Friday, June 26, 2026
Friday, June 26, 2026

ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಶಸ್ತಿಯ ಗರಿ

ವನ್ಯಜೀವಿ ಸಂರಕ್ಷಣೆಯಲ್ಲಿನ ಗಮನಾರ್ಹ ಸಾಧನೆ, ಅತ್ಯುತ್ತಮ ಪ್ರವಾಸೋದ್ಯಮ ನಿರ್ವಹಣೆ, ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಸೌಲಭ್ಯ ಹಾಗೂ ಜೀವವೈವಿಧ್ಯದ ಸುಸ್ಥಿರ ರಕ್ಷಣೆಗಾಗಿ ಬಿಟಿಆರ್‌ಗೆ 'ಎಡಿಟರ್ಸ್‌ ಚಾಯ್ಸ್ ಅವಾರ್ಡ್' ವಿಭಾಗದಡಿ 'ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶ'ಕ್ಕೆ ಪ್ರತಿಷ್ಠಿತ 'ಇಂಡಿಯಾ ಟುಡೇ ಪ್ರವಾಸೋದ್ಯಮ ಸಮೀಕ್ಷೆ ಮತ್ತು ಪ್ರಶಸ್ತಿಗಳು 2026 ರಲ್ಲಿ ʻಅತ್ಯುತ್ತಮ ವನ್ಯಜೀವಿ ಪ್ರವಾಸಿ ತಾಣʼ ಪ್ರಶಸ್ತಿ ಒಲಿದಿದೆ.

ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಮಧ್ಯಪ್ರದೇಶದ ಪ್ರಸಿದ್ದ 'ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶ'ಕ್ಕೆ ಪ್ರತಿಷ್ಠಿತ 'ಇಂಡಿಯಾ ಟುಡೇ ಪ್ರವಾಸೋದ್ಯಮ ಸಮೀಕ್ಷೆ ಮತ್ತು ಪ್ರಶಸ್ತಿಗಳು 2026 ರಲ್ಲಿ ʻಅತ್ಯುತ್ತಮ ವನ್ಯಜೀವಿ ಪ್ರವಾಸಿ ತಾಣʼ ಪ್ರಶಸ್ತಿ ಒಲಿದಿದೆ. ವನ್ಯಜೀವಿ ಸಂರಕ್ಷಣೆಯಲ್ಲಿನ ಗಮನಾರ್ಹ ಸಾಧನೆ, ಅತ್ಯುತ್ತಮ ಪ್ರವಾಸೋದ್ಯಮ ನಿರ್ವಹಣೆ, ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಸೌಲಭ್ಯ ಹಾಗೂ ಜೀವವೈವಿಧ್ಯದ ಸುಸ್ಥಿರ ರಕ್ಷಣೆಗಾಗಿ ಬಿಟಿಆರ್‌ಗೆ 'ಎಡಿಟರ್ಸ್‌ ಚಾಯ್ಸ್ ಅವಾರ್ಡ್' ವಿಭಾಗದಡಿ ಈ ಅತ್ಯುನ್ನತ ಗೌರವ ಸಂದಿದೆ.

ಇದನ್ನೂ ಓದಿ: ವಿಶ್ವದ 3ನೆಯ ಅತ್ಯಂತ ಕುಟುಂಬ ಸ್ನೇಹಿ ಏರ್‌ಪೋರ್ಟ್!

ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಸಮ್ಮುಖದಲ್ಲಿ ಬಿಟಿಆರ್ ಫೀಲ್ಡ್ ಡೈರೆಕ್ಟರ್ ಅನುಪಮ್ ಸಹಾಯ್ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಎಲ್. ಕೃಷ್ಣಮೂರ್ತಿ ಅವರು ಜಂಟಿಯಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಪ್ರಶಸ್ತಿಯು ಕೇವಲ ಬಾಂಧವಗಡಗೆ ಮಾತ್ರವಲ್ಲದೆ ಇಡೀ ಮಧ್ಯಪ್ರದೇಶ ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ದೇಶದ ಪ್ರಮುಖ ವನ್ಯಜೀವಿ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಮಧ್ಯಪ್ರದೇಶದ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!