Friday, August 7, 2026
Friday, August 7, 2026

ಆಗಸ್ಟ್ 12ರಿಂದ ನಮ್ಮ ಮೆಟ್ರೋ ಪರಿಶೀಲನೆ: ಸಿಎಂಆರ್‌ಎಸ್

ಬೆಂಗಳೂರು ನಮ್ಮ ಮೆಟ್ರೋದ ಹಸಿರು ಮತ್ತು ಗುಲಾಬಿ ಮಾರ್ಗಗಳ ಹೊಸ ರೈಲುಗಳ ಪರಿಶೀಲನೆಯನ್ನು ಮೆಟ್ರೋ ರೈಲ್ವೇ ಸುರಕ್ಷತಾ ಆಯುಕ್ತರು (CMRS) ಆಗಸ್ಟ್ 12ರಿಂದ 14ರ ನಡುವೆ ನಡೆಸುವ ಸಾಧ್ಯತೆ ಇದೆ.

ಬೆಂಗಳೂರು ನಮ್ಮ ಮೆಟ್ರೋದ ಹಸಿರು ಮತ್ತು ಗುಲಾಬಿ ಮಾರ್ಗಗಳ ಹೊಸ ರೈಲುಗಳ ಪರಿಶೀಲನೆಯನ್ನು ಮೆಟ್ರೋ ರೈಲ್ವೇ ಸುರಕ್ಷತಾ ಆಯುಕ್ತರು (CMRS) ಆಗಸ್ಟ್ 12ರಿಂದ 14ರ ನಡುವೆ ನಡೆಸುವ ಸಾಧ್ಯತೆ ಇದೆ.

ಈ ಪರಿಶೀಲನೆಯ ಬಳಿಕ ಹಸಿರು ಮಾರ್ಗದಲ್ಲಿ ಸಂಚರಿಸಲು ಸಿಆರ್‌ಆರ್‌ಸಿ– ಟಿಟಾಗಢ್ ನಿರ್ಮಿಸಿರುವ ಮೂರು ಹೊಸ ಆರು ಬೋಗಿಗಳ ರೈಲುಗಳಿಗೆ ಅನುಮೋದನೆ ದೊರೆಯುವ ನಿರೀಕ್ಷೆಯಿದೆ. ಇದರಿಂದ ಮದಾವರ– ಸಿಲ್ಕ್ ಇನ್‌ಸ್ಟಿಟ್ಯೂಟ್ ನಡುವಿನ ಹಸಿರು ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗುವ ಸಾಧ್ಯತೆಯಿದೆ. ಪರಿಶೀಲನೆಗೆ ಮುನ್ನ ಬಿಎಂಆರ್‌ಸಿಎಲ್ ಮತ್ತು ಸಿಎಂಆರ್‌ಎಸ್ ಅಧಿಕಾರಿಗಳು ಜಂಟಿಯಾಗಿ ಪ್ರಯೋಗಾತ್ಮಕ ಸಂಚಾರ ಹಾಗೂ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಿದ್ದಾರೆ.

ಇದರ ಭಾಗವಾಗಿ ಆಗಸ್ಟ್ 7ರಂದು ರಾತ್ರಿ ಯಶವಂತಪುರ–ಮಡಾವರ ನಡುವಿನ ಹಸಿರು ಮಾರ್ಗದಲ್ಲಿ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದೆ. ಇದೇ ವೇಳೆ ಗುಲಾಬಿ ಮಾರ್ಗಕ್ಕಾಗಿ ಬಿಇಎಂಎಲ್ ನಿರ್ಮಿಸಿರುವ ಎಂಟು ಆರು ಬೋಗಿಗಳ ರೈಲುಗಳನ್ನೂ ಪರಿಶೀಲಿಸಲಾಗುತ್ತದೆ. ಆದರೆ, ಆ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ಅಗತ್ಯವಾದ ಅಂತಿಮ ಸಿಎಂಆರ್‌ಎಸ್ ಅನುಮೋದನೆ ಸೆಪ್ಟೆಂಬರ್‌ನಲ್ಲಿ ದೊರೆಯುವ ಸಾಧ್ಯತೆ ಇದೆ. ಹಸಿರು ಮಾರ್ಗಕ್ಕೆ ಹೊಸ ರೈಲುಗಳು ಸೇರ್ಪಡೆಯಾದ ನಂತರ ಈಗಿರುವ ಕೆಲವು ಬಿಇಎಂಎಲ್ ರೈಲುಗಳನ್ನು ನೇರಳೆ ಮಾರ್ಗಕ್ಕೆ ಸ್ಥಳಾಂತರಿಸುವ ಯೋಜನೆಯೂ ಬಿಎಂಆರ್‌ಸಿಎಲ್ ಹೊಂದಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

Read Next

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..