ಅಂಡಮಾನ್ ಪ್ರವಾಸಕ್ಕೆ ಐಆರ್ಸಿಟಿಸಿ ಆಫರ್
ಅಂಡಮಾನ್ ಪ್ರವಾಸ ಬಯಸುವವರಿಗೆ ಐಆರ್ಸಿಟಿಸಿ ಗುಡ್ನ್ಯೂಸ್ ನೀಡಿದೆ. 5 ದಿನಗಳ ವಿಶೇಷ ಪ್ಯಾಕೇಜ್ ₹22,100ರಿಂದ ಆರಂಭವಾಗಲಿದ್ದು, ಹಲವು ಪ್ರವಾಸಿ ತಾಣಗಳನ್ನು ಒಳಗೊಂಡಿದೆ.
ಬೀಚ್ ಪ್ರವಾಸವನ್ನು ಇಷ್ಟಪಡುವವರಿಗೆ ಭಾರತೀಯ ರೈಲ್ವೆ ಹೊಸ ಪ್ರವಾಸ ಪ್ಯಾಕೇಜ್ ಪರಿಚಯಿಸಿದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ‘ಎಕ್ಸಾಟಿಕ್ ಅಂಡಮಾನ್ ಹಾಲಿಡೇಸ್’ ಹೆಸರಿನಲ್ಲಿ 5 ದಿನ ಮತ್ತು 4 ರಾತ್ರಿ ಪ್ರವಾಸ ಪ್ಯಾಕೇಜ್‌ನ್ನು ಘೋಷಿಸಿದ್ದು, ಪ್ರತಿ ವ್ಯಕ್ತಿಗೆ 22,100 ರು. ನಿಂದ ದರ ಆರಂಭವಾಗಲಿದೆ.
ಈ ಪ್ಯಾಕೇಜ್‌ನಲ್ಲಿ ಅಂಡಮಾನ್‌ನ ಸುಂದರ ಕಡಲತೀರಗಳು, ನೀಲಿ ಸಮುದ್ರ, ಐತಿಹಾಸಿಕ ಸ್ಥಳಗಳು ಹಾಗೂ ದ್ವೀಪಗಳ ಪ್ರವಾಸವನ್ನು ಒಳಗೊಂಡಿದೆ. ಪ್ರವಾಸದ ವೇಳೆ ಮೂರು ರಾತ್ರಿ ಪೋರ್ಟ್ ಬ್ಲೇರ್‌ನಲ್ಲಿ ಮತ್ತು ಒಂದು ರಾತ್ರಿ ಹ್ಯಾವ್‌ಲಾಕ್ ದ್ವೀಪದಲ್ಲಿ ವಾಸ್ತವ್ಯ ಕಲ್ಪಿಸಲಾಗುತ್ತದೆ.

ಮೊದಲ ದಿನ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಪ್ರವಾಸಿಗರನ್ನು ಸ್ವಾಗತಿಸಿ ಹೋಟೆಲ್‌ಗೆ ಕರೆದೊಯ್ಯಲಾಗುತ್ತದೆ. ನಂತರ ಕಾರ್ಬಿನ್ಸ್ ಕೋವ್ ಬೀಚ್ ಮತ್ತು ಸೆಲ್ಯುಲಾರ್ ಜೈಲು ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ. ಎರಡನೇ ದಿನ ರಾಸ್ ಐಲ್ಯಾಂಡ್ ಮತ್ತು ನಾರ್ತ್ ಬೇ ಐಲ್ಯಾಂಡ್‌ಗೆ ಪ್ರವಾಸ ಆಯೋಜಿಸಲಾಗಿದ್ದು, ಆಸಕ್ತರು ಸ್ಕೂಬಾ ಡೈವಿಂಗ್, ಗ್ಲಾಸ್-ಬಾಟಮ್ ಬೋಟ್ ಹಾಗೂ ಸಣ್ಣ ಸಬ್‌ಮೆರಿನ್ ರೈಡ್‌ನಂಥ ಚಟುವಟಿಕೆಗಳನ್ನು ಆಯ್ಕೆ ಮಾಡಬಹುದು.

ಮೂರನೇ ದಿನ ಫೆರ್ರಿ ಮೂಲಕ ಹ್ಯಾವ್‌ಲಾಕ್ ದ್ವೀಪಕ್ಕೆ ತೆರಳಿ ಕಡಲತೀರದಲ್ಲಿ ವಿಶ್ರಾಂತಿ ಪಡೆಯಬಹುದು. ನಾಲ್ಕನೇ ದಿನ ಪೋರ್ಟ್ ಬ್ಲೇರ್‌ಗೆ ಮರಳಿ ವಾಸ್ತವ್ಯ ಮಾಡಲಾಗುತ್ತದೆ. ಐದನೇ ದಿನ ವಿಮಾನ ನಿಲ್ದಾಣಕ್ಕೆ ವರ್ಗಾವಣೆ ಮಾಡುವ ಮೂಲಕ ಪ್ರವಾಸ ಮುಕ್ತಾಯಗೊಳ್ಳಲಿದೆ.
ಪ್ಯಾಕೇಜ್‌ನಲ್ಲಿ ವಸತಿ, ಉಪಹಾರ ಮತ್ತು ರಾತ್ರಿ ಊಟ, ಸ್ಥಳೀಯ ಸಾರಿಗೆ, ಪ್ರವಾಸಿ ತಾಣಗಳ ಪ್ರವೇಶ ಶುಲ್ಕ, ಫೆರ್ರಿ ಟಿಕೆಟ್, ಅಗತ್ಯ ಪರವಾನಗಿಗಳು ಮತ್ತು GST ಸೇರಿವೆ. ವಿಮಾನ ಪ್ರಯಾಣ, ವೈಯಕ್ತಿಕ ಖರ್ಚು, ವಿಮೆ ಹಾಗೂ ಜಲಕ್ರೀಡೆಗಳಂತಹ ಕೆಲವು ಸೇವೆಗಳು ಪ್ಯಾಕೇಜ್‌ನಲ್ಲಿ ಸೇರಿಲ್ಲ.ಟ್ರಿಪಲ್ ಶೇರಿಂಗ್‌ಗೆ 22,100 ರು., ಡಬಲ್ ಶೇರಿಂಗ್‌ಗೆ ₹24,000 ಮತ್ತು ಸಿಂಗಲ್ ಆಕ್ಯುಪೆನ್ಸಿಗೆ 39,100 ರು. ದರ ನಿಗದಿಯಾಗಿದೆ.
ಕಡಲತೀರ, ದ್ವೀಪಗಳ ಸೌಂದರ್ಯ ಹಾಗೂ ಸಾಹಸ ಚಟುವಟಿಕೆಗಳನ್ನು ಒಂದೇ ಪ್ರವಾಸದಲ್ಲಿ ಅನುಭವಿಸಲು ಬಯಸುವವರಿಗೆ IRCTCಯ ಈ ಪ್ಯಾಕೇಜ್ ಉತ್ತಮ ಆಯ್ಕೆಯಾಗಿದೆ.