ಚೀನಾ-ಭಾರತ ಮಧ್ಯೆ ನೇರ ವಿಮಾನ ಸಂಚಾರ
ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನವೂ ಇಂದು (ನ.10) ದೆಹಲಿಯಿಂದ ಗುವಾಂಗೌಗೆ ನೇರ ಹಾರಾಟ ನಡೆಸಲು ಆರಂಭಿಸಲಿದೆ. ಶಾಂಫ್ಟ್ ಸಹಕಾರ ಸಂಸ್ಥೆ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವಿನ ಸಭೆಯ ನಂತರ, ಭಾರತದ ವಿದೇಶಾಂಗ ಸಚಿವಾಲಯ ನೇರ ವಿಮಾನಗಳ ಪುನರಾರಂಭಿಸಿದೆ.
ಭಾರತ-ಚೀನಾ ನಡುವೆ ನೇರ ವಿಮಾನ ಸಂಚಾರ ಪುನಾರಂಭಗೊಂಡಿದೆ. ಸಾಂಕ್ರಾಮಿಕ ರೋಗ 'ಕೊರೋನಾ' ಕಾರಣಕ್ಕೆ 2020ರಲ್ಲಿ ಭಾರತ-ಚೀನಾ ನಡುವಿನ ನೇರ ವಿಮಾನ ಸೇವೆ ಸ್ಥಗಿತಗೊಂಡಿತ್ತು. ಆ ಬಳಿಕ ಪೂರ್ವ ಲಡಾಖ್‌ನಲ್ಲಿ ಚೀನಾ ಗಡಿ ಭಾಗದಲ್ಲಿ ಎರಡೂ ಕಡೆಯ ಸೈನಿಕರ ನಡುವೆ 4 ವರ್ಷಗಳ ಹಿಂದೆ ನಡೆದ ಗಡಿ ಸಂಘರ್ಷದಿಂದಾಗಿ ನೇರ ವಿಮಾನಯಾನ ಮತ್ತೆ ಆರಂಭಗೊಂಡಿರಲಿಲ್ಲ. ಐದು ವರ್ಷಗಳ ನಂತರ ಕೋಲ್ಕತ್ತದಿಂದ ಹೊರಟ ಇಂಡಿಗೊ ವಿಮಾನ ಚೀನಾದ ಗುವಾಂಗೌ ನಗರದ ವಿಮಾನ ನಿಲ್ದಾಣಲ್ಲಿ ಇಳಿದಿದೆ.
ಚೀನಾದ ಶಾಂಫೈ ನಗರದಿಂದ ದೆಹಲಿಗೆ ನೇರ ವಿಮಾನ ಸಂಚಾರ ನ.9ರಿಂದ ಪುನರಾರಂಭಗೊಳ್ಳಲಿವೆ. ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನವೂ ಇಂದು (ನ.10) ದೆಹಲಿಯಿಂದ ಗುವಾಂಗೌಗೆ ನೇರ ಹಾರಾಟ ನಡೆಸಲು ಆರಂಭಿಸಲಿದೆ. ಶಾಂಫ್ಟ್ ಸಹಕಾರ ಸಂಸ್ಥೆ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವಿನ ಸಭೆಯ ನಂತರ, ಭಾರತದ ವಿದೇಶಾಂಗ ಸಚಿವಾಲಯ ನೇರ ವಿಮಾನಗಳ ಪುನರಾರಂಭಿಸಿದೆ.