ಮಲೇಷ್ಯಾ ಪ್ರವಾಸೋದ್ಯಮ ಇಲಾಖೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಚಾರವನ್ನು ಮತ್ತಷ್ಟು ಬಲಪಡಿಸಿದ್ದು, 2026ರೊಳಗೆ 20 ಲಕ್ಷಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರನ್ನು ಸೆಳೆಯುವ ಗುರಿ ಹೊಂದಿದೆ. ಈ ಯೋಜನೆಯ ಭಾಗವಾಗಿ ಭಾರತದಲ್ಲಿ ವ್ಯಾಪಕ ಪ್ರವಾಸೋದ್ಯಮ ಪ್ರಚಾರ, ಟ್ರಾವೆಲ್ ಟ್ರೇಡ್ ಪಾಲುದಾರಿಕೆ ಮತ್ತು ಎಂಐಸಿಇ (Meetings, Incentives, Conferences and Exhibitions) ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

Untitled design (99)

ಭಾರತದ ಪ್ರಮುಖ ಪ್ರವಾಸೋದ್ಯಮ ಪ್ರದರ್ಶನಗಳಾದ SATTE ಮತ್ತು OTMಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಮಲೇಷ್ಯಾ, ಆಗಸ್ಟ್‌ನಲ್ಲಿ ಚೆನ್ನೈ, ಮುಂಬಯಿ ಮತ್ತು ನವದೆಹಲಿ ನಗರಗಳಲ್ಲಿ ವಿಶೇಷ ರೋಡ್‌ ಶೋಗಳನ್ನು ಆಯೋಜಿಸಲು ಯೋಜಿಸಿದೆ. ಈ ಕಾರ್ಯಕ್ರಮಗಳ ಮೂಲಕ ಭಾರತೀಯ ಟ್ರಾವೆಲ್ ಏಜೆನ್ಸಿಗಳು, ಟೂರ್ ಆಪರೇಟರ್‌ಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ನೇರ ಸಂಪರ್ಕವನ್ನು ವಿಸ್ತರಿಸಲಾಗುತ್ತದೆ.

Untitled design (100)

ಪೆನಾಂಗ್ ಮತ್ತು ಲಂಕಾವಿ ಸೇರಿದಂತೆ ಮಲೇಷ್ಯಾದ ಪ್ರಮುಖ ಪ್ರವಾಸಿ ತಾಣಗಳೂ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಪ್ರಚಾರವನ್ನು ಹೆಚ್ಚಿಸಿವೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಎಂಟು ನಗರಗಳ ರೋಡ್‌ ಶೋ, ಮುಂಬಯಿ ಸೇರಿದಂತೆ ವಿವಿಧ ನಗರಗಳಲ್ಲಿ ಪ್ರವಾಸೋದ್ಯಮ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಜತೆಗೆ ಭಾರತೀಯ ಕಾರ್ಪೊರೆಟ್ ಸಂಸ್ಥೆಗಳು ಹಾಗೂ ಟ್ರಾವೆಲ್ ಪ್ಲ್ಯಾನರ್‌ಗಳಿಗೆ ವಿಶೇಷ ಪ್ರೋತ್ಸಾಹಕ ಯೋಜನೆಗಳನ್ನೂ ಪರಿಚಯಿಸಲಾಗಿದೆ.

ಭಾರತವು ಮಲೇಷ್ಯಾಕ್ಕೆ ಅತ್ಯಂತ ಪ್ರಮುಖ ಪ್ರವಾಸೋದ್ಯಮ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ನೇರ ವಿಮಾನ ಸಂಪರ್ಕ, ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳು ಹಾಗೂ Visit Malaysia 2026 ಅಭಿಯಾನದ ಬೆಂಬಲದಿಂದ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ ನಿರೀಕ್ಷಿಸಲಾಗಿದೆ.