Saturday, August 1, 2026
Saturday, August 1, 2026

ಬಜರಂಗ ಸೇತು ಗ್ಲಾಸ್ ಸ್ಕೈವಾಕ್ ಓಪನ್‌

ಗಂಗಾ ನದಿಯ ಮೇಲಿಂದ ಸಾಗುವ ಈ ಸೇತುವೆಯಲ್ಲಿ ಪಾರದರ್ಶಕ ಗಾಜಿನ ನೆಲವನ್ನು ಅಳವಡಿಸಲಾಗಿದ್ದು, ಅದರ ಮೇಲೆ ನಡೆಯುವಾಗ ನದಿಯ ಅದ್ಭುತ ದೃಶ್ಯವನ್ನು ನೇರವಾಗಿ ಕಾಣಬಹುದಾಗಿದೆ.

ಋಷಿಕೇಶ್‌ನ ಪ್ರಸಿದ್ಧ ಲಕ್ಷ್ಮಣ ಜೂಲಾ ಪ್ರದೇಶದಲ್ಲಿ ನಿರ್ಮಿಸಲಾದ ಹೊಸ ಬಜರಂಗ ಸೇತು ಗ್ಲಾಸ್ ಸ್ಕೈವಾಕ್ ಸಾರ್ವಜನಿಕರಿಗೆ ತೆರೆದಿದ್ದು, ಇದು ಪ್ರವಾಸಿಗರ ಹೊಸ ಆಕರ್ಷಣೆಯಾಗಿ ಹೊರಹೊಮ್ಮಿದೆ.

ಗಂಗಾ ನದಿಯ ಮೇಲಿಂದ ಸಾಗುವ ಈ ಸೇತುವೆಯಲ್ಲಿ ಪಾರದರ್ಶಕ ಗಾಜಿನ ನೆಲವನ್ನು ಅಳವಡಿಸಲಾಗಿದ್ದು, ಅದರ ಮೇಲೆ ನಡೆಯುವಾಗ ನದಿಯ ಅದ್ಭುತ ದೃಶ್ಯವನ್ನು ನೇರವಾಗಿ ಕಾಣಬಹುದಾಗಿದೆ.

೧

ಉತ್ತರಾಖಂಡ ಸರಕಾರ ಪ್ರವಾಸಿಗರ ಸುರಕ್ಷತೆ ಹಾಗೂ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರವೇಶ ಶುಲ್ಕವನ್ನು ನಿಗದಿಪಡಿಸಿದೆ. ಮಕ್ಕಳಿಗೆ 50 ರು. ಮತ್ತು ವಯಸ್ಕರಿಗೆ 100 ರು. ಶುಲ್ಕ ವಿಧಿಸುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಜಾರಿಗೆ ಬರಲಿದೆ.

ಸುಮಾರು 132 ಮೀಟರ್ ಉದ್ದದ ಈ ಬಜರಂಗ ಸೇತು, ಹಳೆಯ ಲಕ್ಷ್ಮಣ ಝೂಲಾಕ್ಕೆ ಪರ್ಯಾಯವಾಗಿ ನಿರ್ಮಿಸಲಾಗಿದೆ. ಸೇತುವೆಯ ಎರಡೂ ಬದಿಗಳಲ್ಲಿ ಸುಮಾರು 1.5 ಮೀಟರ್ ಅಗಲದ ಗಾಜಿನ ಮಾರ್ಗಗಳನ್ನು ನಿರ್ಮಿಸಲಾಗಿದ್ದು, ಪ್ರವಾಸಿಗರ ಸುರಕ್ಷತೆಗೆ ವಿಶೇಷ ಸಿಬ್ಬಂದಿ ಮತ್ತು ನಿಗಾ ವ್ಯವಸ್ಥೆ ಅಳವಡಿಸಲಾಗಿದೆ. ಸೇತುವೆಯ ವಿನ್ಯಾಸದಲ್ಲಿ ಕೇದಾರನಾಥ ಹಾಗೂ ಬದ್ರಿನಾಥ ದೇವಾಲಯಗಳ ಶೈಲಿಯ ಪ್ರಭಾವವೂ ಕಾಣಿಸುತ್ತದೆ.

ಆಧ್ಯಾತ್ಮಿಕತೆ, ಆಧುನಿಕ ತಂತ್ರಜ್ಞಾನ ಮತ್ತು ಸಾಹಸ ಅನುಭವವನ್ನು ಒಂದೇ ಸ್ಥಳದಲ್ಲಿ ನೀಡುವ ಈ ಗ್ಲಾಸ್ ಸ್ಕೈವಾಕ್, ಋಷಿಕೇಶ್ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ