ಪ್ರವಾಸೋದ್ಯಮದಲ್ಲಿ ಆಫ್ರಿಕಾದ ಶ್ರೇಷ್ಠ ಪ್ರಶಸ್ತಿ ಪಡೆದ ಕೀನ್ಯಾ
ಈ ಪ್ರಶಸ್ತಿಯು ಕೀನ್ಯಾ ಪ್ರವಾಸೋದ್ಯಮ ಮಂಡಳಿ ಅಳವಡಿಸಿಕೊಂಡ ನೂತನ ಮಾರ್ಕೆಟಿಂಗ್ ತಂತ್ರಗಳು, ಸುಸ್ಥಿರ ಪ್ರವಾಸೋದ್ಯಮದತ್ತ ತೋರಿದ ಬದ್ಧತೆ, ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀನ್ಯಾವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಸ್ಥಾಪಿಸಲು ಮಂಡಳಿ ಪಟ್ಟ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಪ್ರಶಸ್ತಿಯು ಕೀನ್ಯಾ ಪ್ರವಾಸೋದ್ಯಮ ಮಂಡಳಿ ಅಳವಡಿಸಿಕೊಂಡ ನೂತನ ಮಾರ್ಕೆಟಿಂಗ್ ತಂತ್ರಗಳು, ಸುಸ್ಥಿರ ಪ್ರವಾಸೋದ್ಯಮದತ್ತ ತೋರಿದ ಬದ್ಧತೆ, ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆನ್ಯಾವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಸ್ಥಾಪಿಸಲು ಮಂಡಳಿ ಪಟ್ಟ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕೀನ್ಯಾ ಪ್ರವಾಸೋದ್ಯಮ ಮಂಡಳಿ (KTB) ಆಫ್ರಿಕಾದ ಪ್ರವಾಸೋದ್ಯಮ ಕ್ಷೇತ್ರದ ಅತ್ಯುನ್ನತ ಗೌರವವೆಂದೇ ಪರಿಗಣಿಸಲ್ಪಡುವ “ಬಾಲೇರಿಕಾ ಅವಾರ್ಡ್ಸ್ 2025”ನಲ್ಲಿ “ಆಫ್ರಿಕಾದ ಅತ್ಯುತ್ತಮ ಪ್ರವಾಸೋದ್ಯಮ ಮಂಡಳಿ” ಎಂಬ ಪ್ರಶಸ್ತಿಯನ್ನು ಗಳಿಸಿದೆ. ಈ ಪ್ರಶಸ್ತಿ ಲಂಡನ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಈ ಪ್ರಶಸ್ತಿಯು ಕೀನ್ಯಾ ಪ್ರವಾಸೋದ್ಯಮ ಮಂಡಳಿ ಅಳವಡಿಸಿಕೊಂಡ ನೂತನ ಮಾರ್ಕೆಟಿಂಗ್ ತಂತ್ರಗಳು, ಸುಸ್ಥಿರ ಪ್ರವಾಸೋದ್ಯಮದತ್ತ ತೋರಿದ ಬದ್ಧತೆ, ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀನ್ಯಾವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಸ್ಥಾಪಿಸಲು ಮಂಡಳಿ ಪಟ್ಟ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕೀನ್ಯಾ ಪ್ರವಾಸೋದ್ಯಮ ಮಂಡಳಿಯು ಈಜಿಪ್ಟ್, ರುವಾಂಡಾ, ದಕ್ಷಿಣ ಆಫ್ರಿಕಾ ಮತ್ತು ಮಾರಿಷಿಯಸ್ ಸೇರಿದಂತೆ ಹಲವು ರಾಷ್ಟ್ರಗಳ ಪ್ರವಾಸೋದ್ಯಮ ಮಂಡಳಿಗಳನ್ನು ಹಿಂದಿಕ್ಕಿ ಈ ಗೌರವಕ್ಕೆ ಪಾತ್ರವಾಗಿದೆ. ಮಂಡಳಿಯು ರೂಪಿಸಿದ “This is the Real Deal” ಎಂಬ ಪ್ರಚಾರ ಅಭಿಯಾನವು ವಿಶ್ವದಾದ್ಯಂತ ಹೆಚ್ಚು ಗಮನ ಸೆಳೆದಿದ್ದು, “Best Tourism Video” ವಿಭಾಗದಲ್ಲಿಯೂ ಪ್ರಶಸ್ತಿ ಗಳಿಸಿತು.

ಇದೇ ಸಂದರ್ಭದಲ್ಲಿ, ಕೀನ್ಯಾದ ಪ್ರಸಿದ್ಧ ಮಾಸಾಯ್ ಮಾರಾ ರಾಷ್ಟ್ರೀಯ ಉದ್ಯಾನವನವು “Best Safari Destination” ಪ್ರಶಸ್ತಿಯನ್ನು ಪಡೆಯಿತು. ಈ ಗೌರವಗಳು ಕೀನ್ಯಾವನ್ನು ಆಫ್ರಿಕಾದ ಸಫಾರಿ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿಸಿದೆ.
ಕೀನ್ಯಾ ಪ್ರವಾಸೋದ್ಯಮ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಅಲನ್ ಈರೋಗೆ ಅವರು ಮಾತನಾಡಿ, “ಈ ಪ್ರಶಸ್ತಿ ನಮ್ಮ ದೇಶದ ಪ್ರವಾಸೋದ್ಯಮ ವಲಯದ ನಿಷ್ಠೆ, ಸಹಕಾರ ಮತ್ತು ಹೊಸ ಆಲೋಚನೆಗಳಿಗೆ ದೊರೆತ ಪ್ರಾಮಾಣಿಕ ಮನ್ನಣೆಯಾಗಿದೆ. ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವ, ಪರಿಸರ ಸ್ನೇಹಿ ಪ್ರವಾಸೋದ್ಯಮದತ್ತ ಗಮನ ಹರಿಸುತ್ತೇವೆ” ಎಂದರು.