ಮೈಸೂರಿನ ʼಹೆರಿಟೇಜ್ ಎಕ್ಸ್‌ಪೀರಿಯನ್ಸ್ʼ ಯೋಜನೆಗೆ ಕೇಂದ್ರ ಅಸ್ತು
ಪ್ರಸಿದ್ಧ ಟಾಂಗಾ ಸವಾರಿಯು ಹೆರಿಟೇಜ್ ಎಕ್ಸ್‌ಪೀರಿಯನ್ಸ್ ಯೋಜನೆಯ ಪ್ರಮುಖ ಮತ್ತು ಆಕರ್ಷಕ ಭಾಗವಾಗಿದ್ದು, ಮೈಸೂರಿನ ಐತಿಹಾಸಿಕ ತಾಣಗಳನ್ನು, ಅರಮನೆಯನ್ನು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಸ್ಮಾರಕಗಳನ್ನು ಪ್ರವಾಸಿಗರು ಟಾಂಗಾ ಸವಾರಿಯ ಮೂಲಕ ನೋಡಬಹುದು. ಈ ಸವಾರಿಯು ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡಲಿದೆ.
ಮೈಸೂರಿನ ಬಹುನಿರೀಕ್ಷಿತ ʼಹೆರಿಟೇಜ್ ಎಕ್ಸ್‌ಪೀರಿಯನ್ಸ್ʼ ಯೋಜನೆಗೆ ಕೇಂದ್ರ ಸರಕಾರವು ಅನುಮೋದನೆ ನೀಡಿದೆ ಎಂದು ಮೈಸೂರಿನ ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ. ಈ ಯೋಜನೆಗೆ 2.72 ಕೋಟಿ ರು. ಅನುದಾನವನ್ನು ಮಂಜೂರು ಮಾಡಲಾಗಿದೆ.
ಹೆರಿಟೇಜ್ ಎಕ್ಸ್‌ಪೀರಿಯನ್ಸ್ ಯೋಜನೆಯು, ಕೇಂದ್ರ ಸರಕಾರದ ʼಸ್ವದೇಶ್ ದರ್ಶನ 2.0’ ಯೋಜನೆಯ ಭಾಗವಾಗಿದ್ದು, ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ಅನುಭವವನ್ನು ನೀಡಲಿದೆ.

ಪ್ರಸಿದ್ಧ ಟಾಂಗಾ ಸವಾರಿಯು ಹೆರಿಟೇಜ್ ಎಕ್ಸ್‌ಪೀರಿಯನ್ಸ್ ಯೋಜನೆಯ ಪ್ರಮುಖ ಮತ್ತು ಆಕರ್ಷಕ ಭಾಗವಾಗಿದ್ದು, ಮೈಸೂರಿನ ಐತಿಹಾಸಿಕ ತಾಣಗಳನ್ನು, ಅರಮನೆಯನ್ನು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಸ್ಮಾರಕಗಳನ್ನು ಪ್ರವಾಸಿಗರು ಟಾಂಗಾ ಸವಾರಿಯ ಮೂಲಕ ನೋಡಬಹುದು. ಈ ಸವಾರಿಯು ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡಲಿದೆ.
ಟಾಂಗಾ ಸವಾರಿಯ ಜತೆಗೆ, ಮೈಸೂರನ್ನು ʼಇಕೋಲಾಜಿಕಲ್ ಎಕ್ಸ್‌ಪೀರಿಯನ್ಸ್ ಜೋನ್ʼ ಆಗಿ ನಿರ್ಮಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.