Saturday, June 13, 2026
Saturday, June 13, 2026

ಜೊಜಿಲಾ ಸುರಂಗ ಮಾರ್ಗ ಪೂರ್ಣಗೊಳ್ಳುವ ಹಂತಕ್ಕೆ

ಸಮುದ್ರ ಮಟ್ಟದಿಂದ 11,578 ಅಡಿ ಎತ್ತರದಲ್ಲಿ ಹಿಮಾಲಯದ ಕಠಿಣ ಪರ್ವತ ಶ್ರೇಣಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸುರಂಗವು, ಪೂರ್ಣಗೊಂಡ ನಂತರ ಏಷ್ಯಾದ ಅತ್ಯಂತ ಉದ್ದದ ದ್ವಿಮುಖ ರಸ್ತೆ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಭಾರತೀಯ ಮೂಲಸೌಕರ್ಯ ವಲಯದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವೆ ಸರ್ವಕಾಲಿಕ ರಸ್ತೆ ಸಂಪರ್ಕವನ್ನು ಕಲ್ಪಿಸುವ ಆಯಕಟ್ಟಿನ ಜೊಜಿಲಾ ಸುರಂಗ ಮಾರ್ಗದ (Zojila Tunnel) ಪ್ರಮುಖ 'ಬ್ರೇಕ್‌ಥ್ರೂ' ಇತ್ತೀಚೆಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಸಮುದ್ರ ಮಟ್ಟದಿಂದ 11,578 ಅಡಿ ಎತ್ತರದಲ್ಲಿ ಹಿಮಾಲಯದ ಕಠಿಣ ಪರ್ವತ ಶ್ರೇಣಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸುರಂಗವು, ಪೂರ್ಣಗೊಂಡ ನಂತರ ಏಷ್ಯಾದ ಅತ್ಯಂತ ಉದ್ದದ ದ್ವಿಮುಖ ರಸ್ತೆ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇದನ್ನೂ ಓದಿ - ಜಮ್ಮು ಕಾಶ್ಮೀರದಲ್ಲಿ ಗಾಲ್ಫ್ ಆಟ

ಈ ಯೋಜನೆ ಒಟ್ಟು 30.18 ಕಿಲೋಮೀಟರ್ ಉದ್ದವನ್ನು ಹೊಂದಿದ್ದು, ಇದರಲ್ಲಿ 13.153 ಕಿಲೋಮೀಟರ್ ಮುಖ್ಯ ಸುರಂಗ ಮತ್ತು 17.030 ಕಿಲೋಮೀಟರ್ ಅಪ್ರೋಚ್ ರಸ್ತೆಗಳು ಸೇರಿವೆ. ಇದು ಲಡಾಖ್‌ಗೆ ಪ್ರಯಾಣದ ಸಮಯವನ್ನು 3 ಗಂಟೆಗಳಿಂದ ಕೇವಲ 15 ನಿಮಿಷಗಳಿಗೆ ಕಡಿತಗೊಳಿಸಲಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!