ಅಮೆರಿಕ ಎಂಟ್ರಿಗೆ ಎಚ್-1ಬಿ
ಟ್ರಂಪ್ ಆಡಳಿತವು ವೀಸಾ ಶುಲ್ಕ ಹೆಚ್ಚಳವನ್ನು ಘೋಷಸಿದೆ, ಇದು ಅಮೆರಿಕ ಅಧ್ಯಕ್ಷರ ಕಾನೂನುಬದ್ದ ಅಧಿಕಾರವನ್ನು ಮೀರಿದೆ ಎಂದು ಅಮೆರಿಕದ ವಾಣಿಜ್ಯ ಮಂಡಳಿಯು ಅ.16ರಂದು ವಾಷಿಂಗ್ಟನ್ ಡಿಸಿಯಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಇದಕ್ಕೆ ಯುಎಸ್‌ಸಿಐಎಸ್ ಪ್ರತಿಕ್ರಿಯೆ ನೀಡಿದೆ.
ಇತ್ತೀಚೆಗೆ ಅಮೆರಿಕಕ್ಕೆ ಉದ್ಯೋಗ ಅರಸಿ ಬರುತ್ತಿದ್ದ ವಿದೇಶಿಯರಿಗೆ ಹೊಸ ನಿಯಮದಂತೆ ಎಚ್-1ಬಿ ವೀಸಾ ಪಡೆಯುವಂತೆ ಟ್ರಂಪ್ ಸರಕಾರ ಘೋಷಿಸಿತ್ತು. ಇದಕ್ಕೆ ಬರೋಬ್ಬರಿ 1ಲಕ್ಷ ಡಾಲರ್ ಶುಲ್ಕವನ್ನು ನಿಗದಿ ಪಡಿಸಿತ್ತು. ಈ ವಿಷಯ ಉದ್ಯೋಗ ಅರಸಿ ಅಮೆರಿಕಕ್ಕೆ ಹೊರಡಲು ಬಯಸುತ್ತಿದ್ದ ಮತ್ತು ಈಗಾಗಲೇ ಅಲ್ಲಿ ನೆಲೆಸಿದ್ದ ವಿದೇಶಿ ಪ್ರಜೆಗಳ ನಿದ್ದೆಗೆಡಿಸಿತ್ತು.
ಇದರ ನಂತರವೇ ಟ್ರಂಪ್ ಆಡಳಿತವು ವೀಸಾ ಶುಲ್ಕ ಹೆಚ್ಚಳವನ್ನು ಘೋಷಸಿದೆ, ಇದು ಅಮೆರಿಕ ಅಧ್ಯಕ್ಷರ ಕಾನೂನುಬದ್ದ ಅಧಿಕಾರವನ್ನು ಮೀರಿದೆ ಎಂದು ಅಮೆರಿಕದ ವಾಣಿಜ್ಯ ಮಂಡಳಿಯು ಅ.16ರಂದು ವಾಷಿಂಗ್ಟನ್ ಡಿಸಿಯಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.
ಈ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ 'ಯುಎಸ್‌ಸಿಐಎಸ್' ಇಲಾಖೆ ಹೊಸ ನಿಯಮವು ಈಗ ಅಸ್ತಿತ್ವದಲ್ಲಿರುವ ಎಚ್-1ಬಿ ವೀಸಾ ಹೊಂದಿರುವವರು ಅಮೆರಿಕದಿಂದ ಹೊರಹೋಗಿ ಮರಳಿ ಬರುವುದನ್ನು ನಿರ್ಬಂಧಿಸುವುದಿಲ್ಲ. ಬದಲಿಗೆ ಅಮೆರಿಕದಲ್ಲಿ ಈಗಾಗಲೆ ಇರುವ ವಿದೇಶಿ ವ್ಯಕ್ತಿಯು ತನ್ನ ವೀಸಾ ಸ್ಥಾನಮಾನ ಬದಲಿಸಲು ಅಥವಾ ತಿದ್ದುಪಡಿ ಮಾಡಲು ಅಥವಾ ವಾಸ್ತವ್ಯ ವಿಸ್ತರಣೆಗೆ ಅನರ್ಹ ಎಂದು ಕಂಡುಬಂದರೆ ಮಾತ್ರ ಆತನ ಅರ್ಜಿಗೆ ಹೊಸ ಶುಲ್ಕ 1 ಲಕ್ಷ ಡಾಲರ್ ಅನ್ವಯಿಸುತ್ತದೆ ಎಂದು ಸ್ಪಷ್ಟನೆ ನೀಡಿದೆ. ಜತೆಗೆ ಶುಲ್ಕ ಹೆಚ್ಚಳ ಘೋಷಣೆಯು, ಈ ಹಿಂದೆ ನೀಡಿದ ಮತ್ತು ಪ್ರಸ್ತುತ ಮಾನ್ಯವಾಗಿರುವ ಯಾವುದೇ ಎಚ್-1ಬಿ ವೀಸಾಗೆ ಅಥವಾ 2025ರ ಸೆ.21ರ ಮಧ್ಯರಾತ್ರಿ 12.01ಕ್ಕೆ ಮೊದಲು ಸಲ್ಲಿಸಿದ್ದ ವೀಸಾ ಅರ್ಜಿದಾರರಿಗೆ ಅನ್ವಯಿಸುವುದಿಲ್ಲ ಎಂದು ಯುಎಸ್‌ಸಿಐಎಸ್ ತಿಳಿಸಿದೆ

ಈಗಾಗಲೆ ಈ ಶುಲ್ಕ ಅಮೆರಿಕದಲ್ಲಿ ಚಾಲ್ತಿಯಲ್ಲಿದ್ದು, ತಮ್ಮ ಈಗಿನ ವೀಸಾ ಸ್ಥಿತಿಯನ್ನು ಬದಲಾಯಿಸಲು ಅವಕಾಶ ಇರುವವರಿಗೆ ಮತ್ತು ತಮ್ಮ ವಾಸ್ತವ್ಯದ ಅವಧಿ ವಿಸ್ತರಿಸಲು ಬಯಸುವವರಿಗೆ ಅನ್ವಯಿಸುವುದಿಲ್ಲ ಎಂದು ಆಮೆರಿಕ ಪೌರತ್ವ ಮತ್ತು ವಲಸೆ ಸೇವಾ ಇಲಾಖೆ (ಯುಎಸ್‌ಸಿಐಎಸ್) ತಿಳಿಸಿದೆ.
ಭಾರತೀಯರೇ ಹೆಚ್ಚು…
'ಯುಎಸ್‌ಸಿಐಎಸ್' ಇಲಾಖೆ ದತ್ತಾಂಶಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಅನುಮೋದಿಸಿದ ಎಲ್ಲ ಎಚ್-1ಬಿ ವೀಸಾ ಅರ್ಜಿಗಳಲ್ಲಿ ಶೇ.71ರಷ್ಟು ಅರ್ಜಿಗಳು ಭಾರತೀಯರದ್ದು ಆಗಿವೆ. ಎಚ್-1ಬಿ ವೀಸಾ ಮೂಲಕ ಬೇರೆ ದೇಶದಿಂದ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆಸಿಕೊಳ್ಳುವ ಕಂಪನಿಗಳೇ ಶುಲ್ಕವನ್ನು ಈವರೆಗೂ ಭರಿಸುತ್ತಿವೆ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.