Monday, December 8, 2025
Monday, December 8, 2025

ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯ ʻರೋಡ್‌ ಶೋʼ ಯಶಸ್ವಿ

ಕೇರಳದ ಟ್ರಾವೆಲ್ ಟ್ರೇಡ್ ವಲಯದ ಪ್ರಮುಖ ಪ್ರತಿನಿಧಿಗಳಿಗಾಗಿ ನಡೆಸಿದ ಈ ಕಾರ್ಯಕ್ರಮದಲ್ಲಿ, ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು, ಹೊಸ ಪ್ರವಾಸ ವಲಯಗಳು ಹಾಗೂ ರಾಜ್ಯಗಳ ನಡುವೆ ಉಂಟಾಗಬಹುದಾದ ವ್ಯಾವಹಾರಿಕ ಚಟುವಟಿಕೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.

ಕೇರಳದ ಕೊಚ್ಚಿಯಲ್ಲಿ ಕರ್ನಾಟಕ ಟೂರಿಸಂ ಸೊಸೈಟಿ (KTS) ವತಿಯಿಂದ ನಿನ್ನೆ ಆಯೋಜಿಸಲಾದ ಡೆಸ್ಟಿನೇಷನ್ ಪ್ರಮೊಷನ್ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕೇರಳದ ಟ್ರಾವೆಲ್ ಟ್ರೇಡ್ ವಲಯದ ಪ್ರಮುಖ ಪ್ರತಿನಿಧಿಗಳಿಗಾಗಿ ನಡೆಸಿದ ಈ ಕಾರ್ಯಕ್ರಮದಲ್ಲಿ, ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು, ಹೊಸ ಪ್ರವಾಸ ವಲಯಗಳು ಹಾಗೂ ರಾಜ್ಯಗಳ ನಡುವೆ ಉಂಟಾಗಬಹುದಾದ ವ್ಯಾವಹಾರಿಕ ಚಟುವಟಿಕೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.

KST hosts tourism promo in Kerala

ಈ ಸಂದರ್ಭದಲ್ಲಿ, ಕೇರಳ ಮೂಲದ ಟ್ರಾವೆಲ್ ಏಜೆಂಟ್‌ಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕರ್ನಾಟಕದ ಪ್ರವಾಸೋದ್ಯಮ ಸಂಪನ್ಮೂಲಗಳು, ಅಭಿವೃದ್ಧಿಯಾಗುತ್ತಿರುವ ಪ್ರವಾಸ ವಲಯ, ಮತ್ತು ಎರಡು ರಾಜ್ಯಗಳ ನಡುವಿನ ಪ್ರವಾಸಿ ಸಂಬಂಧವನ್ನು ಬಲಪಡಿಸುವ ಸಾಧ್ಯತೆಗಳ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲಾಯಿತು.

Destination promotion programme


ಈ ಕುರಿತು ಮಾತನಾಡಿದ ಕರ್ನಾಟಕ ಟೂರಿಸಂ ಸೊಸೈಟಿ ಪ್ರಧಾನ ಕಾರ್ಯದರ್ಶಿ ಜಗದೀಶ್, “ಪ್ರವಾಸಿಗರಿಗೆ ಸುಗಮ ಹಾಗೂ ಸಮೃದ್ಧ ಪ್ರವಾಸಿ ಅನುಭವಗಳನ್ನು ನೀಡಲು ಎರಡೂ ರಾಜ್ಯಗಳು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕೈ ಜೋಡಿಸಿ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..