ಸೇಂಟ್ ಮೇರಿಸ್ ದ್ವೀಪ ಪರಂಪರೆ ತಾಣ?
ಕರ್ನಾಟಕದ ಉಡುಪಿ ಸಮೀಪದ ಅರಬ್ಬಿ ಸಮುದ್ರ ಕಿನಾರೆಯಲ್ಲಿರುವ ಮಲ್ಪೆಯ ಸೈಂಟ್ ಮೇರಿ ಐಲ್ಯಾಂಡ್ ಸಮೂಹ ಸೇರಿ ಏಳು ಹೊಸ ತಾಣಗಳನ್ನು ವಿಶ್ವ ಪರಂಪರೆ ತಾಣದ ತಾತ್ಕಾಲಿಕ ಪಟ್ಟಿಗೆ ಸೇರಿಸಲು ಯುನೆಸ್ಕೋ ನಿರ್ಧರಿಸಿರುವುದರಿಂದ ಪರಿಗಣನೆಯಲ್ಲಿರುವ ಭಾರತದ ಅಂಥ ತಾಣಗಳ ಸಂಖ್ಯೆ 69ಕ್ಕೆ ಏರಿದೆ.
ಕರ್ನಾಟಕದ ಉಡುಪಿ ಬಳಿಯ ಮಲ್ಪೆಯಲ್ಲಿರುವ ಸೇಂಟ್ ಮೇರಿಸ್ ಐಲ್ಯಾಂಡ್, ಪ್ರಖ್ಯಾತ ಧಾರ್ಮಿಕ ಕೇಂದ್ರ ತಿರುಪತಿಯ ತಿರುಮಲ ಬೆಟ್ಟಗಳ ಸಹಿತ ಭಾರತದ ಇನ್ನೂ ಏಳು ಸ್ಥಳಗಳನ್ನು ವಿಶ್ವ ಪರಂಪರೆ ತಾಣಕ್ಕೆ ಸೇರಿಸಲು ಯುನೆಸ್ಕೋ ಮುಂದಾಗಿದೆ. ಏಳು ಹೊಸ ತಾಣಗಳನ್ನು ವಿಶ್ವ ಪರಂಪರೆ ತಾಣದ ತಾತ್ಕಾಲಿಕ ಪಟ್ಟಿಗೆ ಸೇರಿಸಲು ಯುನೆಸ್ಕೋ ನಿರ್ಧರಿಸಿರುವುದರಿಂದ ಪರಿಗಣನೆಯಲ್ಲಿರುವ ಭಾರತದ ಅಂಥ ತಾಣಗಳ ಸಂಖ್ಯೆ 69ಕ್ಕೆ ಏರಿದೆ. ಅವುಗಳಲ್ಲಿ 49 ಸಾಂಸ್ಕೃತಿಕ, 17 ನೈಸರ್ಗಿಕ ಹಾಗೂ ಮೂರು ಮಿಶ್ರ ವಿಭಾಗಕ್ಕೆ ಸೇರಿದ್ದಾಗಿವೆ. ಏಳು ಹೊಸ ತಾಣಗಳ ಪರಿಗಣನೆಯೊಂದಿಗೆ ಆಸಕ್ತರ ಪ್ರವಾಸ ಪಟ್ಟಿಗೆ ಇನ್ನು ಮುಂದೆ ಏಳು ಹೊಸ ರಮಣೀಯ ಸ್ಥಳಗಳ ಸೇರ್ಪಡೆಯಾದಂತಾಗಿದೆ.
ಕರ್ನಾಟಕದ ಉಡುಪಿ ಸಮೀಪದ ಅರಬ್ಬಿ ಸಮುದ್ರ ಕಿನಾರೆಯಲ್ಲಿರುವ ಮಲ್ಪೆಯ ಸೈಂಟ್ ಮೇರಿ ಐಲ್ಯಾಂಡ್ ಸಮೂಹ, ಮಹಾರಾಷ್ಟ್ರದ ಪಂಚಗಣಿ ಮತ್ತು ಮಹಾಬಲೇಶ್ವರದ ಮೆಟ್ಟಿಲು ರೀತಿಯ ಬೆಟ್ಟ ಪ್ರದೇಶ (ಡೆಕ್ಕನ್ ಟ್ರ್ಯಾಪ್), ಮೇಘಾಲಯದ ಪ್ರಾಚೀನ ಗುಹೆಗಳು, ನಾಗಾಲ್ಯಾಂಡ್‌ನ ನಾಗಾ ಹಿಲ್ ಒಫಿಯೋಲೈಟ್. ಆಂಧ್ರ ಪ್ರದೇಶದ ಮತ್ತಿ ದಿಬ್ಬ ಹಾಗೂ ತಿರುಮಲ ಬೆಟ್ಟಗಳ ನೈಸರ್ಗಿಕ ಪರಂಪರೆ ಮತ್ತು ಕೇರಳದ ವರ್ಕಲದ ನೈಸರ್ಗಿಕ ಪರಂಪರೆ ಯುನೆಸ್ಕೋ ಪರಿಗಣನೆಯ ವಿಶ್ವ ಪರಂಪರೆ ತಾಣ ಪಟ್ಟಿಯಲ್ಲಿರುವ ಭಾರತದ ಏಳು ಹೊಸ ಸ್ಥಳಗಳಾಗಿವೆ.