ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮುಂಗಾರು ಅವಧಿಯ ತನ್ನ ಎಲ್ಲಾ ಮಾದರಿಯ ವ್ಯವಸ್ಥಿತ ಪ್ರವಾಸಗಳ ದರವನ್ನು ಶೇ.10ರಷ್ಟು ಕಡಿಮೆ ಮಾಡಿರುವುದಾಗಿ ತಿಳಿಸಿದೆ. ಜತೆಗೆ ಹಿರಿಯ ನಾಗರಿಕರಿಗೆ ಸಾರಿಗೆಯಲ್ಲಿ ಶೇ.20ರಷ್ಟು ರಿಯಾಯಿತಿ ನೀಡುವುದಾಗಿ ಪ್ರಕಟಣೆ ತಿಳಿಸಿದೆ.

ಪ್ರವಾಸಿಗರು ಈ ಪ್ರವಾಸ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಲು ಯಶವಂತಪುರದಲ್ಲಿರುವ ನಿಗಮದ ಬುಕ್ಕಿಂಗ್ ಕೌಂಟರ್‌ ಹಾಗೂ ನಿಗಮದ ಅಧಿಕೃತ ಟ್ರಾವಲ್ ಏಜೆಂಟ್‌ಗಳ ಮುಖಾಂತರ ಮುಂಗಡ ಬುಕ್ಕಿಂಗ್‌ ಮಾಡಬಹುದು ಎಂದು ತಿಳಿಸಿದೆ. ವಿವರಗಳಿಗೆ ದೂ: 080- 43344334 ಸಂಪರ್ಕಿಸಬಹುದು.