Friday, March 13, 2026
Friday, March 13, 2026

ಅತಿಹೆಚ್ಚು ಆದಾಯ ಬರುವ ದೇವಾಲಯಗಳ ಪಟ್ಟಿಯಲ್ಲಿ ಮಲೆ ಮಹದೇಶ್ವರ ದೇವಸ್ಥಾನ

ಮಲೆ ಮಹದೇಶ್ವರ ದೇವಾಲಯ ಈಗ 100 ಕೋಟಿ ಆದಾಯ ಪಡದಿದ್ದು, ಅತಿ ಹೆಚ್ಚು ಆದಾಯ ಬರುವ ದೇವಾಲಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಕರ್ನಾಟಕದ ಮಲೆ ಮಹದೇಶ್ವರಬೆಟ್ಟ ದೇವಾಲಯದ ವಾರ್ಷಿಕ ಆದಾಯ 100 ಕೋಟಿ ರು. ದಾಟಿದ್ದು, ಹೊಸ ದಾಖಲೆ ಸೃಷ್ಟಿಯಾಗಿದೆ. ರಾಜ್ಯದ ಮುಜರಾಯಿ ದೇವಾಲಯಗಳ ಪೈಕಿ ಅತಿಹೆಚ್ಚು ಆದಾಯ ಬರುವ ದೇವಾಲಯಗಳ ಪೈಕಿ ಮಲೆ ಮಹದೇಶ್ವರ ದೇವಾಲಯ ಈಗ ಎರಡನೆಯದು. ಮೊದಲನೆಯದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯ.

ಕುದುರೆ ಮುಖದ ಮೇಲೇರಿ!

ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ, ಯುಗಾದಿ, ದೀಪಾವಳಿ ಸಂದರ್ಭಗಳಲ್ಲಿ ಮಹಾ ರಥೋತ್ಸವ ನಡೆಯುತ್ತದೆ. ಈ ಸಂದರ್ಭಗಳಲ್ಲಿ ಒಂದು ವಾರ ಮಾದಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ಹೆಚ್ಚಿನ ಹಣ ಸಂಗ್ರಹವಾಗುತ್ತದೆ. ಕಳೆದ ತಿಂಗಳು ಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ 28 ದಿನಗಳಲ್ಲೇ 3.41 ಕೋಟಿ ರು. ಸಂಗ್ರಹವಾಗಿತ್ತು. ಇನ್ನು ಮಲೈ ಮಹದೇಶ್ವರ ದೇಗುಲಕ್ಕೆ ಸೇವಾ ಶುಲ್ಕದಿಂದ 10 ಕೋಟಿ ರು. ಆದಾಯ ಬರುತ್ತದೆ. ಲಾಡು ಪ್ರಸಾದ ಮಾರಾಟದಿಂದ 6 ಕೋಟಿ ರು. ಲಾಭ ಆಗುತ್ತದೆ. ಮಹದೇಶ್ವರ ಬೆಟ್ಟದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆ, ಪೆಟ್ರೋಲ್ ಬಂಕ್, ವಸತಿ ಗೃಹಗಳಿಂದ ವರ್ಷಕ್ಕೆ 10ರಿಂದ 15 ಕೋಟಿ ರು. ವಾಣಿಜ್ಯಾತ್ಮಕ ಆದಾಯ ಇದೆ.

ಸುಮಾರು 700 ವರ್ಷಗಳ ಇತಿಹಾಸ ಇರುವ ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರಸ್ವಾಮಿ ಬೆಟ್ಟವು ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಅಭಿವೃದ್ಧಿಯತ್ತ ಮುಖ ಮಾಡಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..