Sunday, April 5, 2026
Sunday, April 5, 2026

ಭಾರತದಲ್ಲಿ ವಿಮಾನ ಇಂಧನ ದರ ಏರಿಕೆ

ಏಪ್ರಿಲ್ 2026ರ ಈ ಇಂಧನ ದರ ಏರಿಕೆಯು ಪ್ರವಾಸಿಗರು ಮತ್ತು ವ್ಯಾಪಾರ ನಿಮಿತ್ತ ಪ್ರಯಾಣಿಸುವವರ ಜೇಬಿಗೆ ಕತ್ತರಿ ಹಾಕಲಿದೆ. ಸರ್ಕಾರವು ಬೆಲೆ ಏರಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೂ, ಜಾಗತಿಕ ರಾಜಕೀಯ ಸ್ಥಿತಿಗತಿಗಳು ಸುಧಾರಿಸುವವರೆಗೂ ವಿಮಾನ ದರಗಳು ಇಳಿಕೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತ ಮತ್ತು ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ, ಭಾರತದ ತೈಲ ಮಾರಾಟ ಕಂಪೆನಿಗಳು ಏಪ್ರಿಲ್ 1, 2026ರಿಂದ ಜಾರಿಗೆ ಬರುವಂತೆ ವಿಮಾನ ಇಂಧನ ಅಥವಾ ಏವಿಯೇಷನ್ ಟರ್ಬೈನ್ ಫ್ಯುಯೆಲ್ ದರವನ್ನು ಏರಿಕೆ ಮಾಡಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಕಾರಣ, ಭಾರತದಲ್ಲಿ ಎಟಿಎಫ್‌ ಬೆಲೆಯು ಇದೇ ಮೊದಲ ಬಾರಿಗೆ ಪ್ರತಿ ಕಿಲೋ ಲೀಟರ್‌ಗೆ 2 ಲಕ್ಷ ರುಪಾಯಿಗಳ ಗಡಿಯನ್ನು ದಾಟಿದೆ. ದೆಹಲಿಯಲ್ಲಿ ಇಂಧನ ದರವು ಶೇ. 100 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಕಿಲೋ ಲೀಟರ್‌ಗೆ ಸುಮಾರು 2.07 ಲಕ್ಷ ರುಪಾಯಿಗಳಿಗೆ ತಲುಪಿದೆ.

ಇದನ್ನೂ ಓದಿ: ಭಾರತೀಯರನ್ನು ಕರೆತರಲು ಏರ್ ಇಂಡಿಯಾ ಮತ್ತು ಇಂಡಿಗೋ ವಿಶೇಷ ವಿಮಾನಗಳು

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಪೆಟ್ರೋಲಿಯಂ ಸಚಿವಾಲಯವು ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಕೇವಲ ಶೇ. 25ರಷ್ಟು ಮಾತ್ರ ಬೆಲೆ ಏರಿಕೆಯನ್ನು ಏರಿಕೆ ಮಾಡಲು ಅನುಮತಿಸಿವೆ. ಇದು ಸಾಮಾನ್ಯ ಪ್ರಯಾಣಿಕರ ಮೇಲೆ ಬೀಳುವ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು.

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ, ಏಪ್ರಿಲ್ 2, 2026 ರಿಂದ ಅನ್ವಯವಾಗುವಂತೆ ಹೊಸ 'ಫ್ಯುಯೆಲ್ ಸರ್ಚಾರ್ಜ್' ಘೋಷಿಸಿದೆ.

  • 0 - 500 ಕಿ.ಮೀ: ₹275
  • 501 - 1,000 ಕಿ.ಮೀ: ₹400
  • 1,001 - 1,500 ಕಿ.ಮೀ: ₹600
  • 1,501 - 2,000 ಕಿ.ಮೀ: ₹800
  • 2,000 ಕಿ.ಮೀ ಗಿಂತ ಹೆಚ್ಚು: ₹950
  • ಯುಕೆ ಮತ್ತು ಯುರೋಪ್ ಪ್ರಾಂತ್ಯಗಳಿಗೆ ಪ್ರಯಾಣಿಸುವವರಿಗೆ ಪ್ರತಿ ಸೆಕ್ಟರ್‌ಗೆ ಸುಮಾರು ₹10,000 ವರೆಗೆ ಹೆಚ್ಚುವರಿ ಇಂಧನ ಶುಲ್ಕ ವಿಧಿಸಲಾಗುತ್ತಿದೆ.
Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...