Thursday, March 19, 2026
Thursday, March 19, 2026

ಭಾರತದಲ್ಲಿ ಕೊರಿಯಾ ಟೂರಿಸಂ ರೋಡ್ ಶೋ!

ಕೊರಿಯಾ ಪ್ರವಾಸೋದ್ಯಮ ಸಂಸ್ಥೆಯ (Korea Tourism Organization - KTO) ಭಾರತೀಯ ಪ್ರಯಾಣಿಕರನ್ನು ಸೆಳೆಯಲು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ.

ಕೊರಿಯಾ ಪ್ರವಾಸೋದ್ಯಮ ಸಂಸ್ಥೆ ಈ ವರ್ಷ 270,000 ಜನರು ದಕ್ಷಿಣ ಕೊರಿಯಾಗೆ ಭೇಟಿ ನೀಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದೆ. ಕಳೆದ ವರ್ಷ ಭಾರತದಿಂದ ಕೊರಿಯಾಗೆ ಭೇಟಿ ನೀಡಿದ ಶೇ. 13ರಷ್ಟು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಈ ವರ್ಷ ಇನ್ನೂ ದೊಡ್ಡ ಗುರಿಯನ್ನಿಟ್ಟುಕೊಂಡಿದೆ. ಈ ಕಾರಣಕ್ಕಾಗಿ ಇತ್ತೀಚೆಗೆ ದೆಹಲಿ ಮತ್ತು ಮುಂಬೈನಲ್ಲಿ ರೋಡ್‌ಶೋಗಳು ನಡೆದಿದ್ದು, ಕೊರಿಯಾವನ್ನು ಭಾರತೀಯರಿಗೆ ಒಂದು ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವ ತನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನಾವರಣಗೊಳಿಸಿದೆ. ಈ ಮೂಲಕ ಭಾರತೀಯ ಪ್ರವಾಸಿಗರಿಗೆ ಕೊರಿಯಾದ ಸಂಸ್ಕೃತಿ, ಆಧುನಿಕತೆ ಮತ್ತು ನೈಸರ್ಗಿಕ ಸೌಂದರ್ಯವನ್ನು ಪರಿಚಯಿಸಿದೆ.

ಇದನ್ನೂ ಓದಿ: ಯುರೋಪ್‌ನ ಅತ್ಯುತ್ತಮ ಪ್ರವಾಸಿ ತಾಣಗಳಿಗೆ ಪೈಪೋಟಿ ನೀಡುವ ಒಡಿಶಾ ಕಡಲು

ಭಾರತೀಯ ಪ್ರಯಾಣಿಕರ ಅಭಿರುಚಿಗೆ ತಕ್ಕಂತೆ ಕೊರಿಯಾ ಸಂಸ್ಥೆ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದೆ. ಕೊರಿಯನ್ ಪಾಪ್ ಮತ್ತು ಕೊರಿಯನ್ ಡ್ರಾಮಾ ಪ್ರಭಾವ ಭಾರತದಲ್ಲಿ ಹೆಚ್ಚಾಗಿರುವುದರಿಂದ, ಚಿತ್ರೀಕರಣದ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಗಳನ್ನು ಉತ್ತೇಜಿಸಲಾಗುತ್ತಿದೆ.

ಭಾರತೀಯ ಪ್ರವಾಸಿಗರಿಗಾಗಿ ಸಸ್ಯಹಾರಿ ಮತ್ತು ಹಲಾಲ್ ಆಹಾರದ ಆಯ್ಕೆಗಳನ್ನು ಒದಗಿಸುವ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಸಾಂಪ್ರದಾಯಿಕ ಕೊರಿಯನ್ ಚಿಕಿತ್ಸೆಗಳು, ಸ್ಪಾ ಮತ್ತು ಐಷಾರಾಮಿ ಹೊಟೇಲ್‌ಗಳ ವಾಸ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...