಲಿ ಏರ್ ಟಿಕೆಟ್ ಬುಕಿಂಗ್!

ಕ್ರಿಪ್ಟೋ ಕರೆನ್ಸಿ ಎನ್ನುವುದು ಡಿಜಿಟಲ್ ಹಣ ಪಾವತಿ ವ್ಯವಸ್ಥೆ. ಇದರ ವಹಿವಾಟುಗಳನ್ನು ಪರಿಶೀಲಿಸಲು ಬ್ಯಾಂಕುಗಳನ್ನು ಅವಲಂಬಿಸಬೇಕು ಎಂಬುದಿಲ್ಲ. 2009ರಲ್ಲಿ ಸ್ಥಾಪನೆಯಾದ ಬಿಟ್‌ಕಾಯಿನ್ ಈ ಜಗತ್ತಿನ ಮೊದಲ ಕ್ರಿಪ್ಟೋಕರೆನ್ಸಿ. ಇದು ಇಂದಿಗೂ ಅತ್ಯಂತ ಬೇಡಿಕೆಯಲ್ಲಿದೆ. ಅದರ ಮೌಲ್ಯವೂ ಹಾಗೆಯೇ ವೃದ್ಧಿಯಾಗಿದೆ. ಈ ಕರೆನ್ಸಿಯನ್ನು ಸತೋಶಿ ನಕಮೊಟೊ ಅಭಿವೃದ್ಧಿಪಡಿಸಿದ್ದಾರೆ.

  • ಬಿಟ್ಟೀದೇವ

ಮೊದಲೆಲ್ಲ ವಿಮಾನ ಟಿಕೆಟ್ ಬುಕ್ ಮಾಡಲು ಕೌಂಟರ್​ಗೆ ಹೋಗಿ ಹಣ ನೀಡಿ ನಿಮ್ಮ ಟಿಕೆಟ್​​ ಕಾಯ್ದಿರಿಸಬೇಕಿತ್ತು. ತಂತ್ರಜ್ಞಾನ ಮುಂದುವರಿದ ಬಳಿಕ ಮನೆಯಲ್ಲೇ ಕುಳಿತು ತಮ್ಮ ಡೆಸ್ಕ್​ಟಾಪ್​ ಮೂಲಕ ನೆಟ್ ಬ್ಯಾಂಕಿಂಗ್​ನಿಂದ ಹಣ ಪಾವತಿಸಿ ಟಿಕೆಟ್ ಬುಕ್ ಮಾಡುವ ಅವಕಾಶ ಬಂತು. ಈಗ ನೀವು ಎಲ್ಲಿ ಬೇಕಿದ್ದರೂ ನಿಮ್ಮ ಮೊಬೈಲ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು. ಇದಕ್ಕೆ ಯುಪಿಐ ಮೂಲಕ ಹಣ ಪಾವತಿಸುವ ಆಯ್ಕೆ ಇದೆ. ಈಗ ಮುಂದಿನ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿ ಮೂಲಕವೂ ನೀವು ವಿಮಾನ ಟಿಕೆಟ್ ಬುಕ್ ಮಾಡಬಹುದು! ಹೀಗೊಂದು ವ್ಯವಸ್ಥೆಯನ್ನು ದುಬೈ ಮೂಲದ ಎಮಿರೇಟ್ಸ್ ಏರ್​ಲೈನ್ಸ್ ಮಾಡಿದೆ.

ಕ್ರಿಪ್ಟೋ ಹಿನ್ನೆಲೆ

ಕ್ರಿಪ್ಟೋ ಕರೆನ್ಸಿ ಎನ್ನುವುದು ಡಿಜಿಟಲ್ ಹಣ ಪಾವತಿ ವ್ಯವಸ್ಥೆ. ಇದರ ವಹಿವಾಟುಗಳನ್ನು ಪರಿಶೀಲಿಸಲು ಬ್ಯಾಂಕುಗಳನ್ನು ಅವಲಂಬಿಸಬೇಕು ಎಂಬುದಿಲ್ಲ. 2009ರಲ್ಲಿ ಸ್ಥಾಪನೆಯಾದ ಬಿಟ್‌ಕಾಯಿನ್ ಈ ಜಗತ್ತಿನ ಮೊದಲ ಕ್ರಿಪ್ಟೋಕರೆನ್ಸಿ. ಇದು ಇಂದಿಗೂ ಅತ್ಯಂತ ಬೇಡಿಕೆಯಲ್ಲಿದೆ. ಅದರ ಮೌಲ್ಯವೂ ಹಾಗೆಯೇ ವೃದ್ಧಿಯಾಗಿದೆ. ಈ ಕರೆನ್ಸಿಯನ್ನು ಸತೋಶಿ ನಕಮೊಟೊ ಅಭಿವೃದ್ಧಿಪಡಿಸಿದ್ದಾರೆ.

ಈ ಮೊದಲು ಕ್ರಿಪ್ಟೋ ಕರೆನ್ಸಿಗೆ ಯಾವುದೇ ಮೌಲ್ಯವನ್ನು ಜನರು ನೀಡುತ್ತಿರಲಿಲ್ಲ. ಆದರೆ, ಈಗ ಆ ರೀತಿ ಇಲ್ಲ. ಅನೇಕ ಕಡೆಗಳಲ್ಲಿ ಕ್ರಿಪ್ಟೋ ಕರೆನ್ಸಿಗೂ ಮೌಲ್ಯ ನೀಡಲಾಗುತ್ತಿದೆ. ಅನೇಕ ಕ್ಷೇತ್ರಗಳು ಇದನ್ನು ಮನ್ನಿಸುತ್ತಿವೆ. ಪ್ರಾಪರ್ಟಿಗಳನ್ನು ಮಾರಲು, ಖರೀದಿಸಲು ಕ್ರಿಪ್ಟೋ ಬಳಕೆ ಆಗುತ್ತಿದೆ. ಈಗ ಡಿಜಿಟಲ್ ಫೈನಾನ್ಸ್​ಗೆ ಒತ್ತು ನೀಡುವ ಉದ್ದೇಶದಿಂದ ಎಮಿರೇಟ್ಸ್ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

crypto for air booking

ಏರ್ ಅರೇಬಿಯಾದಲ್ಲೂ ಇದೆ ವ್ಯವಸ್ಥೆ

ಕೇವಲ ಎಮಿರೇಟ್ಸ್ ಮಾತ್ರವಲ್ಲ, ಏರ್ ಅರೇಬಿಯಾ ಕೂಡ ಕ್ರಿಪ್ಟೋ ಪೇಮೆಂಟ್​ಗಳನ್ನು ಒಪ್ಪಿಕೊಳ್ಳುತ್ತಿದೆ. ಹೊಸ ಹೊಸ ಆವಿಷ್ಕಾರ​ಗಳನ್ನು ಮಾಡಲು ಈ ನಿರ್ಧಾರ ಸಹಕಾರಿ ಆಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಟ್ರಾವೆಲರ್​ಗಳಿಗೆ ಸಿಗಲಿದೆ ದೊಡ್ಡ ಲಾಭ..

ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಿದರೆ ಏನಾದರೂ ಲಾಭ ಇದೆಯೇ ಎಂದು ಕೇಳಿದರೆ ಹೌದು ಎನ್ನುವ ಉತ್ತರ ಸಿಗುತ್ತದೆ. ಯುಪಿಐ ಆ್ಯಪ್​ಗಳು ಆರಂಭದಲ್ಲಿ ಗ್ರಾಹಕರನ್ನು ಆಕರ್ಷಿಸಲು ಸಾಕಷ್ಟು ಆಫರ್​ಗಳನ್ನು ನೀಡಿದ್ದವು. ಕ್ಯಾಶ್​ ಬ್ಯಾಕ್ ಸೇರಿದಂತೆ ಹಲವು ಆಫರ್​ಗಳನ್ನು ಕೊಡಲಾಗುತ್ತಿತ್ತು. ಈಗ ಕ್ರಿಪ್ಟೋ ಮೂಲಕ ಹಣ ಪಾವತಿ ಆದರೂ ಇದೇ ರೀತಿಯ ಲಾಭ ಆಗಲಿದೆ. ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಿದರೆ ವೇಗವಾಗಿ ನೀವು ಟ್ರಾನ್ಸ್ಯಾಕ್ಷನ್ ಮಾಡಬಹುದು. ಲಾಯಲ್ಟಿ ಪಾಯಿಂಟ್ ಕೂಡ ಸಿಗಲಿದೆ. ಕೇವಲ ವಿಮಾನ ಟಿಕೆಟ್ ಕಾಯ್ದಿರಿಸಲು ಮಾತ್ರವಲ್ಲ.. ನೀವು ನಿಮ್ಮ ಸೀಟ್​ ಅಪ್​ಗ್ರೇಡ್ ಮಾಡಬೇಕು ಎಂದರೂ ಕ್ರಿಪ್ಟೋ ಹಣ ಬಳಕೆ ಮಾಡಬಹುದು.

ಭಾರತದಲ್ಲಿ ಹೇಗಿದೆ ಸ್ಥಿತಿ?

ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಇನ್ನೂ ಸಂಪೂರ್ಣವಾಗಿ ಕಾನೂನುಬದ್ಧವಾಗಿಲ್ಲ. ಅಲ್ಲದೆ, ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಚಟುವಟಿಕೆಗಳು ಇನ್ನೂ ಸರಿಯಾದ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಸರ್ಕಾರವು ಇದನ್ನು ನಿಯಂತ್ರಿಸಲು ಮಸೂದೆಯನ್ನು ತರಲು ಯೋಚಿಸುತ್ತಿದೆ. ಆದರೆ ಇದು ಇನ್ನೂ ಜಾರಿಗೆ ಬಂದಿಲ್ಲ.

ಸರಕಾರದ ಮಸೂದೆ

ಭಾರತ ಸರ್ಕಾರವು ‘ಕ್ರಿಪ್ಟೋ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ, 2021’ ಎಂಬ ಮಸೂದೆಯನ್ನು ತರಲು ಯೋಜಿಸಿತ್ತು. ಈ ಮಸೂದೆಯು ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸಲು ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸಲು ಉದ್ದೇಶಿಸಿತ್ತು. ಆದಾಗ್ಯೂ ಇದು ಇನ್ನೂ ಜಾರಿಗೆ ಬಂದಿಲ್ಲ. ಅಲ್ಲದೆ, ಇದರ ಮೇಲೆ ಸರ್ಕಾರದ ಯಾವುದೇ ನಿಯಂತ್ರಣ ಇಲ್ಲದ ಕಾರಣ ವಂಚನೆಗೊಳಗಾದರೆ ನ್ಯಾಯ ಸಿಗೋದು ಕಷ್ಟವಾಗಲಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!