ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (HPTDC) ಕರವಾ ಚೌತ್ ಹಬ್ಬದ ಅಂಗವಾಗಿ ಅಕ್ಟೋಬರ್ 9 ಮತ್ತು 10 ರಂದು ತಮ್ಮ ಎಲ್ಲಾ ಹೊಟೇಲ್‌ಗಳಲ್ಲಿ ವಾಸ್ತವ್ಯ ಮಾಡುವ ದಂಪತಿಗಳಿಗೆ 10% ರಿಯಾಯಿತಿ ನೀಡುವುದಾಗಿ ಘೋಷಿಸಿದೆ.

ಉಪವಾಸ ಆಚರಿಸುವ ಮಹಿಳೆಯರಿಗೆ ಉಚಿತ ‘ಸರ್ಜಿ’ ಮತ್ತು ‘ಪೂಜೆ ತಾಳಿ’ ನೀಡಲಾಗುವುದು. ಪೂಜಾ ವಿಧಿಗೆ ಅಗತ್ಯವಾದ ಇತರ ವಸ್ತುಗಳನ್ನು ಸಹ ನಿಗದಿತ ದರದಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 10ರ ರಾತ್ರಿ ಉಪವಾಸ ಮುಗಿಸಿದ ನಂತರ ಮಹಿಳೆಯರಿಗೆ ವಿಶೇಷ ‘ವ್ರತ ತಾಳಿ’ ಸಹ ಒದಗಿಸಲಾಗುವುದು ಎಂದು HPTDC ಪ್ರಧಾನ ವ್ಯವಸ್ಥಾಪಕ ಅನಿಲ್ ತನೇಜಾ ತಿಳಿಸಿದ್ದಾರೆ.

Himachal Pradesh Hotels

ಅನಿಲ್‌ ತನೇಜಾ ಅವರು “ಕರವಾ ಚೌತ್ ಮಹಿಳೆಯರಿಗೆ ಅತ್ಯಂತ ವಿಶೇಷ ಹಬ್ಬ. ಈ ಸಂದರ್ಭದಲ್ಲಿ ನಾವು ಅವರ ಅನುಭವವನ್ನು ಇನ್ನಷ್ಟು ಸ್ಮರಣೀಯವಾಗಿಸಲು ಪ್ರಯತ್ನಿಸುತ್ತಿದ್ದೇವೆ. ದಂಪತಿಗಳಿಗೆ ಎಲ್ಲ ಹೋಟೆಲ್‌ಗಳಲ್ಲಿ 10 % ರಿಯಾಯಿತಿ ನೀಡಲಾಗುತ್ತಿದ್ದು, ಉಪವಾಸ ಆಚರಿಸುವ ಮಹಿಳೆಯರಿಗೆ ಉಚಿತ ಸರ್ಜಿ ಹಾಗೂ ಪೂಜೆ ತಾಳಿ ನೀಡಲಾಗುತ್ತದೆ. ಅವರಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ” ಎಂದು ಹೇಳಿದರು.

ಅಧಿಕಾರಿಯ ಪ್ರಕಾರ, ಈ ಯೋಜನೆ ಆತಿಥ್ಯ ಮತ್ತು ಪರಂಪರೆಯ ಸಂಯೋಜನೆಯ ಮೂಲಕ ಹಬ್ಬದ ಋತುವಿನಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಿಮಾಚಲ ಪ್ರವಾಸೋದ್ಯಮ ನಿಗಮ ಕೈಗೊಂಡ ಒಂದು ನೂತನ ಹೆಜ್ಜೆಯಾಗಿದೆ.