Wednesday, July 22, 2026
Wednesday, July 22, 2026

ಅತಿ-ಪ್ರವಾಸೋದ್ಯಮ ತಡೆಗೆ ಇಟಲಿ ಹೊಸ ಹೆಜ್ಜೆ

ಇಟಲಿಯ ದ್ವೀಪ ಪ್ರದೇಶಗಳಾದ ಸಾರ್ಡಿನಿಯಾ ಮತ್ತು ಪುಗ್ಲಿಯಾ ಸೇರಿದಂತೆ ಪ್ರಮುಖ ಕಡಲತೀರಗಳಲ್ಲಿ ಪರಿಸರ ವ್ಯವಸ್ಥೆ ಹಾಳಾಗುತ್ತಿರುವುದನ್ನು ತಡೆಯಲು ದಿನಕ್ಕೆ ಇಷ್ಟೇ ಪ್ರವಾಸಿಗರು ಬರಬೇಕು ಎಂಬ ಮಿತಿಯನ್ನು ವಿಧಿಸಲಾಗಿದೆ.

ವಿಶ್ವದಾದ್ಯಂತ ಅಪಾರ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಇಟಲಿ ದೇಶವು, ತನ್ನ ರಮಣೀಯ ಮತ್ತು ಸಂವೇದನಾಶೀಲ ಕಡಲತೀರಗಳನ್ನು ಸಂರಕ್ಷಿಸಲು ಹಾಗೂ ಅತಿಯಾದ ಪ್ರವಾಸಿಗರ ದಟ್ಟಣೆಯನ್ನು ನಿಯಂತ್ರಿಸಲು ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಇಟಲಿಯ ಪ್ರಸಿದ್ಧ ಕಡಲತೀರಗಳಿಗೆ ಭೇಟಿ ನೀಡಲು ಪ್ರವಾಸಿಗರು ಮುಂಗಡ ಸ್ಲಾಟ್ ಬುಕಿಂಗ್ ಮಾಡಿಕೊಳ್ಳುವುದು ಮತ್ತು ಪ್ರವೇಶ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಯುನೈಟೆಡ್ ಏರ್‌ಲೈನ್ಸ್‌ನಿಂದ ಹೊಸ ‘ಇಕಾನಮಿ ಪ್ಲಸ್’ ಆಸನ ವ್ಯವಸ್ಥೆ

ಇಟಲಿಯ ದ್ವೀಪ ಪ್ರದೇಶಗಳಾದ ಸಾರ್ಡಿನಿಯಾ ಮತ್ತು ಪುಗ್ಲಿಯಾ ಸೇರಿದಂತೆ ಪ್ರಮುಖ ಕಡಲತೀರಗಳಲ್ಲಿ ಪರಿಸರ ವ್ಯವಸ್ಥೆ ಹಾಳಾಗುತ್ತಿರುವುದನ್ನು ತಡೆಯಲು ದಿನಕ್ಕೆ ಇಷ್ಟೇ ಪ್ರವಾಸಿಗರು ಬರಬೇಕು ಎಂಬ ಮಿತಿಯನ್ನು ವಿಧಿಸಲಾಗಿದೆ.

ಈ ಕಡಲತೀರಗಳಿಗೆ ತೆರಳುವ ಮುನ್ನವೇ ಪ್ರವಾಸಿಗರು ಸ್ಥಳೀಯ ನಗರಾಡಳಿತ ಅಭಿವೃದ್ಧಿಪಡಿಸಿರುವ ಅಧಿಕೃತ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ತಮ್ಮ ಆಗಮನದ ದಿನಾಂಕ ಮತ್ತು ಸಮಯದ ಸ್ಲಾಟ್ ಅನ್ನು ಬುಕ್ ಮಾಡಿಕೊಳ್ಳಬೇಕು. ಸ್ಲಾಟ್ ಬುಕ್ ಆಗದ ಹೊರತು ಬೀಚ್‌ಗಳಿಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ.

ಪರಿಸರ ಸಂರಕ್ಷಣೆ ಮತ್ತು ನಿರ್ವಹಣಾ ವೆಚ್ಚಕ್ಕಾಗಿ ಪ್ರವಾಸಿಗರಿಂದ ತಲಾ ಸುಮಾರು ರು 90 ರಿಂದ ರು 270 ವರೆಗೆ ಸಂಕೇತ ಪ್ರವೇಶ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಸಂಗ್ರಹವಾದ ಈ ಹಣವನ್ನು ಕಡಲತೀರಗಳ ಸ್ವಚ್ಛತೆ, ಲೈಫ್‌ಗಾರ್ಡ್ ಸಿಬ್ಬಂದಿ ನೇಮಕ ಮತ್ತು ನೈಸರ್ಗಿಕ ಸಸ್ಯವರ್ಗದ ರಕ್ಷಣೆಗೆ ಬಳಸಲಾಗುತ್ತದೆ.

ಕೇವಲ ಬುಕಿಂಗ್ ಮತ್ತು ಶುಲ್ಕ ಮಾತ್ರವಲ್ಲದೆ, ಕಡಲತೀರಗಳ ನೈಸರ್ಗಿಕ ಸೌಂದರ್ಯವನ್ನು ಕಾಯ್ದುಕೊಳ್ಳಲು ಕೆಲವು ವಿಶೇಷ ನಿಷೇಧಗಳನ್ನು ವಿಧಿಸಲಾಗಿದೆ. ಕೆಲವು ಕಡಲತೀರಗಳಲ್ಲಿ ನೇರವಾಗಿ ಮರಳಿನ ಮೇಲೆ ಟವಲ್ ಅಥವಾ ಬಟ್ಟೆ ಹಾಸುವುದನ್ನು ನಿಷೇಧಿಸಲಾಗಿದೆ. ಮರಳು ಬಟ್ಟೆಗೆ ಅಂಟಿಕೊಂಡು ಹೊರಹೋಗುವುದನ್ನು ತಡೆಯಲು ಪ್ರವಾಸಿಗರು ಕಡ್ಡಾಯವಾಗಿ 'ಬಿದಿರಿನ ಮ್ಯಾಟ್' ಬಳಸುವುದು ಕಡ್ಡಾಯ.

ಮರಳು ಮತ್ತು ಚಿಪ್ಪುಗಳನ್ನು ಕೊಂಡೊಯ್ಯುವಂತಿಲ್ಲ: ಬೀಚ್‌ಗಳಿಂದ ಮರಳು, ಸಣ್ಣ ಕಲ್ಲುಗಳು ಅಥವಾ ಶಂಖ-ಚಿಪ್ಪುಗಳನ್ನು ನೆನಪಿಗಾಗಿ ಮನೆಗೆ ತೆಗೆದುಕೊಂಡು ಹೋಗುವುದು ಗುರುತರ ಅಪರಾಧವಾಗಿದ್ದು, ಸಿಕ್ಕಿಬಿದ್ದರೆ ರು. 45,000ಕ್ಕೂ ಹೆಚ್ಚು ಭಾರಿ ದಂಡ ವಿಧಿಸಲಾಗುತ್ತದೆ. ಹೆಚ್ಚಿನ ಕಡಲತೀರಗಳನ್ನು ಸಂಪೂರ್ಣವಾಗಿ ಸಿಂಗಲ್-ಯೂಸ್ ಪ್ಲಾಸ್ಟಿಕ್ ಮುಕ್ತ ಮತ್ತು 'ನೋ ಸ್ಮೋಕಿಂಗ್ ಝೋನ್' ಎಂದು ಘೋಷಿಸಲಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ