Saturday, March 28, 2026
Saturday, March 28, 2026

ಮಾರ್ಚ್‌ 28 ʻಅರ್ಥ್‌ ಅವರ್‌ʼ

ಅರ್ಥ್‌ ಅವರ್‌ ಎನ್ನುವುದು ಹವಾಮಾನ ಬದಲಾವಣೆಯ ವಿರುದ್ಧ ಡಬ್ಲ್ಯೂಡಬ್ಲ್ಯೂಎಫ್‌ ಆರಂಭಿಸಿದ ಅಭಿಯಾನ. 190ಕ್ಕೂ ಹೆಚ್ಚು ದೇಶಗಳು ಈ ಅಭಿಯಾನದಲ್ಲಿ ಭಾಗಿಯಾಗಿವೆ. ಪ್ರತಿ ವರ್ಷದ ಮಾರ್ಚ್‌ ತಿಂಗಳಿನ ಕೊನೆಯ ಶನಿವಾರದಂದು ಇದನ್ನು ಆಚರಿಸಲಾಗುತ್ತದೆ, ಅದೂ ರಾತ್ರಿ 8.30ರಿಂದ 9.30ರವರೆಗೆ. ಅಂದರೆ ಕೇವಲ ಒಂದು ಗಂಟೆಯ ಕಾಲ. ಆಗ ವಿದ್ಯುತ್‌ ದೀಪ, ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳ ಬಳಕೆಗೆ ಬ್ರೇಕ್‌ ಹಾಕುವುದು, ಆ ಮೂಲಕ ಮನುಷ್ಯ ಮತ್ತು ಪರಿಸರದ ಆರೋಗ್ಯ ವೃದ್ಧಿಸುವುದು ಈ ಅಭಿಯಾನದ ಉದ್ದೇಶ.

ಅರ್ಥ್‌ ಅವರ್‌, ಮಾರ್ಚ್‌ 28ರ ವಿಶೇಷ. ಡಬ್ಲ್ಯೂಡಬ್ಲ್ಯೂಎಫ್‌ನಿಂದ 2007ರಲ್ಲಿ ಈ ಅಭಿಯಾನ ಆರಂಭವಾಯಿತು. ಈ ವರ್ಷಕ್ಕೆ ಇದು 19ನೆಯ ಆಚರಣೆ. ಈವರೆಗೆ ಒಟ್ಟು 190ಕ್ಕೂ ಹೆಚ್ಚು ದೇಶಗಳ ಜನರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದು, ಅರ್ಥ್‌ ಅವರ್‌ ಇಂದು ಅತಿದೊಡ್ಡ ಅಂದೋಲನವಾಗಿದೆ. ಒಂದೇ ಗಂಟೆಯ ಈ ಆಚರಣೆ ವಿಶ್ವದ ಹವಾಮಾನ ಮತ್ತು ಸ್ವತಃ ನಮ್ಮೆಲ್ಲರ ಆರೋಗ್ಯಕ್ಕೆ ಉಪಕಾರಿ. ಹಾಗಾಗಿ ಈ ಅಭಿಯಾನದ ಕುರಿತು ನೀವೂ ಒಂಚೂರು ತಿಳಿದುಕೊಳ್ಳಿ.

ಏನಿದು ಅರ್ಥ್‌ ಅವರ್‌?

ಅರ್ಥ್‌ ಅವರ್‌ ಎನ್ನುವುದು ಹವಾಮಾನ ಬದಲಾವಣೆಯ ವಿರುದ್ಧ ಡಬ್ಲ್ಯೂಡಬ್ಲ್ಯೂಎಫ್‌ ಆರಂಭಿಸಿದ ಅಭಿಯಾನ. 190ಕ್ಕೂ ಹೆಚ್ಚು ದೇಶಗಳು ಈ ಅಭಿಯಾನದಲ್ಲಿ ಭಾಗಿಯಾಗಿವೆ. ಪ್ರತಿ ವರ್ಷದ ಮಾರ್ಚ್‌ ತಿಂಗಳಿನ ಕೊನೆಯ ಶನಿವಾರದಂದು ಇದನ್ನು ಆಚರಿಸಲಾಗುತ್ತದೆ, ಅದೂ ರಾತ್ರಿ 8.30ರಿಂದ 9.30ರವರೆಗೆ. ಅಂದರೆ ಕೇವಲ ಒಂದು ಗಂಟೆಯ ಕಾಲ. ಆಗ ವಿದ್ಯುತ್‌ ದೀಪ, ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳ ಬಳಕೆಗೆ ಬ್ರೇಕ್‌ ಹಾಕುವುದು, ಆ ಮೂಲಕ ಮನುಷ್ಯ ಮತ್ತು ಪರಿಸರದ ಆರೋಗ್ಯ ವೃದ್ಧಿಸುವುದು ಈ ಅಭಿಯಾನದ ಉದ್ದೇಶ.

ರಾತ್ರಿಯೇ ಏಕೆ?

New Project (1)

ರಾತ್ರಿಯೇ ಏಕೆ ವಿದ್ಯುತ್‌ ದೀಪ, ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳ ಬಳಕೆಗೆ ಬ್ರೇಕ್‌ ಹಾಕುವುದು ಎಂದರೆ, ಈ ಗ್ಯಾಜೆಟ್‌ಗಳು ಹೊರಸೂಸುವ ನೀಲಿ ಕಿರಣಗಳು ನಮ್ಮ ನಿದ್ರೆಯ ಚಕ್ರವನ್ನು ಹಾಳುಗೆಡವುತ್ತವೆ. ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತವೆ. ಹಾಗಾಗಿ ಈ ಗ್ಯಾಜೆಟ್‌ಗಳಿಗೆ ಅಂದು ಗುಡ್‌ಬೈ ಹೇಳಿ, ನಕ್ಷತ್ರಗಳು ತುಂಬಿದ ಆಕಾಶವನ್ನು ಕಣ್ತುಂಬಿಕೊಳ್ಳುತ್ತ ನಿದ್ರೆ ಮಾಡುವುದು ನಿದ್ರೆಯ ಚಕ್ರವನ್ನು ವೃದ್ಧಿಸಿ, ಕಾರ್ಟಿಸೋಲ್‌ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಒಂದು ಗಂಟೆಯ ಕಾಲ ವಿದ್ಯುತ್‌, ಮೊಬೈಲ್‌ ಮತ್ತಿತ್ತರ ಗ್ಯಾಜೆಟ್‌ಗಳ ಬಳಕೆ ಕೈಬಿಡುವ ಸಣ್ಣ ಪ್ರಯತ್ನದಿಂದ, ಪರಿಸರದಲ್ಲಿ ಕಾರ್ಬನ್‌ ಕಡಿತಗೊಳ್ಳುತ್ತದೆ. ಅನಗತ್ಯ ವಿದ್ಯುತ್‌ ಬಳಕೆ ನಿಯಂತ್ರಣದಿಂದ ವಿದ್ಯುತ್‌ ಉಳಿತಾಯವಾಗುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ಪರಿಸರ ಒಂಚೂರು ಚೈತನ್ಯ ತುಂಬಿಕೊಳ್ಳುತ್ತದೆ ಎಂದಾದಮೇಲೆ ನಾವು ನೀವು ಈ ಅಭಿಯಾನದಲ್ಲಿ ಪಾಲ್ಗೊಳ್ಳದಿದ್ದರೆ ಹೇಗೆ?

ಮಾಡಬೇಕಿರುವುದಿಷ್ಟೆ

ಮಾರ್ಚ್‌ 28ಕ್ಕೆ ರಾತ್ರಿ 8.30ರಿಂದ 9.30ರವರೆಗೆ ನಿಮ್ಮ ಮೊಬೈಲ್‌ ಮತ್ತು ವಿದ್ಯುತ್‌ ಬಳಕೆಯ ಎಲ್ಲಾ ಗ್ಯಾಜೆಟ್‌ಗಳನ್ನು ಅನಗತ್ಯವಾಗಿ ಬಳಸಬೇಡಿ. ಸಾಧ್ಯವಾದರೆ ಇದನ್ನು ಮುಂದಿನ ದಿನಗಳಿಗೂ ಪಾಲಿಸಿ. ನಿವೂ ನಿಮ್ಮವರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ. ಅಭಿಯಾನಕ್ಕೆ ಕೈ ಜೋಡಿಸಿ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ