ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ರೈಡ್ ಸೇವೆಗೆ ಚಾಲನೆ
ಈ ಹೆಲಿರೈಡ್ ಮೂಲಕ ಕರಾವಳಿಯ ಕಡಲತೀರ, ಹಸಿರು ಪರಿಸರ ಹಾಗೂ ನಗರದ ವಿಹಂಗಮ ನೋಟವನ್ನು ಮೇಲಿನಿಂದಲೇ ವೀಕ್ಷಿಸಲು ಸಾಧ್ಯವಾಗುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಆಸಕ್ತರು https://heli.dakshinakannada.org ಮೂಲಕ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿ ಉತ್ಸವ 2025ರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ರೈಡ್ ಸೇವೆಯನ್ನು ಆರಂಭಿಸಲಾಗಿದೆ. ಈ ವಿಶೇಷ ಹೆಲಿರೈಡ್ ಅನುಭವವು ಪ್ರವಾಸಿಗರಿಗೆ ಕರಾವಳಿಯ ಸುಂದರ ಭೂದೃಶ್ಯವನ್ನು ಆಕಾಶದಲ್ಲಿ ಹಾರುತ್ತಲೇ ನೋಡುವ ಅವಕಾಶ ನೀಡುತ್ತದೆ. ಪ್ರತಿ ಪ್ರಯಾಣದ ದರ 3,500 ರು. ಎಂದು ನಿಗದಿಗೊಳಿಸಲಾಗಿದ್ದು, ಪ್ರತಿ ಹಾರಾಟದಲ್ಲಿ 5 ಜನ ಸವಾರರಿಗೆ ಅವಕಾಶ ಇರುವಂತೆ ವ್ಯವಸ್ಥೆ ಮಾಡಲಾಗಿದೆ.
ಹೆಲಿಕಾಪ್ಟರ್ ರೈಡ್‌ಗಳು ದಿನಕ್ಕೆ ಎರಡು ಅವಧಿಗಳಲ್ಲಿ ಅಂದರೆ ಬೆಳಿಗ್ಗೆ 10:30 ರಿಂದ 1:00 ರವರೆಗೆ ಮತ್ತು ಮಧ್ಯಾಹ್ನ 2:30 ರಿಂದ 5:00 ರವರೆಗೆ ಲಭ್ಯವಾಗಲಿವೆ. ಪ್ರತಿ ಹಾರಾಟದಲ್ಲಿ ಸುಮಾರು 7 ನಿಮಿಷಗಳ ಕಾಲ ಪ್ರಯಾಣಿಕರು ಹಾರಾಟ ನಡೆಸುತ್ತಾರೆಂದು ಆಯೋಜಕರು ತಿಳಿಸಿದ್ದಾರೆ.
ಈ ಹೆಲಿರೈಡ್ ಮೂಲಕ ಕರಾವಳಿಯ ಕಡಲತೀರ, ಹಸಿರು ಪರಿಸರ ಹಾಗೂ ನಗರದ ವಿಹಂಗಮ ನೋಟವನ್ನು ಮೇಲಿನಿಂದಲೇ ವೀಕ್ಷಿಸಲು ಸಾಧ್ಯವಾಗುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ಸೇವೆಯನ್ನು ಪ್ರಾರಂಭಿಸಲಾಗಿದ್ದು, ಆಸಕ್ತರು https://heli.dakshinakannada.org ಮೂಲಕ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.