ಕುಲು ಕಣಿವೆಗೆ ಭೇಟಿ ನೀಡಿದ ಕಂಗನಾ
ಸ್ಥಳೀಯ ಧಾರ್ಮಿಕ ಇತಿಹಾಸ ಮತ್ತು ನಂಬಿಕೆಗಳ ಪ್ರಕಾರ, ಈ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಪ್ರತಿ 12 ವರ್ಷಗಳಿಗೊಮ್ಮೆ ಭೀಕರವಾದ ಸಿಡಿಲು ಅಪ್ಪಳಿಸುತ್ತದೆ. ಸಿಡಿಲು ಬಡಿದ ತಕ್ಷಣವೇ ಗರ್ಭಗುಡಿಯಲ್ಲಿರುವ ಬೃಹತ್ ಶಿವಲಿಂಗವು ನೂರಾರು ಚೂರುಗಳಾಗಿ ಒಡೆದುಹೋಗುತ್ತದೆ.
ಬಾಲಿವುಡ್ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ಅವರು ಇತ್ತೀಚೆಗೆ ಹಿಮಾಚಲ ಪ್ರದೇಶದ ಕುಲು ಕಣಿವೆಯಲ್ಲಿರುವ ವಿಶ್ವಪ್ರಸಿದ್ಧ ಮತ್ತು ಅತ್ಯಂತ ರಹಸ್ಯಮಯ ಆಧ್ಯಾತ್ಮಿಕ ತಾಣವಾದ 'ಬಿಜ್ಲಿ ಮಹಾದೇವ್' ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಮುದ್ರ ಮಟ್ಟದಿಂದ ಸುಮಾರು 2,460 ಮೀಟರ್ ಎತ್ತರದಲ್ಲಿರುವ ಈ ದೇವಸ್ಥಾನವು ಪ್ರತಿ 12 ವರ್ಷಗಳಿಗೊಮ್ಮೆ ಶಿವಲಿಂಗದ ಮೇಲೆ ನೇರವಾಗಿ ಆಕಾಶದಿಂದ ಸಿಡಿಲು ಅಪ್ಪಳಿಸುವ ವಿಲಕ್ಷಣ ಮತ್ತು ಪವಾಡ ಸದೃಶ್ಯ ನೈಸರ್ಗಿಕ ವಿದ್ಯಮಾನಕ್ಕೆ ಜಾಗತಿಕವಾಗಿ ಹೆಸರುವಾಸಿಯಾಗಿದೆ.
ಇದನ್ನೂ ಓದಿ: ಅಸ್ಸಾಂ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ
ಪ್ರತಿ 12 ವರ್ಷಗಳಿಗೊಮ್ಮೆ ಪವಾಡ:
ಸ್ಥಳೀಯ ಧಾರ್ಮಿಕ ಇತಿಹಾಸ ಮತ್ತು ನಂಬಿಕೆಗಳ ಪ್ರಕಾರ, ಈ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಪ್ರತಿ 12 ವರ್ಷಗಳಿಗೊಮ್ಮೆ ಭೀಕರವಾದ ಸಿಡಿಲು ಅಪ್ಪಳಿಸುತ್ತದೆ. ಸಿಡಿಲು ಬಡಿದ ತಕ್ಷಣವೇ ಗರ್ಭಗುಡಿಯಲ್ಲಿರುವ ಬೃಹತ್ ಶಿವಲಿಂಗವು ನೂರಾರು ಚೂರುಗಳಾಗಿ ಒಡೆದುಹೋಗುತ್ತದೆ.
ಇದಾದ ನಂತರ, ದೇವಸ್ಥಾನದ ಪ್ರಧಾನ ಅರ್ಚಕರು ಒಡೆದ ಶಿವಲಿಂಗದ ಎಲ್ಲಾ ಚೂರುಗಳನ್ನು ಒಟ್ಟುಗೂಡಿಸಿ, ಬೆಣ್ಣೆ ಮತ್ತು ಸತುವಿನಿಂದ ಮಾಡಿದ ವಿಶೇಷ ಪೇಸ್ಟ್ ಬಳಸಿ ಮತ್ತೆ ಲಿಂಗದ ಆಕಾರದಲ್ಲಿ ಜೋಡಿಸುತ್ತಾರೆ. ಆಶ್ಚರ್ಯಕರ ಸಂಗತಿಯೆಂದರೆ, ಕೆಲವೇ ದಿನಗಳಲ್ಲಿ ಆ ಎಲ್ಲ ಚೂರುಗಳು ಮತ್ತೆ ಒಂದಕ್ಕೊಂದು ಭದ್ರವಾಗಿ ಅಂಟಿಕೊಂಡು ಮೊದಲಿನಂತೆಯೇ ಪೂರ್ಣ ಪ್ರಮಾಣದ ಶಿವಲಿಂಗವಾಗಿ ಮಾರ್ಪಡುತ್ತದೆ!
ಕಂಗನಾ ರಣಾವತ್ ಅನುಭವ:
ಮನಾಲಿ ಮತ್ತು ಕುಲು ಭಾಗದ ದಟ್ಟವಾದ ಪೈನ್ ಕಾಡುಗಳ ನಡುವೆ ಕಠಿಣವಾದ ಚಾರಣ ನಡೆಸಿದ ನಂತರ ಕಂಗನಾ ಅವರು ದೇವಸ್ಥಾನವನ್ನು ತಲುಪಿದರು. ದೇವಸ್ಥಾನದ ಆವರಣದಲ್ಲಿರುವ ಬೃಹತ್ ಮರದ ಧ್ವಜಸ್ತಂಭದ ಮುಂದೆ ಪ್ರಾರ್ಥನೆ ಸಲ್ಲಿಸಿದ ಅವರು, ಹಿಮಾಲಯದ ಹಿಮಚ್ಛಾದಿತ ಶಿಖರಗಳ ರಮಣೀಯ ನೋಟವನ್ನು ಕಣ್ತುಂಬಿಕೊಂಡರು.
ತಮ್ಮ ಪೋಸ್ಟ್‌ನಲ್ಲಿ ಅವರು, ʼಹಿಮಾಚಲದ ದೇವಭೂಮಿಯಲ್ಲಿ ಅಡಗಿರುವ ಇಂಥ ಆಧ್ಯಾತ್ಮಿಕ ರಹಸ್ಯಗಳು ಜಗತ್ತಿನ ಅದ್ಭುತಗಳಾಗಿವೆ. ಬಿಜ್ಲಿ ಮಹಾದೇವನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ನನ್ನ ಮನಸಿಗೆ ಅಪಾರ ಶಾಂತಿ ಮತ್ತು ಧನಾತ್ಮಕ ಶಕ್ತಿಯನ್ನು ನೀಡಿದೆ,ʼ ಎಂದು ಬರೆದುಕೊಂಡಿದ್ದಾರೆ.