ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇ ಅನ್ನು 10 ಪಥಗಳಿಗೆ ವಿಸ್ತರಿಸುವ ಕಾರ್ಯವು ಪೂರ್ಣಗೊಳ್ಳುವ ಹಂತದಲ್ಲಿದೆ. ಆದರೆ, ಈ ಮೂಲಸೌಕರ್ಯ ಅಭಿವೃದ್ಧಿಯ ಬೆನ್ನಲ್ಲೇ ಪ್ರಯಾಣಿಕರಿಗೆ ಒಂದು ಆಘಾತಕಾರಿ ಸುದ್ದಿಯೂ ಇದೆ. ಅದೇನೆಂದರೆ ಈ ರಸ್ತೆಯಲ್ಲಿ ಟೋಲ್ ಸಂಗ್ರಹವು 2060ರವರೆಗೆ ಮುಂದುವರಿಯುವ ಸಾಧ್ಯತೆಯಿದೆ.

ಈ ಯೋಜನೆಯಡಿ ಹೊಸ ಸುರಂಗ ಮಾರ್ಗಗಳು ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಖೋಪೋಲಿ ಮತ್ತು ಕುಶಗಾಂವ್ ನಡುವಿನ 'ಮಿಸ್ಸಿಂಗ್ ಲಿಂಕ್' ಈ ಯೋಜನೆ ಸುಮಾರು 13.3 ಕಿಲೋಮೀಟರ್ ಉದ್ದದ ಮಾರ್ಗವಾಗಿದ್ದು, ವಿಶ್ವದ ಅತಿ ಅಗಲದ ಸುರಂಗಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿದೆ.

ಇದನ್ನೂ ಓದಿ: ನವಿ ಮುಂಬೈ ವಿಮಾನ ಎಲ್ಲೆಲ್ಲಿಗೆ?

ಈ ಬೃಹತ್ ಯೋಜನೆಯ ವೆಚ್ಚವನ್ನು ಸರಿದೂಗಿಸಲು, ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು ಟೋಲ್ ಸಂಗ್ರಹದ ಅವಧಿಯನ್ನು 2060 ರವರೆಗೆ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಿದೆ. ಈ ಮೊದಲು ಟೋಲ್ ಅವಧಿಯು 2035 ಅಥವಾ 2045ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದರೆ ಹೊಸ ಮೂಲಸೌಕರ್ಯಗಳ ನಿರ್ಮಾಣ ವೆಚ್ಚ ಮತ್ತು ನಿರ್ವಹಣೆಗಾಗಿ ದೀರ್ಘಾವಧಿಯ ಟೋಲ್ ಅನಿವಾರ್ಯ ಎಂದು ಹೇಳಲಾಗುತ್ತಿದೆ.