ಆಕರ್ಷಕ ನೈಸರ್ಗಿಕ ಸೌಂದರ್ಯ, ಸುಂದರ ಕಡಲ ತೀರಗಳು ಮತ್ತು ಅಮೋಘ ವಾಸ್ತುಶಿಲ್ಪಕ್ಕೆ ಹೆಸರಾಗಿರುವ ಅದ್ಭುತ ದೇವಾಲಯಗಳನ್ನು ಹೊಂದಿರುವ ಬಾಲಿ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಇಂಥ ನಯನ ಮನೋಹರ ದೇಶದಲ್ಲಿ ಕೆಲವು ದಿನಗಳಿಂದ ನಡೆಯುತ್ತಿದ್ದ ಕಳ್ಳತನ, ಪಿಕ್‌ ಪಾಕೆಟಿಂಗ್‌ ಮುಂತಾದ ಅಪರಾಧ ಚಟುವಟಿಕೆಗಳಿಂದ ಪ್ರವಾಸಿಗರು ಕಂಗಾಲಾಗಿದ್ದರು. ಹೀಗಾಗಿ ಈ ರೀತಿಯ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಪ್ರವಾಸಿಗರಿಗೆ ಹೆಚ್ಚಿನ ರಕ್ಷಣೆ ನೀಡಲು ಬಾಲಿ ಪ್ರವಾಸೋದ್ಯಮ ಕೆಲವು ನೂತನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

ಬಾಲಿಯ ಪ್ರಮುಖ ಪ್ರವಾಸಿ ಪ್ರದೇಶಗಳಾದ ಕುಟಾ, ಸೆಮಿನ್ಯಾಕ್, ಉಬುಡ್, ಸನೂರ್ ಸೇರಿದಂತೆ ಹಲವು ತಾಣಗಳಲ್ಲಿ ಪೊಲೀಸ್ ಪೆಟ್ರೋಲಿಂಗ್‌ ಹೆಚ್ಚಿಸಲಾಗಿದೆ. ರಾತ್ರಿ ಇಡೀ ನಿಗಾ ವಹಿಸಲು ಸ್ಥಳೀಯ ಭದ್ರತಾ ತಂಡಗಳನ್ನು ನಿಯೋಜಿಸಲಾಗಿದೆ. ಪ್ರವಾಸಿಗರ ಮೇಲೆ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟಿ, ಅವರಲ್ಲಿ ಸುರಕ್ಷತೆಯ ಭಾವವನ್ನು ಗಟ್ಟಿಗೊಳಿಸುವುದು ಈ ಕ್ರಮಗಳ ಪ್ರಮುಖ ಉದ್ದೇಶ.

bali beaches


ಪ್ರವಾಸಿಗರಿಗೆ ಅನುಕೂಲವಾಗಲೆಂದು 24*7 ಪ್ರವಾಸಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಪ್ರವಾಸಿಗರು ಈ ಸಹಾಯ ಕೇಂದ್ರಗಳಿಗೆ ಕರೆ ಮಾಡಬಹುದು. ವೈದ್ಯಕೀಯ ನೆರವು, ಪೊಲೀಸ್‌ ಸಹಾಯ, ಟೂರಿಸ್ಟ್‌ ಗೈಡನ್ಸ್‌ ಮುಂತಾದ ಸೇವೆಗಳು ಒಂದೇ ಜಾಗದಲ್ಲಿ ಪ್ರವಾಸಿಗರಿಗೆ ಸುಲಭವಾಗಿ ಸಿಗುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

Bali strengthens security measures


ಇದೇ ಸಂದರ್ಭದಲ್ಲಿ, ಪ್ರವಾಸಿಗರ ವೀಸಾ ನಿಯಮ ಉಲ್ಲಂಘನೆ, ಅಕ್ರಮ ಚಟುವಟಿಕೆಗಳು ಮತ್ತು ಅವರ ಸುರಕ್ಷತೆಯನ್ನು ಹಾನಿಗೊಳಿಸುವ ವರ್ತನೆಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಮಂಡಳಿಯ ಅಧಿಕಾರಿಗಳು ತಿಳಿಸಿದರು.