ಎಲ್ಲರನ್ನೂ ಒಳಗೊಳ್ಳುವತ್ತ ಕೇರಳ ಪ್ರವಾಸೋದ್ಯಮದ ಚಿತ್ತ!
ಕಾನ್‌ಕ್ಲೇವ್‌ನಲ್ಲಿ ದೈಹಿಕ ಅಸಮರ್ಥತೆ ಹೊಂದಿರುವವರು, ವೃದ್ಧರು, ಮಹಿಳೆಯರು ಹಾಗೂ ವಿಶೇಷ ಅಗತ್ಯಗಳಿರುವ ಪ್ರವಾಸಿಗರಿಗೆ ಅನುಕೂಲವಾಗುವ ಮೂಲಸೌಕರ್ಯ, ವಿನ್ಯಾಸ ಮತ್ತು ಸೇವೆಗಳ ಅಗತ್ಯತೆ ಕುರಿತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಮಾನತೆ ಮತ್ತು ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ನೀತಿ ರೂಪಣೆ ಮತ್ತು ಕಾರ್ಯನಿರ್ವಹಣೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಚರ್ಚೆಗಳಲ್ಲಿ ತಿಳಿಸಲಾಯಿತು.
ಕೇರಳದಲ್ಲಿ ನಡೆಯುತ್ತಿರುವ ಎರಡು ದಿನಗಳ ‘ಕೇರಳ ಫಾರ್ ಆಲ್’ ಕಾನ್‌ಕ್ಲೇವ್‌ನ ಎರಡನೇ ದಿನವಾದ ಫೆಬ್ರವರಿ 1ರಂದು, Inclusive ಮತ್ತು Accessible ಪ್ರವಾಸೋದ್ಯಮದ ಕುರಿತು ವಿಸ್ತೃತ ಚರ್ಚೆಗಳು ನಡೆಯಿತು. ಪ್ರವಾಸೋದ್ಯಮವನ್ನು ಎಲ್ಲ ವರ್ಗದ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ರೂಪಿಸುವುದು ಈ ಕೂಟದ ಪ್ರಮುಖ ಉದ್ದೇಶವಾಗಿದೆ.
ಕಾನ್‌ಕ್ಲೇವ್‌ನಲ್ಲಿ ದೈಹಿಕ ಅಸಮರ್ಥತೆ ಹೊಂದಿರುವವರು, ವೃದ್ಧರು, ಮಹಿಳೆಯರು ಹಾಗೂ ವಿಶೇಷ ಅಗತ್ಯಗಳಿರುವ ಪ್ರವಾಸಿಗರಿಗೆ ಅನುಕೂಲವಾಗುವ ಮೂಲಸೌಕರ್ಯ, ವಿನ್ಯಾಸ ಮತ್ತು ಸೇವೆಗಳ ಅಗತ್ಯತೆ ಕುರಿತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಮಾನತೆ ಮತ್ತು ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ನೀತಿ ರೂಪಣೆ ಮತ್ತು ಕಾರ್ಯನಿರ್ವಹಣೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಚರ್ಚೆಗಳಲ್ಲಿ ತಿಳಿಸಲಾಯಿತು.

ಕೇರಳ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ಈ ಕಾನ್‌ಕ್ಲೇವ್‌ನಲ್ಲಿ ಪ್ರವಾಸೋದ್ಯಮದ ಪ್ರತಿನಿಧಿಗಳು, ತಜ್ಞರು, ನೀತಿ ರೂಪಣಾ ವಲಯದವರು ಹಾಗೂ ಸಾಮಾಜಿಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ತಂತ್ರಜ್ಞಾನ, ವಿನ್ಯಾಸ ಮತ್ತು ಮಾನವಕೇಂದ್ರಿತ ಪ್ರವಾಸೋದ್ಯಮದ ಮೂಲಕ ಎಲ್ಲರಿಗೂ ಪ್ರವಾಸ ಅನುಭವವನ್ನು ಸುಲಭಗೊಳಿಸುವ ಬಗ್ಗೆ ಹಲವು ಸಲಹೆಗಳನ್ನು ನೀಡಲಾಯಿತು.
ಈ ಕಾಂಕ್ಲೇವ್‌ನ ಮೊದಲ ದಿನವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದ್ದು, ರಾಜ್ಯವನ್ನು ಇನ್‌ಕ್ಲೂಸಿವ್ ಪ್ರವಾಸೋದ್ಯಮದ ಮಾದರಿಯಾಗಿ ರೂಪಿಸುವ ಸರಕಾರದ ದೃಷ್ಟಿಕೋನವನ್ನು ಅವರು ವಿವರಿಸಿದ್ದರು. ಎರಡನೇ ದಿನವೂ ವಿವಿಧ ಅಧಿವೇಶನಗಳು ಮತ್ತು ಸಂವಾದಗಳ ಮೂಲಕ ಆ ಗುರಿಯನ್ನು ಮುಂದುವರಿಸುವ ಪ್ರಯತ್ನ ನಡೆಯಿತು.
ಒಟ್ಟಾರೆ, ‘ಕೇರಳ ಫಾರ್ ಆಲ್’ ಕಾಂಕ್ಲೇವ್ ಪ್ರವಾಸೋದ್ಯಮವನ್ನು ಕೇವಲ ಆರ್ಥಿಕ ಚಟುವಟಿಕೆಯಾಗಿ ಮಾತ್ರವಲ್ಲದೆ, ಸಾಮಾಜಿಕ ಸಮಾನತೆ ಮತ್ತು ಎಲ್ಲರಿಗೂ ಪ್ರವೇಶಾರ್ಹ ಅನುಭವವಾಗಿ ರೂಪಿಸುವ ಅಗತ್ಯತೆಯನ್ನು ಮತ್ತೊಮ್ಮೆ ಒತ್ತಿ ಹೇಳಿತು.