ಏಷ್ಯಾದ ಪ್ರಮುಖ ಮರೈನ್ ಟೂರಿಸಂ ಕೇಂದ್ರವಾಗಲಿದ್ಯಾ ವಿಯೆಟ್ನಾಂ ?
ನಗರದ ಪ್ರವಾಸೋದ್ಯಮ ಇಲಾಖೆ ‘From the City to the Sea via the River’ ಎಂಬ ವಿಶಿಷ್ಟ ಯೋಜನೆಯಡಿಯಲ್ಲಿ ನದಿ ಮಾರ್ಗಗಳ ಮೂಲಕ ನಗರವನ್ನು ಸಮುದ್ರ ತೀರದ ಪ್ರವಾಸಿ ತಾಣಗಳೊಂದಿಗೆ ಸಂಪರ್ಕಿಸುವ ಯೋಜನೆಯನ್ನು ರೂಪಿಸಿದೆ. ಇದರ ಮೂಲಕ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಹೋ ಚಿ ಮಿನ್ ಸಿಟಿಯ ಸಾಂಸ್ಕೃತಿಕ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ಆಧುನಿಕ ನಗರ ಅಭಿವೃದ್ಧಿಯನ್ನು ಒಂದೇ ಹಾದಿಯಲ್ಲಿ ಕಾಣುವ ಮತ್ತು ಅರಿಯುವ ಅವಕಾಶ ಸಿಗಲಿದೆ.
ವಿಯೆಟ್ನಾಂ ದೇಶದ ಆರ್ಥಿಕ ಕೇಂದ್ರಬಿಂದುವೆಂದೇ ಖ್ಯಾತಿ ಪಡೆದ ಹೋ ಚಿ ಮಿನ್ಹ್ ಸಿಟಿ ಈಗ ಏಷ್ಯಾದ ಪ್ರಮುಖ ಮರೈನ್ ಟೂರಿಸಂ ತಾಣವಾಗಿ ರೂಪಾಂತರಗೊಳ್ಳುವತ್ತ ತನ್ನ ಚಿತ್ತನ್ನು ಹರಿಸಿದೆ. ಈ ನಿಟ್ಟಿನಲ್ಲಿ ನಗರ ಪಾಲಿಕೆಯು 2030ರೊಳಗೆ “ಏಶಿಯಾ ಮೆರೈನ್ ಟೂರಿಸಂ ಹಬ್” ಆಗಿ ಬೆಳೆಯುವ ದೀರ್ಘಾವಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
ನಗರದ ಪ್ರವಾಸೋದ್ಯಮ ಇಲಾಖೆ ‘From the City to the Sea via the River’ ಎಂಬ ವಿಶಿಷ್ಟ ಯೋಜನೆಯಡಿಯಲ್ಲಿ ನದಿ ಮಾರ್ಗಗಳ ಮೂಲಕ ನಗರವನ್ನು ಸಮುದ್ರ ತೀರದ ಪ್ರವಾಸಿ ತಾಣಗಳೊಂದಿಗೆ ಸಂಪರ್ಕಿಸುವ ಯೋಜನೆಯನ್ನು ರೂಪಿಸಿದೆ. ಇದರ ಮೂಲಕ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಹೋ ಚಿ ಮಿನ್ ಸಿಟಿಯ ಸಾಂಸ್ಕೃತಿಕ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ಆಧುನಿಕ ನಗರ ಅಭಿವೃದ್ಧಿಯನ್ನು ಒಂದೇ ಹಾದಿಯಲ್ಲಿ ಕಾಣುವ ಮತ್ತು ಅರಿಯುವ ಅವಕಾಶ ಸಿಗಲಿದೆ.

ಈ ಯೋಜನೆಯ ಭಾಗವಾಗಿ, ನಗರ ಪಾಲಿಕೆಯು ತೀರ ಪ್ರದೇಶಗಳಾದ ವುಂಗ್ ಟಾವು (Vung Tau), ಬಿನ್ ದುಯಾಂಗ್ (Binh Duong) ಮತ್ತು ಕ್ಯಾನ್ ಜಿಯೋ (Can Gio) ಪ್ರದೇಶಗಳೊಂದಿಗೆ ಸಮಗ್ರ ಕ್ಲಸ್ಟರ್ ಮಾದರಿಯಲ್ಲಿ ಕಾರ್ಯಸೂಚಿಗಳನ್ನು ರೂಪಿಸಲು ಮುಂದಾಗಿದೆ. ಇದರಿಂದ ಮರೈನ್ ಟೂರಿಸಂ ಜತೆಗೆ ಕಡಲ ತೀರದ ವ್ಯಾಪಾರ, ಆತಿಥ್ಯ ಹಾಗೂ ಮೀನುಗಾರಿಕೆ ಆಧಾರಿತ ಉದ್ಯಮಗಳಿಗೂ ಉತ್ತೇಜನ ಸಿಗಲಿದೆ.
ಹೋ ಚಿ ಮಿನ್ ಸಿಟಿಯ ಪ್ರವಾಸೋದ್ಯಮ ಅಧಿಕಾರಿಗಳು, ಈ ಪರಿಕಲ್ಪನೆ ಸ್ಥಳೀಯ ಆರ್ಥಿಕತೆ ಬಲಗೊಳ್ಳಲು ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗಲು ನೆರವಾಗಲಿದೆ ಎಂದು ತಿಳಿಸಿದ್ದಾರೆ. “ಸಂಸ್ಕೃತಿ, ನಿಸರ್ಗ ಮತ್ತು ಆರ್ಥಿಕತೆಯ ಸಮನ್ವಯದ ಮೂಲಕ ನಾವು ಸುಸ್ಥಿರ ಪ್ರವಾಸೋದ್ಯಮದ ಮಾದರಿಯನ್ನು ನಿರ್ಮಿಸುತ್ತಿದ್ದೇವೆ” ಎಂದೂ ಅವರು ತಿಳಿಸಿದರು.