ಮಂಜುಗಟ್ಟಿದ ನೀಲಗಿರಿ ಬೆಟ್ಟಗಳಿಂದ ಹಿಡಿದು ಜೈಪುರದ ಗದ್ದಲದ ಬೀದಿಗಳವರೆಗೆ ಭಾರತದ ಭೂದೃಶ್ಯಗಳು ಯಾವಾಗಲೂ ಕಥೆಗಳಿಗೆ ನೈಸರ್ಗಿಕ ವೇದಿಕೆಯನ್ನು ಒದಗಿಸಿವೆ. ಈಗ ಈ ತಾಣಗಳು ಜಾಗತಿಕ ಪರದೆಯ ಮೇಲೆ ಮತ್ತಷ್ಟು ಸದ್ದು ಮಾಡಲು ಸಜ್ಜಾಗಿವೆ. ದಕ್ಷಿಣ ಏಷ್ಯಾದಲ್ಲಿಯೇ ಪ್ರಪ್ರಥಮ ಬಾರಿಗೆ ನೆಟ್‌ಫ್ಲಿಕ್ಸ್, ಭಾರತ ಪ್ರವಾಸೋದ್ಯಮ ಸಚಿವಾಲಯದೊಂದಿಗೆ ಕೈಜೋಡಿಸಿ, ಭಾರತದ ನೈಸರ್ಗಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಕಥೆಗಳ ಮೂಲಕ ವಿಶ್ವದ ವೀಕ್ಷಕರ ಮುಂದೆ ತರಲು ವೇದಿಕೆ ಸಿದ್ಧವಾಗಿದೆ.

Andaman


ಹಿಂದೆಯೂ ನೆಟ್‌ಫ್ಲಿಕ್ಸ್ ತನ್ನ ಹಲವು ನಿರ್ಮಾಣಗಳ ಮೂಲಕ ಭಾರತದ ಭೌಗೋಳಿಕ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸಿದೆ. The Elephant Whisperers ನಲ್ಲಿ ನೀಲಗಿರಿಯ ಅರಣ್ಯಗಳು, Kaala Paani ಯಲ್ಲಿ ಅಂಡಮಾನ್ ದ್ವೀಪಗಳು, Amar Singh Chamkila ನಲ್ಲಿ ಪಂಜಾಬಿನ ಸಾಸಿವೆ ಹೊಲಗಳು, Mismatched ನಲ್ಲಿ ಜೈಪುರದ ಬೀದಿಗಳು, Jaane Jaan ನಲ್ಲಿ ಕಲಿಂಪಾಂಗ್ ಬೆಟ್ಟಗಳು – ಇವೆಲ್ಲವೂ ಭಾರತವನ್ನು ಜಾಗತಿಕ ಬೆಳಕಿನಲ್ಲಿ ತಂದು ನಿಲ್ಲಿಸಿದವು.

Jaipur streets


ಕಳೆದ ದಶಕದಲ್ಲಿ ನೆಟ್‌ಫ್ಲಿಕ್ಸ್ ಭಾರತದಲ್ಲಿ 23 ರಾಜ್ಯಗಳ 100ಕ್ಕೂ ಹೆಚ್ಚು ನಗರಗಳಲ್ಲಿ ಚಿತ್ರೀಕರಣ ನಡೆಸಿದೆ. ಅರಣ್ಯಗಳಿಂದ ಕೋಟೆಗಳವರೆಗೂ, ಹಳ್ಳಿಗಳಿಂದ ಮಹಾನಗರಗಳವರೆಗೂ ಈ ಚಿತ್ರೀಕರಣಗಳು ಕೇವಲ ವಿಶ್ವಮಟ್ಟದ ಕಥೆಗಳನ್ನಷ್ಟೇ ಸೃಷ್ಟಿಸಿಲ್ಲ, ಸ್ಥಳೀಯ ಸಮುದಾಯಗಳಿಗೆ ಉದ್ಯೋಗಾವಕಾಶ, ಪ್ರವಾಸೋದ್ಯಮ ಸೇವೆಗಳು ಮತ್ತು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿವೆ. ಪ್ರತಿಯೊಂದು ಚಿತ್ರೀಕರಣವೂ ಒಂದು ತಾಣದ ಗುರುತನ್ನು ಜಗತ್ತಿಗೆ ಪರಿಚಯಿಸುವುದರ ಜತೆಗೆ ಸ್ಥಳೀಯ ಆರ್ಥಿಕತೆಗೆ ಇಂಬು ನೀಡಿದೆ.

ಈ ಸಹಯೋಗ ಈಗ ಅದನ್ನು ಇನ್ನಷ್ಟು ವ್ಯವಸ್ಥಿತಗೊಳಿಸಲಿದೆ. ಪ್ರವಾಸೋದ್ಯಮ ಸಚಿವಾಲಯದ ನೇರ ಸಹಯೋಗದಿಂದ, ಭವಿಷ್ಯದ ನೆಟ್‌ಫ್ಲಿಕ್ಸ್ ನಿರ್ಮಾಣಗಳು ಸ್ಥಳಗಳ ಇತಿಹಾಸ, ಸಂಸ್ಕೃತಿ ಮತ್ತು ಸಮುದಾಯದ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ಬಿಂಬಿಸಲಿವೆ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶವಿದೆ.

Kalipong hills

ನೆಟ್‌ಫ್ಲಿಕ್ಸ್ ಈಗಾಗಲೇ ಫ್ರಾನ್ಸ್, ಇಂಡೋನೇಷ್ಯಾ, ಕೊರಿಯಾ, ಥೈಲ್ಯಾಂಡ್, ಸ್ಪೇನ್, ಬ್ರೆಝಿಲ್ ಮತ್ತು ಗ್ರೀಸ್ ದೇಶಗಳ ಪ್ರವಾಸೋದ್ಯಮ ಮಂಡಳಿಗಳೊಂದಿಗೆ ಈ ರೀತಿಯ ಸಹಯೋಗವನ್ನು ಹೊಂದಿದೆ. ಆದರೆ ದಕ್ಷಿಣ ಏಷ್ಯಾದಲ್ಲಿ ಪ್ರವಾಸೋದ್ಯಮ ಸಚಿವಾಲಯದೊಂದಿಗೆ ಕೈಜೋಡಿಸುವುದು ಇದೇ ಮೊದಲ ಬಾರಿಗೆ. ಇದು ಭಾರತವು ಜಾಗತಿಕ ಪ್ರವಾಸಿ ತಾಣವಾಗಿ ಹೊರಹೊಮ್ಮುತ್ತಿರುವುದಕ್ಕೆ ಸಾಕ್ಷಿ.

Mumbai city

ಭಾರತದೆಲ್ಲೆಡೆ ಪ್ರವಾಸಿಗರನ್ನು ಹೆಚ್ಚುವುದು, ಸ್ಥಳೀಯ ಸಮುದಾಯಗಳು ಬಲಪಡಿಸುವ ಸೇರಿದಂತೆ ಹಲವು ಯೋಜನೆಯೊಂದಿಗೆ ಪ್ರವಾಸೋದ್ಯಮ ಇಲಾಖೆ ʼಸ್ಕ್ರೀನ್‌ ಟೂರಿಸಂʼ ನತ್ಮೂತ ಚಿತ್ಲತ ಹರಿಸಿದೆ. ನೆಟ್‌ಫ್ಲಿಕ್ಸ್ ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವುದರಿಂದ ಈ ನಿರೀಕ್ಷೆ ಸಾಕಾರವಾಗುವ ಸಾಧ್ಯತೆ ಹೆಚ್ಚಿದೆ.