ಫಿನ್ಲ್ಯಾಂಡ್-ಭಾರತ ಪ್ರವಾಸೋದ್ಯಮ ಕಾರ್ಯಾಗಾರ 2026
ಭಾರತದ ಪ್ರಮುಖ ವಾಣಿಜ್ಯ ಮತ್ತು ಪ್ರವಾಸಿ ಕೇಂದ್ರಗಳಾದ ಮುಂಬೈ, ಹೊಸ ದೆಹಲಿ ಹಾಗೂ ಬೆಂಗಳೂರು ನಗರಗಳಲ್ಲಿ ಈ ಕಾರ್ಯಾಗಾರ ಮತ್ತು ವ್ಯಾಪಾರ ಸಭೆಗಳು ಸತತವಾಗಿ ಜರುಗಿದವು.
ಭಾರತ ಮತ್ತು ಫಿನ್ಲ್ಯಾಂಡ್ ನಡುವಿನ ಪ್ರವಾಸೋದ್ಯಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ದ್ವಿಪಕ್ಷೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ 'ಫಿನ್ಲ್ಯಾಂಡ್-ಭಾರತ ಪ್ರವಾಸೋದ್ಯಮ ಕಾರ್ಯಾಗಾರ 2026' (Finland-India Tourism Workshop 2026) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಭಾರತದ ಪ್ರಮುಖ ಮೂರು ಪ್ರಮುಖ ನಗರಗಳಲ್ಲಿ ಈ ರೋಡ್‌ಶೋ ಹಾಗೂ ಕಾರ್ಯಾಗಾರವನ್ನು ನಡೆಸಲಾಯಿತು.
ಇದನ್ನೂ ಓದಿ: ನಾಲ್ಕು ಲಕ್ಷದೊಳಗೆ ಜಪಾನ್ ಟೂರ್-ಹೇಗೆ ಗೊತ್ತಾ?
ಭಾರತದ ಪ್ರಮುಖ ವಾಣಿಜ್ಯ ಮತ್ತು ಪ್ರವಾಸಿ ಕೇಂದ್ರಗಳಾದ ಮುಂಬೈ, ಹೊಸ ದೆಹಲಿ ಹಾಗೂ ಬೆಂಗಳೂರು ನಗರಗಳಲ್ಲಿ ಈ ಕಾರ್ಯಾಗಾರ ಮತ್ತು ವ್ಯಾಪಾರ ಸಭೆಗಳು ಸತತವಾಗಿ ಜರುಗಿದವು. ಫಿನ್ಲ್ಯಾಂಡ್ ದೇಶದಿಂದ ಆಗಮಿಸಿದ್ದ ಪ್ರವಾಸೋದ್ಯಮ ಮಂಡಳಿಯ ಹಿರಿಯ ಅಧಿಕಾರಿಗಳು, ಪ್ರಮುಖ ಹೊಟೇಲ್ ಮಾಲೀಕರು, ರೆಸಾರ್ಟ್ ಪ್ರತಿನಿಧಿಗಳು ಹಾಗೂ ಟೂರ್ ಆಪರೇಟರ್‌ಗಳು ಭಾರತದ ಪ್ರಮುಖ ಟ್ರಾವೆಲ್ ಏಜೆಂಟ್‌ಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಭಾರತೀಯ ಪ್ರವಾಸಿಗರಿಗೆ ಫಿನ್ಲ್ಯಾಂಡ್ ದೇಶದ ಪ್ರಾಕೃತಿಕ ಸೌಂದರ್ಯ, ಅದರಲ್ಲೂ ವಿಶೇಷವಾಗಿ 'ಅರೋರಾ ಬೋರಿಯಾಲಿಸ್' ವೀಕ್ಷಣೆ ಹಾಗೂ ಲ್ಯಾಪ್ಲ್ಯಾಂಡ್ ಪ್ರದೇಶದ ಹಿಮ ಸಾಹಸ ಪ್ರವಾಸೋದ್ಯಮವನ್ನು ಪರಿಚಯಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿತ್ತು.
ಭಾರತದಿಂದ ಫಿನ್ಲ್ಯಾಂಡ್‌ಗೆ ಭೇಟಿ ನೀಡುವ ಹನಿಮೂನ್ ಜೋಡಿಗಳು, ಸಾಹಸ ಪ್ರಿಯರು ಹಾಗೂ ಹೈ-ಎಂಡ್ ಐಷಾರಾಮಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ, ಅವರಿಗೆ ಮತ್ತಷ್ಟು ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಸಮಾಲೋಚನೆ ನಡೆಸಲಾಯಿತು.
ಫಿನ್ಲ್ಯಾಂಡ್ ಮತ್ತು ಭಾರತದ ನಡುವಿನ ಸುಲಭ ವಿಮಾನ ಸಂಪರ್ಕ ಹಾಗೂ ಪ್ರವಾಸಿ ವೀಸಾ ಪ್ರಕ್ರಿಯೆಗಳು ಸರಳವಾಗಿರುವುದರಿಂದ ಮುಂದಿನ ದಿನಗಳಲ್ಲಿ ಭಾರತದಿಂದ ಯುರೋಪ್‌ನ ಈ ಸುಂದರ ದೇಶಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ವಿಶ್ವಾಸವನ್ನು ಈ ಕಾರ್ಯಾಗಾರ ವ್ಯಕ್ತಪಡಿಸಿದೆ.